ಅರಿವಿನ ಬೆಳಕು ಮೂಡಿಸಿತು ಅಕ್ಷರದ ಹಣತೆ! vijayaratna award

ದುಬೈನಲ್ಲಿ ನಡೆದ ವರ್ಣರಂಜಿತ ಸವಾರಂಭದಲ್ಲಿ ಕೆ.ಎಂ. ವೀರೇಶ್ ಅವರಿಗೆ ವಿಆರ್‌ಎಲ್ ಮೀಡಿಯಾ ಪ್ರೈ. ಲಿ. ಸಂಸ್ಥೆಯ ಪ್ರತಿಷ್ಠಿತ ವಿಜಯರತ್ನ ಇಂಟರ್ ನ್ಯಾಷನಲ್ -2026 ಪ್ರಶಸ್ತಿ ಪ್ರದಾನ ವಾಡಲಾಯಿತು. ದುಬೈನ ಇಮಿಗ್ರೇಷನ್ ಮುಖ್ಯಸ್ಥ ಹಾಗೂ ಎಮಿರೇಟ್ಸ್ ಹ್ಯೂಮನ್ ರಿಸೋರ್ಸ್ ಬೋರ್ಡ್ ಚೇರ್ಮನ್ ಡಾ. ಅಬ್ದುಲ್ಲಾ ಸಯೀದ್ ಬಿನ್ ಶಮ್ಮಾ, ವಿಆರ್‌ಎಲ್ ಸಮೂಹ ಸಂಸ್ಥೆಗಳ ಎಂಡಿ ಡಾ. ಆನಂದ ಸಂಕೇಶ್ವರ, ದುಬೈ ಹಿಂದೂ ಟೆಂಪಲ್ ಮುಖ್ಯಸ್ಥ ಮೋಹನ್ ನರಸಿಂಹಮೂರ್ತಿ ಉಪಸ್ಥಿತರಿದ್ದರು. vijayaratna award
ದುಬೈನಲ್ಲಿ ನಡೆದ ವರ್ಣರಂಜಿತ ಸವಾರಂಭದಲ್ಲಿ ಕೆ.ಎಂ. ವೀರೇಶ್ ಅವರಿಗೆ ವಿಆರ್‌ಎಲ್ ಮೀಡಿಯಾ ಪ್ರೈ. ಲಿ. ಸಂಸ್ಥೆಯ ಪ್ರತಿಷ್ಠಿತ ವಿಜಯರತ್ನ ಇಂಟರ್ ನ್ಯಾಷನಲ್ -2026 ಪ್ರಶಸ್ತಿ ಪ್ರದಾನ ವಾಡಲಾಯಿತು. ದುಬೈನ ಇಮಿಗ್ರೇಷನ್ ಮುಖ್ಯಸ್ಥ ಹಾಗೂ ಎಮಿರೇಟ್ಸ್ ಹ್ಯೂಮನ್ ರಿಸೋರ್ಸ್ ಬೋರ್ಡ್ ಚೇರ್ಮನ್ ಡಾ. ಅಬ್ದುಲ್ಲಾ ಸಯೀದ್ ಬಿನ್ ಶಮ್ಮಾ, ವಿಆರ್‌ಎಲ್ ಸಮೂಹ ಸಂಸ್ಥೆಗಳ ಎಂಡಿ ಡಾ. ಆನಂದ ಸಂಕೇಶ್ವರ, ದುಬೈ ಹಿಂದೂ ಟೆಂಪಲ್ ಮುಖ್ಯಸ್ಥ ಮೋಹನ್ ನರಸಿಂಹಮೂರ್ತಿ ಉಪಸ್ಥಿತರಿದ್ದರು. vijayaratna award
Published on

ಪ್ರಮುಖ ಮುಖ್ಯಾಂಶಗಳು

  • ಬಯಲು ಸೀಮೆಯಲ್ಲಿ ಶಿಕ್ಷಣ ದೀವಿಗೆ ಬೆಳಗಿದ ಕೆ.ಎಂ.ವೀರೇಶ್
  • ಕಾನಾಮಡಗು ಮಠಸ್ಥರ ಶಿಕ್ಷಣ ಪ್ರೇಮಕ್ಕೆ ತಲೆಮಾರಿನ ನಂಟು
  • ಮೈಸೂರು ಮುಕ್ತ ವಿಶ್ವವಿದ್ಯಾಲಯದಿಂದ ಗೌರವ ಡಾಕ್ಟರೇಟ್ ಪ್ರದಾನ
ಚಿತ್ರದುರ್ಗ: ಶಿಕ್ಷಣವನ್ನೇ ಉಸಿರಾಗಿಸಿಕೊಂಡ, ಆ ಮೂಲಕ ಸುತ್ತ ಹತ್ತೂರಲ್ಲಿ ಅಕ್ಷರ ದೀವಿಗೆ ಬೆಳಗಿದ ಕಾನಾಮಡಗು ಮಠಸ್ಥರ ಕುಟುಂಬದ ಕೆ.ಎಂ. ವೀರೇಶ್ ಅವರ ಸಾಧನಾಗಾಥೆ ಇದು. vijayaratna award
ತಾತ, ಮುತ್ತಾತ, ತಂದೆ, ಮಗ, ಸಹೋದರರು ಹೀಗೆ ಒಂದಿಡೀ ತಲೆಮಾರು ಶಿಕ್ಷಣ ದೀವಿಗೆ ಹಿಡಿದು ಬಡ ಮಕ್ಕಳ ಎದೆಯಲ್ಲಿ ಅಕ್ಷರಗಳನ್ನು ಅರಳಿಸಿದ ಶಿಕ್ಷಣ ಶಿಲ್ಪಿಗಳಿವರು.
ಲಕ್ಷಾಂತರ ಜನರಿಗೆ ಅಕ್ಷರ ಕಲಿಸಿದ ಆ ಮೂಲಕ ಸಾಕ್ಷರ ಸಮಾಜಕ್ಕೆ ಅಡಿಪಾಯ ಹಾಕಿದ ಕೀರ್ತಿ ನಿಸ್ಸಂದೇಹವಾಗಿ ಈ ಕುಟುಂಬದ ಕೆ.ಎಂ.ವೀರೇಶ್, ಕೆ.ಎಂ.ತಿಪ್ಪೇಸ್ವಾಮಿ ಮತ್ತವರ ಸಹೋದರರಿಗೆ ಸಲ್ಲುತ್ತದೆ.
ಚಿತ್ರದುರ್ಗದಲ್ಲಿ ಬಾಪೂಜಿ ವಿದ್ಯಾಸಂಸ್ಥೆ ಮೂಲಕ ಶೈಕ್ಷಣಿಕ ಕ್ರಾಂತಿಗೆ ಮುನ್ನುಡಿ ಬರೆದ, ಇದರೊಟ್ಟಿಗೆ ಸಾಹಿತ್ಯ, ರಂಗ ಕಲೆ, ಸಾಂಸ್ಕೃತಿಕ, ಸಾಮಾಜಿಕ ಸೇವೆ, ಕೃಷಿಗೂ ತಮ್ಮನ್ನು ಸಮರ್ಪಿಸಿಕೊಂಡಿದ್ದಾರೆ.
ದಣಿವರಿಯದ ಇವರ ಸಾಧನೆಗೆ ನಾನಾ ಪ್ರಶಸ್ತಿ, ಪುರಸ್ಕಾರಗಳು ಹುಡುಕಿ ಬಂದಿವೆ. ಈಚೆಗೆ ಮೈಸೂರು ಮುಕ್ತ ವಿವಿ ಗೌರವ ಡಾಕ್ಟರೇಟ್ ನೀಡಿ ಗೌರವಿಸಿದೆ. ಮುರುಘಾಮಠ, ಸುತ್ತೂರು ಮಠ, ಸಿದ್ಧಗಂಗಾ ಸೇರಿ ನಾಡಿನ ಮಠಾಧೀಶರ ಕೃಪಾಶೀರ್ವಾದಕ್ಕೆ ಭಾಜನರಾದರೂ, ರಾಜಕೀಯ ಮುತ್ಸದ್ದಿಗಳ ನಿಕಟ ಸಂಪರ್ಕವಿದ್ದರೂ ಹಮ್ಮು- ಬಿಮ್ಮು ತೋರದೆ ಎಲೆ ಮರೆ ಕಾಯಂತೆ ಇದ್ದಾರೆ.
ಕೆ.ಎಂ.ಶರಣಯ್ಯ-ನಾಗರತ್ನಮ್ಮ ದಂಪತಿಯ 2ನೇ ಪುತ್ರ ವೀರೇಶ್. ಉಳಿದಂತೆ ಕೆ.ಎಂ.ತಿಪ್ಪೇಸ್ವಾಮಿ, ಕೆ.ಎಂ. ರೇಣುಕಾ ನಂದಸ್ವಾಮಿ, ಕೆ.ಎಂ.ಶಶಿಧರ್, ಕೆ.ಎಂ.ಮಂಜುನಾಥ್ ಸಹೋದರರು. ಕೆ.ಎಂ. ಗುರುಬಸಮ್ಮ ಸಹೋದರಿ ಎಲ್ಲರಿಗೂ ಅಕ್ಷರ ಕಲಿಕೆಯೇ ಅಚ್ಚುಮೆಚ್ಚು. ಅಕಾಲಿಕವಾಗಿ ಅಗಲಿದ ಸಹೋದರ ಮಂಜುನಾಥ್ ನೆನಪಿಗೆ ಅವರ ವಿದ್ಯಾರ್ಥಿಗಳು ಕಾನಾಮಡುಗು ಸಿದ್ಧಲಿಂಗೇಶ್ವರ ಎಜುಕೇಷನ್ ಕ್ಯಾಂಪಸ್‌ನಲ್ಲಿ ದೇವಾಲಯ ಸ್ಥಾಪಿಸಿರುವುದು ವಿಶೇಷ. ವೀರೇಶ್ ಅವರ ತಾತ ತಿಪ್ಪೇರುದ್ರಸ್ವಾಮಿ ಅಂದಿನ ಕಾಲಕ್ಕೆ ಮಕ್ಕಳಿಗೆ ಮರಳಿನ ಮೇಲೆ ಅಕ್ಷರಭ್ಯಾಸ ಮಾಡಿಸುತ್ತಿದ್ದರು ಎಂಬುದು ಈ ಕುಟುಂಬದ ಶೈಕ್ಷಣಿಕ ಕಾಳಜಿಗೆ ಹಿಡಿದ ಕೈಗನ್ನಡಿ.
ಹಿರಿಯ ಸಹೋದರ ತಿಪ್ಪೇಸ್ವಾಮಿ ಆಯುರ್ವೇದ, ನರ್ಸಿಂಗ್ ಕಾಲೇಜು, ಆಸ್ಪತ್ರೆ ಸ್ಥಾಪಿಸಿದ್ದಾರೆ. ತಮ್ಮ ರೇಣುಕಾನಂದ ಸ್ವಾಮಿ ಕೊಪ್ಪಳದಲ್ಲಿ ಸಿದ್ಧಲಿಂಗೇಶ್ವರ ಶಿಕ್ಷಣ ಸಂಸ್ಥೆ ತೆರೆದಿದ್ದಾರೆ. ಇನ್ನೊಬ್ಬ ಸಹೋದರ ಕೆ.ಎಂ.ಶಶಿಧರ್, ಕಾನಮಡಗು ಗ್ರಾಮದಲ್ಲಿ ಕೆಎಂಎಸ್ ಗ್ರ್ೂ ಆ್ ಎಜುಕೇಷನ್ ಇನ್‌ಸ್ಟಿಟ್ಯೂಟ್ ಸ್ಥಾಪಿಸಿ ಮುನ್ನಡೆಸುತ್ತಿದ್ದಾರೆ.
ವಿದ್ಯಾಭ್ಯಾಸ: ಹುಟ್ಟೂರು ಕಾನಾಮಡುಗು ಗ್ರಾಮದಲ್ಲೇ ಪ್ರಾಥಮಿಕ, ಪ್ರೌಢ ಶಿಕ್ಷಣ, ಕೊಟ್ಟೂರಿನ ಕೊಟ್ಟೂರೇಶ್ವರ ಕಾಲೇಜಲ್ಲಿ ಪಿಯುಸಿ, ಬಿಕಾಂ, ದಾವಣಗೆರೆ ಸಂಜೆ ಕಾನೂನು ಕಾಲೇಜಿನಲ್ಲಿ ಕಾನೂನು ಪದವಿ ಪಡೆದರು. ಎಸ್ಸೆಸ್ಸೆಲ್ಸಿಯಲ್ಲಿ ಶೇ.96 ಅಂಕ ಪಡೆದಿದ್ದರು.
ಚಿತ್ರದುರ್ಗ ಎಸ್‌ಜೆಎಂ ವಿದ್ಯಾಪೀಠದ ರಾಣೆಬೆನ್ನೂರು ಮಹಿಳಾ ಪ್ರಥಮ ದರ್ಜೆ ಕಾಲೇಜು ಅಧೀಕ್ಷಕರಾಗಿ 1981ರ ಜೂನ್ 15 ರಂದು ವೃತ್ತಿ ಆರಂಭಿಸಿದರು. ಅಂದಿನ ಪೀಠಾಧಿಪತಿ ಮಲ್ಲಿಕಾರ್ಜುನ ಶ್ರೀಗಳ ಆಣತಿಯಂತೆ ಎಸ್‌ಜೆಎಂ ವಿದ್ಯಾಪೀಠದ ಆಡಳಿತಾಧಿಕಾರಿಯೂ ಆದರು. ಎಸ್‌ಜೆಎಂ ವಿದ್ಯಾಪೀಠದ 100 ಕ್ಕೂ ಹೆಚ್ಚು ಶಾಲಾ, ಕಾಲೇಜುಗಳನ್ನು ಅನುದಾನಕ್ಕೆ ಒಳಪಡಿಸುವಲ್ಲಿ ಪಟ್ಟ ಶ್ರಮ ಶ್ಲಾಘನೀಯ. ಇದರಿಂದ ಸಾವಿರಾರು ಕುಟುಂಬಗಳಿಗೆ ಉದ್ಯೋಗ ಭದ್ರತೆ ದೊರೆಯಿತು. ಇವರ ಅವಧಿಯಲ್ಲೇ ಶಾಲಾ-ಕಾಲೇಜುಗಳ ಸಂಖ್ಯೆ 31ರಿಂದ 110ಕ್ಕೆ ಏರಿದವು.
ಹಿಂದಿನ ಮುಖ್ಯಮಂತ್ರಿಗಳಾದ ಎಸ್.ಎಂ.ಕೃಷ್ಣ ಹಾಗೂ ಜೆ.ಎಚ್.ಪಟೇಲರ ಅವಧಿಯಲ್ಲಿ ಕ್ರಮವಾಗಿ ಪಾಲಿಟೆಕ್ನಿಕ್ ಕಾಲೇಜಿಗೆ ವೇತನಾನುದಾನ, ಬಸವೇಶ್ವರ ವೈದ್ಯಕೀಯ ವಿದ್ಯಾಲಯಕ್ಕೆ ಉಛ್ಞಿಠಿಜಿಚ್ಝಜಿಠಿ ಇಛ್ಟಿಠಿಜಿ ್ಛಜ್ಚಿಠಿಛಿ ಹಾಗೂ ಮೆಡಿಕಲ್ ಕೌನ್ಸಿಲಿಂಗ್ ಆಪ್‌ ಇಂಡಿಯಾದ ಅನುಮತಿ ಪಡೆಯಲು ಯಶಸ್ವಿಯಾದರು, ದಂತ ವೈದ್ಯಕೀಯ, ಾರ್ಮಸಿ, ಪಾಲಿಟೆಕ್ನಿಕ್, ನರ್ಸಿಂಗ್ ಶಾಲಾ-ಕಾಲೇಜುಗಳು ಚಿತ್ರದುರ್ಗ, ತುಮಕೂರು, ಹಾವೇರಿ, ರಾಣೆಬೆನ್ನೂರು, ಕೊಡಗು ಇತರೆಡೆ ಸ್ಥಾಪನೆಯಾಗಿವೆ. ಕ್ರೀಡಾ ಮತ್ತು ಸಾಂಸ್ಕೃತಿಕ ಕಲಾ ಲೋಕ, ಅನಾಥಾಲಯ, ವೃದ್ಧಾಶ್ರಮ, ಅಂಗವಿಕಲ ಸಂಸ್ಥೆಗೂ ಸೇವೆ ಸಲ್ಲಿಸಿದ್ದಾರೆ.

ಬಾಪೂಜಿ ಸಂಸ್ಥೆಯ ದೃಢ ಹೆಜ್ಜೆಗಳು

ಎಸ್‌ಜೆಎಂ ವಿದ್ಯಾಪೀಠದ ಸೇವೆಯ ನಂತರ 2003-2004 ರಿಂದ ಚಿತ್ರದುರ್ಗದಲ್ಲಿ ಬಾಪೂಜಿ ಸಮೂಹ ಶಿಕ್ಷಣ ಸಂಸ್ಥೆಗಳಡಿ ಶಾಲಾ, ಕಾಲೇಜು ಸ್ಥಾಪಿಸಿದ್ದಾರೆ. ಪ್ರಾಥಮಿಕ, ಪ್ರೌಢ, ಪದವಿ, ಡಿಪ್ಲೊಮಾ, ಬಿಎಇಡಿ, ಡಿಇಡಿ, ದೂರ ಶಿಕ್ಷಣ ಕೇಂದ್ರ ಸೇರಿ ಹಲವು ಸಂಸ್ಥೆಗಳನ್ನು ಕಟ್ಟಿದ್ದಾರೆ. 200ಕ್ಕೂ ಅಧಿಕ ಬೋಧಕ, ಬೋಧಕೇತರರಿಗೆ ಉದ್ಯೋಗ ನೀಡಿದ್ದಾರೆ.
ಕೌಟುಂಬಿಕ ವಿವರ: ಚಿತ್ರದುರ್ಗದ ಮಾಗನೂರು ಮನೆತನದ ಕೆ.ಎಂ.ಸುಮಂಗಳಾ ಅವರನ್ನು 1988ರ ಏ. 10 ರಂದು ವೀರೇಶ್ ವಿವಾಹವಾದರು. ಈ ದಂಪತಿಗೆ ಮೂವರು ಮಕ್ಕಳು. ಪುತ್ರ ಕೆ.ಎಂ.ಚೇತನ್ ಬಾಪೂಜಿ ಸಂಸ್ಥೆ ನಿರ್ದೇಶಕರಾಗಿ ತಂದೆ ಜತೆ ಕೈ ಜೋಡಿಸಿದ್ದಾರೆ. ಒಬ್ಬ ಪುತ್ರಿ ಭಾವನಾ ಇಂಜಿನಿಯರ್, ಇನ್ನೊಬ್ಬ ಪುತ್ರಿ ಸಹನಾ ಎಚ್‌ಡಿಎ್ಸಿಯಲ್ಲಿ ಡಿಎಂ.

ಗುರುಕುಲ ಪದ್ಧತಿ

ಒತ್ತಡ, ನಗರೀಕರಣದಿಂದ ಆದರ್ಶಗಳು ಮರೆಯಾಗುತ್ತಿವೆ. ಅಂಕಗಳೇ ಜೀವನಾಧಾರ ಎಂಬ ಮನಸ್ಥಿತಿಯಿಂದ ವಿದ್ಯಾರ್ಥಿಗಳು ಹೊರಬರಬೇಕು. ಬದುಕಿಗೆ ಬೇಕಾದ ಕೌಶಲಗಳ ಜತೆಗೆ ಇತಿಹಾಸ, ಧಾರ್ಮಿಕತೆ, ವಿಜ್ಞಾನ, ಪರಿಸರ, ರಾಜಮನೆತನಗಳು, ಮಹನೀಯರ ಆದರ್ಶ, ರಂಗ ಕಲೆ ಸೇರಿ ಎಲ್ಲವನ್ನೂ ಹೇಳಿ ಕೊಡಬೇಕು. ಪಠ್ಯ ಬೋಧನೆಯಲ್ಲಿ ರಂಗ ಕಲೆ ಪರಿಣಾಮಕಾರಿ ಪಾತ್ರ ವಹಿಸುತ್ತದೆ. ಕನಿಷ್ಠ ಪದವಿ ಪೂರ್ವ ಶಿಕ್ಷಣದವರೆಗೆ ಗುರುಕುಲ ಪದ್ಧತಿ ಅಗತ್ಯವಿದೆ ಎಂದು ವೀರೇಶ್ ಪ್ರತಿಪಾದಿಸುತ್ತಾರೆ.
ಸಾಹಿತ್ಯ ಸೇವೆ: ಚಿತ್ರದುರ್ಗ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷರಾಗಿದ್ದ ಅವಧಿಯಲ್ಲಿ ಅಂದರೆ 2009ರಲ್ಲಿ 75ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನವನ್ನು ಚಿತ್ರದುರ್ಗದಲ್ಲಿ ಯಶಸ್ವಿಯಾಗಿ ನಡೆಸಿಕೊಟ್ಟರು. ಸಮ್ಮೇಳನದ ಪ್ರಧಾನ ಕಾರ‌್ಯದರ್ಶಿಯಾಗಿ ಲೋಪವಿಲ್ಲದೆ ಕಾರ್ಯನಿರ್ವಹಿಸಿದರು. 77ನೇ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಪ್ರೊ.ವೆಂಕಟಸುಬ್ಬಯ್ಯ ಅವರ ಜತೆ ಸಂವಾದದಲ್ಲಿ ಪಾಲ್ಗೊಂಡಿದ್ದರು.
ಅಖಿಲ ಭಾರತ 13ನೇ ಶರಣ ಸಾಹಿತ್ಯ ಪರಿಷತ್ ಸಮ್ಮೇಳನ, ಬಂಡಾಯ ಸಾಹಿತ್ಯ ಸಮ್ಮೇಳನ, ರಾಜ್ಯಮಟ್ಟದ ಕವಿಗೋಷ್ಠಿ, ಗಡಿನಾಡು ಉತ್ಸವ, ಶರಣ ಸಂಸ್ಕೃತಿ ಉತ್ಸವಕ್ಕೆ ಸೇವೆ ಸಲ್ಲಿಸಿದ್ದಾರೆ. ಭದ್ರಾ ಮೇಲ್ದಂಡೆ ನೀರಾವರಿ ಹೋರಾಟಕ್ಕೂ ಕೈ ಜೋಡಿಸಿದ್ದಾರೆ.ಪ್ರತಿ ವರ್ಷ ಶಿಕ್ಷಕರ ದಿನಾಚರಣೆ ವೇಳೆ ಶಿಕ್ಷಕರನ್ನು ಗೌರವಿಸುವ ಕೆಲಸ ಮಾಡುತ್ತಾ ಬಂದಿದ್ದಾರೆ.
ರಂಗಕಲೆಗೂ ಸೈ: ವಿದ್ಯಾರ್ಥಿದೆಸೆಯಲ್ಲೇ ರಂಗ ಕಲೆಯ ಆಸಕ್ತಿ ಬೆಳೆಸಿಕೊಂಡಿದ್ದ ವೀರೇಶ್ ಹಲವು ನಾಟಕಗಳಿಗೆ ಬಣ್ಣ ಹಚ್ಚಿದ್ದಾರೆ. ತಮ್ಮ ಸಂಸ್ಥೆಯಲ್ಲಿ ಪ್ರತಿ ವರ್ಷ ನಾಟಕೋತ್ಸವ, ಸಾಹಿತ್ಯ, ಸಾಂಸ್ಕೃತಿಕ ಚಟುವಟಿಕೆ ನಡೆಸಿಕೊಂಡು ಬರುತ್ತಿದ್ದಾರೆ.
ರಾಜ್ಯಮಟ್ಟದ ಯುವಜನೋತ್ಸವದಲ್ಲಿ ಇವರ ಅಭಿನಯದ ಗೋಕರ್ಣದ ಗೌಡಶ್ಯಾನಿ ನಾಟಕ ಪ್ರಥಮ ಬಹುಮಾನ ಪಡೆದಿದೆ. ಉಳಿದಂತೆ ಭಾವೈಕ್ಯ ರೂಪಕಕ್ಕೆ 1ಲಕ್ಷ ರೂ.ಪುರಸ್ಕಾರ, ಸ್ವಾಮಿ ವಿವೇಕಾನಂದ ಪಾತ್ರಕ್ಕೆ ರಾಜ ಪ್ರಶಸ್ತಿ, ಸಿದ್ಧಗಂಗಾ ಮಠದಲ್ಲಿ ಆಯೋಜಿಸಿದ್ದ ರಾಜವೀರ ಮದಕರಿ ನಾಟಕದಲ್ಲಿನ ಶಾಂತವೀರ ಮುರುಘರಾಜೇಂದ್ರ ಶ್ರೀಗಳ ಪಾತ್ರಕ್ಕೆ ಪ್ರಥಮ ಬಹುಮಾನ, ಬೇಲಿ ಮತ್ತು ಹೊಲ ನಾಟಕಕ್ಕೆ ರಾಜ್ಯ ಪ್ರಶಸ್ತಿ ಸಂದಿವೆ. ಸುತ್ತೂರು ಜಾತ್ರೆ, ಚಿತ್ರದುರ್ಗ, ಧಾರವಾಡದ ಮುರುಘಾಮಠ, ಹಾವೇರಿಯ ಹೊಸಮಠ, ಉಳಿವಿ ಚನ್ನಬಸವೇಶ್ವರ ಮಠ, ಬೀದರ್ ಬಸವಕಲ್ಯಾಣ, ಬಾಲ್ಕಿ, ಚಿತ್ರದುರ್ಗದ ಸಾಣೇಹಳ್ಳಿ, ಸಿರಿಗೆರೆ, ಕಬೀರಾನಂದಾಶ್ರಮ, ಪಂಚಮಸಾಲಿ ಗುರುಪೀಠ ಸೇರಿ ನಾನಾ ಮಠಗಳಿಂದ ಗೌರವಕ್ಕೆ ಪಾತ್ರರಾಗಿದ್ದಾರೆ.

ಗೌರವ ಡಾಕ್ಟರೇಟ್‌ಗೆ ಭಾಜನ

ಪ್ರಸ್ತುತ ಜಿಲ್ಲಾ ಶರಣ ಸಾಹಿತ್ಯ ಪರಿಷತ್‌ಗೆ ಅಧ್ಯಕ್ಷರು ಹಾಗೂ ರಾಜ್ಯ ಉಪಾಧ್ಯಕ್ಷರಾಗಿರುವ ವೀರೇಶ್ ಅವರಿಗೆ ಕರ್ನಾಟಕ ಮುಕ್ತ ವಿಶ್ವವಿದ್ಯಾನಿಲಯವು ಗೌರವ ಡಾಕ್ಟರೇಟ್ ಪ್ರದಾನ ವಾಡಿ ಗೌರವಿಸಿದೆ.

250 ಮಕ್ಕಳ ಶಸ್ತ್ರಚಿಕಿತ್ಸೆಗೆ ನೆರವು

ಮೊಬಿಲಿಟಿ ಇಂಡಿಯಾ ನೆರವಿನೊಂದಿಗೆ 250 ಅಂಗವಿಕಲ ಮಕ್ಕಳ ಶಸ ಚಿಕಿತ್ಸೆಗೆ ವ್ಯವಸ್ಥೆ ಮಾಡಿ ಜೀವನೋಪಾಯಕ್ಕೆ ದಾರಿ ಮಾಡಿಕೊಟ್ಟಿದ್ದಾರೆ. ಅಂಗವಿಕಲ ವಿದ್ಯಾರ್ಥಿಗಳಿಗೆ ತಮ್ಮ ಸಂಸ್ಥೆಯ ಡಿಇಡಿ, ಬಿಇಡಿಗೆ ಉಚಿತ ಪ್ರವೇಶ ನೀಡಿದ್ದಾರೆ.

ಅವಿಸ್ಮರಣೀಯ ಸಮಾರಂಭ

ವಿಜಯರತ್ನ ಪ್ರಶಸ್ತಿ ಪ್ರದಾನ ಸಮಾರಂಭ ನನ್ನ ಪಾಲಿಗೆ ಅವಿಸ್ಮರಣೀಯ ಎನಿಸಿದೆ. ಸಮಾರಂಭ ಪೂರ್ಣವಾಗುವಾಗ ಮಧ್ಯಪ್ರಾಚ್ಯದ ಯುದ್ಧದ ಭೀತಿ ನಾವಿದ್ದ ಸ್ಥಳವನ್ನು ಆವರಿಸಿತ್ತು. ದುಬೈನ ಗಣ್ಯರು ನಮಗೆಲ್ಲ ಧೈರ್ಯ ತುಂಬಿದರು. ವಿಮಾನ ಹಾರಾಟ, ಪ್ರಯಾಣ ಖಚಿತವಾಗುವರೆಗೆ ಯಾರನ್ನೂ ಹೊರಗೆ ಕಳಿಸದಂತೆ ಹೋಟೆಲ್ ಆಡಳಿತಕ್ಕೆ ಅಧಿಕಾರಿಗಳು ಸೂಚನೆ ನೀಡಿದ್ದರು. ಪ್ಲೈಟ್‌ಗಳು ಕ್ಯಾನ್ಸಲ್ ಆಗಿದ್ದರಿಂದ ನಮಗೆ ನಿಗದಿತ ದಿನದಂದು ಭಾರತಕ್ಕೆ ಮರಳಲು ಆಗಲಿಲ್ಲ. ಇಂಥ ಕಠಿಣ ಸನ್ನಿವೇಶದಲ್ಲಿ ವಿಆರ್‌ಎಲ್ ಸಮೂಹ ಸಂಸ್ಥೆಗಳ ಛೇರ್‌ಮನ್ ಡಾ.ವಿಜಯ ಸಂಕೇಶ್ವರ ಅವರು, ನಮ್ಮೊಂದಿಗೆ ಸ ಮಾರಂಭದಲ್ಲಿ ಹಾಜರಿದ್ದ ವಿಆರ್‌ಎಲ್ ಸಮೂಹ ಸಂಸ್ಥೆಗಳ ವ್ಯವಸ್ಥಾಪಕ ನಿರ್ದೇಶಕರಾದ ಆನಂದ ಸಂಕೇಶ್ವರ ಅವರಿಗೆ, ಎಲ್ಲರನ್ನೂ ಜತೆಯಲ್ಲಿ ಕರೆದುಕೊಂಡೇ ಭಾರತಕ್ಕೆ ಮರಳಬೇಕೆಂದು ಸೂಚಿಸಿದ್ದರು.
ಇದು ವಿಜಯ ಸಂಕೇಶ್ವರ ಅವರ ಮೇರು ವ್ಯಕ್ತಿತ್ವ ಹಾಗೂ ನಮ್ಮ ಬಗ್ಗೆ ಇದ್ದ ಅಪಾರ ಕಾಳಜಿಗೆ ಸಾಕ್ಷಿ. ದುಬೈನಲ್ಲಿ ಸಿಲುಕಿಕೊಂಡಿದ್ದಾರೆಂದು ಎಲೆಕ್ಟ್ರಾನಿಕ್ ಮಾಧ್ಯಮಗಳಲ್ಲಿ ಹರಿದಾಡಿದ ಸುದ್ದಿಗಳು ಬೇಸರ ತರಿಸಿದವು. ಏಕೆಂದರೆ ಪ್ರಶಸ್ತಿ ಪುರಸ್ಕೃತರು ಮತ್ತು ಕುಟುಂಬ ವರ್ಗದವರೆಲ್ಲ ಸುರಕ್ಷಿತವಾಗಿದ್ದೆವು. ಇರುವಂಥ ಹೆಚ್ಚುವರಿ ದಿನಗಳ ಕಾಲವೂ ಆನಂದ ಸಂಕೇಶ್ವರ ಅವರೇ ಖುದ್ದು ಯೋಗಕ್ಷೇಮ ವಿಚಾರಿಸಿ, ಅತ್ಯಂತ ವಿಶ್ವಾಸ ಮತ್ತು ಕಾಳಜಿಯಿಂದ ನಮ್ಮ ಸುರಕ್ಷತೆಯ ಉಸ್ತುವಾರಿ ವಹಿಸಿದ್ದರು. ಇವರೊಂದಿಗೆ ವಿಜಯವಾಣಿಯ ಸಂಪಾದಕ ಚನ್ನೇಗೌಡರು ಹಾಗೂ ಹಿರಿಯ ಉಪಾಧ್ಯಕ್ಷ ಅರುಣ್ ಕರಡಿ ಅವರು ಸೇರಿದಂತೆ ವಿಜಯವಾಣಿ ತಂಡದವರು ನಮ್ಮೆಲ್ಲರ ಯೋಗಕ್ಷೇಮ ನೋಡಿಕೊಂಡರು. ಈ ನಡುವೆ ಮೈಸೂರು ಸುತ್ತೂರು ಮಠದ ಶ್ರೀ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ಅವರು ನನಗೆ ದೂರವಾಣಿ ಕರೆ ಮಾಡಿ, ದುಬೈನಲ್ಲಿರುವ ತಮ್ಮ ಸಂಸ್ಥೆಯಲ್ಲಿ ವಸತಿ ವ್ಯವಸ್ಥೆ ಮಾಡುವುದಾಗಿ ಹೇಳಿದ್ದರು. ಇದು ಶ್ರೀಗಳು ತೋರಿದ ವಿಶ್ವಾಸ ಹಾಗೂ ಅವರ ಆಶೀರ್ವಾದ ನಮ್ಮ ಮೇಲಿರುವುದನ್ನು ದೃಢಪಡಿಸಿತು. ಮಾರ್ಚ್ 5 ರಂದು ವಿಶೇಷ ವಿಮಾನದಲ್ಲಿ ಹೊಸದಿಲ್ಲಿಗೆ ಬಂದು, ನಂತರ ಬೆಂಗಳೂರು ತಲುಪಿದೆವು.

ಧಾರವಾಡದ ಮಾದರಿಯಲ್ಲಿ ಮಲ್ಲಾಪುರ ಶಾಲೆಯಲ್ಲಿ ಎರಡು ತಿಂಗಳ ಅವಧಿಯ ವಸತಿಸಹಿತ ಕ್ರಾಶ್‌ಕೋರ್ಸ್ ಆರಂಭಿಸುವ ಉದ್ದೇಶವಿದೆ. ಪಠ್ಯದೊಂದಿಗೆ ಆಟೋಟ, ಯೋಗ, ಸಂವಹನ ಕೌಶಲ ಮೊದಲಾದ ಚಟುವಟಿಕೆ ಇದರಲ್ಲಿ ಇರಲಿವೆ. ಇದಕ್ಕೆ ಅಗತ್ಯ ಮೂಲ ಸೌಕರ್ಯ ಕಲ್ಪಿಸಲಾಗುತ್ತಿದೆ.

"

ವೀರೇಶ್ ಅವರು ಕಳೆದ 30-40 ವರ್ಷಗಳಿಂದ ಸಾಮಾಜಿಕ, ಶೈಕ್ಷಣಿಕ ಮತ್ತು ಧಾರ್ಮಿಕ ಕ್ಷೇತ್ರಗಳಲ್ಲಿ ಅವಿರತವಾಗಿ ದುಡಿಯುತ್ತಿದ್ದಾರೆ. ಅವರ ಸೇವೆಗೆ ಈ ಪ್ರಶಸ್ತಿ ಅತ್ಯಂತ ಸೂಕ್ತವಾಗಿದೆ.

ವೀರೇಶ್ ಅವರನ್ನು ನಾನು ನಾಲ್ಕು ದಶಕಗಳಿಂದ ಬಲ್ಲೆ. ಅವರು ಉತ್ಸಾಹದ ಚಿಲುಮೆ ಹಾಗೂ ಅಪ್ರತಿಮ ಸಂಘಟನಾ ಚತುರರು. ಚಿತ್ರದುರ್ಗದ ಮುರುಘಾ ಮಠ ಸೇರಿದಂತೆ ರಾಜ್ಯದ ವಿವಿಧ ಮಠಮಾನ್ಯಗಳೊಂದಿಗೆ ದಶಕಗಳ ಅವಿನಾಭಾವ ಸಂಬಂಧ ಹೊಂದಿದ್ದಾರೆ. ಸಾಂಸ್ಕೃತಿಕ ಮತ್ತು ಸಾಹಿತ್ಯಿಕ ಚಟುವಟಿಕೆಗಳಲ್ಲಿ ಸದಾ ಸಕ್ರಿಯರಾಗಿರುವ ಇವರು, ’ಬಾಪೂಜಿ ಸಮೂಹ ಶಿಕ್ಷಣ ಸಂಸ್ಥೆ’ಯ ಮೂಲಕ ಶೈಕ್ಷಣಿಕ ಕ್ಷೇತ್ರಕ್ಕೆ ಮಹತ್ತರ ಕೊಡುಗೆ ನೀಡುತ್ತಿದ್ದಾರೆ. ಇವರು ಕನ್ನಡ ಸಾಹಿತ್ಯ ಪರಿಷತ್ತಿನ ಜಿಲ್ಲಾಧ್ಯಕ್ಷರಾಗಿದ್ದ ಅವಧಿಯಲ್ಲಿ ನಡೆದ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ಐತಿಹಾಸಿಕವಾಗಿತ್ತು. 67ರ ಹರೆಯದಲ್ಲೂ ಯುವಕರಂತೆ ಕ್ರಿಯಾಶೀಲರಾಗಿರುವ ಅವರಿಗೆ ಇನ್ನಷ್ಟು ದೊಡ್ಡ ಗೌರವಗಳು ಲಭಿಸಲಿ.

ಸದಾ ಹಸನ್ಮುಖಿಯಾಗಿರುವುದು ನನ್ನ ಪತಿಯವರ ಹುಟ್ಟುಗುಣ. ಎಂತಹದ್ದೇ ಕಷ್ಟದ ಸಂದರ್ಭದಲ್ಲೂ ತಾಳ್ಮೆ ಕಳೆದುಕೊಳ್ಳದೆ ಸಮಸ್ಯೆಗಳನ್ನು ಬಗೆಹರಿಸುವ ಚಾತುರ್ಯ ಅವರಿಗಿದೆ. ಕುಟುಂಬ, ಬಂಧು-ಮಿತ್ರರೊಂದಿಗೆ ಸದಾ ನಗುನಗುತ್ತಾ ಬೆರೆಯುವ ಅವರು ರಂಗಭೂಮಿ ಮತ್ತು ಸಾಹಿತ್ಯದ ಮೇಲೆ ಅಪಾರ ಪ್ರೀತಿ ಹೊಂದಿದ್ದಾರೆ. ಪ್ರತಿಯೊಂದು ಕಾಯಕವನ್ನು ನಿಷ್ಠೆ ಮತ್ತು ಪ್ರಾಮಾಣಿಕತೆಯಿಂದ ಮಾಡುವ ಅವರ ಗುಣವೇ ಇಂದು ಅವರಿಗೆ ವಿಜಯರತ್ನದಂತಹ ಗೌರವ ಅರಸಿ ಬರಲು ಕಾರಣವಾಗಿದೆ.

"

ವೀರೇಶ್ ಅವರ ಜನ್ಮಸ್ಥಳವಾದ ಕಾನಾಮಡಗು ಗ್ರಾಮಕ್ಕೆ ಶರಣ ಪರಂಪರೆಯ ಹಿನ್ನೆಲೆಯಿದೆ. 17ನೇ ಶತಮಾನದ ಶ್ರೀ ಗುರು ಶಾಂತವೀರರ ಮತ್ತು ಶರಣಬಸವೇಶ್ವರರ ದಾಸೋಹ ಮಠದ ಪುಣ್ಯಭೂಮಿಯಲ್ಲಿ ಜನಿಸಿದ ಇವರ ಮೇಲೆ ಶರಣರ ಕೃಪಾಶೀರ್ವಾದವಿದೆ. ಅದೇ ಸಂಸ್ಕಾರ ಇಂದು ಇವರನ್ನು ಶೈಕ್ಷಣಿಕ ಮತ್ತು ಸಾಹಿತ್ಯಿಕ ಕ್ಷೇತ್ರಗಳಲ್ಲಿ ಸೃಜನಾತ್ಮಕ ಕೆಲಸಗಳನ್ನು ಮಾಡುವಂತೆ ಪ್ರೇರೇಪಿಸುತ್ತಿದೆ.

ತಂದೆಯವರದು ಬಹುಮುಖಿ ವ್ಯಕ್ತಿತ್ವ. ಅವರು ಕೇವಲ ಶಿಕ್ಷಣ ದಾಸೋಹಿಯಲ್ಲ, ಕಲೆ ಮತ್ತು ಸಾಹಿತ್ಯದ ಪೋಷಕರು ಕೂಡ. ನಾವು ಮಾಡುವ ಒಳ್ಳೆಯ ಕೆಲಸಗಳೇ ಶಾಶ್ವತ ಎಂದು ನಂಬಿರುವ ಅವರು, ನೂರಾರು ಜನರಿಗೆ ಅನ್ನದಾಸೋಹದ ಜತೆಗೆ ಜ್ಞಾನದಾಸೋಹವನ್ನೂ ಮಾಡುತ್ತಿದ್ದಾರೆ. ಸತ್ಯ ಮತ್ತು ನ್ಯಾಯದ ಹಾದಿಯಲ್ಲಿ ನಡೆಯುವ ಅವರ ಬದುಕು ನಮಗೆ ಸ್ಫೂರ್ತಿ.

ನಮ್ಮ ಮಕ್ಕಳು ಬಡತನದಲ್ಲೂ ಶ್ರದ್ಧೆಯಿಂದ ಓದಿ ಬೆಳೆದಿದ್ದಾರೆ. ವೀರೇಶ್ ಬಿ.ಕಾಂ ಮುಗಿಸಿದ ಬಳಿಕ ಶ್ರೀಗಳ ಮಾರ್ಗದರ್ಶನದಲ್ಲಿ ಕೆಲಸಕ್ಕೆ ಸೇರಿ, ಹಂತ ಹಂತವಾಗಿ ಶಿಕ್ಷಣ ಸಂಸ್ಥೆಗಳನ್ನು ಕಟ್ಟಿ ಬೆಳೆಸಿದ್ದಾರೆ. ಮಠ-ಮಾನ್ಯಗಳ ಧಾರ್ಮಿಕ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಳ್ಳುವುದು ನಮ್ಮ ಕುಟುಂಬದ ಪರಂಪರೆಯಾಗಿದೆ. ಶ್ರೀ ಮಲ್ಲಿಕಾರ್ಜುನ ಜಗದ್ಗುರುಗಳ ಆಶೀರ್ವಾದದಂತೆ ಅವರು ಸಮಾಜ ಸೇವೆಯಲ್ಲಿ ತೊಡಗಿದ್ದಾರೆ. ಮಗನ ಸಾಧನೆಗೆ ಮೈಸೂರು ಮುಕ್ತ ವಿವಿ ಗೌರವ ಡಾಕ್ಟರೇಟ್ ನೀಡಿದೆ. ಈಗ ವಿಜಯರತ್ನ ಪ್ರಶಸ್ತಿ ಲಭಿಸಿರುವುದು ನಮಗೆಲ್ಲರಿಗೂ ಹೆಮ್ಮೆಯ ಸಂಗತಿ.

ನಮ್ಮ ಮಾವನವರು ಕಾಯಕವೇ ಕೈಲಾಸ ಎಂಬ ತತ್ವದಂತೆ ಬದುಕುತ್ತಿದ್ದಾರೆ. ಶಾಲಾ-ಕಾಲೇಜುಗಳ ಜವಾಬ್ದಾರಿಯ ಜತೆಗೆ ಕುಟುಂಬ ಮತ್ತು ತೋಟವನ್ನೂ ಅಷ್ಟೇ ಪ್ರೀತಿಯಿಂದ ಸಂಭಾಳಿಸುತ್ತಾರೆ. ಅವರ ಮಾರ್ಗದರ್ಶನದಲ್ಲಿ ನಮ್ಮ ಕುಟುಂಬ ಸಾಗುತ್ತಿರುವುದು ನಮ್ಮ ಹೆಮ್ಮೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net