Thimmakka of Salumara ಮಕ್ಕಳಂತೆ ಗಿಡಮರಗಳನ್ನು ಬೆಳೆಸಿದ ತಿಮ್ಮಕ್ಕ

Thimmakka of Salumara ಚಳ್ಳಕೆರೆಯಲ್ಲಿ ಆಯೋಜಿಸಿದ್ದ ಸಾಲು ಮರದ ತಿಮ್ಮಕ್ಕ ನುಡಿ ನಮನ ಕಾರ್ಯಕ್ರಮದಲ್ಲಿ ಶಾಸಕ ಟಿ. ರಘುಮೂರ್ತಿ ವಿವಿಧ ಕ್ಷೇತ್ರಗಳ ಸಾಧಕರನ್ನು ಸನ್ಮಾನಿಸಿದರು.
Thimmakka of Salumara ಚಳ್ಳಕೆರೆಯಲ್ಲಿ ಆಯೋಜಿಸಿದ್ದ ಸಾಲು ಮರದ ತಿಮ್ಮಕ್ಕ ನುಡಿ ನಮನ ಕಾರ್ಯಕ್ರಮದಲ್ಲಿ ಶಾಸಕ ಟಿ. ರಘುಮೂರ್ತಿ ವಿವಿಧ ಕ್ಷೇತ್ರಗಳ ಸಾಧಕರನ್ನು ಸನ್ಮಾನಿಸಿದರು.
Published on

ಪ್ರಮುಖ ಮುಖ್ಯಾಂಶಗಳು

  • ಶಾಸಕ ಟಿ. ರಘುಮೂರ್ತಿ ಅನಿಸಿಕೆ
  • ಚಳ್ಳಕೆರೆಯಲ್ಲಿ ವೃಕ್ಷಮಾತೆಗೆ ನುಡಿನಮನ
  • ಕರ್ನಾಟಕ ಮಾಧ್ಯಮ ಮಹಾ ಒಕ್ಕೂಟದಿಂದ ಕಾರ್ಯಕ್ರಮ ಆಯೋಜನೆ
ಚಳ್ಳಕೆರೆ: ಸಮಾಜದಲ್ಲಿ ಸಾಲು ಮರದ ತಿಮ್ಮಕ್ಕ ಅವರ ಬದುಕಿನ ಆದರ್ಶಗಳು ಪಾಲನೆಯಾಗಬೇಕು ಎಂದು ಶಾಸಕ ಟಿ. ರಘುಮೂರ್ತಿ ಹೇಳಿದರು.Thimmakka of Salumara
ನಗರದ ತಾಪಂ ಸಭಾಂಗಣದಲ್ಲಿ ಭಾನುವಾರ ಕರ್ನಾಟಕ ಮಾಧ್ಯಮ ಮಹಾ ಒಕ್ಕೂಟದಿಂದ ಆಯೋಜಿಸಿದ್ದ ಸಾಲು ಮರದ ತಿಮ್ಮಕ್ಕ ನುಡಿನಮನ ಕಾರ್ಯಕ್ರಮದಲ್ಲಿ ಮಾತನಾಡಿದರು.
ತಿಮ್ಮಕ್ಕ ಅಕ್ಷರ ಕಲಿತವರಲ್ಲ. ಮದುವೆಯಾಗಿ ಕುಟುಂಬ ನಿರ್ವಹಣೆ ಜವಾಬ್ದಾರಿ ಇತ್ತು. ತನಗೆ ಮಕ್ಕಳಿಲ್ಲ ಎನ್ನುವ ಸಂಕಟ ಅನುಭವಿಸಿದ್ದ ತಿಮ್ಮಕ್ಕ ಸಮಾಜಕ್ಕೆ ಮಾದರಿ ಆಗುವ ರೀತಿಯಲ್ಲಿ ಮಕ್ಕಳಂತೆ ಗಿಡಮರಗಳನ್ನು ಬೆಳೆಸಿದರು ಎಂದರು.
ಇಂತಹ ಮಹನೀಯರನ್ನು ಸ್ಮರಿಸುವ ಕೆಲಸ ಆಗಬೇಕು. ಪ್ರತಿ ವರ್ಷ ಐದು ಜನ ಪರಿಸರವಾದಿಗಳನ್ನು ಗುರುತಿಸಿ ತಿಮ್ಮಕ್ಕ ಹೆಸರಲ್ಲಿ ಪ್ರಶಸ್ತಿ ನೀಡಲು ಸಿಎಂ ಸಿದ್ದರಾಮಯ್ಯ ಘೋಷಣೆ ಮಾಡಿದ್ದಾರೆ ಎಂದು ಹೇಳಿದರು.
ಪತ್ರಿಕಾ ರಂಗವನ್ನು ಸಮಾಜದ ನಾಲ್ಕನೇ ಅಂಗ ಎನ್ನುತ್ತೇವೆ. ನ್ಯಾಯಾಂಗ, ಕಾರ್ಯಾಂಗ ಮತ್ತು ಶಾಸಕಾಂಗದಲ್ಲಿ ಕಾರ್ಯ ನಿರ್ವಹಿಸುವವರಿಗೆ ಸಂಬಳ, ಭತ್ಯೆ ಮತ್ತು ಸಾಮಾಜಿಕ ಭದ್ರತೆ ಇದೆ. ಆದರೆ, ಪತ್ರಕರ್ತರಿಗೆ ಯಾವುದೇ ಸೌಲಭ್ಯ ಇಲ್ಲ. ಪತ್ರಕರ್ತರ ಸಮಸ್ಯೆಗಳಿಗೆ ಅನೇಕ ಸಲ ಮನವಿ ಸಲ್ಲಿಸಲಾಗಿದೆ. ಸರ್ಕಾರದ ಹಂತದಲ್ಲಿ ಚರ್ಚಿಸಲಾಗುವುದು ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ರೈತ ಸಂಘಟನೆಯ ಕೆ.ಪಿ. ಭೂತಯ್ಯ, ರೆಡ್ಡಿಹಳ್ಳಿ ವೀರಣ್ಣ, ಆರೋಗ್ಯ ಇಲಾಖೆ ಶಾಂತಮ್ಮ, ಡಾ.ಆರ್. ಮಂಜುನಾಥ ಬಾಬು, ಇ.ಎನ್. ಲಕ್ಷ್ಮೀಕಾಂತ್, ಮಲ್ಲೇಶಪ್ಪ ಇನ್ನಿತರ ಸಾಧಕರನ್ನು ಸನ್ಮಾನಿಸಲಾಯಿತು.
ಒಕ್ಕೂಟದ ಅಧ್ಯಕ್ಷ ಕೆ. ಶಿವಕುಮಾರ್, ಡಿ. ಈಶ್ವರಪ್ಪ, ಬಷೀರ್ ಹಯಾತ್, ಪ್ರಾಧ್ಯಾಪಕ ಟಿ. ಬಸವರಾಜ್, ಸಿ.ಟಿ. ವೀರೇಶ್, ನಾಗರಾಜ್, ವಿಜಯ ಕುಮಾರಿ ಇತರರು ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net