

ಹಿರಿಯೂರು: ತಾಲೂಕಿನ ರೈತರ ಹಿತ ಕಾಯಲು ಸರ್ಕಾರ ಬದ್ಧವಾಗಿದೆ ಎಂದು ಕಾಂಗ್ರೆಸ್ ಯುವ ಮುಖಂಡ ಸುಹಾಸ್ ಸುಧಾಕರ್ ಹೇಳಿದರು. ತಾಲೂಕಿನ ಹರಿಯಬ್ಬೆಯಲ್ಲಿ ಶುಕ್ರವಾರ ತೋಟಗಾರಿಕೆ ಮಹಾವಿದ್ಯಾಲಯದ ಅಂತಿಮ ವರ್ಷದ ವಿದ್ಯಾರ್ಥಿಗಳು ಆಯೋಜಿಸಿದ್ದ ಕೃಷಿ, -ತೋಟಗಾರಿಕೆ ವಸ್ತು ಪ್ರದರ್ಶನ ಉದ್ಘಾಟಿಸಿ ಮಾತನಾಡಿದರು.
ರಾಜ್ಯ ಸರ್ಕಾರ ನೀರಾವರಿ ಯೋಜನೆಗೆ ಆದ್ಯತೆ ನೀಡಿದ್ದು, ಭದ್ರಾ ಮೇಲ್ದಂಡೆ ಯೋಜನೆ ತ್ವರಿತವಾಗಿ ಪೂರ್ಣಗೊಳಿಸಲು ದಿಟ್ಟ ಹೆಜ್ಜೆ ಇಟ್ಟಿದೆ ಎಂದರು. ಜೆಡಿಎಸ್ ಮುಖಂಡ ಎಂ. ರವೀಂದ್ರಪ್ಪ ಮಾತನಾಡಿ, ಕೃಷಿ ಮತ್ತು ತೋಟಗಾರಿಕೆ ಪದವಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳು ತಾವು ಸಂಶೋಧನೆ ಮಾಡಿದ ಸಂಗತಿಗಳು ನೇರವಾಗಿ ಗ್ರಾಮೀಣ ರೈತಾಪಿಗಳನ್ನು ತಲುಪುವಂತಿರಬೇಕು. ಕೃಷಿ ಎಂದರೆ ನಷ್ಟ ಎನ್ನುವ ಮಾತನ್ನು ಸುಳ್ಳಾಗಿಸುವ ಕಾರ್ಯ ವಿಜ್ಞಾನಿಗಳು ಮಾಡಬೇಕಿದೆ ಎಂದರು.
ಜಿಪಂ ಮಾಜಿ ಅಧ್ಯ ಬಿ.ಎಸ್. ರುನಾಥ್ ಮಾತನಾಡಿ, ಸರ್ಕಾರ ಆರೋಗ್ಯ, ಶಿಕ್ಷಣ, ನೀರಾವರಿಗೆ ಆದ್ಯತೆ ನೀಡಿದರೆ ಮಾತ್ರ ದೇಶದ ಸಮಗ್ರ ಅಭಿವೃದ್ಧಿ ಸಾಧ್ಯ ಎಂದರು. ತಾಪಂ ಮಾಜಿ ಅಧ್ಯರಾದ ಅರುಣಾ ಪಟೇಲ್, ಮಾಜಿ ಸದಸ್ಯ ಶಿವಮೂರ್ತಿ, ರೈತ ಮುಖಂಡರಾದ ಮಹಂತೇಶ್ ಗೌಡ, ಎಂ.ಎಸ್. ಈರಲಿಂಗೇಗೌಡ, ಸುರೇಶ್, ಗೋವಿಂದರಾಜ್, ಡಾ. ಸುರೇಶ್, ಡಾ. ಕುಮಾರ್, ಶಿವು, ಮಾರುತಿ, ದರ್ಶನ್, ವೆಂಕಟೇಶ್ ಗೌಡ, ಹನುಂತರಾಯಪ್ಪ ಇತರರಿದ್ದರು.
ತೋಟಗಾರಿಕೆ ಮಹಾ ವಿದ್ಯಾಲಯದ ಅಂತಿಮ ವರ್ಷದ ವಿದ್ಯಾರ್ಥಿಗಳು ಹರಿಯಬ್ಬೆ, ಚಿಲ್ಲಹಳ್ಳಿ, ಶ್ರವಣಗೆರೆ, ಧರ್ಮಪುರದಲ್ಲಿ ಎರಡು ತಿಂಗಳು ವಾಸ್ತವ್ಯ ಹೂಡಿ, ರೈತರಿಗೆ ಅವರ ತೋಟಗಳಲ್ಲಿ ಮಣ್ಣಿನ ಮಾದರಿ ತೆಗೆಯುವ, ಕೀಟನಾಶಕ ಸಿಂಪಡಣೆ, ತೋಟಗಳಲ್ಲಿ ಅಂತರ ಬೆಳೆ, ಬೇರುಣಿಸುವಿಕೆ, ಜೈವಿಕ ಗೊಬ್ಬರದ ಉಪಯೋಗ, ಸಾವಯವ ಕೃಷಿ, ಹಾಲಿನ ಉತ್ಪಾದನೆ ಹಾಗೂ ಜೇನು ಕೃಷಿ ಪ್ರಾತ್ಯಕೆ ಮೂಲಕ ರೈತರಿಗೆ ಮಾಹಿತಿ ನೀಡಿದ್ದಾರೆ ಎಂದು ಡೀನ್ ಡಾ. ತಿಪ್ಪೇಸ್ವಾಮಿ ಹೇಳಿದರು.