ಹಿರಿಯರ ಘನತೆಯ ಬದುಕಿಗೆ ಸರ್ಕಾರ ಬದ್ಧ

 ಚಿತ್ರದುರ್ಗದಲ್ಲಿ ಭಾನುವಾರ ಹಿರಿಯ ನಾಗರಿಕರಿಗೆ ಸಾಧನ ಸಲಕರಣೆಗಳ ಉಚಿತ ವಿತರಣೆ ಕಾರ್ಯಕ್ರಮವನ್ನು ಸಂಸದ ಗೋವಿಂದ ಎಂ. ಕಾರಜೋಳ ಉದ್ಘಾಟಿಸಿದರು. ಆರ್. ಶಿವಣ್ಣ, ಡಾ.ಕೆ.ಜೆ. ಕಾಂತರಾಜ್, ಎಂ.ಕೆ. ತಾಜ್‌ಪೀರ್, ಜೆ. ವೈಶಾಲಿ ಇತರರು ಇದ್ದರು.
ಚಿತ್ರದುರ್ಗದಲ್ಲಿ ಭಾನುವಾರ ಹಿರಿಯ ನಾಗರಿಕರಿಗೆ ಸಾಧನ ಸಲಕರಣೆಗಳ ಉಚಿತ ವಿತರಣೆ ಕಾರ್ಯಕ್ರಮವನ್ನು ಸಂಸದ ಗೋವಿಂದ ಎಂ. ಕಾರಜೋಳ ಉದ್ಘಾಟಿಸಿದರು. ಆರ್. ಶಿವಣ್ಣ, ಡಾ.ಕೆ.ಜೆ. ಕಾಂತರಾಜ್, ಎಂ.ಕೆ. ತಾಜ್‌ಪೀರ್, ಜೆ. ವೈಶಾಲಿ ಇತರರು ಇದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ಸಂಸದ ಗೋವಿಂದ ಎಂ.ಕಾರಜೋಳ
  • ಫಲಾನುಭವಿಗಳಿಗೆ ಸಾಧನಾ, ಸಲಕರಣೆ ಉಚಿತ ವಿತರಣೆ
  • ಕೇಂದ್ರದ ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಸಚಿವಾಲಯ
ಚಿತ್ರದುರ್ಗ: ಹಿರಿಯ ನಾಗರಿಕರನ್ನು ದೇವರ ಸಮಾನ ಕಾಣುವುದು ನಮ್ಮ ದೇಶದ ಸಂಸ್ಕೃತಿ ಎಂದು ಸಂಸದ ಗೋವಿಂದ ಎಂ. ಕಾರಜೋಳ ಹೇಳಿದರು.
ಕೇಂದ್ರದ ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಸಚಿವಾಲಯ, ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಇಲಾಖೆ, ಜಿಲ್ಲಾ ಡಳಿತ, ಅಲಿಮ್ಕೊದಿಂದ ನಗರದ ಎಸ್‌ಎಸ್‌ಕೆಎಸ್ ಸಮುದಾಯ ಭವನದಲ್ಲಿ ಭಾನುವಾರ ಆಯೋಜಿಸಿದ್ದ `ರಾಷ್ಟಿçÃಯ ವಯೋ ಶ್ರೀ ಯೋಜನೆ'ಯಡಿ ಹಿರಿಯ ನಾಗರಿಕರಿಗೆ ಉಚಿತ ಸಾಧನ ಸಲಕರಣೆ ವಿತರಣಾ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ವಯೋಸಹಜ ದೌರ್ಬಲ್ಯಗಳಿಂದ ಬಳಲುವ ಹಿರಿಯರ ಬದುಕು ಸುಗಮ, ಸ್ವಾಭಿಮಾನದಿಂದ ಕೂಡಿರುವಂತೆ ನೋಡಿಕೊಳ್ಳುವು ದು, ಅವರಿಗೆ ನೆರವಾಗುವುದು ಸರ್ಕಾರದ ಪ್ರಮುಖ ಆದ್ಯತೆಯಾಗಿದೆ.
ಪ್ರಧಾನಿ ನರೇಂದ್ರ ಮೋದಿ ಅವರು ಹಿರಿಯ ನಾಗರಿಕರೆಡೆ ವೈಯಕ್ತಿಕ ಕಾಳಜಿ, ಅಪಾರ ಗೌರವ ಹೊಂದಿದ್ದಾರೆ. ಅವರ ಆಸಕ್ತಿ ಯಿಂದಾಗಿ ಹಿರಿಯ ನಾಗರಿಕರ ಕಲ್ಯಾಣ ಇಲಾಖೆಗೆ ಹೆಚ್ಚಿನ ಅನುದಾನ ಬಿಡುಗಡೆಯಾಗಿದೆ. ಹಿರಿಯರಿಗೆ ಅಗತ್ಯವಿರುವ ಸಾಧನ ಸಲಕರಣೆಗಳನ್ನು ಉಚಿತವಾಗಿ ನೀಡುವ ಮೂಲಕ ಅವರ ನೆರವಿಗೆ ನಿಲ್ಲಬೇಕೆಂಬ ಉದಾತ್ತ ಉದ್ದೇಶದಿಂದ ಪ್ರಧಾನಿ ವಯೋಶ್ರೀಗೆ ಚಾಲನೆ ನೀಡಿದ್ದಾರೆ ಎಂದು ತಿಳಿಸಿದರು.
ಹಿರಿಯರು ನಮ್ಮ ಸಮಾಜದ ಜ್ಞಾನ ಮತ್ತು ಅನುಭವದ ಶ್ರೀಮಂತ ಭಂಡಾರವಾಗಿದ್ದಾರೆ. ಅವರ ಜ್ಞಾನ, ಅನುಭವದ ಲಾಭವನ್ನು ಯುವ ಪೀಳಿಗೆ ಪಡೆದರೆ ದೇಶವನ್ನು ಮತ್ತಷ್ಟು ಪ್ರಗತಿಪಥದಲ್ಲಿ ಕೊಂಡೊಯ್ಯಲು ಸಾಧ್ಯವಿದೆ. ಹಿರಿಯರನ್ನು ಗೌರವಿಸುವ ದೇಶ ಖಂಡಿತವಾಗಿಯೂ ಪ್ರಗತಿ ಹೊಂದುತ್ತದೆ ಎಂಬುದು ಪ್ರಧಾನಿ ಅವರ ದÊಢ ನಂಬಿಕೆಯಾಗಿದೆ. ಹಿರಿಯರ ನೆರವಿಗಾಗಿ ಎಲ್ಡರ್ ಲೈನ್(ಸಹಾಯವಾಣಿ-೧೪೫೬೭)ಸ್ಥಾಪನೆಯಾಗಿದೆ ಎಂದು ಕಾರಜೋಳ ಹೇಳಿದರು.
ಕಳೆದ ವರ್ಷ ಜಿಲ್ಲೆಯಲ್ಲಿ ಒಂದು ಸಾವಿರಕ್ಕೂ ಹೆಚ್ಚು ಅಂಗವಿಕಲರಿಗೆ ಕೇಂದ್ರದ ಆಡಿಪ್ ಯೋಜನೆಯಡಿ ವಿವಿಧ ಸೌಲಭ್ಯಗಳನ್ನು ವಿತರಿಸಲಾಗಿತ್ತು. ಈ ಬಾರಿ ತಮ್ಮ ಮನವಿಗೆ ಸ್ಪಂದಿಸಿದ್ದ ಕೇಂದ್ರದ ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಸಚಿವ ವೀರೇಂದ್ರ ಕುಮಾರ್ ಅವರ ಸಹಕಾರದಿಂದ, ಚಿತ್ರದುರ್ಗ ಕ್ಷೇತ್ರದ ಸಾವಿರಾರು ಹಿರಿಯ ನಾಗರಿಕರಿಗೆ ಅತ್ಯಾಧುನಿಕ ಉಪಕರಣಗಳನ್ನು ವಿತರಿಸಲಾಗುತ್ತಿದೆ.
ಜಿಲ್ಲೆಯಲ್ಲಿ ಅಂದಾಜು ೧.೭೦ ಲಕ್ಷ ಹಿರಿಯ ನಾಗರಿಕರಿದ್ದಾರೆ. ಚಿತ್ರದುರ್ಗ, ಹಿರಿಯೂರು, ಚಳ್ಳಕೆರೆ ಮತ್ತು ಹೊಳಲ್ಕೆರೆ ತಾಲೂಕು ಗಳ ೯೮೬ -Àಲಾನುಭವಿಗಳಿಗೆ ೮೪.೮೪ ಲಕ್ಷ ರೂ. ವೆಚ್ಚದಲ್ಲಿ ೪,೪೭೧ ಸಾಧನ ಸಲಕರಣÉಗಳನ್ನು ವಿತರಿಸಲಾಗಿದೆ. ಮೊಳ ಕಾಲ್ಮೂರು ಮತ್ತು ಹೊಸದುರ್ಗ ತಾಲೂಕುಗಳ -Àಲಾನುಭವಿಗಳಿಗೆ ಆಯಾ ತಾಲೂಕು ಕೇಂದ್ರಗಳಲ್ಲಿ ಶೀಘ್ರದಲ್ಲೇ ಉಪಕರಣ ಗಳನ್ನು ವಿತರಿಸಲಾಗುವುದು ಎಂದರು.
ಜಿಲ್ಲಾ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಽಕಾರದ ಅಧ್ಯಕ್ಷ ಆರ್. ಶಿವಣ್ಣ ಮಾತನಾಡಿ, ಬಡವರು, ಹಿರಿಯ ನಾಗರಿಕರು ಹಾಗೂ ಅಂಗವಿಕಲರಿಗೆ ಆಸರೆಯಾಗುವ ನಿಟ್ಟಿನಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಆಡಳಿತ ನಡೆಸುತ್ತಿವೆ ಎಂದರು.
ಎಸಿ ಡಾ. ಕೆ.ಜೆ. ಕಾಂತರಾಜ್ ಮಾತನಾಡಿದರು. ಕುಡಾ ಅಧ್ಯಕ್ಷ ಎಂ.ಕೆ. ತಾಜ್‌ಪೀರ್, ಜಿಲ್ಲಾ ಅಂಗವಿಕಲರ ಕಲ್ಯಾಣಾಽಕಾರಿ ಜೆ. ವೈಶಾಲಿ, ಅಲಿಮ್ಕೊ ನೋಡಲ್ ಅಽಕಾರಿ ಎಲ್. ಸರ್ಕಾರ್, ಅಭಿಷೇಕ್, ಎ. ಮುರಳಿ ಮತ್ತಿತರರು ಇದ್ದರು.
ಹಿರಿಯರ ರಕ್ಷಣೆಗೆ ಕಾಯ್ದೆ
ಹಿರಿಯ ನಾಗರಿಕರ ಅನುಭವ ಯುವ ಪೀಳಿಗೆಗೆ ಮಾರ್ಗದರ್ಶನವಾಗಬೇಕೆಂದು ಎಸಿ ಕಾಂತರಾಜ್ ಹೇಳಿದರು. ಹಿರಿಯ ನಾಗರಿ ಕರು ತಮ್ಮ ಕೊನೆಗಾಲದಲ್ಲಿ ಮಕ್ಕಳ ಹೆಸರಿಗೆ ಜಮೀನು, ಆಸ್ತಿ ದಾನ ಮಾಡಿದ ನಂತರ ಮಕ್ಕಳು ಅವರನ್ನು ನಿರ್ಲಕ್ಷಿಸುವ ಅ ಥವಾ ಸರಿಯಾಗಿ ನೋಡಿಕೊಳ್ಳದ ಘಟನೆಗಳಾಗುತ್ತಿವೆ. ಇಂಥÀ ಸಂದರ್ಭಗಳಲ್ಲಿ ಹಿರಿಯ ನಾಗರಿಕರ ರಕ್ಷಣೆಗೆ ಪಾಲಕರು, ಹಿರಿಯ ನಾಗರಿಕರ ನಿರ್ವಹಣೆ ಹಾಗೂ ಕಲ್ಯಾಣ ಕಾಯ್ದೆ-೨೦೦೭ ನೆರವಾಗುತ್ತದೆ. ತಮಗೆ ಅನ್ಯಾಯವಾದಲ್ಲಿ ಹಿರಿಯರು ಎಸಿ ಕೋರ್ಟಿಗೆ ಮನವಿ ಸಲ್ಲಿಸಬಹುದಾಗಿದೆ ಎಂದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net