ವ್ಯಸನಮುಕ್ತ ಸಮಾಜದ ನಿರ್ಮಾಣದಲ್ಲಿ ಯುವ ಜನರ ಪಾತ್ರ ಹಿರಿದು
ಚಿತ್ತರಗಿ ಇಳಕಲ್ ಶ್ರೀ ವಿಜಯ ಮಹಂತೇಶ್ವರ ಸಂಸ್ಥಾನದ ಮಹಾಂತ ಶಿವಯೋಗಿಗಳ ಜನ್ಮದಿನದ ಅಂಗವಾಗಿ ಚಿತ್ರದುರ್ಗದಲ್ಲಿ ಶನಿವಾರ ಆಯೋಜಿಸಿದ್ದ ವ್ಯಸನಮುಕ್ತ ದಿನಾಚರಣೆಯನ್ನು ಜಿಲ್ಲಾ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಽಕಾರದ ಅಧ್ಯಕ್ಷ ಆರ್. ಶಿವಣ್ಣ ಉದ್ಘಾಟಿಸಿದರು. ಡಿಎಚ್‌ಒ ಡಾ.ಎಂ.ಸಿ. ಸುನೀಲ್‌ಕುಮಾರ್, ಡಾ.ಆರ್. ಮಂಜುನಾಥ್, ಎಂ. ಜುಂಜಣ್ಣ, ಕೆ. ರಾಮಚಂದ್ರಪ್ಪ ಮತ್ತಿತರರು ಇದ್ದರು.
Published on:
Copied
Follow Us
ಪ್ರಮುಖ ಮುಖ್ಯಾಂಶಗಳು
ದುಶ್ಚಟಗಳಿಂದ ದೂರವುಳಿದರೆ ದೇಶದ ಅಭಿವೃದ್ಧಿ
ಆರ್. ಶಿವಣ್ಣ ಅನಿಸಿಕೆ
ಶ್ರೀ ಮಹಾಂತ ಶಿವಯೋಗಿಗಳ ಜನ್ಮದಿನಾಚರಣೆ
ಚಿತ್ರದುರ್ಗ:
ವ್ಯಸನ ಮುಕ್ತ ಸಮಾಜ ನಿರ್ಮಾಣದಲ್ಲಿ ಯುವ ಜನರ ಪಾತ್ರ ಹಿರಿದಾಗಿದೆ ಎಂದು ಜಿಲ್ಲಾ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಽಕಾರದ ಅಧ್ಯಕ್ಷ ಆರ್. ಶಿವಣ್ಣ ಹೇಳಿದರು.
ರಾಜ್ಯ ಮದ್ಯಪಾನ ಸಂಯಮ ಮಂಡಳಿ, ಜಿಲ್ಲಾಡಳಿತ, ಜಿಪಂ, ವಾರ್ತಾ ಇಲಾಖೆ ಸಂಯುಕ್ತಾಶ್ರಯದಲ್ಲಿ ಶನಿವಾರ ನಗರದ ಸ ರ್ಕಾರಿ ಕಲಾ ಕಾಲೇಜಿನ ಡಾ.ಬಿ.ಆರ್. ಅಂಬೇಡ್ಕರ್ ಜ್ಞಾನ ಸಭಾಂಗಣದಲ್ಲಿ ಚಿತ್ತರಗಿ ಇಳಕಲ್ ಶ್ರೀ ವಿಜಯ ಮಹಾಂತೇಶ್ವರ ಸಂಸ್ಥಾನದ ಮಹಾಂತ ಶಿವಯೋಗಿಗಳ ಜನ್ಮದಿನದ ಅಂಗವಾಗಿ ಆಯೋಜಿಸಿದ್ದ ವ್ಯಸನಮುಕ್ತ ದಿ ನಾಚರಣೆ ಉದ್ಘಾಟಿಸಿ ಮಾ ತನಾಡಿದರು.
ಸಮಾಜ ವ್ಯಸನಮುಕ್ತವಾದರೆ ಮಾತ್ರ ದೇಶದ ಅಭಿವೃದ್ಧಿ ಸಾಧ್ಯ, ಸಾಮಾಜ ಸುಧಾರಣೆ ಉದ್ದೇಶದಿಂದ ಯುವ ಜನರಲ್ಲಿ ದುಶ್ಚಟ ಗಳ ವಿರುದ್ಧ ಜಾಗÊತಿ ಮೂಡಿಸಲು ಸರ್ಕಾರ ಈ ದಿನವನ್ನು ಆಚರಿಸುತ್ತಿದೆ.
ಯುವಜನರು ದೇಶದ ಆಸ್ತಿ. ಯಾವುದೇ ದೇಶ ಅಭಿವೃದ್ಧಿ ಪಥದಲ್ಲಿ ಸಾಗಬೇಕಾದರೆ ವಿದ್ಯಾರ್ಥಿಗಳಿಗೆ ತಿಳಿವಳಿಕೆ ಅತ್ಯಗತ್ಯ. ವಿದ್ಯಾರ್ಥಿಗಳು ದುಶ್ಚಟಗಳಿಗೆ ಬಲಿಯಾಗದಂತೆ ತಡೆಯುವುದು ಸರ್ಕಾರ ಮತ್ತು ಸಮಾಜದ ಕರ್ತವ್ಯವಾಗಿದೆ ಎಂದರು.
ಬಡತನ, ಉದ್ಯೋಗಾವಕಾಶದ ಕೊರತೆ, ಶಿಕ್ಷಣದಲ್ಲಿ ಆಸಕ್ತಿ ಇಲ್ಲದಿರುವ ಮತ್ತಿತರ ಕಾರಣಗಳಿಗೆ ಯುವಕರು ದುಶ್ಚಟಗಳಿಗೆ ಬಲಿಯಾಗುವ ಸಾಧ್ಯತೆ ಇರುತ್ತದೆ. ಶಾಲಾ, ಕಾಲೇಜುಗಳ ಸುತ್ತಮುತ್ತ ಗಾಂಜಾ, ಗುಟ್ಕಾ ಹಾಗೂ ಮದ್ಯ ಮಾರಾಟ ನಿಷೇಽ ಸಲಾಗಿದೆ.
ಶಿಕ್ಷಣದ ಬೆಂಬಲಕ್ಕೆ ಉಚಿತ ಬಸ್‌ಪಾಸ್ ಸೌಲಭ್ಯ, ವಿದ್ಯಾರ್ಥಿನಿಲಯಗಳ ಸ್ಥಾಪನೆ ಹಾಗೂ ಎಸ್‌ಸಿ, ಎಸ್‌ಟಿ, ಒಬಿಸಿ ವಿದ್ಯಾರ್ಥಿಗಳ ಬೋಧನಾ ಶುಲ್ಕ ಭರಿಸುವ ಮೂಲಕ ಬಡತನ ಕಾರಣಕ್ಕೆ ಯಾರೂ ಶಿಕ್ಷಣದಿಂದ ವಂಚಿತರಾಗದAತೆ ರಾಜ್ಯ ಸರ್ಕಾರ ನೋಡಿಕೊಳ್ಳುತ್ತಿದೆ ಎಂದರು.
ಡಿಎಚ್‌ಒ ಡಾ.ಎಂ.ಸಿ. ಸುನೀಲ್‌ಕುಮಾರ್ ಮಾತನಾಡಿ, ಯುವಜನತೆ, ಮಕ್ಕಳು ನಾನಾ ವ್ಯಸನಗಳಿಗೆ ತುತ್ತಾಗುತ್ತಿರುವುದು ತೀವ್ರ ಆತಂಕಕಾರಿ ಸಂಗತಿ. ಮೊಬೈಲ್, ಗೇಮಿಂಗ್ ಹಾಗೂ ಮಾದಕದ್ರವ್ಯಗಳ ದಾಸರಾಗದಂತೆ ತಡೆಯುವುದು ಪ್ರತಿಯೊಬ್ಬರ ಕರ್ತವ್ಯವಾಗಿದೆ ಎಂದರು.
ಸೋಶಿಯಲ್ ಮೀಡಿಯಾ ಲೈಕ್ಸ್, -Áಲೋವರ್ಸ್ ಹಾಗೂ ಗೇಮಿಂಗ್ ಅಡಿಕ್ಷನ್ ಹಲವರನ್ನು ಕಾಡುತ್ತಿದೆ. ನಿಮ್ಹಾನ್ಸ್ನಂಥ ಮಾನ ಸಿಕ ಆರೋಗ್ಯ ಸಂಸ್ಥೆಗಳಲ್ಲಿ ಸಣ್ಣ, ಸಣ್ಣ ಮಕ್ಕಳು ಮೊಬೈಲ್ ವ್ಯಸನದಿಂದ ಹೇಗೆ ಬಳಲುತ್ತಿದ್ದಾರೆಂಬುದು ಅರಿವಾಗುತ್ತದೆ.
ಶ್ರೀಗಳ ಹೆಸರಲ್ಲಿ ಆಚರಿಸುವ ಈ ದಿನಾಚರಣೆ ಒಂದು ದಿನಕ್ಕೆ ಸೀಮಿತವಾಗಬಾರದು ಎಂದರು.
ಚಿಕ್ಕಗೊAಡನಹಳ್ಳಿ ಪ್ರಾಥಮಿಕ ಆರೋಗ್ಯ ಕೇಂದ್ರದ ಆಡಳಿತ ವೈದ್ಯಾಽಕಾರಿ ಡಾ.ಆರ್.ಮಂಜುನಾಥ್ ಅವರು ಮದ್ಯಪಾನ, ಮಾದಕ ವಸ್ತು ಸೇವನೆಯಿಂದ ಉಂಟಾಗುವ ದುಷ್ಪರಿಣಾಮಗಳು ಕುರಿತು ಉಪನ್ಯಾಸ ನೀಡಿದರು.
ದುರಭ್ಯಾಸಗಳಿಂದ ಆರೋ ಗ್ಯ ಹಾಳು ಮಾಡಿಕೊಂಡರೆ ಮುಂದಿನ ದಿನಗಳಲ್ಲಿ ಸಮಾಜ ಮತ್ತು ವೈದ್ಯಕೀಯ ವ್ಯವಸ್ಥೆ ನೆರವಿಗೆ ಬರಲು ಸಾಧ್ಯವಾಗುವುದಿಲ್ಲ. ಆದ್ದರಿಂದ ಯುವಜನರು ವ್ಯಸನಗಳಿಂದ ದೂರವಿದ್ದು, ಆರೋಗ್ಯ ಕಾಪಾಡಿಕೊಳ್ಳಬೇಕು ಎಂದರು.
ಇದೇ ಸಂದರ್ಭದಲ್ಲಿ ಪ್ರತಿಜ್ಞಾವಿಽ ಬೋಽಸಲಾಯಿತು. ವಾರ್ತಾ ಇಲಾಖೆ ಹಿರಿಯ ಸಹಾಯಕ ನಿರ್ದೇಶಕ ಎಂ.ಜುಂಜಣ್ಣ, ಪ್ರಾ ಚಾರ್ಯೆ ಡಾ.ಆರ್. ತಾರಿಣಿ ಶುಭದಾಯಿನಿ, ಸಿದ್ದಯ್ಯನಕೋಟೆ ವಿಜಯ ಮಹಂತೇಶ್ವರ ಶಾಖಾ ಮಠದ ಕೆ. ರಾಮಚಂದ್ರಪ್ಪ ಮತ್ತಿತರರು ಇದ್ದರು. ಡಾ.ನವೀನ್ ಮಸ್ಕಲ್ ನಿರೂಪಿಸಿದರು.