ಸಾರ್ವಜನಿಕರು ಪೊಲೀಸರ ಬೆನ್ನೆಲುಬಾಗಿ ನಿಲ್ಲಬೇಕು

ನ್ಯಾಯಾಽÃಶ ಗಂಗಾಧರ ಚನ್ನಬಸಪ್ಪ ಹಡಪದ ಅಭಿಮತ
ಚಿತ್ರದುರ್ಗದಲ್ಲಿ ಬುಧವಾರ ಆಯೋಜಿಸಿದ್ದ ಪೊಲೀಸ್ ಹುತಾತ್ಮ ದಿನಾಚರಣೆಯಲ್ಲಿ ನ್ಯಾಯಾಽÃಶ ಗಂಗಾಧರ ಚನ್ನಬಸಪ್ಪ ಹಡಪದ, ಎಸ್‌ಪಿ ಕುಶಲ್‌ಚೌಕ್ಸೆ, ಸಿಇಒ ಡಾ.ಎಸ್. ಆಕಾಶ್, ಪಿಟಿಎಸ್ ಪ್ರಾಚಾರ್ಯ ಪಿ. ಪಾಪಣ್ಣ, ಎಎಸ್‌ಪಿ ಡಾ. ಶಿವಕುಮಾರ್ ಇದ್ದರು.
ಚಿತ್ರದುರ್ಗದಲ್ಲಿ ಬುಧವಾರ ಆಯೋಜಿಸಿದ್ದ ಪೊಲೀಸ್ ಹುತಾತ್ಮ ದಿನಾಚರಣೆಯಲ್ಲಿ ನ್ಯಾಯಾಽÃಶ ಗಂಗಾಧರ ಚನ್ನಬಸಪ್ಪ ಹಡಪದ, ಎಸ್‌ಪಿ ಕುಶಲ್‌ಚೌಕ್ಸೆ, ಸಿಇಒ ಡಾ.ಎಸ್. ಆಕಾಶ್, ಪಿಟಿಎಸ್ ಪ್ರಾಚಾರ್ಯ ಪಿ. ಪಾಪಣ್ಣ, ಎಎಸ್‌ಪಿ ಡಾ. ಶಿವಕುಮಾರ್ ಇದ್ದರು.
Published on: 

ಚಿತ್ರದುರ್ಗ: ಸಮಾಜದಲ್ಲಿ ಶಾಂತಿ, ಸುವ್ಯವಸ್ಥೆ ಕಾಪಾಡುವ ಜತೆಗೆ ನಮ್ಮೆಲ್ಲರ ರಕ್ಷಣೆಯಲ್ಲಿ ದಿನದ ೨೪ ತಾಸು ಕರ್ತವ್ಯ ನಿರ್ವಹಿಸುವ ಪೊಲೀಸರಿಗೆ ಬೆನ್ನೆಲುಬಾಗಿ ನಿಲ್ಲುವಂತೆ ೨ನೇ ಹೆಚ್ಚುವರಿ ಮತ್ತು ಸತ್ರ ನ್ಯಾಯಾಽÃಶ ಗಂಗಾಧರ ಚನ್ನಬಸಪ್ಪ ಹಡಪದ ಸಾರ್ವಜನಿಕರಿಗೆ ಸಲಹೆ ನೀಡಿದರು.

ನಗರದ ಜಿಲ್ಲಾ ಸಶಸ್ತç ಮೀಸಲು ಪೋಲೀಸ್ ಪಡೆ ಆವರಣದಲ್ಲಿ ಬುಧವಾರ ಆಯೋಜಿಸಿದ್ದ ಪೊಲೀಸ್ ಹುತಾತ್ಮ ದಿನಾಚರಣೆಯಲ್ಲಿ ಹುತಾತ್ಮರ ಸ್ಮಾರಕಕ್ಕೆ ಹೂಗುಚ್ಛದೊಂದಿಗೆ ಗೌರವ ನಮನ ಸಲ್ಲಿಸಿ ಮಾತನಾಡಿದರು.

ಸಾರ್ವಜನಿಕರು ಹಬ್ಬ, ಹರಿದಿನಗಳಲ್ಲಿ ತಮ್ಮ ಕುಟುಂಬದವರೊAದಿಗೆ ಸಂತೋಷದಿAದ ಭಾಗಿಯಾಗುತ್ತಿದ್ದರೆ, ಪೊಲೀಸರು ತಮ್ಮ ಜೀವವನ್ನೇ ಪಣಕ್ಕಿಟ್ಟು ಸಾರ್ವಜನಿಕರ ರಕ್ಷಣೆಗೆ ಸದಾ ಶ್ರಮಿಸುತ್ತಾರೆ. ಶಾಂತಿ, ಸುವ್ಯವಸ್ಥೆ ರಕ್ಷಣೆಯ ಕರ್ತವ್ಯದ ಹಾದಿಯಲ್ಲಿ ಪ್ರಾಣತೆತ್ತ ಎಲ್ಲ ಪೊಲೀಸ್ ಹುತಾತ್ಮರ ತ್ಯಾಗ ಸ್ಮರಣೀಯ ಎಂದರು.

ಭಾರತ ಮತ್ತು ಚೀನಾ ಗಡಿಯಲ್ಲಿ ೧೯೫೯ರ ಅಕ್ಟೋಬರ್ ೨೧ರಂದು ಚೀನಾ ಸೈನಿಕರು ನಡೆಸಿದ ಅಕ್ರಮಣ ವಿರುದ್ಧದ ಹೋರಾಟದಲ್ಲಿ ೧೦ ಜನ ಸಿಆರ್‌ಪಿಎ-ï ಯೋಧರು ಹುತಾತ್ಮರಾಗಿದ್ದರು. ಅವರ ಸ್ಮರಣಾರ್ಥ ಪ್ರತಿವರ್ಷ ಅಕ್ಟೋಬರ್ ೨೧ರಂದು ಪೊಲೀಸ್ ಹುತಾತ್ಮ ದಿನ ಆಚರಿಸಲಾಗುತ್ತಿದೆ. ಗಡಿಯಲ್ಲಿ ಶತ್ರುಗಳು ಯಾರೆಂದು ನಮ್ಮ ಸೈನಿಕರಿಗೆ ಸ್ಪಷ್ಟವಿರುತ್ತದೆ. ಆದರೆ, ಪೊಲೀಸರು ಸಮಾಜದ ನಡುವಿರುವ ದುಷ್ಕರ್ಮಿಗಳನ್ನು ಎದುರಿಸಬೇಕಾಗುತ್ತದೆ. ಇವತ್ತಿನ ದಿನಗಳಲ್ಲಿ ಸೈಬರ್ ಹಾಗೂ ನಾನಾ ರೀತಿಯ ಕ್ರಿಮಿನಲ್ ಚಟುವಟಿಕೆಗಳು ಹೆಚ್ಚಾಗುತ್ತಿವೆ. ಇವುಗಳ ನಿಯಂತ್ರಣಕ್ಕೆ ಪೊಲೀಸರ ಪಾತ್ರ ಹಾಗೂ ತಾಂತ್ರಿಕ ನೈಪುಣ್ಯಗಳ ಪಾತ್ರ ಅತ್ಯಂತ ಹಿರಿದಾಗಿದೆ ಎಂದು ನ್ಯಾಯಾಽÃಶರು ಹೇಳಿದರು.

ಥ್ಯಾಂಕ್ಸ್ಲೆಸ್ ಜಾಬ್

ಜಿಪಂ ಸಿಇಒ ಡಾ.ಎಸ್.ಆಕಾಶ್ ಮಾತನಾಡಿ, ಸರ್ಕಾರಿ ನೌಕರರು ಅದರಲ್ಲೂ ವಿಶೇಷವಾಗಿ ಪೊಲೀಸರ ಕೆಲಸ ಥ್ಯಾಂಕ್ಸ್ಲೆಸ್ ಜಾಬ್. ನಮ್ಮ ಯಾವುದೇ ರೀತಿಯ ದೈನಂದಿನ ಕರ್ತವ್ಯಗಳಲ್ಲಿ ಉತ್ತಮ ಕೆಲಸ ಮಾಡಿದ್ದರೂ ಸಾರ್ವಜನಿಕವಾಗಿ ಕೃತಜ್ಞತೆ ನಿರೀಕ್ಷಿಸಲು ಸಾಧ್ಯವಿಲ್ಲ. ಆದ್ದರಿಂದ ಪೊಲೀಸರು ದೇವರು ಅಥವಾ ಆತ್ಮಸಾಕ್ಷಿ ಮೆಚ್ಚುವಂತೆ ಕೆಲಸ ಮಾಡಬೇಕಿದೆ. ಜಿಲ್ಲೆಯಲ್ಲಿ ಗಣೇಶೋತ್ಸವ ಮತ್ತಿತರ ಕಾರ್ಯಕ್ರಮಗಳನ್ನು ಪೊಲೀಸರು ಯಶಸ್ವಿಯಾಗಿ ನಿರ್ವಹಿಸಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಪೊಲೀಸರ ಸಹಿತ ಸರ್ಕಾರಿ ಸೇವೆಯಲ್ಲಿರುವವರು ಆರೋಗ್ಯದ ಕಡೆ ಹೆಚ್ಚಿನ ಗಮನ ಹರಿಸಬೇಕು. ಕೆಲಸದೊತ್ತಡ ಮತ್ತು ಇತರೆ ಆರೋಗ್ಯ ಸಮಸ್ಯೆಗಳಿಂದ ಕೆಲವರು ಹೃದಯಾಘಾತದಿಂದ ನಿಧನರಾಗುತ್ತಿರುವುದು ಆತಂಕಕಾರಿಯಾಗಿದೆ. ಪ್ರತಿಯೊಬ್ಬರೂ ತಮ್ಮ ಆರೋಗ್ಯದ ಕಡೆಗೆ ಹೆಚ್ಚಿನ ಕಾಳಜಿ ವಹಿಸಬೇಕೆಂದು ಡಾ.ಆಕಾಶ್ ಮನವಿ ಮಾಡಿದರು.

ಎಸ್‌ಪಿ ಕುಶಲ್ ಚೌಕ್ಸೆ ಅವರು ಮಾತನಾಡಿ, ದೇಶದಾದ್ಯಂತ ಒಂದು ವರ್ಷದ ಅವಽಯಲ್ಲಿ ಹುತಾತ್ಮರಾದ ೧೫೪ ಪೊಲೀಸರ ಹೆಸರನ್ನು ವಾಚಿಸಿ, ಗೌರವ ಸಮರ್ಪಿಸಿದರು. ಇವರಲ್ಲಿ ಕರ್ನಾಟಕದ ಐವರು ಪೊಲೀಸರು ಇದ್ದಾರೆಂದು ದುಃಖ ವ್ಯಕ್ತಪಡಿಸಿದರು.

ಎಎಸ್‌ಪಿ ಡಾ. ಶಿವಕುಮಾರ್, ಐಮಂಗಲ ಪೊಲೀಸ್ ತರಬೇತಿ ಸಂಸ್ಥೆ ಪ್ರಾಂಶುಪಾಲರು, ಎಸ್‌ಪಿ ಪಿ.ಪಾಪಣ್ಣ, ಗೃಹರಕ್ಷಕ ದಳದ ಜಿಲ್ಲಾ ಕÀಮಾಂಡೆAಟ್ ಸಂಧ್ಯಾ, ಡಿವೈಎಸ್‌ಪಿಗಳಾದ ಗೋಪಾಲಕೃಷ್ಣ, ಸತ್ಯನಾರಾಯಣರಾವ್, ಡಿಪಿಒದ ಸಹಾಯಕ ಆಡಳಿತಾಽಕಾರಿ ಟಿ.ಎನ್. ಮೂರ್ತಿ, ಜಿಲ್ಲಾ ಗ್ಯಾರಂಟಿ ಪ್ರಾಽಕಾರದ ಉಪಾಧ್ಯಕ್ಷ ಡಿ.ಎನ್. ಮೈಲಾರಪ್ಪ, ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಬಿ.ಎಸ್. ವಿನಾಯಕ ಮತ್ತಿತರ ಗಣ್ಯರು ಹುತಾತ್ಮರ ಸ್ಮಾರಕಕ್ಕೆ ಹೂಗುಚ್ಛದೊಂದಿಗೆ ಗೌರವ ಸಮರ್ಪಿಸಿದರು.

ಹುತಾತ್ಮರ ಸ್ಮರಣಾರ್ಥ ವಾಲಿಪೈರಿಂಗ್ ನಡೆಸಲಾಯಿತು. ಪೊಲೀಸ್ ವಾದ್ಯವೃಂದ ರಾಷ್ಟçಗೀತೆ ನುಡಿಸುವುದರೊಂದಿಗೆ ಪೊಲೀಸ್ ಧ್ವಜವನ್ನು ಅರ್ಧಕ್ಕೆ ಇಳಿಸಿ, ೨ ನಿಮಿಷಗಳ ಮೌನಾಚರಣೆ ಬಳಿಕ ಪೊಲೀಸ್ ಧ್ವಜವನ್ನು ಪುನಃ ಪೂರ್ಣ ಪ್ರಮಾಣದಲ್ಲಿ ಏರಿಸಲಾಯಿತು. ಪೊಲೀಸ್ ವಾದ್ಯವೃಂದದವರು ಅಬೈಡ್ ವಿಥ್ ಮೀ ಗೀತೆ ನುಡಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net