ನಗರದ ಶ್ರೀ ಉಜ್ಜಯಿನಿ ಮಠದಲ್ಲಿ ಸೋಮವಾರ ಉಜ್ಜಯನಿ ಜಗದ್ಗುರು ಲಿಂ. ಮರುಳಾರಾಧ್ಯ ಶಿವಾಚಾರ್ಯ ಸ್ವಾಮೀಜಿ ಅವರ ೩೧ನೇ ವರ್ಷದ ಪುಣ್ಯ ಸ್ಮರಣೆÆÃತ್ಸವದ ಸಾನ್ನಿಧ್ಯವಹಿಸಿ ಮಾತನಾಡಿ, ಮಠಗಳು ಮಾನವನ ಮಾನಸಿಕ ಒತ್ತಡ ನಿವಾರಿಸಿ ನೆಮ್ಮದಿ ನೀಡುವ ಪುಣ್ಯ ಸ್ಥಳಗಳಾಗಿವೆ. ಪಾಲಕರು ಮಕ್ಕಳಿಗೆ ಬಾಲ್ಯದಿಂದಲೇ ಸನ್ನಢÀತೆ, ಭಾರತೀಯ ಸಂಸ್ಕೃತಿ, ಇತಿಹಾಸ ತಿಳಿಸಬೇಕು. ವಿದೇಶದಲ್ಲಿ ವಿದ್ಯಾಭ್ಯಾಸ, ಕೆಲಸಕ್ಕೆ ಮಕ್ಕಳನ್ನು ಕಳಿಸಿ ದೇಶದ ಸಂಪತ್ತನ್ನು ವಿದೇಶಗಳಿಗೆ ವ್ಯಯಿಸುವುದು ತಪ್ಪಬೇಕು ಎಂದರು.