ಚಿತ್ರದುರ್ಗ ತಾಲೂಕು ಬೆಳಗಟ್ಟ ಗ್ರಾಮದಲ್ಲಿ ಗುರುವಾರ ಶ್ರೀಗುರು ಕರಿಬಸವೇಶ್ವರಜ್ಜಯ್ಯಸ್ವಾಮಿ ೨೫ನೇ ವರ್ಷದ ಮಹಾ ರಥೋತ್ಸವದ ಅಂಗವಾಗಿ ಆಯೋಜಿಸಿದ್ದ ಧಾರ್ಮಿಕ ಸಮಾರಂಭದಲ್ಲಿ ಶಾಸಕ ಟಿ. ರಘುಮೂರ್ತಿ, ಡಾ. ಕರಿಬಸವೇಶ್ವರಾಜೇಂದ್ರ ಸ್ವಾಮೀಜಿ, ಶಿವಾಲಿಂಗಾನAದ ಸ್ವಾಮೀಜಿ, ಮಹದೇವಮ್ಮ, ಬಾಬುರೆಡ್ಡಿ, ಪಾಪೇಶ್‌ನಾಯಕ, ಡಾ. ನಾಗೇಂದ್ರ ಆಚಾರ್ಯ ಇತರರು ಇದ್ದರು.
ಚಿತ್ರದುರ್ಗ: ಭಕ್ತಿ ನಂಬಿಕೆಯನ್ನು ಆಧರಿಸಿದೆ. ಭಗವಂತನ ದರ್ಶನದ ಸಾಧನವಾಗಿರುವ ಭಕ್ತಿಯಲ್ಲಿ ಶಕ್ತಿ ಅಡಗಿದೆ ಎಂದು ಆಂಧ್ರ ಪ್ರದೇಶದ ಉ ರುವಕೊಂಡ ಜಗದ್ಗುರು ಡಾ. ಕರಿಬಸವೇಶ್ವರಾಜೇಂದ್ರ ಸ್ವಾಮೀಜಿ ಅಭಿಪ್ರಾಯಪಟ್ಟರು.
ಚಿತ್ರದುರ್ಗ ತಾಲೂಕು ಬೆಳಗಟ್ಟದಲ್ಲಿ ಗುರುವಾರ ಶ್ರೀ ಗುರು ಕರಿಬಸವೇಶ್ವರಜ್ಜಯ್ಯಸ್ವಾಮಿ ೨೫ನೇ ವರ್ಷದ ಮಹಾರಥೋತ್ಸವದ ಅಂಗವಾಗಿ ಆಯೋಜಿಸಿದ್ದ ಧಾರ್ಮಿಕ ಸಮಾರಂಭದ ಸಾನ್ನಿಧ್ಯವಹಿಸಿ ಆಶೀರ್ವಚನ ನೀಡಿ, ನಮ್ಮ ಶಕ್ತಿ ಹೆಚ್ಚಿಸಿಕೊಳ್ಳಬೇಕು ಎಂದಾದರೆ ಭಕ್ತಿಯಿಂದ ಭಗವಂತನ ಮೊರೆ ಹೋಗಬೇಕಾಗುತ್ತದೆ ಎಂದರು.
ಚಿತ್ರದುರ್ಗ ಕಬೀರಾನಂದ ಆಶ್ರಮದ ಶಿವಾಲಿಂಗಾನAದ ಸ್ವಾಮೀಜಿ ಮಾತನಾಡಿ, ಶ್ರೀ ಗುರುಕರಿಬಸವೇಶ್ವರಜ್ಜಯ್ಯಸ್ವಾಮಿ ಮಠದ ಪೀಠಾಧ್ಯಕ್ಷರಾದ ಮಹದೇವಮ್ಮ ಅವರು ಮಹಾಭಕ್ತೆ. ಅವರು ಆಧ್ಯಾತ್ಮ ಮತ್ತು ಧಾರ್ಮಿಕ ಕ್ಷೇತ್ರಗಳಲ್ಲಿ ಅಪೂರ್ವ ಸಾಧನೆ ಮಾಡಿದ್ದಾರೆ. ಸಮಾಜ ಸುಧಾರಣೆಗೆ ಸಂಪೂರ್ಣ ಸಮರ್ಪಿಸಿಕೊಂಡಿದ್ದಾರೆ. ಅವರ ಬದುಕು ಆದರ್ಶವಾಗಿದೆ ಎಂದರು.
ಚಳ್ಳಕೆರೆ ಶಾಸಕ ಟಿ.ರಘುಮೂರ್ತಿ ಮಾತನಾಡಿ, ಮಹದೇವಮ್ಮ ಅವರ ಸಾಧನೆಯ ಮಹತ್ವವನ್ನು ತಿಳಿಸಿದರು.
ಮಹದೇವಮ್ಮ ಅವರು ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು.
ಜಿಪಂ ಮಾಜಿ ಸದಸ್ಯ ಬಾಬುರೆಡ್ಡಿ, ನೆಲ್ಲಿಕಟ್ಟೆ ಸಿದ್ದೇಶ್, ಪಾಪೇಶ್‌ನಾಯಕ, ಪ್ರಶಾಂತ್, ಡಾ. ನಾಗೇಂದ್ರ ಆಚಾರ್ಯ, ಯುಗಧರ್ಮ ರಾಮಣ್ಣ ಇತರ ಗಣ್ಯರು ಇದ್ದರು. ಡಾ. ಪುರುಷೋತ್ತಮ ಪ್ರಾರ್ಥಿಸಿದರು. ಟಿ. ನಾಗೇಶ್ ಸ್ವಾಗತಿಸಿದರು, ಸೋಮೇಂದ್ರ ಪ್ರಾಸ್ತಾವಿಕವಾಗಿ ಮಾತನಾಡಿದರು.