ಈ ಬಾರಿ ಜಿಲ್ಲಾ ಕೇಂದ್ರದಲ್ಲೇ ಮಸ್ಟರಿಂಗ್, ಡಿ ಮಸ್ಟರಿಂಗ್

ಎAಎಲ್‌ಸಿ ಮತದಾನ ಪ್ರಕ್ರಿಯೆ ವೀಕ್ಷಣೆಗೆ ವೆಬ್‌ಕಾಸ್ಟಿಂಗ್
secret ballot
ಬ್ಯಾಲೆಟ್ ಬಾಕ್ಸ್
Published on: 

ಚಿತ್ರದುರ್ಗ: ವಿಧಾನ ಪರಿಷತ್ ಶಿಕ್ಷಕರ ಮತ್ತು ಪದವೀಧರ ಕ್ಷೇತ್ರಗಳಿಗೆ ಅ.೨೩ರಂದು ನಡೆಯುವ ಚುನಾವಣೆಯ ಮಸ್ಟರಿಂಗ್ ಮತ್ತು ಡಿ- ಮಸ್ಟರಿಂಗ್ ಈ ಬಾರಿ ಜಿಲ್ಲಾ ಕೇಂದ್ರದಲ್ಲಿ ಜರುಗಲಿದೆ.

ಈ ಮೊದಲು ಆಯಾ ಕ್ಷೇತ್ರ ವ್ಯಾಪ್ತಿ ತಾಲೂಕು ಕೇಂದ್ರಗಳಲ್ಲಿ ಮಸ್ಟರಿಂಗ್ ಹಾಗೂ ಡಿ ಮಸ್ಟರಿಂಗ್ ನಡೆದ ಬಳಿಕ ಜಿಲ್ಲಾ ಕೇಂದ್ರದಿAದ ಮತಪೆಟ್ಟಿಗೆಗಳನ್ನು ಎಣಿಕೆ ಕೇಂದ್ರಕ್ಕೆ ಕಳಿಸಲಾಗುತ್ತಿತ್ತು. ಕರ್ನಾಟಕ ಆಗ್ನೇಯ ಪದವೀಧರರ ಕ್ಷೇತ್ರ, ಕರ್ನಾಟಕ ಪಶ್ಚಿಮ ಪದವೀಧರರ ಕ್ಷೇ ತ್ರ, ಕರ್ನಾಟಕ ಈಶಾನ್ಯ ಶಿಕ್ಷಕರ ಕ್ಷೇತ್ರ ಮತ್ತು ಬೆಂಗಳೂರು ಶಿಕ್ಷಕರ ಕ್ಷೇತ್ರಗಳಿಗೆ ಚುನಾವಣೆ ನಡೆಯಲಿದೆ. ಮತದಾನ ಮುನ್ನಾ ದಿನ ಮಸ್ಟ ರಿಂಗ್, ಡಿ-ಮಸ್ಟರಿಂಗ್ ಬಾರಿ ಜಿಲ್ಲಾ ಕೇಂದ್ರಗಳಲ್ಲಿ ಜರುಗಲಿದೆ. ಅ.೨೭ರಂದು ಮತ ಎಣಿಕೆ ನಡೆಯಲಿದೆ.

ಆಯೋಗದಿಂದಲೇ ಪೆನ್

ಪ್ರಾಶಸ್ತ್ಯ ಆಧರಿಸಿದ ಈ ಚುನಾವಣೆಯಲ್ಲಿ ಬ್ಯಾಲೆಟ್ ಪೇಪರ್ ಬಳಸಲಾಗುತ್ತದೆ ಹಾಗೂ ಚುನಾವಣಾ ಆಯೋಗದಿಂದಲೇ ಕೊಡು ವಂಥ ಪೆನ್ ಬಳಸಿ ವೋರ‍್ಸ್ ಹಕ್ಕು ಚಲಾಯಿಸಬೇಕಾಗಿದೆ. ಒಂದು ಪಿಎಸ್‌ಗೆ ೨ ಮತಪೆಟ್ಟಿಗೆಗಳು ಹಾಗೂ ೨ ಪೆನ್‌ಗಳನ್ನು ಕೊಡಲಾಗುತ್ತಿದೆ ಎನ್ನಲಾಗಿದೆ.

ಮತದಾನ ಪೂರ್ಣವಾಗುವವರೆಗೆ ಪೆನ್‌ಗಳು ಮಿಸ್ ಆಗದಂತೆ ಹಾಗೂ ಅಪ್ಪಿ-ತಪ್ಪಿ ಬ್ಯಾಲೆಟ್ ಪೇಪರ್ ಚಿತ್ರ ಸಾಮಾಜಿಕ ಜಾಲತಾ ಣಗಳಿಗೆ ಸೋರಿಕೆಯಾಗದಂತೆ ನೋಡಿಕೊಳ್ಳುವ ಹೊಣೆ ಮತಗಟ್ಟೆ ಅಽಕಾರಿಗಳ ಮೇಲಿದೆ. ಈ ನಿಟ್ಟಿನಲ್ಲಿ ಆಯೋಗ ಚುನಾವಣಾ ಪ್ರ ಕ್ರಿಯೆಗೆ ನಿಯೋಜಿತರಾಗಿರುವ ಅಽಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದೆಯಂತೆ.

ಪ್ರಾಶಸ್ತ್ಯದ ಮತ

ಅಭ್ಯರ್ಥಿಗಳು, ವಿವಿಧ ಪಕ್ಷಗಳ ಧುರೀಣರು, ಕರ‍್ಯಕರ್ತರು, ಮತಗಳು ಇನ್‌ವ್ಯಾಲಿಡ್ ಆಗದಂತೆ ಮತ ಚಲಾಯಿಸಬೇಕೆಂದು ವಿ ಶೇಷವಾಗಿ ಮನವಿ ಮಾಡುತ್ತಿದ್ದಾರೆ. ಸುಶಿಕ್ಷಿತ ಮತದಾರರ ಈ ಚುನಾವಣೆಯಲ್ಲಿ ಆಗುವಂಥ ವೋಟ್‌ಗಳಲ್ಲಿ ಇನ್‌ವ್ಯಾಲಿಡ್ ಆದರೆ, ಫಲಿತಾಂಶವೇ ಏರುಪೇರಾಗುವ ಸಾಧ್ಯತೆಯನ್ನು ಅಲ್ಲಗಳೆಯುವಂತಿಲ್ಲ.

ಈ ಹಿನ್ನೆಲೆಯಲ್ಲಿ ಆಯೋಗದ ಪೆನ್ ಬಳಸಿ ಕ್ಯಾಲೆಂಡರ್ ೧ ಎಂದು ಬರೆದು ಮೊದಲ ಪ್ರಾಶಸ್ತ್ಯದ ಮತ ಹಾಕುವಂತೆ ಮತದಾರರಿಗೆ ಅಭ್ಯರ್ಥಿಗಳು ವಿನಂತಿಸುತ್ತಿದ್ದಾರೆ. ಮತಗಟ್ಟೆಗೆ ಯಾವುದೇ ಕಾರಣಕ್ಕೂ ತಮ್ಮೊಂದಿಗೆ ಪೆನ್ ತೆಗೆದುಕೊಂಡು ಹೋಗಬಾರದು ಹಾಗೂ ಅ ಲ್ಲಿರುವ ಪೆನ್ನನ್ನೇ ಬಳಸುವಂತೆ ಮನವಿ ಮಾಡುತ್ತಿದ್ದಾರೆ.

ಆಗ್ನೇಯ ಪದವೀಧರ ಕ್ಷೇತ್ರ

ದಾವಣಗೆರೆ(ಜಗಳೂರು, ಹರಿಹರ, ದಾವಣಗೆರೆ ತಾಲೂಕುಗಳು), ಚಿತ್ರದುರ್ಗ, ಕೋಲಾರ, ತುಮಕೂರು, ಚಿಕ್ಕಬಳ್ಳಾಪುರ ಜಿಲ್ಲೆಗ ಳು, ೩೩ ವಿಧಾನಸಭಾ ಹಾಗೂ ೫ ಲೋಕಸಭಾ ಕ್ಷೇತ್ರಗಳು, ೩೫ ತಾಲೂಕುಗಳನ್ನು ಒಳಗೊಂಡಿರುವ ಈ ಕ್ಷೇತ್ರದಲ್ಲಿ ೧.೮೫ಲಕ್ಷಕ್ಕೂ ಅಽಕ ಸಂಖ್ಯೆಯ ಮತದಾರರು ಇದ್ದಾರೆ.

ಕಣದಲ್ಲಿ ೧೦ ಅಭ್ಯರ್ಥಿಗಳು

ಕಾಂಗ್ರೆಸ್‌ನಿAದ ಶಶಿಹುಲಿಕುಂಟೆ ಮಠ್, ಬಿಜೆಪಿಯಿಂದ ಕೆ.ಎಂ.ಸುರೇಶ(ಸೋಮೇಶ್ವರ), ಸರ್ವ ಜನತಾ ಪಕ್ಷದಿಂದ ಜಿ.ಸಿ.ಪಾಟೀಲ್ ಅಭ್ಯರ್ಥಿಗಳಾಗಿದ್ದಾರೆ. ಪಕ್ಷೇತರರಾಗಿ ಕಪನಿಗೌಡ, ಚಿಕ್ಕರಾಜು ಎಸ್.ಯಾದವ್, ಆರ್.ಲಕ್ಷ÷್ಮಯ್ಯ, ಲಕ್ಷಿ÷್ಮÃಕಾಂತ್ ಎಸ್.ಯಾದವ್, ಶಶಿ ಹುಲಿಕಟ್ಟಿ, ಸೈಯದ್ ಅಕಾ ಅಹಮದ್, ಅಡ್ವೋಕೇಟ್ ಬರೀದ್ ಸ್ಪಽðಸಿದ್ದಾರೆ.

ಚಿತ್ರದುರ್ಗ ಜಿಲ್ಲೆಯಲ್ಲಿ ಎಷ್ಟು ?

ಜಿಲ್ಲೆಯಲ್ಲಿ ೨೫,೫೫೧ ಪುರುಷ ಹಾಗೂ ೧೮,೫೨೨ ಮಹಿಳೆಯರು ಸೇರಿ ೪೪,೦೭೩ ಮತದಾರ ಅಂತಿಮ ಪಟ್ಟಿಯಲ್ಲಿದ್ದಾರೆ. ಹಿಂದಿನ ಚುನಾವಣೆಯಲ್ಲಿದ್ದ ೨೨ ಮತಗಟ್ಟೆಗಳೊಂದಿಗೆ, ಈ ಬಾರಿ ೩೩ ಹೆಚ್ಚುವರಿ ಸಹಿತ ಜಿಲ್ಲೆಯಲ್ಲಿ ೫೫ ಮತಗಟ್ಟೆಗಳಿವೆ. ಮೊಳಕಾಲ್ಮೂರು ತಾ ಲೂಕಲ್ಲಿ ೪ ಮತಗಟ್ಟೆಗಳು, ೩೩೮೬ ಮತದಾರರು, ಚಳ್ಳಕೆರೆ-೧೧-೮೯೦೭, ಚಿತ್ರದುರ್ಗ- ೧೭-೧೪೧೮೩, ಹಿರಿಯೂರು-೧೦-೭೬೦೬, ಹೊಸದುರ್ಗ-೭-೫೪೭೯ ಹಾಗೂ ಹೊಳಲ್ಕೆರೆ ತಾಲೂಕಲ್ಲಿ ೬ ಮತಗಟ್ಟೆಗಳು ಹಾಗೂ ೪೫೧೨ ಮತದಾರರು ಇದ್ದಾರೆ.

ಎಂಎಲ್ಸಿ ಆಗ್ನೇಯ ಪದವೀಧರ ಕ್ಷೇತ್ರಕ್ಕೆ ಈ ಬಾರಿಯ ಚುನಾವಣೆಗೆ ಚಿತ್ರದುರ್ಗ ಸರ್ಕಾರಿ ಕಲಾ ಕಾಲೇಜಿನಲ್ಲೇ ಮಸ್ಟರಿಂಗ್, ಡಿ ಮಸ್ಟರಿಂಗ್ ಇರುತ್ತದೆ. ಮತಗಟ್ಟೆಯಲ್ಲಿ ವೆಬ್‌ಕಾಸ್ಟಿಂಗ್ ಇರುತ್ತದೆ.
ಬಿ.ಟಿ.ಕುಮಾರಸ್ವಾಮಿ, ಎಡಿಸಿ, ಚಿತ್ರದುರ್ಗ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net