ರೋಗ ನಿರೋಧಕ ಶಕ್ತಿ ಕಡಿಮೆ ಇರುವ ಯಾರಿಗಾದರೂ ಬರಬಹುದು ಕ್ಷಯ

ಚಿತ್ರದುರ್ಗದಲ್ಲಿ ಶುಕ್ರವಾರ ಆಯೋಜಿಸಿದ್ದ ವಿಶ್ವ ಕ್ಷಯ ರೋಗ ದಿನಾಚರಣೆಯಲ್ಲಿ ಡಿಎಚ್‌ಒ ಡಾ.ಜಿ.ಪಿ. ರೇಣುಪ್ರಸಾದ್, ಡಾ. ಬಸವರಾಜ್ ಸಂಗೊಳ್ಳಿ, ಡಾ.ಸಿ.ಒ.ಸುಧಾ, ಡಾ.ಎನ್. ಕಾಶಿ, ಡಾ.ಡಿ.ಎಂ. ಅಭಿನವ್, ಡಾ.ನಾಗರಾಜ್ ಇತರರು ಇದ್ದರು.
ಚಿತ್ರದುರ್ಗದಲ್ಲಿ ಶುಕ್ರವಾರ ಆಯೋಜಿಸಿದ್ದ ವಿಶ್ವ ಕ್ಷಯ ರೋಗ ದಿನಾಚರಣೆಯಲ್ಲಿ ಡಿಎಚ್‌ಒ ಡಾ.ಜಿ.ಪಿ. ರೇಣುಪ್ರಸಾದ್, ಡಾ. ಬಸವರಾಜ್ ಸಂಗೊಳ್ಳಿ, ಡಾ.ಸಿ.ಒ.ಸುಧಾ, ಡಾ.ಎನ್. ಕಾಶಿ, ಡಾ.ಡಿ.ಎಂ. ಅಭಿನವ್, ಡಾ.ನಾಗರಾಜ್ ಇತರರು ಇದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ಲಭ್ಯವಿದೆ ಉಚಿತ ಚಿಕಿತ್ಸೆ
  • ದಿನಾಚರಣೆಯಲ್ಲಿ ಜಿಲ್ಲಾ ಆರೋಗ್ಯಾಽಕಾರಿ ಡಾ.ಜಿ.ಪಿ.ರೇಣುಪ್ರಸಾದ್ ಮಾಹಿತಿ
  • ಬಸವೇಶ್ವರ ವೈದ್ಯಕೀಯ ಮಹಾವಿದ್ಯಾಲಯ
ಚಿತ್ರದುರ್ಗ: ಬಡವ ಬಲ್ಲಿದ, ಗಂಡು, ಹೆಣೆ್ಣಂಬ ಭೇದವಿಲ್ಲದೆ ರೋಗನಿರೋಧಕ ಶಕ್ತಿ ಕಡಿಮೆ ಇರುವ ಯಾರಲ್ಲಾದರೂ ಕ್ಷಯ ರೋಗ ಕಾಣಿಸಿಕೊಳ್ಳಬಹುದಾಗಿದೆ ಎಂದು ಡಿಎಚ್‌ಒ ಡಾ.ಜಿ.ಪಿ. ರೇಣುಪ್ರಸಾದ್ ಹೇಳಿದರು.
ಜಿಲ್ಲಾಡಳಿತ, ಜಿಪಂ ಹಾಗೂ ಬಸವೇಶ್ವರ ವೈದ್ಯಕೀಯ ಮಹಾವಿದ್ಯಾಲಯದ ಸಹಯೋಗದೊಂದಿಗೆ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಽಕಾರಿ ಕಚೇರಿಯಲ್ಲಿ ಶುಕ್ರವಾರ ಆಯೋಜಿಸಿದ್ದ ವಿಶ್ವ ಕ್ಷಯರೋಗ ದಿನಾಚರಣೆ ಉದ್ಘಾಟಿಸಿ ಮಾತ ನಾಡಿದರು.
ಧೂಮಪಾನಿಗಳು, ಚಿಕಿತ್ಸೆ ಪಡೆಯದ ಕ್ಷಯರೋಗಿಗಳ ಸಂಪರ್ಕದಲ್ಲಿ ಇರುವವರು ಹಾಗೂ ಗಾಳಿಬೆಳಕಿಲ್ಲದ ಇಕ್ಕಟ್ಟಾದ ಜಾಗದಲ್ಲಿ ವಾಸಿಸುವವರಿಗೆ ರೋಗ ಹರಡುವ ಸಾಧ್ಯತೆ ಹೆಚ್ಚು. ಎರಡು ವಾರಕ್ಕಿಂತ ಹೆಚ್ಚು ಕಾಲ ಕೆಮ್ಮು, ಕ-À, ಸಂಜೆ ವೇಳೆ ಜ್ವರ, ತೂಕ ಇಳಿಕೆ ಹಾಗೂ ಹಸಿವಾಗದಿರುವುದು ಕ್ಷಯದ ಪ್ರಮುಖ ಲಕ್ಷಣಗಳಾಗಿವೆ. ಇಂತಹ ಲಕ್ಷಣ ಕಂಡುಬAದಲ್ಲಿ ಕೂಡಲೇ ಸರ್ಕಾರಿ ಆಸ್ಪತ್ರೆಯಲ್ಲಿ ಕ-À ಪರೀಕ್ಷೆ ಮಾಡಿಸಿಕೊಳ್ಳಬೇಕು. ರೋಗ ದÊಢಪಟ್ಟಲ್ಲಿ ಉಚಿತವಾಗಿ ದೊರೆಯುವ ಚಿಕಿತ್ಸೆ ಪಡೆದು ಗುಣಮುಖ ರಾಗಬೇಕು ಎಂದು ಹೇಳಿದರು.
ಬಸವೇಶ್ವರ ವೈದ್ಯಕೀಯ ಮಹಾವಿದ್ಯಾಲಯದ ಶ್ವಾಸಕೋಶ ತಜ್ಞ ಡಾ. ಬಸವರಾಜ್ ಸಂಗೊಳ್ಳಿ ಉಪನ್ಯಾಸ ನೀಡಿ, ದೇಶದಲ್ಲಿ ಪ್ರತಿ ೩ ನಿಮಿಷಕ್ಕೆ ಇಬ್ಬರು ಕ್ಷಯದಿಂದ ಮರಣ ಹೊಂದುತ್ತಿರುವುದು ವಿಷಾದನೀಯ. ಸಮಾಜದಲ್ಲಿರುವ ತಪ್ಪು ತಿಳಿವಳಿಕೆ ರೋಗ ನಿಯಂತ್ರಣಕ್ಕೆ ಅಡ್ಡಿಯಾಗಿದೆ. ಈ ಹಿಂದೆ ಎಂಡಿಆರ್ ಟಿಬಿ ರೋಗಕ್ಕೆ ೨ ವರ್ಷ ಚಿಕಿತ್ಸೆ ನೀಡಲಾಗುತ್ತಿತ್ತು, ಆದರೆ, ಈಗ ಆಧುನಿಕ ವೈದ್ಯಕೀಯ ಪದ್ಧತಿಯಲ್ಲಿ ಇಂಜೆಕ್ಷನ್ ಇಲ್ಲದೆ ಮಾತ್ರೆಗಳ ಮೂಲಕ ಆರು ತಿಂಗಳಲ್ಲೇ ಸಂಪೂರ್ಣ ರೋಗ ಗುಣಪಡಿಸಬಹುದು ಎಂದರು.
ಜಿಲ್ಲಾ ಕ್ಷಯರೋಗ ನಿಯಂತ್ರಣಾಽಕಾರಿ ಡಾ.ಸಿ.ಒ. ಸುಧಾ ಮಾತನಾಡಿ, ಒಬ್ಬ ಕ್ಷಯ ರೋಗಿಗೆ ಸರಿಯಾದ ಸಮಯಕ್ಕೆ ಚಿಕಿತ್ಸೆ ನೀಡದಿದ್ದರೆ ವರ್ಷಕ್ಕೆ ೧೦-೧೫ ಜನರಿಗೆ ಸೋಂಕು ಹರಡಬಹುದು. ಇಲಾಖೆ ಅಽಕಾರಿಗಳು ಹಾಗೂ ಸಮುದಾಯ ಒಗ್ಗೂಡಿ ಕ್ಷಯ ಮುಕ್ತ ಜಿಲ್ಲೆಯನ್ನಾಗಿಸಲು ಶ್ರಮಿಸೋಣ ಎಂದರು.
ಜಿಲ್ಲಾ ಯೋಜನೆ ಅಭಿವೃದ್ಧಿ ಅಽಕಾರಿ ಡಾ.ಎನ್. ಕಾಶಿ ಮಾತನಾಡಿ, ವೈಜ್ಞಾನಿಕವಾಗಿ ನಾವು ಮುಂದುವರಿದಿರುವುದು ನಿಜ. ಆದರೆ, ಸಾಂಕ್ರಾಮಿಕ ರೋಗಗಳ ನಿಯಂತ್ರಣದಲ್ಲಿ ಹಿಂದಿದ್ದೇವೆ. ರೋಗಗಳಿಗೆ ಬಡತನ ಮತ್ತು ಅಪೌಷ್ಟಿಕತೆ ಕಾರಣವಾಗಿವೆ. ರೋಗಿಗಳಿಗೆ ಚಿಕಿತ್ಸೆ ಜತೆಗೆ ಮಾಹಿತಿ ಶಿಕ್ಷಣ ನೀಡುವುದು ಅಗತ್ಯ ಎಂದರು.
ಜಿಲ್ಲೆಯ ಹಿರೇಗುಂಟನೂರು, ಚನ್ನಮ್ಮನಾಗ್ತಿಹಳ್ಳಿ, ರೇಣುಕಾಪುರ, ರಾಮಜೋಗಿಹಳ್ಳಿ, ಈಶ್ವರಗೆರೆ, ಮಸ್ಕಲ್, ಸೂರಗೊಂಡನ ಹಳ್ಳಿ, ವಿ.ವಿ.ಪುರ,ದೇವಪುರ, ಕಂಚಿಪುರ ಹಾಗೂ ಗಂಗಸಮುದ್ರಗಳನ್ನು ಕ್ಷಯಮುಕ್ತ ಗ್ರಾಪಂಗಳೆAದು ಪ್ರಶಂಸನಾ ಪತ್ರ ವಿತರಿಸಲಾಯಿತು.
ಜಿಲ್ಲಾ ಆರ್‌ಸಿಎಚ್ ಅಽಕಾರಿ ಡಾ.ಡಿ.ಎಂ. ಅಭಿನವ್, ಡಿಎಲ್‌ಒ ಡಾ.ನಾಗರಾಜ್ ಇತರರು ಇದ್ದರು. ಜಾನಕಿ ಪ್ರತಿಜ್ಞಾವಿಽ ಬೋಽಸಿದರು. ಬಿ. ಮೂಗಪ್ಪ ನಿರೂಪಿಸಿದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net