ವಚನಗಳಿಂದ ಸಮಾಜದ ಶುದ್ಧಿ

ಚಿತ್ರದುರ್ಗದ ಮುರುಘಾಮಠದಲ್ಲಿ ಬುಧವಾರ ಏರ್ಪಡಿಸಿದ್ದ ವಚನ ಕಾರ್ತಿಕ ಮಹೋತ್ಸವದಲ್ಲಿ ಕೆ.ಎಸ್. ತಿಪ್ಪಮ್ಮ, ಶ್ರೀ ಶಾಂತವೀರ ಮುರುಘಾ ರಾಜೇಂದ್ರ ಸ್ವಾಮೀಜಿ, ಶ್ರೀ ಬಸವ ಮುರುಘಾ ರಾಜೇಂದ್ರ ಸ್ವಾಮೀಜಿ, ಚಂದ್ರಶೇಖರಪ್ಪ ಇತರರು ಇದ್ದರು.
ಚಿತ್ರದುರ್ಗದ ಮುರುಘಾಮಠದಲ್ಲಿ ಬುಧವಾರ ಏರ್ಪಡಿಸಿದ್ದ ವಚನ ಕಾರ್ತಿಕ ಮಹೋತ್ಸವದಲ್ಲಿ ಕೆ.ಎಸ್. ತಿಪ್ಪಮ್ಮ, ಶ್ರೀ ಶಾಂತವೀರ ಮುರುಘಾ ರಾಜೇಂದ್ರ ಸ್ವಾಮೀಜಿ, ಶ್ರೀ ಬಸವ ಮುರುಘಾ ರಾಜೇಂದ್ರ ಸ್ವಾಮೀಜಿ, ಚಂದ್ರಶೇಖರಪ್ಪ ಇತರರು ಇದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ಜಟಿಲ ಸಮಸ್ಯೆಗಳಿಗೆ ಪರಿಹಾರ ಹುಡುಕಿದ್ದ ಶರಣರು
  • ನಿವೃತ್ತ ಶಿಕ್ಷಕಿ ಕೆ.ಎಸ್. ತಿಪ್ಪಮ್ಮ ಅನಿಸಿಕೆ
  • ಮುರುಘಾಮಠದಲ್ಲಿ ವಚನ ಕಾರ್ತೀಕ ಮಹೋತ್ಸವ
ಚಿತ್ರದುರ್ಗ: ಹನ್ನೇರಡನೇ ಶತಮಾನ ಸಮಾಜೋಧಾರ್ಮಿಕ ಕಾರ್ಯಗಳನ್ನು ನಡೆಸಿದ ಸುವರ್ಣಯುಗವಾಗಿತ್ತು ಎಂದು ನಿವೃತ್ತ ಶಿಕ್ಷಕಿ ಕೆ.ಎಸ್. ತಿಪ್ಪಮ್ಮ ಹೇಳಿದರು.
ಮುರುಘಾಮಠದಲ್ಲಿ ಬುಧವಾರ ವಚನ ಕಾರ್ತೀಕ ಮಹೋತ್ಸವದಲ್ಲಿ ಮಾತನಾಡಿದ ಅವರು, ಅಸ್ಪÈಶ್ಯತೆ, ಮೇಲು ಕೀಳು, ಮೂಢ ನಂಬಿಕೆ, ಸ್ತೀಸಮಾನತೆ ಮೊದಲಾದ ಜಟಿಲ ಸಮಸ್ಯೆಗಳಿಗೆ ಶಿವಶರಣರು ಪರಿಹಾರ ಕಂಡುಕೊAಡAಥ ಕಾಲವದು. ಅಂತಹ ಶರಣ ಶಿರೋಮಣಿಗಳಲ್ಲಿ ಶಿವಶರಣ ಚಂದಿಮರಸರೂ ಒಬ್ಬರಾಗಿದ್ದರು.
ಸಿಮ್ಮಲಿಗೆಯ ಚೆನ್ನರಾಮ ಅಂಕಿತದಲ್ಲಿ ೧೫೭ ವಚನಗಳನ್ನು ರಚಿಸಿದ್ದ ಅವರು, ಎಲ್ಲ ಶರಣರಂತೆ ಸಮಾಜವನ್ನು ತಿದ್ದಲು ವಚನ ಗಳನ್ನೇ ಆಯುಧಗಳನ್ನಾಗಿ ಮಾಡಿಕೊಂಡಿದ್ದರು ಎಂದರು. ಸಾನ್ನಿಧ್ಯ ವಹಿಸಿದ್ದ ಗುರುಮಠಕಲ್ ಖಾಸಾಮಠದ ಶ್ರೀ ಶಾಂತವೀರ
ಮುರುಘರಾಜೇಂದ್ರ ಸ್ವಾಮೀಜಿ ಮಾತನಾಡಿ, ದೇವರ ಹೆಸರಲ್ಲಿ ಅಪವ್ಯಯ ಸಲ್ಲದು. ಕಾರ್ತೀಕ ಮಾಸದಲ್ಲಿ ದೀಪ ಹಚ್ಚುವ ಬದಲು ಮುರುಘಾಮಠ ವಚನಗಳನ್ನು ಅರ್ಥೈಸುವ ಕಾರ್ಯಕ್ರಮ ಏರ್ಪಡಿಸಿದೆ ಎಂದರು. ಸಮ್ಮುಖ ವಹಿಸಿದ್ದ ಶ್ರೀ ಬಸವ ಮುರುಘ ರಾಜೇಂದ್ರ ಸ್ವಾಮೀಜಿ, ಚಂದ್ರಶೇಖರಪ್ಪ ಮಾತನಾಡಿದರು.
ಕವಿ ಎಚ್‌ಡಿ ಪುರದ ಗಂಗಾಧರಪ್ಪ ಚುಟುಕು ಕವಿತೆಗಳನ್ನು ವಾಚಿಸಿದರು. ಚಂದ್ರವಳ್ಳಿ ಎಸ್‌ಜೆಎಂ ಪದವಿ ಕಾಲೇಜು ಪ್ರಾಚಾರ್ಯ ಡಾ.ಎಸ್.ಎಚ್. ಪಂಚಾಕ್ಷರಿ ಇತರರು ಇದ್ದರು. ಕಲಾವಿದ ಉಮೇಶ್ ಪತ್ತಾರ್ ಪ್ರಾರ್ಥಿಸಿದರು. ಗ್ರಂಥಪಾಲಕ ಡಾ. ಸತೀಶ್‌ ನಾಯ್ಕ ಸ್ವಾಗತಿಸಿ, ಪ್ರಾಧ್ಯಾಪಕ ಡಾ. ಎಸ್. ಆನಂದ್ ವಂದಿಸಿದರು. ಪ್ರಾಧ್ಯಾಪಕ ಡಾ.ಬಿ.ರೇವಣ್ಣ ನಿರೂಪಿಸಿದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net