ಸುತ್ತೂರು ಜಾತ್ರೆ ಸಮಾಜ ಸೇವೆಗಳ ಮಹೋತ್ಸವ

 ಅನುಭಾವ ಶ್ರಾವಣ, ಶರಣ ಚಿಂತನಮಾಲಿಕೆಯಲ್ಲಿ ಸುತ್ತೂರು ಶ್ರೀ ಶಿವರಾತ್ರಿರಾಜೇಂದ್ರ ಶ್ರೀಗಳ ಜೀವನ ಸಾಧನೆ ಕುರಿತು  ಆರ್.ತಿಪ್ಪೇಸ್ವಾಮಿ ಮಾತನಾಡಿದರು. ಡಾ.ಬಸವಕುಮಾರ ಸ್ವಾ ಮೀಜಿ, ಮೋಕ್ಷಪತಿ ಸ್ವಾಮೀಜಿ, ಶ್ರೀ ಬಸವಮುರುಘೇಂದ್ರ ಸ್ವಾಮೀಜಿ, ಕೋರಣೆ್ಯÃಶ್ವರ ಸ್ವಾಮೀಜಿ, ಶಿವಕುಮಾರ ಸ್ವಾಮೀಜಿ  ಇದ್ದರು.
ಅನುಭಾವ ಶ್ರಾವಣ, ಶರಣ ಚಿಂತನಮಾಲಿಕೆಯಲ್ಲಿ ಸುತ್ತೂರು ಶ್ರೀ ಶಿವರಾತ್ರಿರಾಜೇಂದ್ರ ಶ್ರೀಗಳ ಜೀವನ ಸಾಧನೆ ಕುರಿತು ಆರ್.ತಿಪ್ಪೇಸ್ವಾಮಿ ಮಾತನಾಡಿದರು. ಡಾ.ಬಸವಕುಮಾರ ಸ್ವಾ ಮೀಜಿ, ಮೋಕ್ಷಪತಿ ಸ್ವಾಮೀಜಿ, ಶ್ರೀ ಬಸವಮುರುಘೇಂದ್ರ ಸ್ವಾಮೀಜಿ, ಕೋರಣೆ್ಯÃಶ್ವರ ಸ್ವಾಮೀಜಿ, ಶಿವಕುಮಾರ ಸ್ವಾಮೀಜಿ ಇದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ಶಿಕ್ಷಣ ಮತ್ತು ಉದ್ಯೋಗ ಸೃಷ್ಟಿಯಲ್ಲಿ ವಿಶ್ವ ಭೂಪಟದಲ್ಲಿ ಗುರುತಿಸಿಕೊಂಡಿರುವ ಸುತ್ತೂರು ಮಠ
  • ಸಾಹಿತ್ಯ ಪ್ರಚಾರಕ್ಕಾಗಿ ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ ಸ್ಥಾಪನೆ ಮಾಡಿದ ಸುತ್ತೂರು ಜಗದ್ಗುರುಗಳು
  • ಸುತ್ತೂರು ಮಹಾಸಂಸ್ಥಾನ
ಚಿತ್ರದುರ್ಗ: ಸುತ್ತೂರು ಜಾತ್ರೆ ಎಂದರೆ ಕೇವಲ ದೇವರ ಜಾತ್ರೆಯಲ್ಲ ಅದೊಂದು ರ‍್ಮದಾಸೋಹ, ಕÊಷಿ, ಕಲೆ, ಗ್ರಾಮೀಣ, ಕ್ರೀಡೆ, ಶಿಕ್ಷಣ, ಸಾಮಾಜಿಕ ಸೇವೆಗಳ ಮಹೋತ್ಸವ. ಸಾವಿರ ರ‍್ಷಗಳ ಐತಿಹ್ಯ ಪರಂಪರೆ ಹೊಂದಿರುವ ರ‍್ನಾಟಕದ ಪ್ರಭಾವಿ ಮಠಗಳಲ್ಲಿ ಸುತ್ತೂರು ಮಠವೂ ಒಂದು ಎಂದು ಅಂಚೆ ಸಹಾಯಕ ಆರ್.ತಿಪ್ಪೇಸ್ವಾಮಿ ಹೇಳಿದರು.
ಮುರುಘಾಮಠದಲ್ಲಿ ಶನಿವಾರ ಅನುಭಾವ ಶ್ರಾವಣ, ಶರಣ ಚಿಂತನಮಾಲಿಕೆಯಲ್ಲಿ ಸುತ್ತೂರು ಶ್ರೀ ಶಿವರಾತ್ರಿರಾಜೇಂದ್ರ ಶ್ರೀಗಳ ಜೀವನ ಸಾಧನೆ ಕುರಿತು ವಿಷಯಾವಲೋಕನ ಮಾಡಿದ ಅವರು, ಸುತ್ತೂರು ಮಠದ ಇತಿಹಾಸವನ್ನು ಒಂದು ಧರ‍್ಮಿಕ ಕೇಂದ್ರ ವೆಂದು ನೋಡುವುದಕ್ಕಿಂತ ಅದರ ಶಿಕ್ಷಣ, ದಾಸೋಹ, ವೀರಶೈವ ಹಾಗೂ ಸಮಾಜ ಸೇವೆ ಪರಂಪರೆ ಹಾದಿಯನ್ನು ನೋಡುವುದು ಸೂಕ್ತ ಎಂದರು.
ಸುತ್ತೂರು ಮಹಾಸಂಸ್ಥಾನದ ೨೩ನೇ ಜಗದ್ಗುರು ಡಾ.ಶಿವರಾತ್ರಿರಾಜೇಂದ್ರ ಸ್ವಾಮೀಜಿ ಅವರು ರಾಜ್ಯಾದ್ಯಂತ ನೂರಾರು ಶೈಕ್ಷಣಿ ಕ ಸಂಸ್ಥೆಗಳೊಂದಿಗೆ ವಿದ್ಯರ‍್ಥಿ ನಿಲಯಗಳನ್ನು ಆರಂಭಿಸಿದರು. ಸಂಸ್ಕೃತಿ, ಸಾಹಿತ್ಯ, ಕಲಾಪೋಷಕರಾಗಿ ಅವರು ಕಲಾಮಂಟಪ ಮತ್ತು ಶರಣ ಸಾಹಿತ್ಯ ಪ್ರಚಾರಕ್ಕಾಗಿ ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ ಸ್ಥಾಪನೆ ಮಾಡಿದರು ಎಂದರು.
ಸುತ್ತೂರು ಮಠ ಶಿಕ್ಷಣ ಮತ್ತು ಉದ್ಯೋಗ ಸೃಷ್ಟಿಯಲ್ಲಿ ವಿಶ್ವ ಭೂಪಟದಲ್ಲಿ ಗುರುತಿಸಿಕೊಂಡಿದೆ ಎಂದು ಮುರುಘಾಮಠದ ಆಡಳಿತ ಮಂಡಳಿ ಸದಸ್ಯ ಡಾ.ಬಸವಕುಮಾರ ಸ್ವಾಮೀಜಿ ಹೇಳಿದರು. ರಾವಂದೂರು ಮಠದ ಶ್ರೀ ಮೋಕ್ಷಪತಿ ಸ್ವಾಮೀಜಿ ಮಾತನಾಡಿದರು. ಶ್ರೀ ಬಸವಮುರುಘೇಂದ್ರ ಸ್ವಾಮೀಜಿ, ಲಾತೂರಿನ ಕೋರಣೆ್ಯÃಶ್ವರ ಸ್ವಾಮೀಜಿ, ಬೇಲೂರಿನ ಶಿವ ಕುಮಾರ ಸ್ವಾಮೀಜಿ ಇದ್ದರು. ಜಮುರಾ ಕಲಾವಿದ ಉಮೇಶ್‌ಪತ್ತಾರ್ ಪ್ರರ‍್ಥಿಸಿದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net