

ಡಿಪಿಎನ್ ಶ್ರೇಷ್ಠಿ, ಚಿತ್ರದುರ್ಗ
ಟಾರ್ಗೆಟ್-೪೦ ಹಾಗೂ ಟಾರ್ಗೆಟ್-೨೦ ಘೋಷಣೆಯಡಿ ಜಿಲ್ಲೆಯಲ್ಲಿ ೨೦೨೬-೨೭ನೇ ಸಾಲಿನ ಎಸ್ಸೆಸ್ಸೆಲ್ಸಿ, ದ್ವಿತೀಯ ಪಿಯುಸಿ ಫಲಿತಾಂಶಗಳ ಸುಧಾರಣೆಗೆ ಶಿಕ್ಷಣ ಇಲಾಖೆ ಯೋಜನೆ ರೂಪಿಸಿದೆ.
ಕಳೆದ ಶೈಕ್ಷಣಿಕ ಸಾಲಿನಲ್ಲಿ ಎಸ್ಸೆಸ್ಸೆಲ್ಸಿ, ದ್ವಿತೀಯ ಪಿಯುಸಿ ಪರೀಕ್ಷೆ ಫಲಿತಾಂಶಗಳಲ್ಲಿ ಅತ್ಯಂತ ಕಡಿಮೆ ಸಾಧನೆ ಮಾಡಿರುವ ಜಿಲ್ಲೆಯ ಸರ್ಕಾರಿ ಮತ್ತು ಅನುದಾನಿತ ಪ್ರೌಢಶಾಲೆ, ಕಾಲೇಜುಗಳನ್ನು ಗುರುತಿಸಿ, ರಾಜ್ಯಮಟ್ಟದಲ್ಲಿ ಜಿಲ್ಲೆಯ ಒಟ್ಟಾರೆ ಫಲಿತಾಂಶ ಹೆಚ್ಚಿಸುವ ಉದ್ದೇಶದಿಂದ ೪೦ ಪ್ರೌಢಶಾಲೆಗಳು, ೨೦ ಪದವಿಪೂರ್ವ ಕಾಲೇಜುಗಳ ಫಲಿತಾಂಶದಲ್ಲಿ ಸುಧಾರಣೆಗೆ ಕ್ರಮ ಕೈಗೊಳ್ಳಲಾಗುತ್ತಿದೆ.
ಡಯಟ್ ಉಪನ್ಯಾಸಕರು, ಬಿಇಒ, ಜಿಲ್ಲಾ ಉಪ ಸಮನ್ವಯಽಕಾರಿ, ವಯಸ್ಕರ ಶಿಕ್ಷಣಾಽಕಾರಿ, ಪಿಎಂ ಪೋಷಣ ನಿರ್ಮಾಣ ಯೋಜನೆ ಅಽಕಾರಿಗಳು, ಇಒ, ಬಿಆರ್ಸಿ ಹಾಗೂ ವಿಷಯ ಪರಿವೀಕ್ಷಕರನ್ನು, ಗುರುತಿಸಿರುವ ಪ್ರತಿ ಶಾಲೆಗೆ ಉಸ್ತುವಾರಿ ಅಽಕಾರಿಗಳನ್ನಾಗಿ ನೇಮಿಸಲಾಗಿದೆ. ಉಪನ್ಯಾಸಕರು, ಪ್ರಾಚಾರ್ಯರಿಗೆ ಕಾಲೇಜುಗಳ ಹೊಣೆ ಹೊರಿಸಲಾಗಿದೆ.
೨೦೨೪-೨೫ನೇ ಸಾಲಿನ ಪರೀಕ್ಷೆಗಳ ಫಲಿತಾಂಶವನ್ನು ಗಮನಿಸಿದ್ದ ಜಿಪಂ ಸಿಇಒ ಡಾ.ಎಸ್. ಆಕಾಶ್ ಅವರು, ಕಳಪೆ ಸಾಧನೆ ಮಾಡಿದ್ದ ೧೦೦ ಪ್ರೌಢಶಾಲೆಗಳನ್ನು ಗುರಿಯಾಗಿಸಿ ನಗರದಲ್ಲಿ ಸ್ಥಾಪಿಸಿರುವ ಎಡ್ಲ್ಯಾಬ್ ಮೂಲಕ ವರ್ಷಪೂರ್ಣ ಕಟ್ಟುನಿಟ್ಟಿನ ನಿಗಾಕ್ಕೆ ಅಽಕಾರಿಗಳಿಗೆ ಸೂಚಿಸಿದ್ದರು. ಸೆಕೆಂಡ್ ಪಿಯುಸಿ ಫಲಿತಾಶವನ್ನೂ ಎಡ್ಲ್ಯಾಬ್ ಮೂಲಕ ವಿಶ್ಲೇಷಿಸಿ ಸುಧಾರಣೆ ಕ್ರಮ ಜಾರಿಗೊಳಿಸಲಾಗಿತ್ತು.
ಎಸ್ಸೆಸ್ಸೆಲ್ಸಿ, ಪಿಯುಸಿ ವಿದ್ಯಾರ್ಥಿಗಳಿಗೆ ಕಳೆದ ವರ್ಷ ಮೊದಲ ಬಾರಿಗೆ ನೈಜ ಪರೀಕ್ಷೆ ವಾತಾವರಣ ಸೃಷ್ಟಿಸಲಾಗಿತ್ತು. ಜಿಲ್ಲಾಡಳಿತದಿಂದ ಸಾಮಾನ್ಯ ಪೂರ್ವಸಿದ್ಧತಾ ಪರೀಕ್ಷೆಗಳನ್ನು ಬೋರ್ಡ್ನ ಅಂತಿಮ ಪರೀಕ್ಷೆಗಳ ತಾಲೀಮನ್ನಾಗಿ ಪರಿವರ್ತಿಸಿತ್ತು. ವಿದ್ಯಾರ್ಥಿಗಳಿಗೆ ಬೇರೆ ಪರೀಕ್ಷಾ ಕೇಂದ್ರಗಳ ಹಂಚಿಕೆ. ಪೂರ್ವಸಿದ್ಧತಾ ಪರೀಕ್ಷೆ ಪ್ರವೇಶ ಪತ್ರಗಳ ವಿತರಣೆ ಹಾಗೂ ಲೈವ್ ವೆಬ್ಕಾಸ್ಟಿಂಗ್ ಮತ್ತು ಸಿಸಿಟಿವಿ ನಿಗಾ ಸೇರಿ ರಾಜ್ಯಮಟ್ಟದ ಪರೀಕ್ಷೆಗಳ ನಿಖರ ವಾತಾವರಣ ನಿರ್ಮಿಸಲಾಗಿತ್ತು. ಇದು ಅಂತಿಮ ಪರೀಕ್ಷೆ ನೈಜ ಅನುಭವ ನೀಡಿದ್ದರಿಂದ ವಿದ್ಯಾರ್ಥಿಗಳಲ್ಲಿ ಪರೀಕ್ಷಾ ಭಯ ಹೋಗಲಾಡಿಸಲು ನೆರವಾಗಿತ್ತು.
ಯಾವ್ಯಾವ ಕಾರ್ಯಕ್ರಮಗಳು?
ಡಿಸೆಂಬರ್ ಅಂತ್ಯದೊಳಗೆ ಪಠ್ಯಕ್ರಮ ಪೂರ್ಣಗೊಳಿಸುವುದು, ಪರಿಹಾರ ಬೋಧನೆ, ವಿಶೇಷ ತರಗತಿಗಳು, ಬೆಳಗಿನ ಪ್ರಾರ್ಥನಾ ಅವಽ ಚಟುವಟಿಕೆ, ಪ್ರತಿ ಪಾಠ ಕಲಿಕೆ ಮೌಲ್ಯಾಂಕನ ಮತ್ತು ವಿದ್ಯಾರ್ಥಿವಾರು ಕಲಿಕೆ ಆಧಾರಿತ ಟ್ರ್ಯಾಕಿಂಗ್ ವ್ಯವಸ್ಥೆ. ದ್ವೆÊಮಾಸಿಕ ಪಾಲಕರ- ಶಿಕ್ಷಕರ ಸಭೆ, ಉZ್ಟ್ಝqs UZ್ಟ್ಞಜ್ಞಿಜ ಖqsoಠಿಛಿಞ ವಿದ್ಯಾರ್ಥಿಗಳು ತರಗತಿಗಳಿಗೆ ಗೈರು ಹಾಜರಾಗದಂತೆ ವಹಿಸಬೇಕಾದ ಮುನ್ನೆಚ್ಚರಿಕೆ. ಶಾಲೆಗಳಿಂದ ಹೊರಗುಳಿದ ಮಕ್ಕಳನ್ನು ಶಾಲೆಗೆ ಕರೆತರುವುದು, ಉ ಆ್ಠbbqs PZ್ಟಜ್ಞಿಜ ಮೂಲಕ ನಿಧಾನಗತಿ ಕಲಿಕಾ ವಿದ್ಯಾರ್ಥಿಗಳ ಬಲವರ್ಧನೆ. ಪ್ರಶ್ನೆ ಕೋಠಿ ಸಿದ್ಧಪಡಿಸುವುದು. ವಿದ್ಯಾರ್ಥಿಗಳ ನಿರಂತರ ಮೌಲ್ಯಮಾಪನ, ವೇಕ್ ಆಫ್ ಕಾಲ್. ಕ್ರೀಡಾ ಅವಽ, ಮೊಬೈಲ್, ಸಾಮಾಜಿಕ ಜಾಲತಾಣ ಗೀಳು ತಪ್ಪಿಸುವುದು. ಆರೋಗ್ಯ ತಪಾಸಣೆ, ಕಾರ್ಯಾಗಾರಗಳು, ನಿರಂತರ ಕಣ್ಗಾವಲು, ಶಾಲಾ, ಕಾಲೇಜು ದತ್ತು ಕಾರ್ಯಕ್ರಮ, ಪ್ರಗತಿ ಪರಿಶೀಲನೆ, ಶಿಕ್ಷಕರಿಗೆ ಪುನಶ್ಚೇತನ ತರಬೇತಿ, ಮಾದರಿ ಪ್ರಶ್ನೆ ಪತ್ರಿಕೆ, ಪ್ರಶ್ನೆ ಸ್ವರೂಪ, ಪೂರ್ವ ಸಿದ್ಧತೆ, ಜಿಲ್ಲಾ ಹಂತದಲ್ಲಿ ಪ್ರಗತಿ ಪರಿಶೀಲನೆ, ಅನುತ್ತೀರ್ಣರಾದವರ ಮರು ದಾಖಲಾತಿ ಹೀಗೆ ನಾನಾ ಕ್ರಮಗಳೆಡೆ ಸಂಬAಽಸಿದವರು ನಿಗಾ ವಹಿಸಬೇಕಿದೆ.
ಜಿಲ್ಲೆಯಲ್ಲಿ ಗುರುತಿಸಿದ ೪೦ ಪ್ರೌಢಶಾಲೆಗಳು/೨೦ ಪದವಿ ಪೂರ್ವ ಕಾಲೇಜುಗಳು
ತಾಲೂಕು, ಸರ್ಕಾರಿ-ಅನುದಾನಿತ-ಒಟ್ಟು
ಚಿತ್ರದುರ್ಗ-೫-೯-೧೪ /೨-೪-೬
ಹೊಸದುರ್ಗ-೨-೫-೭/೧-೧-೨
ಚಳ್ಳಕೆರೆ-೩-೧-೪/೨-೩-೫
ಮೊಳಕಾಲ್ಮೂರು-೩-೨-೫/೨-೦-೨
ಹಿರಿಯೂರು-೪-೨-೬/೨-೧-೩
ಹೊಳಲ್ಕೆರೆ- ೨-೨-೪/೧-೧-೨
ಹಿಂದಿನ ಎರಡು ವರ್ಷಗಳ ಫಲಿತಾಂಶ
೨೦೨೫ರಲ್ಲಿ ಶೇ.೬೩.೨೧ ಫಲಿತಾಂಶದೊAದಿಗೆ ರಾಜ್ಯಮಟ್ಟದಲ್ಲಿ ಚಿತ್ರದುರ್ಗ ಜಿಲ್ಲೆ ೨೩ನೇ ಹಾಗೂ ೨೦೨೬ರಲ್ಲಿ ಶೇ.೯೨.೨೫ನೇ ಸ್ಥಾನದೊಂದಿಗೆ ರಾಜ್ಯಮಟ್ಟದಲ್ಲಿ ೨೭ನೇ ಸ್ಥಾನ ಪಡೆದಿತ್ತು. ಸೆಕೆಂಡ್ ಪಿಯುಸಿ ಪರೀಕ್ಷೆಯಲ್ಲಿ ಈ ಜಿಲ್ಲೆ ೨೦೨೫ನೇ ಪರೀಕ್ಷೆಯಲ್ಲಿ ಶೇ.೫೫.೫೯ ಫಲಿತಾಂಶದೊAದಿಗೆ ರಾಜ್ಯಮಟ್ಟದಲ್ಲಿ ೨೮ನೇ ಹಾಗೂ ೨೦೨೬ರ ಪರೀಕ್ಷೆಯಲ್ಲಿ ಶೇ.೭೯.೧೨ ಫಲಿತಾಂಶದೊAದಿಗೆ ೨೭ನೇ ಸ್ಥಾನ ಪಡೆದುಕೊಂಡಿತ್ತು.