ಧರ್ಮಸ್ಥಳ ಸಂಸ್ಥೆ ಸಮಾಜಮುಖಿ ಕಾರ್ಯಗಳು ಶ್ಲಾಘನೀಯ

ರಾಯಾಪುರದಲ್ಲಿ ಪ್ರಗತಿ ಬಂಧು ಮಹಿಳಾ ಸ್ವಸಹಾಯ ಸಂಗಳ ಒಕ್ಕೂಟದ ಸಭೆ
Meeting
ರಾಯಾಪುರದಲ್ಲಿ ಧರ್ಮಸ್ಥಳ ಗ್ರಾವಾಭಿವೃದ್ಧಿ ಯೋಜನೆ ಸಹಯೋಗದಲ್ಲಿ ಆಯೋಜಿಸಿದ್ದ ಪ್ರಗತಿ ಬಂಧು ಮಹಿಳಾ ಸ್ವಸಹಾಯ ಸಂಗಳ ಒಕ್ಕೂಟದ ಸಭೆಯಲ್ಲಿ ಪ್ರವೀಣ್‌ಕುವಾರ ದೀಪ ಬೆಳಗಿಸಿದರು. ಶ್ರೀ ಬಸವಲಿಂಗ ಸ್ವಾಮೀಜಿ, ಬೋರಯ್ಯ, ರೇಖಾ, ಜಿ.ಪಿ. ಸುರೇಶ, ಪಿ.ಆರ್. ಕಾಂತರಾಜ, ಜಿ.ಬಿ. ಪಾಪಣ್ಣ ಇದ್ದರು.Meeting
Published on: 

ಮೊಳಕಾಲ್ಮೂರು: ದುಡಿಯುವ ಕೈಗಳಿಗೆ ಕೆಲಸ ನೀಡುವ ಜತೆಗೆ ಪರಿಶುದ್ಧ ಸವಾಜ ಕಟ್ಟುವ ಉದ್ದೇಶದಿಂದ ಧರ್ಮಸ್ಥಳದ ಧರ್ಮಾಧಿಕಾರಿ ಡಾ. ವೀರೇಂದ್ರ ಹೆಗ್ಗಡೆಯವರ ಸವಾಜ ಮುಖಿ ಕಾರ್ಯಗಳು ಶ್ಲಾಘನೀಯ ಎಂದು ಸಿದ್ದಯ್ಯನಕೋಟೆ ಶ್ರೀಮಠದ ಬಸವ ಲಿಂಗ ಸ್ವಾಮೀಜಿ ಹೇಳಿದರು.

ತಾಲೂಕಿನ ರಾಯಾಪುರದಲ್ಲಿ ಧರ್ಮಸ್ಥಳ ಗ್ರಾವಾಭಿವೃದ್ಧಿ ಯೋಜನೆ ಸಹಯೋಗದಲ್ಲಿ ಶನಿವಾರ ಆಯೋಜಿಸಿದ್ದ ಪ್ರಗತಿ ಬಂಧು ಮಹಿಳಾ ಸ್ವಸಹಾಯ ಸಂಗಳ ಒಕ್ಕೂಟದ ಸಭೆಯ ಸಾನ್ನಿಧ್ಯವಹಿಸಿ ವಾತನಾಡಿದರು. ಮನೆಗೆ ಸೀಮಿತವಾಗಿದ್ದ ಮಹಿಳೆಯರಿಗೆ ಗ್ರಾವಾಭಿವೃದ್ಧಿ ಯೋಜನೆ ಮೂಲಕ ವ್ಯವಹಾರ ಜ್ಞಾನ ತುಂಬುವ ಜತೆಗೆ ಕುಟುಂಬ ನಿರ್ವಹಣೆಯಲ್ಲಿ ಮನೆ ಯಜವಾನನಿಗೆ ನೆರವಾಗುವ ವಾರ್ಗ ತೋರಿಸಿಕೊಟ್ಟಿರುವುದು ಪ್ರಶಂಸನೀಯ ಎಂದರು.

ಅತ್ಯಂತ ಹಿಂದುಳಿದ ಈ ಪ್ರದೇಶದಲ್ಲಿ ಪ್ರತಿ ಮನೆಯಲ್ಲೂ ಅಕ್ಷರದ ಜ್ಯೋತಿ ಬೆಳಗಿದರೆ ಸವಾಜದಲ್ಲಿ ಪರಿವರ್ತನೆ ತರಲು ಸಾಧ್ಯ ಎಂಬ ಸಂಕಲ್ಪದೊಂದಿಗೆ ಗ್ರಾಮೀಣ ಭಾಗದ ಬಡ ಮಕ್ಕಳಿಗೆ ಪ್ರೋತ್ಸಾಹ ಧನ, ಜಲ ಸಂರಕ್ಷಣೆ, ಅರಣ್ಯೀಕರಣ, ಕೆರೆ, ಕಟ್ಟೆಗಳ ಪುನಶ್ಚೇತನ, ಸ್ವಸಹಾಯ ಸಂಗಳ ಮಹಿಳೆಯರಿಗೆ ಬ್ಯಾಂಕ್ ಮೂಲಕ ಕಿರು ಉದ್ಯಮ ಸಾಲ ವಿತರಣೆ ಸೇರಿ ಸಂಸ್ಥೆಯ ಇನ್ನಿತರ ಜನ ಕಲ್ಯಾಣ ಕಾರ್ಯಕ್ರಮಗಳು ಮನ್ನಣೆ ಪಡೆದುಕೊಂಡಿವೆ ಎಂದರು. ಯೋಜನಾಧಿಕಾರಿ ರಾವೇಂದ್ರ, ಕೃಷಿ ಮೇಲ್ವಿಚಾರಕ ಬೋರಯ್ಯ, ಕಲಾವಿದರ ವೇಧಿಕೆ ಅಧ್ಯಕ್ಷ ಜಿ.ಪಿ. ಸುರೇಶ, ಲತೀಫ್ ವಾಸ್ತರ್, ಪಿ.ಆರ್. ಕಾಂತರಾಜ, ಜಿ.ಬಿ. ಪಾಪಣ್ಣ, ತಿಪ್ಪೇಸ್ವಾಮಿ, ರೇಖಾ, ನೇತ್ರಕುವಾರ, ಶರಣಪ್ಪ ಇತರರು ಇದ್ದರು.

6 ಲಕ್ಷಕ್ಕೂ ಅಧಿಕ ಸಂಗಳು

ಸಂಸ್ಥೆ ಜಿಲ್ಲಾ ನಿರ್ದೇಶಕ ಪ್ರವೀಣ್ ಕುವಾರ ವಾತನಾಡಿ, ಧರ್ಮಸ್ಥಳ ಕ್ಷೇತ್ರದ ಅನೇಕ ಕಡೆ ಜನರನ್ನು ಬಡತನದಿಂದ ಪಾರು ವಾಡಿ ಅವರಲ್ಲಿ ಆರ್ಥಿಕವಾಗಿ ಸುಧಾರಣೆ ತರುವ ದೃಷ್ಟಿಯವಿಂದ ಡಾ. ವೀರೇಂದ್ರ ಹೆಗ್ಗಡೆ ಅವರು 40 ವರ್ಷಗಳ ಹಿಂದೆ ಗ್ರಾಮೀಣಾಭಿವೃದ್ಧಿ ಯೋಜನೆ ಜಾರಿಗೆ ತಂದರು ಎಂದು ತಿಳಿಸಿದರು. ಸಂಸ್ಥೆ ಬಡವರ ಬದುಕಿಗೆ ಹೊಸ ರೂಪ ಕೊಡುವ ಪ್ರಯತ್ನದ ಜತೆಗೆ ಕಾಲ ಕ್ರಮೇಣ ದೊಡ್ಡಮಟ್ಟದಲ್ಲಿ ಕ್ರಾಂತಿ ಕಾರಿ ಬೆಳವಣಿಗೆ ಕಂಡಿತು. ಇದನ್ನು ಮನಗಂಡು ಯೋಜನೆಯನ್ನು ರಾಜ್ಯದ ಉದ್ದಗಲಕ್ಕೂ ವಿಸ್ತರಿಸಿದರು ಎಂದು ತಿಳಿಸಿದರು. ವೀರೇಂದ್ರ ಹೆಗ್ಗಡೆಯವರು ತೆಗೆದುಕೊಂಡ ಈ ಕ್ರಮದಿಂದ ಪ್ರಸ್ತುತ ಬೆಳ್ತಂಗಡಿಯಿಂದ ಮಹಾರಾಷ್ಟ್ರ ಗಡಿವರೆಗೂ ವ್ಯಾಪಿಸಿ 6 ಲಕ್ಷಕ್ಕೂ ಅಧಿಕ ಸ್ವಸಹಾಯ ಸಂಗಳು ಸ್ಥಾಪನೆಯಾಗಿ ಕೋಟ್ಯಂತರ ರೂ. ವಹಿವಾಟು ನಡೆಸುವ ಮೂಲಕ ಮಹಿಳೆಯರ ಆರ್ಥಿಕ ಸಬಲೀಕರಣಕ್ಕೆ ಪ್ರೇರಣೆಯಾಗಿ ನಿಂತಿದೆ ಎಂದು ಹೇಳಿದರು. ಯೋಜನೆಯಡಿ ಹೈನುಗಾರಿಕೆ, ಕೃಷಿ ವಲಯಕ್ಕೂ ಪ್ರಾಧಾನ್ಯತೆ ಕೊಟ್ಟಿರುವುದು ರೈತಾಪಿ ವರ್ಗಕ್ಕೂ ಉತ್ಸಾಹ ತರಿಸಿದೆ. ಗುಡಿ ಕೈಗಾರಿಕೆ ಅಥವಾ ಸ್ವಯಂ ಉದ್ಯೋಗಕ್ಕಾಗಿ ಪಡೆದ ಸಾಲ ಸಕಾಲಕ್ಕೆ ಮರು ಪಾವತಿಸುವುದರೊಂದಿಗೆ ಸಣ್ಣ ಮತ್ತು ಮಧ್ಯಮ ಕುಟುಂಬಗಳು ನೆಮ್ಮದಿ ಜೀವನ ಕಂಡು ಕೊಳ್ಳಬೇಕೆಂಬುದು ಯೋಜನೆ ಉದ್ದೇಶವಾಗಿದೆ ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net