ಮಾನವರನ್ನೇ ಮಹಾದೇವನನ್ನಾಗಿಸಿದ ಶರಣರು

ಚಿತ್ರದುರ್ಗದಲ್ಲಿ ಭಾನುವಾರ ಶಿವರಾತ್ರಿ ಅಂಗವಾಗಿ ಏರ್ಪಡಿಸಿದ್ದ ಉಪನ್ಯಾಸ ಕಾರ್ಯಕ್ರಮದಲ್ಲಿ ಡಾ.ಬಸವಪ್ರಭು ಸ್ವಾಮೀಜಿ, ಡಾ. ಬಸವಕುಮಾರ ಸ್ವಾಮೀಜಿ, ಶ್ರೀ ತೇಜೋಮಯಾನಂದ ಸ್ವಾಮೀಜಿ, ಶ್ರೀ ಯತೀಶ್ವರಾನಂದ ಸ್ವಾಮೀಜಿ, ಶ್ರೀ ತಿಪ್ಪೇರುದ್ರ ಸ್ವಾಮೀಜಿ ಇತರರು ಇದ್ದರು.
ಚಿತ್ರದುರ್ಗದಲ್ಲಿ ಭಾನುವಾರ ಶಿವರಾತ್ರಿ ಅಂಗವಾಗಿ ಏರ್ಪಡಿಸಿದ್ದ ಉಪನ್ಯಾಸ ಕಾರ್ಯಕ್ರಮದಲ್ಲಿ ಡಾ.ಬಸವಪ್ರಭು ಸ್ವಾಮೀಜಿ, ಡಾ. ಬಸವಕುಮಾರ ಸ್ವಾಮೀಜಿ, ಶ್ರೀ ತೇಜೋಮಯಾನಂದ ಸ್ವಾಮೀಜಿ, ಶ್ರೀ ಯತೀಶ್ವರಾನಂದ ಸ್ವಾಮೀಜಿ, ಶ್ರೀ ತಿಪ್ಪೇರುದ್ರ ಸ್ವಾಮೀಜಿ ಇತರರು ಇದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ಡಾ.ಶ್ರೀ ಬಸವಪ್ರಭು ಸ್ವಾಮೀಜಿ ಅನಿಸಿಕೆ
  • ಶಿವರಾತ್ರಿ ಅಂಗವಾಗಿ ಉಪನ್ಯಾಸ
  • ಸಹಜ ಶಿವಯೋಗ ಪ್ರಾತ್ಯಕ್ಷಿಕೆ
ಚಿತ್ರದುರ್ಗ: ಶಿವರಾತ್ರಿ ಎಂದರೆ ಸದಾ ಎಚ್ಚರದಿಂದಿದ್ದು, ನಮ್ಮನ್ನು ನಾವು ಅರ್ಥ ಮಾಡಿಕೊಳ್ಳುವ, ನಮ್ಮಲ್ಲಿರುವ ಅರಿವನ್ನು ಜಾಗೃತ ಮತ್ತು ಅತ್ಮ ನಿವೇದನೆ ಮಾಡಿಕೊಳ್ಳುವ ರಾತ್ರಿಯಾಗಿದೆ ಎಂದು ದಾವಣಗೆರೆ ವಿರಕ್ತಮಠದ ಡಾ.ಶ್ರೀ ಬಸವಪ್ರಭು ಸ್ವಾಮೀಜಿ ಹೇಳಿದರು.
ಮುರುಘಾ ಮಠದಲ್ಲಿ ಭಾನುವಾರ ಮಹಾಶಿವರಾತ್ರಿ ಅಂಗವಾಗಿ ಆಯೋಜಿಸಿದ್ದ ಶಿವಶರಣರ ದೃಷ್ಟಿಯಲ್ಲಿ ಶಿವರಾತ್ರಿ ಚಿಂತನೆ, ತತ್ವಪದ ಹಾಗೂ ಜನಪದ ಗೀತೆ, ವಚನ ಭಜನೆ ಕಾರ್ಯಕ್ರಮದಲ್ಲಿ ಶ್ರೀಗಳು ಮಾತನಾಡಿದರು.
ಪಂಚೇAದ್ರಿಯಗಳನ್ನು ನಮ್ಮ ಹಿಡಿತದಲ್ಲಿ ಇಟ್ಟುಕೊಳ್ಳುವುದನ್ನು ಶರಣರು ಅವಧಾನ ಭಕ್ತಿ ಎಂದಿದ್ದಾರೆ. ಆಸೆ ತಪ್ಪಲ್ಲ, ಆದರೆ, ದೊರೆತ್ತಿದ್ದರಲ್ಲೇ ತೃಪ್ತಿ ಪಡಬೇಕು. ಮಾನವ ಮಾತನಾಡುವ ದೇವರು, ನಡೆದಾಡುವ ದೇವಾಲಯ. ಆದ್ದರಿಂದಲೇ ಶರಣರು ಪ್ರತಿಯೊಬ್ಬ ಮಾನವನನ್ನು ಮಹಾದೇವನನ್ನಾಗಿ ಮಾಡಿದ್ದಾರೆ ಎಂದರು.
ಶ್ರೀಮಠದ ಆಡಳಿತ ಮಂಡಳಿ ಸದಸ್ಯ ಡಾ. ಶ್ರೀಬಸವಕುಮಾರ ಸ್ವಾಮೀಜಿ ಮಾತನಾಡಿ, ಶಿವ ಅಂದರೆ ಮಂಗಳಕರ ಮತ್ತು ಶಾಂತ ಎಂದರ್ಥ. ಪ್ರಸ್ತುತ ದಿನಮಾನದಲ್ಲಿ ಶಿವತತ್ವದ ಅನಿವಾರ್ಯತೆ, ಮನುಷ್ಯನಿಗೆ ಶಾಂತಿ ಮತ್ತು ಧ್ಯಾನದ ಅವಶ್ಯಕತೆ ಯಿದೆ. ಪ್ರತಿ ಹಬ್ಬದ ಅಚರಣೆಗಳಿಗೆ ಧಾರ್ಮಿಕ ಹಿನ್ನೆಲೆ ಜತೆಗೆ ವೈಚಾರಿಕ ಸ್ಪರ್ಶವಿದೆ ಎಂದು ಹೇಳಿದರು.
ಶ್ರೀ ತೇಜೋಮಯಾನಂದ ಸ್ವಾಮೀಜಿ ಮಾತನಾಡಿದರು. ಶರಣರ ದÊಷ್ಟಿಯಲ್ಲಿ ಶಿವರಾತ್ರಿ ವಿಷಯ ಕುರಿತು ಶಿಕ್ಷಕ ಮಲ್ಲಪ್ಪ -Àಕ್ಕೀರಪ್ಪ ಕರೇಣ್ಣ ಅವರು ಉಪನ್ಯಾಸ ನೀಡಿದರು. ಕಾಗವಾಡ ಶ್ರೀ ಯತೀಶ್ವರಾನಂದ ಸ್ವಾಮೀಜಿ, ಹೊಳಲ್ಕೆರೆ ಒಂಟಿಕAಬ ಮಠದ ಶ್ರೀ ತಿಪ್ಪೇರುದ್ರ ಸ್ವಾಮೀಜಿ ಇದ್ದರು.
ಚಿಕ್ಕಜಾಜೂರು ಮಾರುತಿ ಭಜನ ಸಂಘದವರು ತತ್ವಪದ, ಜಾನಪದ ಮತ್ತು ವಚನಗಳನ್ನು ಹಾಡಿದರು. ಪಿ.ಸಿ.ಬಿಂದು ಸ್ವಾಗತಿಸಿ, ಎಂ.ಎನ್. ಸೌಮ್ಯ ನಿರೂಪಿಸಿದರು.
ಸಹಜ ಶಿವಯೋಗ ಪ್ರಾತ್ಯಕ್ಷಿಕೆ:
ಶ್ರೀ ಮಠದಲ್ಲಿ ಭಾನುವಾರ ಬೆಳಗ್ಗೆ ಶಿವರಾತ್ರಿ ಅಂಗವಾಗಿ ಸಹಜ ಶಿವಯೋಗದ ಪ್ರಾತ್ಯಕ್ಷಿಕೆ ಏರ್ಪಡಿಸಲಾಗಿತ್ತು. ಡಾ. ಬಸವಪ್ರಭು ಸ್ವಾಮೀಜಿ, ಡಾ. ಬಸವಕುಮಾರ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ಎಸ್. ಷಣ್ಮುಖಪ್ಪ, ಜೆ.ಎಸ್. ಮುರುಘೇಶ್, ನಾಗರಾಜ ಸಂಗA, ಚಂದ್ರಣ್ಣ, ತಿಮ್ಮಾರೆಡ್ಡಿ, ಎಸ್.ಎಂ. ಕೊಟ್ರೇಶಪ್ಪ, ಹಟ್ಟೆಪ್ಪ ಗೊಂಚಿಗಾರ್, ಎಸ್.ವಿ. ಹರ್ತಿ, ಗೀತಾ ರುದ್ರೇಶ್, ಶೈಲಜಾ ಬಾಬು, ರಾಜಶೇಖರ್, ಕಡೂರು ಕುಮಾರಸ್ವಾಮಿ, ಮಲ್ಲೇಶ್ ಮತ್ತಿತರ ಪ್ರಮುಖರು ಇದ್ದರು.
ಕಲಾವಿದೆ ಗಿರಿಜಾ ಹಿರೇಮಠ ಪ್ರಾರ್ಥಿಸಿದರು. ಪ್ರಾಚಾರ್ಯ ಬೋರೇಶ್ ಸ್ವಾಗತಿಸಿ, ನಿವೃತ್ತ ಪ್ರಾಚಾರ್ಯ ಟಿ.ಪಿ.ಜ್ಞಾನಮೂರ್ತಿ ನಿರೂಪಿಸಿದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net