ಮೊಳಕಾಲ್ಮೂರು ತಾಲೂಕಿನ ತುಮಕೂರ‌್ಲಹಳ್ಳಿಯಲ್ಲಿ ಶ್ರೀಶೈಲ ಮಲ್ಲಿಕಾರ್ಜುನ ಸ್ವಾಮಿ ಕಾರ್ತಿಕ ಹಿನ್ನೆಲೆಯಲ್ಲಿ ರಥೋತ್ಸವ ವಿಜೃಂಭಣೆಯಿಂದ ನೆರವೇರಿತು.
Published on:
Copied
Follow Us
ಪ್ರಮುಖ ಮುಖ್ಯಾಂಶಗಳು
ದೇಗುಲದ ಆವರಣದಲ್ಲಿ ದೀಪಾರಾಧನೆ
ಭಕ್ತರಿಂದ ಹಣ್ಣು, ಕಾಯಿ, ಹೂ ಸಮರ್ಪಣೆ
ಕಾರ್ತಿಕ ರಥೋತ್ಸವ ಸಕಲ ಧಾರ್ಮಿಕ ಕಾರ್ಯ
ಮೊಳಕಾಲ್ಮೂರು:ತಾಲೂಕಿನ ತುಮಕೂರ‌್ಲಹಳ್ಳಿ ಶ್ರೀಶೈಲ ಮಲ್ಲಿಕಾರ್ಜುನಸ್ವಾಮಿ ಕಾರ್ತಿಕ ರಥೋತ್ಸವ ಸಕಲ ಧಾರ್ಮಿಕ ಕಾರ್ಯದೊಂದಿಗೆ ಬುಧವಾರ ವೈಭವದಿಂದ ನೆರವೇರಿತು.
ಜಾತ್ರಾ ಮಹೋತ್ಸವದ ಹಿನ್ನೆಲೆಯಲ್ಲಿ ಮಂಗಳವಾರ ಸಂಜೆ ದೇವಸ್ಥಾನದಲ್ಲಿ ವಿಶೇಷ ಮಹಾಮಂಗಳಾರತಿ, ದೀಪಾರಾಧನೆ, ಬನ್ನಿ ಮಂಟಪಕ್ಕೆ ಸ್ವಾಮಿಯನ್ನು ಪಲ್ಲಕ್ಕಿ ಉತ್ಸವದಲ್ಲಿ ಕರೆತರುವ ಮೂಲಕ ಸಾಂಪ್ರದಾಯಕ ಕಾರ್ಯಗಳು ಜರುಗಿದವು.
ಬುಧವಾರ ಬೆಳಗಿನ ಜಾವ ರುದ್ರಾಭಿಷೇಕ, ಬಲಿ ಅನ್ನ ಸಂತರ್ಪಣೆ ಹಾಗೂ ಭಕ್ತರಿಂದ ಹಣ್ಣು, ಕಾಯಿ ಹೂವು ಸಮರ್ಪಣೆ ನಡೆಯಿತು. ಮಧ್ಯಾಹ್ನ ಭಕ್ತಾಧಿಗಳ ಸಮ್ಮುಖದಲ್ಲಿ ರಥೋತ್ಸವ ನೆರವೇರಿತು.
ಗುರುವಾರ ಬೆಳಗ್ಗೆ ಓಕಳಿ ನಡೆಯಲಿದೆ. ನಂತರ ಪಲ್ಲಕ್ಕಿ ಉತ್ಸವದೊಂದಿಗೆ ಸಂಜೆ ಗುಡಿ ತುಂಬಿಸುವ ಕಾರ್ಯ ನಡೆದ ನಂತರ ಜಾತ್ರೆಗೆ ತೆರೆ ಬೀಳಲಿದೆ. ಎರಡು ದಿನ ಸಾಮಾಜಿಕ ನಾಟಕ, ಕೀಲು ಕುದುರೆ ಆಟ, ಕೋಲಾಟ ಹಾಗೂ ಮನರಂಜನೆ ನಡೆದವು.