ಚಿತ್ರದುರ್ಗ ತಾಲೂಕು ಜಿಆರ್‌ಹಳ್ಳಿ ಜ್ಞಾನ ಗಂಗೋತ್ರಿಯಲ್ಲಿ ಮಂಗಳವಾರ ಆಯೋಜಿಸಿದ್ದ ಕನ್ನಡ ರಾಜ್ಯೋತ್ಸವ ಸಮಾರಂಭವನ್ನು ಪ್ರಾಚಾರ್ಯ ಡಾ.ಜೆ. ಕರಿಯಪ್ಪ ಮಾಳಿಗೆ ಉದ್ಘಾಟಿಸಿದರು. ಡಾ.ಎಚ್.ಜಿ. ವಿಜಯಕುಮಾರ್, ಪ್ರೊ. ಸತ್ಯನಾರಾಯಣ, ಡಾ. ಶಾಂತರಾಜ್, ಡಾ.ಆರ್. ರೂಪೇಶ್‌ಕುಮಾರ್, ಡಾ.ಆರ್. ಶಶಿಧರ್, ಡಾ. ಕೀರ್ತಿಕುಮಾರ್, ಡಾ. ರಾಜೇಂದ್ರ ಪ್ರಸಾದ್, ಡಾ. ಶರಣ್‌ರಾಜ್, ಡಾ.ಟಿ. ಸುಂದರA ಇದ್ದರು.
ಚಿತ್ರದುರ್ಗ: ಕರ್ನಾಟಕ ಏಕೀಕರಣ ಮತ್ತು ನಾಮಕರಣದ ಹೆಜ್ಜೆ ಗುರುತುಗಳನ್ನು ಅರಿತುಕೊಳ್ಳಬೇಕಿದೆ ಎಂದು ಚಿತ್ರದುರ್ಗ ಸರ್ಕಾರಿ ಕಲಾ ಕಾಲೇಜು ಪ್ರಾಚಾರ್ಯ ಡಾ.ಜೆ.ಕರಿಯಪ್ಪ ಮಾಳಿಗೆ ಹೇಳಿದರು.
ದಾವಿವಿ ಸ್ನಾತಕೋತ್ತರ ಕೇಂದ್ರದ ಕನ್ನಡ ಅಧ್ಯಯನ ವಿಭಾಗದಿಂದ ಚಿತ್ರದುರ್ಗ ತಾಲೂಕು ಜಿ.ಆರ್.ಹಳ್ಳಿಯ ಜ್ಞಾನ ಗಂಗೋತ್ರಿ ಯಲ್ಲಿ ಮಂಗಳವಾರ ಆಯೋಜಿಸಿದ್ದ ಕನ್ನಡ ರಾಜ್ಯೋತ್ಸವ ಉದ್ಘಾಟಿಸಿ ಮಾತನಾಡಿದರು.
ಕರ್ನಾಟಕ ಏಕೀಕರಣ ಮತ್ತು ನಾಮಕರಣ ಈ ಎರಡೂ ಘಟನೆಗಳು ಕರ್ನಾಟಕದ ಚರಿತ್ರೆಯಲ್ಲಿ ಮಹತ್ವ ಪಡೆದಿವೆ. ಕನ್ನಡ, ಕನ್ನ ಡಿಗ ಮತ್ತು ಕರ್ನಾಟಕದ ಅಸ್ಮಿತೆಯ ಪ್ರತೀಕವೂ ಆಗಿವೆ. ಕನ್ನಡಿಗರ ಜಾಗೃತಿಗೆ ಆಲೂರು ವೆಂಕಟರಾಯರ ಕರ್ನಾಟಕ ಗತ ವೈಭವ ಕÊತಿ ಕನ್ನಡಿಗರ ಒಗ್ಗೂಡಿವಿಕೆಯಲ್ಲಿ ಮಹತ್ವದ ಪಾತ್ರ ವಹಿಸಿತ್ತು ಎಂದರು.
ಸ್ವಾತAತ್ರಕ್ಕಾಗಿ ನಡೆದ ಹೋರಾಟ ಮತ್ತು ಕರ್ನಾಟಕ ಏಕೀಕರಣಕ್ಕಾಗಿ ನಡೆದ ಚಳವಳಿಯ ಒಗ್ಗಟ್ಟಿನ -Àಲದಿಂದ ದೇಶಕ್ಕೆ ಸ್ವಾತಂತ್ರ‍್ಯ ಲಭಿಸಿತು. ನಂತರ ಕರ್ನಾಟಕದ ಏಕೀಕರಣವೂ ಆಯಿತು. ೧೯೭೩ರಲ್ಲಿ ಅಂದಿನ ಮುಖ್ಯಮಂತ್ರಿ ದೇವರಾಜ ಅರಸು ಅವರು ಮೈಸೂರು ರಾಜ್ಯಕ್ಕೆ ಕರ್ನಾಟಕವೆಂದು ನಾಮಕರಣ ಮಾಡಿದರು. ಇದಕ್ಕಾಗಿ ಎಲ್ಲರೂ ಒಗ್ಗಟ್ಟಾಗಿ ಹೋರಾಟ ನಡೆಸಿದ್ದರು ಎಂದರು.
ಜಿ.ಆರ್.ಹಳ್ಳಿ ಸ್ನಾತಕೋತ್ತರ ಅಧ್ಯಯನ ಕೇಂದ್ರ ಕನ್ನಡ ವಿಭಾಗದ ಪ್ರಾಧ್ಯಾಪಕ ಡಾ.ಎಚ್.ಜಿ. ವಿಜಯಕುಮಾರ್ ಪ್ರಾಸ್ತಾವಿಕವಾಗಿ ಮಾತನಾಡಿ, ಕನ್ನಡ ರಾಜ್ಯೋತ್ಸವ ಎಂಬುದು ಬರೀ ನವೆಂಬರ್ ಮಾಸಕ್ಕೆ ಸೀಮಿತವಲ್ಲ. ಪ್ರತಿ ದಿನವೂ ಪ್ರತಿ ತಿಂಗಳು ಕನ್ನಡ ದಿನ. ಕರ್ನಾಟಕದ ನೆಲಜಲ ಎಲ್ಲವೂ ಕನ್ನಡವೇ ಆಗಿದೆ ಎಂದರು.
ಕೇAದ್ರದ ನಿರ್ದೇಶಕ ಪ್ರೊ.ಸತ್ಯನಾರಾಯಣ, ಪ್ರಾಧ್ಯಾಪಕರಾದ ಡಾ. ಶಾಂತರಾಜ್, ಡಾ.ಆರ್. ರೂಪೇಶ್‌ಕುಮಾರ್, ಡಾ.ಆರ್. ಶಶಿಧರ್, ಡಾ. ಕೀರ್ತಿಕುಮಾರ್, ಡಾ. ರಾಜೇಂದ್ರ ಪ್ರಸಾದ್, ಡಾ. ಶರಣ್‌ರಾಜ್, ಡಾ.ಟಿ. ಸುಂದರA ಇತರರು ಇದ್ದರು.