ಗ್ರಾಮೀಣ ಬದುಕಿನ ವೈವಿಧ್ಯ ಅರಿತುಕೊಳ್ಳಿ

ಚಿತ್ರದುರ್ಗ ತಾಲೂಕಿನ ಅನ್ನೇಹಾಳ್ ಜಂಪಣ್ಣನಹಟ್ಟಿ ಗ್ರಾಮದಲ್ಲಿ ಏರ್ಪಡಿಸಿರುವ ಎನ್‌ಎಸ್‌ಎಸ್ ವಾರ್ಷಿಕ ವಿಶೇಷ ಶಿಬಿರವನ್ನು ಎಸ್‌ಆರ್‌ಎಸ್ ಶಿಕ್ಷಣ ಸಂಸ್ಥೆ ಆಡಳಿತಾಽಕಾರಿ ಡಾ.ಟಿ.ಎಸ್.ರವಿ ಉದ್ಘಾಟಿಸಿದರು. ಪ್ರೊ.ಜಿ.ಪಿ.ನಂದನ್, ಕೆ.ದೇವಂದ್ರಪ್ಪ ಕುಂಚಿಗನಾಳ್, ಕೆ.ಜಂಪಣ್ಣ, ರಂಗಸ್ವಾಮಿ, ಪ್ರೊ.ಮಾಧುರಿ, ಪ್ರೊ.ನಾಗರಾಜ್, ಪ್ರೊ.ಕಲ್ಲಪ್ಪ ಇದ್ದರು.

Published on

ಪ್ರಮುಖ ಮುಖ್ಯಾಂಶಗಳು

  • ಎಸ್‌ಆರ್‌ಎಸ್ ಸಂಸ್ಥೆ ಆಡಳಿತಾಽಕಾರಿ ರವಿ ಸಲಹೆ
  • ಎನ್‌ಎಸ್‌ಎಸ್ ವಾರ್ಷಿಕ ಶಿಬಿರ
  • ಗ್ರಾಮೀಣ ಬದುಕಿನ ವೈವಿಧ್ಯ
ಚಿತ್ರದುರ್ಗ: ಗ್ರಾಮೀಣ ಬದುಕಿನ ವೈವಿಧ್ಯ ಅರಿತುಕೊಳ್ಳುವಂತೆ ಎಸ್‌ಆರ್‌ಎಸ್ ಸಂಸ್ಥೆ ಆಡಳಿತಾಽಕಾರಿ ಡಾ.ಟಿ.ಎಸ್.ರವಿ ವಿದ್ಯಾರ್ಥಿಗಳಿಗೆ ಸಲಹೆ ನೀಡಿದರು.
ತಾಲೂಕಿನ ಅನ್ನೇಹಾಳ್ ಜಂಪಣ್ಣನಹಟ್ಟಿ ಗ್ರಾಮದಲ್ಲಿ ಇತ್ತೀಚೆಗೆ ಎಸ್‌ಆರ್‌ಎಸ್ ಪ್ರಥಮ ದರ್ಜೆ ಕಾಲೇಜಿನ ಎನ್‌ಎಸ್‌ಎಸ್ ವಿಶೇಷ ವಾರ್ಷಿಕ ಶಿಬಿರ ಉದ್ಘಾಟಿಸಿ ಮಾತನಾಡಿ, ಪಠ್ಯಕ್ಕೆ ಸೀಮತಗೊಳ್ಳದೆ ವಿದ್ಯಾರ್ಥಿಗಳು ಪಠ್ಯೇತರ ಚಟುವಟಿಕೆಗಳನ್ನು ಅರಿತಾಗ ಭವಿಷ್ಯದ ಬದುಕನ್ನು ಸಮರ್ಥವಾಗಿ ಎದುರಿಸಲು ಸಾಧ್ಯವಾಗಲಿದೆ ಎಂದರು.
ಪ್ರಾಚಾರ್ಯ ಪ್ರೊ.ಜಿ.ಪಿ.ನಂದನ್ ಮಾತನಾಡಿ, ಈ ಶಿಬಿರವು ವಿದ್ಯಾರ್ಥಿಗಳ ಆತ್ಮಾವಲೋಕನಕ್ಕೆ ಹಾಗೂ ಹೊಸ ವಿಷಯಗಳ ಕಲಿಕೆಗೆ ಪೂರಕವಾಗಲಿದೆ ಎಂದು ತಿಳಿಸಿದರು.
ಎನ್‌ಎಸ್‌ಎಸ್ ಕಾರ್ಯಕ್ರಮ ಅಽಕಾರಿ ಕೆ.ದೇವೇಂದ್ರಪ್ಪ ಕುಂಚಿಗನಾಳ್ ಪ್ರಾಸ್ತಾವಿಕವಾಗಿ ಮಾತನಾಡಿ, -ೆ.೩ರವರೆಗೆ ನಡೆಯಲಿರುವ ಈ ಶಿಬಿರದಲ್ಲಿ ನೂರಾರು ವಿದ್ಯಾರ್ಥಿಗಳು ಪಾಲ್ಗೊಂಡಿದ್ದಾರೆ. ಗ್ರಾಮದ ಸ್ವಚ್ಛತೆ, ಜನಜಾಗÊತಿ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ ಎಂದರು.
ಕೆಪಿಎಸ್ ಶಾಲೆ ಎಸ್‌ಡಿಎಂಸಿ ಅಧ್ಯಕ್ಷ ಕೆ.ಜಂಪಣ್ಣ, ಶಿಕ್ಷಕ ರಂಗಸ್ವಾಮಿ ಹಾಗೂ ಉಪನ್ಯಾಸಕರಾದ ಪ್ರೊ.ಮಾಧುರಿ, ಪ್ರೊ.ನಾಗರಾಜ್, ಪ್ರೊ.ಕಲ್ಲಪ್ಪ ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net