ಸೇವಾಲಾಲ್ ಸಂತರ ತತ್ವಾದರ್ಶ ಬದುಕಿಗೆ ದಾರಿದೀಪ

 ಚಿತ್ರದುರ್ಗದಲ್ಲಿ ಗುರುವಾರ ನಡೆದ ಸಂತ ಸೇವಾಲಾಲ್ ಮಹಾರಾಜರ ಜಯಂತ್ಯುತ್ಸವದಲ್ಲಿ ಗೋವಿಂದ ಎಂ. ಕಾರಜೋಳ ಅವರನ್ನು ಸನ್ಮಾನಿಸಲಾಯಿತು. ಎಂ.ಸತೀಶ್‌ಕುಮಾರ್, ಹರೀಶ್‌ನಾಯ್ಕ್, ಗಿರೀಶ್, ಚಂದನಾಯ್ಕ್, ಪಿ.ಅಂಬಿಕಾ, ತುಳಸಿ ರಮೇಶ್, ನಿರ್ಮಲಾ ಇತರರಿದ್ದರು.
ಚಿತ್ರದುರ್ಗದಲ್ಲಿ ಗುರುವಾರ ನಡೆದ ಸಂತ ಸೇವಾಲಾಲ್ ಮಹಾರಾಜರ ಜಯಂತ್ಯುತ್ಸವದಲ್ಲಿ ಗೋವಿಂದ ಎಂ. ಕಾರಜೋಳ ಅವರನ್ನು ಸನ್ಮಾನಿಸಲಾಯಿತು. ಎಂ.ಸತೀಶ್‌ಕುಮಾರ್, ಹರೀಶ್‌ನಾಯ್ಕ್, ಗಿರೀಶ್, ಚಂದನಾಯ್ಕ್, ಪಿ.ಅಂಬಿಕಾ, ತುಳಸಿ ರಮೇಶ್, ನಿರ್ಮಲಾ ಇತರರಿದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ಬಂಜಾರ ಸಂಸ್ಕೃತಿ, ಕಲೆ ಇತರೆ ಸಮುದಾಯಗಳಿಗೂ ಪ್ರೇರಣೆ
  • ಸಂಸದ ಗೋವಿಂದ ಎಂ. ಕಾರಜೋಳ ಅಭಿಮತ
  • ಪ್ರತಿಭಾ ಪುರಸ್ಕಾರ
ಚಿತ್ರದುರ್ಗ:ಸಂತ ಸೇವಾಲಾಲ್ ಮಹಾರಾಜರ ತತ್ವಾದರ್ಶಗಳು ಬದುಕಿಗೆ ದಾರಿದೀಪವಾಗಲಿದೆ ಎಂದು ಸಂಸದ ಗೋವಿಂದ ಎಂ.ಕಾರಜೋಳ ಸಲಹೆ ನೀಡಿದರು.
ನಗರದ ಬಂಜಾರ ಭವನದಲ್ಲಿ ಗುರುವಾರ ಲಂಬಾಣಿ ಸಮಾಜದಿಂದ ಸಂತ ಸೇವಾಲಾಲ್ ಮಹಾರಾಜರ ೨೮೭ನೇ ಜಯಂತ್ಯುತ್ಸವ ಅಂಗವಾಗಿ ಎಸ್ಸೆಸ್ಸೆಲ್ಸಿ, ದ್ವಿತೀಯ ಪಿಯು ಪರೀಕ್ಷೆಯಲ್ಲಿ ಶೇ.೮೫ಕ್ಕೂ ಅಽಕ ಅಂಕ ಪಡೆದ ವಿದ್ಯಾರ್ಥಿಗಳಿಗೆ ಹಮ್ಮಿಕೊಂಡಿದ್ದ ಪ್ರತಿಭಾ ಪುರಸ್ಕಾರ ಉದ್ಘಾಟಿಸಿ ಮಾತನಾಡಿದರು.
ಸಂತ ಸೇವಾಲಾಲ್ ಮಹಾರಾಜರು ಸೇರಿ ಅನೇಕ ಮಹಾನ್ ದಾರ್ಶನಿಕರು ಸತ್ಯ, ಅಹಿಂಸೆ, ದಯೆ, ಕರುಣೆ ಹಾಗೂ ಶಿಕ್ಷಣದ ಮಹತ್ವವನ್ನು ಸಾರಿದ್ದಾರೆ. ಅವುಗಳನ್ನು ಜೀವನದಲ್ಲಿ ಮೈಗೂಡಿಸಿಕೊಂಡರೆ ಜಯಂತಿ ಆಚರಣೆ ಸಾರ್ಥಕ ಎಂದು ಅಭಿಪ್ರಾಯಪಟ್ಟರು.
ಬಂಜಾರ ಸಂಸ್ಕೃತಿ, ಕಲೆ ಕುರಿತಂತೆ ಜಾಗೃತಿ ಮೂಡಿಸಿ ಉಳಿಸಿ ಬೆಳೆಸಬೇಕಿದೆ. ಇವು ಇತರ ಸಮುದಾಯಗಳಿಗೂ ಪ್ರೇರಣೆ ಯಾಗಿವೆ. ಸೇವಾಲಾಲ್ ಅವರ ಸಂದೇಶಗಳು ಸಮಾಜದ ಮುಖ್ಯವಾಹಿನಿಗೆ ಬರಲು ಸಹಕಾರಿಯಾಗಿವೆ ಎಂದರು.
ರಾಜ್ಯ ಖನಿಜ ಅಭಿವೃದ್ಧಿ ನಿಗಮದ ಮಾಜಿ ಅಧ್ಯಕ್ಷ ಎಚ್.ಎಸ್.ಲಿಂಗಮೂರ್ತಿ ಮಾತನಾಡಿ, ಸೇವಾಲಾಲ್ ಅವರ ವಿಚಾರ ಧಾರೆಗಳು ಒಂದು ಸಮುದಾಯಕ್ಕೆ ಸೀಮಿತವಾಗದೆ, ಸರ್ವರಿಗೂ ಸಮಾನತೆ, ಶಾಂತಿಯ ಸಂದೇಶ ಸಾರಿವೆ. ಅಲ್ಲದೆ, ಮೂಢ ನಂಬಿಕೆಗಳ ವಿರುದ್ಧವೂ ಜಾಗೃತಿ ಮೂಡಿಸಿದ್ದಾರೆ. ವ್ಯಸನಮುಕ್ತ ಮತ್ತು ಸಹೋದರತೆ ಸಮ ಸಮಾಜದ ನಿರ್ಮಾಣಕ್ಕೆ ಒತ್ತು ನೀಡಿದ್ದಾರೆ ಎಂದು ಬಣ್ಣಿಸಿದರು.
ಬಂಜಾರ ಸಮಾಜದ ಅಧ್ಯಕ್ಷ ಎಂ.ಸತೀಶ್‌ಕುಮಾರ್ ಮಾತನಾಡಿ, ನಮ್ಮ ಸಮುದಾಯದ ಸಂಸ್ಕೃತಿ ಶ್ರೀಮಂತವಾಗಿದ್ದು, ಅದ ನ್ನು ಮತ್ತಷ್ಟು ಬೆಳೆಸಲು ಪ್ರೋತ್ಸಾಹಿಸಬೇಕಿದೆ. ಕಾಲೆಳೆಯುವ ಮನೋಭಾವ ಬೇಡ. ಕಲಾವಿದರನ್ನು ಬೆಂಬಲಿಸಿ ಎಂದು ಮನವಿ ಮಾಡಿದರು.
ನಿಸ್ವಾರ್ಥ ಬಂಜಾರ ಸಮುದಾಯಕ್ಕೆ ಆಗುತ್ತಿರುವ ಅನ್ಯಾಯದ ವಿರುದ್ಧ ಜಾಗೃತರಾಗಬೇಕಿದೆ. ಮತಾಂತರ ಬೇಡ. ಸಮಾಜದ ಆಚಾರ, ವಿಚಾರ ಬಹು ಎತ್ತರಕ್ಕೆ ಬೆಳೆದು ನಿಂತಿವೆ. ಸೇವಾಲಾಲರು ಜ್ಞಾನದ ಮೂಲಕ ಮುಕ್ತಿ ಮಾರ್ಗವನ್ನು ತೋರಿಸಿದ್ದಾರೆ. ಆ ನಿಟ್ಟಿನಲ್ಲಿ ಸಾಗೋಣ ಎಂದು ಸಲಹೆ ನೀಡಿದರು.
ಇದೇ ವೇಳೆ ಪ್ರತಿಭಾವಂತ ವಿದ್ಯಾರ್ಥಿಗಳು ಹಾಗೂ ಗೋವಿಂದ ಎಂ. ಕಾರಜೋಳ ಅವರನ್ನು ಗೌರವಿಸಲಾಯಿತು. ಇದಕ್ಕೂ ಮುನ್ನ ನಗರದಲ್ಲಿ ನಡೆದ ಭವ್ಯ ಮೆರವಣಿಗೆಗೆ ರಾಜ್ಯ ಸಫಾಯಿ ಕರ್ಮಚಾರಿ ಆಯೋಗದ ಅಧ್ಯಕ್ಷ ಪಿ.ರಘು ಚಾಲನೆ ನೀಡಿದರು.
ವಕೀಲರಾದ ಹರೀಶ್‌ನಾಯ್ಕ್, ಬಿ.ಕೆ.ರಹಮತ್‌ವುಲ್ಲಾ, ರಾಜ್ಯ ತಾಂಡಾ ಅಭಿವೃದ್ಧಿ ನಿಗಮದ ಮಾಜಿ ನಿರ್ದೇಶಕ ಗಿರೀಶ್,
ಚಂದನಾಯ್ಕ್, ಹಿರಿಯೂರು ನಗರಸಭೆ ಮಾಜಿ ಸದಸ್ಯರಾದ ಪಿ.ಅಂಬಿಕಾ, ತುಳಸಿ ರಮೇಶ್, ನಿರ್ಮಲಾ, ಉಮೇಶ್‌ನಾಯ್ಕ್, ಜೆ.ಮಂಜುನಾಥ್ ತಿಪ್ಪೇಸ್ವಾಮಿ ನಾಯ್ಕ್, ಕುಮಾರನಾಯ್ಕ್, ಈರಾನಾಯ್ಕ್, ವೀರಭದ್ರನಾಯ್ಕ್ ಇತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net