ಸಮಾಜದ ಮೇಲೆ ದಟ್ಟವಾಗಿದೆ ಬುದ್ಧ, ಅಲ್ಲಮರ ಪ್ರಭಾವ

 ಚಿತ್ರದುರ್ಗದಲ್ಲಿ ಗುರುವಾರ ಪ್ರೊ.ಎಚ್.ಲಿಂಗಪ್ಪ ಅವರ `ಬುದ್ಧನಂತೆ ಚಿಂತಿಸಿದ ಅಲ್ಲಮ' ಪುಸ್ತಕ ಅನಾವರಣ ಸಮಾರಂಭದಲ್ಲಿ ಪ್ರೊ. ಬಿ. ರಾಜಶೇಖರಪ್ಪ, ಡಾ. ಬಸವಪ್ರಭು ಸ್ವಾಮೀಜಿ, ಡಾ. ಮೀರಾಸಾಬಿಹಳ್ಳಿ ಶಿವಣ್ಣ, ಪ್ರೊ.ಎಂ.ಜಿ. ರಂಗಸ್ವಾಮಿ, ಡಾ.ಕೆ.ಎಂ. ವೀರೇಶ್, ಜಿ.ಎಸ್. ಉಜ್ಜಿನಪ್ಪ, ಪ್ರೊ.ಎಂ.ಆರ್. ಜಯಲಕ್ಷಿ÷್ಮÃ ಇತರರು ಇದ್ದರು.
ಚಿತ್ರದುರ್ಗದಲ್ಲಿ ಗುರುವಾರ ಪ್ರೊ.ಎಚ್.ಲಿಂಗಪ್ಪ ಅವರ `ಬುದ್ಧನಂತೆ ಚಿಂತಿಸಿದ ಅಲ್ಲಮ' ಪುಸ್ತಕ ಅನಾವರಣ ಸಮಾರಂಭದಲ್ಲಿ ಪ್ರೊ. ಬಿ. ರಾಜಶೇಖರಪ್ಪ, ಡಾ. ಬಸವಪ್ರಭು ಸ್ವಾಮೀಜಿ, ಡಾ. ಮೀರಾಸಾಬಿಹಳ್ಳಿ ಶಿವಣ್ಣ, ಪ್ರೊ.ಎಂ.ಜಿ. ರಂಗಸ್ವಾಮಿ, ಡಾ.ಕೆ.ಎಂ. ವೀರೇಶ್, ಜಿ.ಎಸ್. ಉಜ್ಜಿನಪ್ಪ, ಪ್ರೊ.ಎಂ.ಆರ್. ಜಯಲಕ್ಷಿ÷್ಮÃ ಇತರರು ಇದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ಇತಿಹಾಸ ಸಂಶೋಧಕ ಡಾ.ಬಿ. ರಾಜಶೇಖರಪ್ಪ ಅಭಿಪ್ರಾಯ
  • ಪ್ರೊ.ಎಚ್. ಲಿಂಗಪ್ಪ ಅವರ ಪುಸ್ತಕ ಅನಾವರಣ
  • ಬುದ್ಧನಂತೆ ಚಿಂತಿಸಿದ ಅಲ್ಲಮ
ಚಿತ್ರದುರ್ಗ: ಆಧ್ಯಾತ್ಮ ಲೋಕದ ನಕ್ಷತ್ರಗಳಂತಿದ್ದ ಬುದ್ಧ, ಅಲ್ಲಮರ ಪ್ರಭಾವ ಸಮಾಜದ ಮೇಲೆ ದಟ್ಟವಾಗಿದೆ ಎಂದು ಇತಿಹಾಸ ಸಂಶೋಧಕ ಡಾ.ಬಿ. ರಾಜಶೇಖರಪ್ಪ ಹೇಳಿದರು.
ಜಿಲ್ಲಾ ಶರಣ ಸಾಹಿತ್ಯ ಪರಿಷತ್, ಬಾಪೂಜಿ ಸಮೂಹ ಶಿಕ್ಷಣ ಸಂಸ್ಥೆಗಳು, ಸಿವಿಜಿ ಪಬ್ಲಿಕೇಷ್‌ನ್ಸ್ ಸಂಯುಕ್ತಾಶ್ರಯದಲ್ಲಿ ನಗರದ ಬಾಪೂಜಿ ವಿದ್ಯಾಸಂಸ್ಥೆಯಲ್ಲಿ ಗುರುವಾರ ಏರ್ಪಡಿಸಿದ್ದ ಪ್ರೊ.ಎಚ್. ಲಿಂಗಪ್ಪ ಅವರ ಬುದ್ಧನಂತೆ ಚಿಂತಿಸಿದ ಅಲ್ಲಮ ಪುಸ್ತಕ ಅನಾವರಣಗೊಳಿಸಿ ಮಾತನಾಡಿದರು.
ಪ್ರಖರ ವಿಚಾರವಾದಿ ಬುದ್ಧನಿಗೆ ಬೌದ್ಧ ಧರ್ಮ ವಿಸ್ತರಣೆ ಸಾಧ್ಯವಾಯಿತು. ರಾಜನಿಂದ ಜನಸಾಮಾನ್ಯರವರೆಗೂ ಬುದ್ಧನ ನಿಲುವು ಅರ್ಥವಾಗಿದ್ದವು. ಅಲ್ಲಮ ಪ್ರಭುವಿನಲ್ಲಿ ಘನ ಚಿಂತನೆಯಿತ್ತು. ಬಸವಣ್ಣನ ಮೇಲೆ ಅಲ್ಲಮನ ಪ್ರಭಾವವಿದೆ. ಅಲ್ಲಮನಲ್ಲಿ ಬೆಡಗಿನ ಭಾಷೆಯಿತ್ತು. ಹೊಸ ರೀತಿಯ ಚಿಂತನೆ ಅವರದಾಗಿತ್ತು ಎಂದರು.
ಸಾನ್ನಿಧ್ಯವಹಿಸಿದ್ದ ದಾವಣಗೆರೆ ವಿರಕ್ತಮಠದ ಡಾ. ಬಸವಪ್ರಭು ಸ್ವಾಮೀಜಿ ಮಾತನಾಡಿ, ಪ್ರತಿ ವಿಚಾರ, ವಿಮರ್ಶೆ, ತರ್ಕ ದೊಂ ದಿಗೆ ಪ್ರಶ್ನಿಸುವಂತ ಗುಣ ಬೆಳೆಸಿಕೊಳ್ಳಬೇಕೆಂಬುದು ಅಲ್ಲಮರ ಸಂದೇಶವಾಗಿದೆ. ಬಸವಣ್ಣ, ಬುದ್ಧ, ಅಲ್ಲಮರಂತೆ ಎಲ್ಲರೂ ವೈಚಾ ರಿಕತೆ ಬೆಳೆಸಿ ಕೊಳ್ಳಬೇಕಿದೆ ಎಂದರು.
ಲೇಖಕ ಹಿರಿಯೂರಿನ ಪ್ರೊ.ಎಂ.ಜಿ. ರಂಗಸ್ವಾಮಿ ಮಾತನಾಡಿ, ಅನೇಕ ಸವಾಲುಗಳನ್ನು ಎದುರಿಸುತ್ತಿರುವ ಕನ್ನಡವನ್ನು ಯುವ ಜನತೆಗೆ ತಲುಪಿಸುವ ಜವಾಬ್ದಾರಿ ಶಿಕ್ಷಕರ ಮೇಲಿದೆ. ವಚನಗಳು ಇಂದಿಗೂ ಪ್ರಸ್ತುತವಾಗಿವೆ. ಡಾ.ಬಿ.ಆರ್. ಅಂಬೇಡ್ಕರ್, ಮಹಾತ್ಮ ಗಾಂಽÃಜಿ ಅವರು ಸರಳತೆಯಿಂದ ಎಲ್ಲರ ಮನದಲ್ಲಿ ಉಳಿದಿದ್ದಾರೆ.
ದಲಿತ ವಚನಕಾರರಲ್ಲಿ ಕಾಣಿಸಿರುವ ದಲಿತರ ಕುರಿತು ಲಿಂಗಪ್ಪ ಪುಸ್ತಕಗಳನ್ನು ಬರೆದಿದ್ದಾರೆ. ಇಳಿಯವಯಸ್ಸಿನಲ್ಲೂ ಸಾಹಿತ್ಯದ ಬಗ್ಗೆ ಅವರಿಗಿರುವ ಆಸಕ್ತಿ ದೊಡ್ಡದು ಎಂದರು.
ಜಾನಪದ ತಜ್ಞ ಡಾ. ಮೀರಾಸಾಬಿಹಳ್ಳಿ ಶಿವಣ್ಣ ಮಾತನಾಡಿ, ಪಂಪ, ರನ್ನ, ಕುಮಾರವ್ಯಾಸ ಇವರೆಲ್ಲರೂ ಜ್ಞಾನ ಪರಂಪರೆಯನ್ನು ಕಟ್ಟಿ ಕೊಟ್ಟಿದ್ದಾರೆ. ಚರಿತ್ರೆ, ಸಂಸ್ಕೃತಿಯನ್ನು ಮುಂದಿನ ಪೀಳಿಗೆಗೆ ತೆಗೆದುಕೊಂಡು ಹೋಗಬೇಕಿದೆ ಎಂದರು.
ಲಿAಗಪ್ಪ ಅವರು ಮಾತನಾಡಿ ಬುದ್ಧ, ಬಸವ, ಅಲ್ಲಮ, ಅಂಬೇಡ್ಕರ್ ಅವರು ಕರ್ಮಟ ವ್ಯವಸ್ಥೆ ತಿರಸ್ಕರಿಸಿದವರು. ಇದರ ಜತೆಗೆ ಜ್ಯೋತಿ ಬಾ -ÀÅಲೆ, ಸಾವಿತ್ರಿಬಾಯಿ ಫುಲೆ ಅವರು ಅಂಬೇಡ್ಕರ್ ಅವರ ಓದು, ಸಂವಿಧಾನ ರಚನೆಗೆ ಪ್ರೇರಣೆಯಾಗಿದ್ದಾರೆ ಎಂದರು.
ಶರಣ ಸಾಹಿತ್ಯ ಪರಿಷತ್ ಅಧ್ಯಕ್ಷ ಕೆ.ಎಂ. ವೀರೇಶ್ ಅಧ್ಯಕ್ಷತೆ ವಹಿಸಿದ್ದರು. ಬಾಪೂಜಿ ಸಮೂಹ ಸಂಸ್ಥೆ ಬಿ.ಇಡಿ ಕಾಲೇಜು ಪ್ರಾಚಾರ್ಯೆ ಪ್ರೊ.ಎಂ.ಆರ್. ಜಯಲಕ್ಷಿ÷್ಮÃ, ಪತ್ರಕರ್ತ ಜಿ.ಎಸ್. ಉಜ್ಜಿನಪ್ಪ ಇತರರು ಇದ್ದರು. ಸಂಗೀತ ಶಿಕ್ಷಕಿ ಜ್ಯೋತಿ ಪ್ರಾರ್ಥಿಸಿದರು. ಪ್ರಶಿಕ್ಷಣಾರ್ಥಿ ಮಲ್ಲಿಕಾರ್ಜುನಗೌಡ ಸ್ವಾಗತಿಸಿ, ದೀಪಾ ನಿರೂಪಿಸಿದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net