ಹೊಸದುರ್ಗ ತಾಲೂಕಲ್ಲಿ ಕೃಷಿ ಪಂಪ್‌ಸೆಟ್‌ಗಳ ಕೇಬಲ್ ಕಳವು ದಂಧೆ crime

ಹೊಸದುರ್ಗ ತಾಲೂಕಿನ ಮಾವಿನಕಟ್ಟೆ ಗ್ರಾಮದ ಜಮೀನಿನಲ್ಲಿರುವ ಕೊಳವೆಬಾವಿ ಕೇಬಲ್ ಕತ್ತರಿಸಿರುವುದು. crime
ಹೊಸದುರ್ಗ ತಾಲೂಕಿನ ಮಾವಿನಕಟ್ಟೆ ಗ್ರಾಮದ ಜಮೀನಿನಲ್ಲಿರುವ ಕೊಳವೆಬಾವಿ ಕೇಬಲ್ ಕತ್ತರಿಸಿರುವುದು. crime
Published on

ಪ್ರಮುಖ ಮುಖ್ಯಾಂಶಗಳು

  • ವಾರದೊಳಗೆ 50ಕ್ಕೂ ಹೆಚ್ಚು ಕೊಳವೆಬಾವಿಗಳ ವಿದ್ಯುತ್ ವೈರ್ ಕಳ್ಳರ ಪಾಲು
  • ಠಾಣೆಯಲ್ಲಿ ಪ್ರಕರಣ ದಾಖಲು

ಹೊಸದುರ್ಗ: ತಾಲೂಕಿನಲ್ಲಿ ಮಳೆಯಾಗದೆ ತೆಂಗು, ಅಡಿಕೆ, ದಾಳಿಂಬೆ ತೋಟಗಳನ್ನು ಉಳಿಸಿಕೊಳ್ಳಲು ರೈತರು ಪರದಾಡುತ್ತಿರುವ ಈ ಹೊತ್ತಿನಲ್ಲಿ ಕೃಷಿ ಪಂಪ್‌ಸೆಟ್‌ಗಳ ಕೇಬಲ್‌ಗಳು ಕಳವಾಗುತ್ತಿರುವುದು ಮತ್ತೊಂದು ಸಂಕಷ್ಟ ತಂದೊಡ್ಡಿದೆ.

crime

ತಾಲೂಕಿನ ಮಾವಿನಕಟ್ಟೆ ಗ್ರಾಮದಲ್ಲಿ ಕಳೆದೊಂದು ವಾರದಲ್ಲಿ ಜಮೀನಿನ 50ಕ್ಕೂ ಹೆಚ್ಚು ಕೊಳವೆಬಾವಿಗಳ ಮೋಟಾರ್ ಪಂಪ್‌ಸೆಟ್‌ನ ಕೇಬಲ್ ಕಳವು ಮಾಡಲಾಗಿದೆ. ಕಳೆದ ಸೋಮವಾರ ರಾತ್ರಿ ಒಂದೇ ದಿನ ಇಪ್ಪತ್ತಕ್ಕೂ ಹೆಚ್ಚು ಜಮೀನುಗಳಲ್ಲಿ ಕೇಬಲ್ ಕಳ್ಳತನ ಮಾಡಲಾಗಿತ್ತು. ಪುನಃ ಗುರುವಾರ ರಾತ್ರಿ ಮೂವತ್ತಕ್ಕೂ ಹೆಚ್ಚು ಜಮೀನುಗಳಲ್ಲಿ ಕೇಬಲ್ ಕದಿಯಲಾಗಿದೆ.
ಮಳೆ ಅಭಾವದಿಂದ ತಾಲೂಕಿನಲ್ಲಿ ಬಿತ್ತನೆ ಕಾರ್ಯ ಸ್ಥಗಿತಗೊಂಡು ರೈತರು ಆರ್ಥಿಕ ಸಂಕಷ್ಟ ಎದುರಿಸುತ್ತಿದ್ದಾರೆ. ಕೃಷಿಯನ್ನೇ ನಂಬಿ ಬದುಕು ನಡೆಸುತ್ತಿರುವ ರೈತ ಕುಟುಂಬಗಳಿಗೆ ಕಳ್ಳರ ಕಾಟ ಆಘಾತವನ್ನುಂಟು ಮಾಡಿದೆ.
ಕೊಳವೆ ಬಾವಿಯಿಂದ ಸುಮಾರು 40 ಅಡಿ ದೂರದಲ್ಲಿ ಸ್ಟಾರ್ಟರ್‌ಗಳನ್ನು ಅಳವಡಿಸಲಾಗುತ್ತದೆ. ಸ್ಟಾರ್ಟರ್‌ನಿಂದ ಮೋಟಾರ್‌ಗೆ ಅಳವಡಿಸಿರುವ ಕೇಬಲ್ನಲ್ಲಿರುವ ದುಬಾರಿ ತಾಮ್ರದ ತಂತಿ ತುಂಡರಿಸಿಕೊಂಡು ಹೋಗುತ್ತಿದ್ದಾರೆ.
ಮಾವಿನಕಟ್ಟೆ ಗ್ರಾಮದ ರೈತರು ಶುಕ್ರವಾರ ಹೊಸದುರ್ಗ ಠಾಣೆಗೆ ದೂರು ನೀಡಿದ್ದಾರೆ. ಕಳ್ಳರ ಹಾವಳಿ ತಡೆಗೆ ಸೂಕ್ತ ಕ್ರಮದ ಭರವಸೆಯನ್ನು ಪೊಲೀಸರು ನೀಡಿದ್ದಾರೆ.
ಎರಡು ತಿಂಗಳ ಹಿಂದೆ ಹೊಳಲ್ಕೆರೆ ತಾಲೂಕಿನ ಉಪ್ಪರಿಗೇನಹಳ್ಳಿಯ ಸುತ್ತಮುತ್ತಲಿನ ಗ್ರಾಮಗಳ ಜಮೀನುಗಳಲ್ಲಿ ಕೇಬಲ್ ಕಳ್ಳತನವಾಗಿತ್ತು. ಈ ಕುರಿತು ಪ್ರಕರಣ ಕೂಡ ದಾಖಲಾಗಿತ್ತು
ತಾಮ್ರಕ್ಕಾಗಿ ಕಳ್ಳತನ: ವಿದ್ಯುತ್ ಕೇಬಲ್ನಲ್ಲಿರುವ ತಾಮ್ರದ ತಂತಿಗೆ ಮಾರುಕಟ್ಟೆಯಲ್ಲಿ ಉತ್ತಮ ಬೆಲೆಯಿದೆ. ಕೇಬಲ್ ಕದಿಯುವ ಕಳ್ಳರು ತಾಮ್ರದ ತಂತಿ ತೆಗೆದು ಗುಜರಿ ಅಂಗಡಿಗಳಲ್ಲಿ ಮಾರಾಟ ಮಾಡುತ್ತಾರೆ.
ದುಬಾರಿ ರಿಪೇರಿ ವೆಚ್ಚ: ತುಂಡಾದ ಕೇಬಲ್ಗೆ ಹೊಸ ಕೇಬಲ್ ಜೋಡಿಸಲು ಕೊಳವೆ ಬಾವಿಯಲ್ಲಿ 500-600 ಅಡಿಗಳಷ್ಟು ಆಳ ಮೋಟಾರು ಮತ್ತು ಪಂಪ್ ಹೊರ ತೆಗೆಯಬೇಕು. ರಿಪೇರಿಗೆ ಕಾರ್ಮಿಕರು ಸರಿಯಾದ ಸಮಯಕ್ಕೆ ಸಿಗುವುದಿಲ್ಲ. ರಿಪೇರಿಯ ವೆಚ್ಚ ಹಾಗೂ ಹೊಸ ಕೇಬಲ್ಗೆ ಹೆಚ್ಚಿನ ವೆಚ್ಚ ತಗುಲುತ್ತದೆ.

ಕಳೆದೊಂದು ವಾರದಿಂದ ಮಾವಿನಕಟ್ಟೆ ಗ್ರಾಮದಲ್ಲಿ 50ಕ್ಕೂ ಹೆಚ್ಚು ಕೊಳವೆಬಾವಿ ಕೇಬಲ್ಗಳನ್ನು ಕಳವು ಮಾಡಲಾಗಿದೆ. ಬರದಿಂದ ತತ್ತರಿಸಿರುವ ರೈತರಿಗೆ ಕಳ್ಳರ ಕಾಟದಿಂದ ಸಂಕಷ್ಟ ಎದುರಾಗಿದೆ. ಪೊಲೀಸರು ತನಿಖೆ ನಡೆಸಿ ಕಳ್ಳರಿಂದ ರೈತರನ್ನು ಪಾರು ಮಾಡಬೇಕಿದೆ.

— ಪ್ರಸನ್ನ, ಅಧ್ಯಕ್ಷರು, ತುಂಬಿನಕೆರೆ ರೈತ ಸಂಘ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net