ಚಿತ್ರದುರ್ಗ : ಮಕರ ಸಂಕ್ರಾAತಿಯನ್ನು ನಮ್ಮ ರಾಜ್ಯದಲ್ಲಿ ವಿಶೇಷವಾಗಿ ಆಚರಿಸಲಾಗುತ್ತಿದೆ ಎಂದು ರೋಟರಿಯನ್ ಗಾಯತ್ರಿ ಶಿವರಾಂ ಹೇಳಿದರು.
ನಗರದ ವಿದ್ಯಾವಿಕಾಸ ವಿದ್ಯಾಸಂಸ್ಥೆಯಲ್ಲಿ ಬುಧವಾರ ಆಯೋಜಿಸಿದ್ದ ಸಂಕ್ರಾAತಿ ಸಂಭ್ರಮ ಉದ್ಘಾಟಿಸಿ ಮಾತನಾಡಿ, ಈ ಹಬ್ಬದ ಸಂದರ್ಭ ದಲ್ಲಿ ಮನೆ ಮನೆಗೆ ಎಳ್ಳು ಬೀರಿ `ಎಳ್ಳುಬೆಲ್ಲ ತಿಂದು, ಒಳ್ಳೊಳ್ಳೆ ಮಾತಾಡಿ ಎಂದು ಹಾರೈಸಿ ಸಂಭ್ರಮಿಸಲಾಗುತ್ತದೆ ಎಂದರು.
ಸAಸ್ಥೆ ಕರ‍್ಯದರ್ಶಿ ಬಿ.ವಿಜಯಕುಮಾರ್, ನಿರ್ದೇಶಕಿ ಸುನೀತಾ ವಿಜಯಕುಮಾರ್, ವ್ಯವಸ್ಥಾಪಕ ನಿರ್ದೇಶಕ ಎಸ್.ಎಂ. ಪÊಥ್ವೀಶ್ ಇತರರು ಇದ್ದರು.
ರಾಶಿಪೂಜೆ, ಗೋಪೂಜೆ, ರಂಗೋಲಿ ಸ್ಪರ್ಧೆ ಹಾಗೂ ಸಾಂಸ್ಕೃತಿಕ ಕರ‍್ಯಕ್ರಮ ಮೊದಲಾದ ಚಟುವಟಿಕೆಗಳು ಜರುಗಿದವು. ಸ್ಪರ್ಧೆ ವಿಜೇತರಿಗೆ ಬಹುಮಾನ ವಿತರಿಸಲಾಯಿತು. ಶ್ರಾವ್ಯ ಪ್ರಾರ್ಥಿಸಿದರು, ಶ್ರೇಯಾ ಮತ್ತು ಮಯೂಕ್ ನಿರೂಪಿಸಿದರು, ಆರ್ನ ಸ್ವಾಗತಿಸಿ, ಸಾಯಿ ಸಮಸ್ಥಿತ ವಂದಿಸಿದರು.
ಐಸಿಎಸ್‌ಇ ಪ್ರಾಚರ‍್ಯ ಪಿ.ಬಸವರಾಜಯ್ಯ, ಮುಖ್ಯಶಿಕ್ಷಕ ಎನ್.ಜಿ.ತಿಪ್ಪೇಸ್ವಾಮಿ ಇತರರು ಇದ್ದರು.