ಚಿತ್ರದುರ್ಗ: ನಗರದ ಎಸ್‌ಜೆಎಂ ತಾಂತ್ರಿಕ ಮಹಾವಿದ್ಯಾಲಯದಲ್ಲಿ `ಸೂರ್ತಿ' ಕ್ರೀಡಾ ಮತ್ತು ಸಾಂಸ್ಕೃತಿಕ ಕಾರ್ಯಕ್ರಮದ ಅಂಗವಾಗಿ ಮಂಗಳವಾರ ಮಿಸ್ಟರ್ ಜೆಎಂಐಟಿ, ಮಿಸ್ ಜೆಎಂಐಟಿ ಹಾಗೂ ಸೋಲೊ ನೃತ್ಯ ಸ್ಪರ್ಧೆಗಳನ್ನು ಏರ್ಪಡಿಸಲಾಗಿತ್ತು.
ಮಿಸ್ಟರ್ ಜೆಎಂಐಟಿ ಸ್ಪರ್ಧೆಯಲ್ಲಿ ಕಂಪ್ಯೂಟರ್ ಸೈನ್ಸ್ ವಿದ್ಯಾರ್ಥಿಗಳಾದ ಬಿ.ವಿ. ತರುಣ್ ಪ್ರಥಮ, ಆರ್. ಜೀವನ್ ದ್ವೀತಿಯ ಸ್ಥಾ ನ ಪಡೆದರು. ಮಿಸ್ ಜೆಎಂಐಟಿ ಸ್ಪರ್ಧೆಯಲ್ಲಿ ಕಂಪ್ಯೂಟರ್ ಸೈನ್ಸ್ ವಿಭಾಗದ ವಿದ್ಯಾರ್ಥಿನಿ ಎನ್.ಎಂ. ಪ್ರಾಂಜಲ ಪ್ರಥಮ ಹಾಗೂ ಎಲೆಕ್ಟಿçಕಲ್ ವಿಭಾಗದ ವಿದ್ಯಾರ್ಥಿನಿ ಅಲಿಯಾ ಯೈ ದ್ವೀತಿಯ ಸ್ಥಾನ ಪಡೆದರು. ಸೋಲೊ ಡ್ಯಾನ್ಸ್ ಸ್ಪರ್ಧೆಯಲ್ಲಿ ಸಿವಿಲ್ ವಿಭಾ ಗದ ವಿದ್ಯಾರ್ಥಿನಿ ಜಿ.ಎಸ್. ಸಂಜನಾಗೌಡ ಪ್ರಥಮ ಸ್ಥಾನ ಪಡೆದರು.
ಎಲೆಕ್ಟಾçನಿಕ್ಸ್-ಕಮ್ಯುನಿಕೇಶನ್ ವಿದ್ಯಾರ್ಥಿನಿ ಕೀರ್ತನಾ, ಸಿವಿಲ್ ವಿಭಾಗದ ವಿದ್ಯಾರ್ಥಿ ಯಶವಂತ್ ಉತ್ತಮ ನಡಿಗೆಗೆ ಪ್ರಶಸ್ತಿ ಪಡೆದರು. ಎಲೆಕ್ಟಿçಕಲ್ ವಿಭಾಗದ ವಿದ್ಯಾರ್ಥಿನಿ ಎನ್. ಹರ್ಷಿತಾ ಹಾಗೂ ಆರ್.ಜೀವನ್ ಸಾಂಪ್ರದಾಯಕ ಉಡುಗೆಯಲ್ಲಿ ಪ್ರಶಸ್ತಿ ಪಡೆದರು. ಎಲೆಕ್ಟಿçಕಲ್ ವಿಭಾಗದ ವಿದ್ಯಾರ್ಥಿನಿ ಬಬಿತಾ, ಎಲೆಕ್ಟಿçಕಲ್ ವಿಭಾಗದ ವಿದ್ಯಾರ್ಥಿ ಶಿವಕುಮಾರ್ ಪಾಶ್ಚಾತ್ಯ ಉಡುಗೆ ಯಲ್ಲಿ ಪ್ರಶಸ್ತಿ ಪಡೆದರು.
`ಮೋಡ ಕವಿದ ವಾತವರಣ' ಕನ್ನಡ ಚಿತ್ರದ ಟೀಸರ್ ಬಿಡುಗಡೆಗೊಳಿಸಲಾಯಿತು. ಪ್ರಾಚಾರ್ಯ ಡಾ.ಪಿ.ಬಿ.ಭರತ್,ನಟ-ನಟಿ ಯರಾದ ಶೀಲಂ ಎಂ.ಸ್ವಾಮಿ, ಮೋಕ್ಷಾ ಕುಶಾಲ್, ಸಾತ್ವಿಕ, ಸೂರ್ತಿ ಮುಖ್ಯ ಸಂಚಾಲಕ ಡಾ.ಕೆ.ಆರ್. ಕೃಷ್ಣಾರೆಡ್ಡಿ, ಡಾ.ಟಿ.ವಿ. ಅರವಿಂದ್ ಉಪಸ್ಥಿತರಿದ್ದರು.
ವಿದ್ಯಾರ್ಥಿಗಳಾದ ಸಿದ್ದೇಶ್, ದಿವ್ಯಾ ನಿರೂಪಿಸಿದರು. ಸರ್ಧೆಗಳಲ್ಲಿ ೫೦ ಕ್ಕೂ ಹೆಚ್ಚು ವಿದ್ಯಾರ್ಥಿಗಳು ಭಾಗವಹಿಸಿದ್ದರು. ತೀರ್ಪುಗಾರರಾಗಿ ನೃತ್ಯಪಟು ಕೌಶಿಕ್ ಸುವರ್ಣ, ಸಮನ್ವಿಸುವರ್ಣ ಆಗಮಿಸಿದ್ದರು.