ಚಿತ್ರದುರ್ಗ: ಜಿಲ್ಲಾಸ್ಪತ್ರೆಗಳ ಮೇಲೆ ಒತ್ತಡ ಕಡಿತಗೊಳಿಸಲು ರಾಜ್ಯದ ಎಲ್ಲ ತಾಲೂಕು ಆಸ್ಪತ್ರೆಗಳ ಉನ್ನತೀಕರಣಕ್ಕೆ ಕ್ರಮ ವಹಿಸಲಾಗಿದ್ದು, ಈ ಆಸ್ಪತ್ರೆಗಳಲ್ಲಿ ಐದು ಹಾಸಿಗೆಗಳ ಐಸಿಯು ಸೇವೆ ಪ್ರಾರಂಭಿಸಲಾಗುವುದು ಎಂದು ಆರೋಗ್ಯ ಸಚಿವ ಯು.ಟಿ. ಖಾದರ್ ಹೇಳಿದರು.
ತಾಲೂಕು ಆಸ್ಪತ್ರೆಗಳಲ್ಲಿ ತುರ್ತು ಚಿಕಿತ್ಸೆಗೆ ಟೆಲಿ ಐಸಿಯು ವ್ಯವಸ್ಥೆ ಅನುಷ್ಠಾನಗೊಳಿಸಲಾಗುತ್ತಿದೆ. ಈಗಾಗಲೇ ೨೨೦ ವೈದ್ಯ ಹುದ್ದೆಗಳ ಭರ್ತಿ ಮಾಡಲಾಗಿದ್ದು, ನೇಮಕಾತಿ ಆದೇಶಕ್ಕೆ ಸೂಚಿಸಿದ್ದೇನೆ ಎಂದು ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಸದ್ಯ ೮೦ ಪಿಎಚ್ಸಿಗಳಲ್ಲಿ ವೈದ್ಯರ ಹುದ್ದೆಗಳು ಖಾಲಿ ಇವೆ. ಜಿಲ್ಲಾ ಆಸ್ಪತ್ರೆಗಳಿಗೆ ಅಗತ್ಯವಿರುವ ವೈದ್ಯರ ಸಹಿತ ೧೦೦೦ ವೈದ್ಯಕೀಯ ಸಿಬ್ಬಂದಿ ಭರ್ತಿಗೆ ಸಂಪುಟದ ಅನುಮೋದನೆ ಸಿಕ್ಕಿದೆ. ೩೫೦ ಹೊಸ ಆಂಬುಲೆನ್ಸ್ ಖರೀದಿಸಲಾಗುತ್ತಿದೆ. ಕರೆ ಮಾಡಿದ ೨೦ ನಿಮಿಷಗಳಲ್ಲಿ ಆಂಬುಲೆನ್ಸ್ ಸ್ಥಳಕ್ಕೆ ತಲುಪದಿದ್ದರೆ ೩೦೦೦ ದಂಡ ವಿಽಸಲಾಗುತ್ತಿದೆ ಎಂದರು.
ವೈದ್ಯಕೀಯ ಕಾಲೇಜುಗಳಿಗೆ ಜಿಲ್ಲಾಸ್ಪತ್ರೆಗಳನ್ನು ಹಸ್ತಾಂತರಿಸಿರುವAಥ ಸ್ಥಳಗಳಲ್ಲಿ ಹೊಸ ಜಿಲ್ಲಾಸ್ಪತ್ರೆಗಳ ನಿರ್ಮಾಣಕ್ಕೆ ಚಿಂತಿಸಲಾಗಿದೆ. ಬಳ್ಳಾರಿ, ಚಿತ್ರದುರ್ಗ ಸೇರಿದಂತೆ ಹಲವೆಡೆ ಜಿಲ್ಲಾಸ್ಪತ್ರೆಗಳನ್ನು ವೈದ್ಯಕೀಯ ಶಿಕ್ಷಣ ಇಲಾಖೆಗೆ ಹಸ್ತಾಂತರಿಸಲಾಗಿದೆ ಎಂದರು.
ಆಹಾರ ಸುರಕ್ಷತೆ ಇಲಾಖೆ ಬಲವರ್ಧನೆ:
ಆಹಾರ ಸುರಕ್ಷತೆಗೆ ಒತ್ತು ಕೊಡಲಾಗುತ್ತಿದ್ದು, ಈ ನಿಟ್ಟಿನಲ್ಲಿ ಆಹಾರ ಸುರಕ್ಷತೆ ಮತ್ತು ಗುಣಮಟ್ಟದ ಇಲಾಖೆ ಬಲವರ್ಧನೆ ಮಾಡಲಾಗುತ್ತಿದೆ, ಅಗತ್ಯ ೭೫ ಅಽಕಾರಿ, ನಿರೀಕ್ಷಕರ ನೇಮಕಕ್ಕೆ ವ್ಯವಸ್ಥೆ ಮಾಡಲಾಗಿದೆ ಎಂದರು.
ಅಲ್ಪಸAಖ್ಯಾತರ ಕಲ್ಯಾಣಕ್ಕಾಗಿ ವಿವಿಧ ಯೋಜನೆ ಅನುಷ್ಠಾನಗೊಳಿಸುತ್ತಿದೆ. ಅಲ್ಪಸಂಖ್ಯಾತ ವಿದ್ಯಾರ್ಥಿಗಳಿಗೆ ೫೪೦ ಕೋಟಿ ರೂ.ಮೊತ್ತದ ವಿದ್ಯಾರ್ಥಿವೇತನ, ೨೦ ಕೋಟಿ ರೂ.ವೆಚ್ಚದಲ್ಲಿ ಸ್ಪರ್ಧಾತ್ಮಕ ಪರೀಕ್ಷೆ ಮತ್ತು ಡಿಜಿಟಲ್ ಶಿಕ್ಷಣ ತರಬೇತಿ. ಸಂತ ಶಿಶುನಾಳ ಶರೀಫರ ಹೆಸರಲ್ಲಿ ೧೦ ಹೊಸ ಸಿಬಿಎಸ್ಸಿ ಶಾಲೆಗಳ ಆರಂಭ. ಕೆಪಿಎಸ್ ಶಾಲೆ ಮಾದರಿಯಲ್ಲಿ ೧೦೦ ಮೌಲಾನಾ ಆಜಾದ್ ಶಾಲೆಗಳನ್ನು ಉನ್ನತೀಕರಿಸುವ ಗುರಿ ಇದೆ ಎಂದರು.
ಅಲ್ಪಸAಖ್ಯಾತ ವಿದ್ಯಾರ್ಥಿಗಳು ಆರಂಭಿಸುವ ಹೊಸ ಸ್ಟಾರ್ಟಪ್ ತಂತ್ರಜ್ಞಾನ ಇಲಾಖೆಯಿಂದ ಆಯ್ಕೆಯಾದರೆ ೫೦ ಲಕ್ಷ ರೂ. ನೀಡಲಾಗುತ್ತದೆ. ಕ್ರಿಶ್ಚಿಯನ್, ಜೈನ, ಬೌದ್ಧ ಮತ್ತು ಸಿಖ್ ಸಮುದಾಯ ಕಲ್ಯಾಣ ಕರ್ಯಕ್ರಮಗಳಿಗೆ ೫೫ ಕೋಟಿ ರೂ.ಅನುದಾನ ಬಿಡುಗಡೆ ಮಾಡಲಾಗಿದೆ. ಹಜ್ಸಮಿತಿ ಮುಖಾಂತರ ಉತ್ತಮ ಸೌಲಭ್ಯ, ಭದ್ರತೆಯೊಂದಿಗೆ ಪ್ರತಿ ತಿಂಗಳು ೨ ತಂಡಗಳನ್ನು ಹಜ್ಯಾತ್ರೆಗೆ ಕಳುಹಿಸಲಾಗುವುದು ಎಂದು ಖಾದರ್ ಹೇಳಿದರು.
ಶಾಸಕ ಕೆ.ಸಿ. ವೀರೇಂದ್ರಪಪ್ಪಿ, ಕುಡಾ ಅಧ್ಯಕ್ಷ ಎಂ.ಕೆ. ತಾಜ್ಪೀರ್, ಜಿಲ್ಲಾ ಗ್ಯಾರಂಟಿ ಪ್ರಾಽಕಾರ ಅಧ್ಯಕ್ಷ ಆರ್. ಶಿವಣ್ಣ ಗಂಜಿಗಟ್ಟೆ, ಉಪಾಧ್ಯಕ್ಷ ಡಿ.ಎನ್. ಮೈಲಾರಪ್ಪ, ಡಿಸಿ ಎಸ್. ರಮ್ಯಾ, ಆರೋಗ್ಯ ಇಲಾಖೆ ಜಿಲ್ಲಾ ನೋಡಲ್ ಅಽಕಾರಿ ಡಾ. ರಂಗನಾಥ್, ಡಿಎಚ್ಒ ಡಾ.ಎಂ.ಸಿ. ಸುನೀಲ್ಕುಮಾರ್, ಡಿಎಸ್ ಡಾ.ಎಸ್.ಪಿ. ರವೀಂದ್ರ ಮತ್ತಿತರರು ಇದ್ದರು.
ನಾವು ವಿಪಕ್ಷ ಕೇಳಿ ರಾಜಕಾರಣ ಮಾಡಲ್ಲ
ಚಿತ್ರದುರ್ಗ: ಪ್ರತಿ ಪಕ್ಷದವರ ಮಾತನ್ನು ಕೇಳಿ ನಾವು ರಾಜಕಾರಣ ಮಾಡುವುದಿಲ್ಲ ಎಂದು ಆರೋಗ್ಯ ಸಚಿವ ಯು.ಟಿ. ಖಾದರ್ ಹೇಳಿದರು.
ಕಾಂಗ್ರೆಸ್ ಅಽಕಾರದ ಭ್ರಮೆಯಲ್ಲಿದೆ ಎಂಬ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಹೇಳಿಕೆಗೆ ಪ್ರತಿಕ್ರಿಯಿಸಿ,ನಮ್ಮ ಪಕ್ಷದ ಆಡಳಿತದಲ್ಲಿ ರಾಜ್ಯದ ಜನರು ನೆಮ್ಮದಿಯಿಂದ ಇದ್ದಾರೆ. ಬಿಜೆಪಿ ಅಽಕಾರದಲ್ಲಿದ್ದಾಗ ಪ್ರತಿ ಆರು ತಿಂಗಳಿಗೊಮ್ಮೆ ಒಂದೊAದು ಸಮಸ್ಯೆ ಆಗುತ್ತಿತ್ತು. ಗ್ಯಾರಂಟಿ ಸಾಧ್ಯವೆಂದು ತೋರಿಸಿದ್ದೇವೆ ಎಂದು ನಗರದಲ್ಲಿ ಶುಕ್ರವಾರ ಸುದ್ದಿಗಾರರಿಗೆ ತಿಳಿಸಿದರು.
ಹಾಲಿನ ದರ ಏರಿಕೆ ಮೊತ್ತದಲ್ಲಿ ೭ ರೂ.ರೈತರಿಗೆ ಕೊಡುತ್ತೇವೆ. ಹಲವು ವರ್ಷಗಳಿಂದ ಸಾರಿಗೆ ಬಸ್ ಟಿಕೆಟ್ ದರ ಏರಿಸಿರಲಿಲ್ಲ. ಕೆಎಸ್ಆರ್ಟಿಸಿ ದರ ಹೆಚ್ಚಳ ಪ್ರಸ್ತಾಪ ಮಿತಿಗೊಳಿಸಲಾಗಿದೆ. ಸಾರಿಗೆ ಸಂಸ್ಥೆ ಲಾಭಗಳಿಸುವ ಸಂಸ್ಥೆ ಅಲ್ಲ, ಗ್ರಾಮೀಣ ಪ್ರದೇಶಗಳಲ್ಲಿ ಸಾರಿಗೆ ಬಸ್ಗಳು ಸಂಚರಿಸುತ್ತಿವೆ. ಬಸ್ ಮಹಿಳೆಯರಿಗೆ ಉಚಿತ, ವಿದ್ಯಾರ್ಥಿಗಳಿಗೆ ಪಾಸ್ ವ್ಯವಸ್ಥೆ. ಪುರುಷ ಪ್ರಯಾಣಿಕರು ಹಣ ಪಾವತಿಸುತ್ತಿದ್ದಾರೆ ಎಂದರು.
ಸಿಎಂ ಡಿ.ಕೆ. ಶಿವಕುಮಾರ್, ಮಾಜಿ ಸಿಎಂ ಸಿದ್ದರಾಮಯ್ಯ ರಾಜ್ಯದ ಎರಡು ಕಣ್ಣುಗಳಿದ್ದಂತೆ. ಸಿದ್ದರಾಮಯ್ಯ ಮಾರ್ಗದರ್ಶನ, ಡಿಸಿಎಂ ಡಾ.ಜಿ. ಪರಮೇಶ್ವರ್ ಅವರ ಸಹಕಾರದಿಂದ ಉತ್ತಮ ಆಡಳಿತ ನಡೆಸುತ್ತಿರುವ ಶಿವಕುಮಾರ್ ಅಽಕಾರಾವಽ ಪೂರ್ಣಗೊಳಿಸುತ್ತಾರೆ ಎಂದು ಹೇಳಿದರು.
`ಶುದ್ಧ ರಾಮಯ್ಯ'
ಸ್ಟಿಂಗ್ ಆಪರೇಷನ್ ಕುರಿತಂತೆ ಸಿದ್ದರಾಮಯ್ಯ ಹೈಕಮಾಂಡ್ಗೆ ದೂರು ನೀಡಿದ್ದಾರೆ ಎಂಬುದು ಬಿಜೆಪಿ ಹಬ್ಬಿಸಿರುವ ವದಂತಿ. ಇವರ ನಡುವೆ ಬಿಕ್ಕಟ್ಟು ಸೃಷ್ಟಿಸುವ ಬಿಜೆಪಿ ಪ್ರಯತ್ನ ಸಾಧ್ಯವಾಗದು. ಸ್ಟಿಂಗ್ ಆಪರೇಷನ್ ತನಿಖೆ ನಡೆಯುತ್ತಿದೆ. ಸಿದ್ದರಾಮಯ್ಯರ ಮೇಲೆ ಯಾರೂ ಕಳಂಕ ಹೊರೆಸಲಾಗದು, ಅವರು ಶುದ್ಧರಾಮಯ್ಯ ಎಂದು ಖಾದರ್ ಬಣ್ಣಿಸಿದರು.