ಚಿತ್ರದುರ್ಗದಲ್ಲಿ ಭಾನುವಾರ ರಥ ಸಪ್ತಮಿ ಅಂಗವಾಗಿ ವಿದ್ಯಾವಿಕಾಸ ವಿದ್ಯಾಸಂಸ್ಥೆ ಆವರಣದಲ್ಲಿ ಆಯೋಜಿಸಿದ್ದ ಸೂರ್ಯ ನಮಸ್ಕಾರ ಕಾರ್ಯಕ್ರಮದಲ್ಲಿ ಎಂಎಲ್‌ಸಿ ಕೆ.ಎಸ್. ನವೀನ್, ಎಲ್.ಎಸ್. ಚಿನ್ಮಯಾನಂದ, ರಾಜಣ್ಣ, ವೆಂಕಟೇಶ್, ಎಂ.ಜೆ. ಕೋಕಿಲಾ,ಪರುಶರಾಮ್, ವಿಮಲಾಕ್ಷಿ ಇತರರು ಇದ್ದರು.
ಚಿತ್ರದುರ್ಗ: ನಾವು ನಿತ್ಯ ಚೈತನ್ಯದಾಯಕವಾಗಿ, ಕ್ರಿಯಾಶೀಲವಾಗಿರಲು ೧೦೮ ಸೂರ್ಯ ನಮಸ್ಕಾರ ನೆರವಾಗಲಿದೆ ಎಂದು ಎಂಎಲ್‌ಸಿ ಕೆ.ಎಸ್.ನವೀನ್ ಹೇಳಿದರು.
ಜಿಲ್ಲಾ ಯೋಗ ಸಂಸ್ಥೆ, ರೋಟರಿ ಕ್ಲಬ್ ಚಿತ್ರದುರ್ಗ -ೆÆÃರ್ಟ್, ಇನ್ನರ್‌ವೀಲ್ ಕ್ಲಬ್ ಚಿತ್ರದುರ್ಗ -ÉÆÃರ್ಟ್ ಸಂಯುಕ್ತಾಶ್ರಯದಲ್ಲಿ ರಥಸಪ್ತಮಿ ಅಂಗವಾಗಿ ಭಾನುವಾರ ನಗರದ ವಿದ್ಯಾವಿಕಾಸ ವಿದ್ಯಾಸಂಸ್ಥೆ ಆವರಣದಲ್ಲಿ ಆಯೋಜಿಸಿದ್ದ ಸೂರ್ಯ ನಮಸ್ಕಾರ ಕಾರ್ಯಕ್ರಮದಲ್ಲಿ ಮಾತನಾಡಿದರು.
ಅಂಧಕಾರದಲ್ಲಿರುವ ಭೂಮಿಯ ಬಹುಭಾಗ ಬೆಳಕಿನೆಡೆಗೆ ಸಾಗುವ ಪ್ರಾರಂಭದ ದಿನವಿದು. ಇದಕ್ಕೆ ಸೂರ್ಯ ಜಯಂತಿ ಅಥವಾ ಸೂರ್ಯ ಹುಟ್ಟಿದ ದಿನವೆಂದೂ ಕರೆಯುತ್ತಾರೆ ಎಂದರು.
ದೇಶಾದಾದ್ಯAತ ೧೦೮ ಸೂರ್ಯ ನಮಸ್ಕಾರವನ್ನು ಸಾಮೂಹಿಕವಾಗಿ ಆಚರಿಸುವ ಪದ್ಧತಿ ರೂಢಿಯಲ್ಲಿದೆ. ಇದೊಂದು ಸೂರ್ಯ ಪ್ರಾರ್ಥನೆಯಾದರೂ ಸದೃಢ ಆರೋಗ್ಯಕ್ಕೆ ನೆರವಾಗಲಿದೆ. ಆರೋಗ್ಯಕರ ಸಮಾಜಕ್ಕೆ ಯೋಗ ಧರ್ಮವನ್ನು ದಾನ ಮಾಡುತ್ತಿರುವ ಯೋಗಾರ್ಚಾರ್ಯ ಎಲ್.ಎಸ್.ಚಿನ್ಮಯಾನಂದ ಅವರ ನಡೆ ಶ್ಲಾಘನೀಯ ಎಂದರು.
ಅಧ್ಯಕ್ಷತೆ ವಹಿಸಿದ್ದ ಚಿನ್ಮಯಾನಂದ ಮಾತನಾಡಿ, ಸೂರ್ಯ ದೇವರು ಸಕಲ ಜೀವರಾಶಿಗೆ ಚೇತನ ಶಕ್ತಿಯಾಗಿದ್ದಾನೆ. ಸೂರ್ಯೋ ದಯಕ್ಕಿಂತ ಮುಂಚಿತವಾಗಿ ಎದ್ದಾಗ ದೊರಕುವ ಆನಂದಕ್ಕೆ ಬೆಲೆ ಕಟ್ಟಲಾಗದು. ಚಿತ್ರದುರ್ಗದಲ್ಲಿ ಅನೇಕ ಯೋಗ ಶಾಖೆಗಳು ಸಂಘಟಿತವಾಗಬೇಕು ಎಂದರು.
ಶೃAಗೇರಿ ಮಠದ ಯೋಗ ಶಾಖೆಯ ರಾಜಣ್ಣ ಮಾತನಾಡಿ, ಯೋಗಕ್ಕೆ ಚಿತ್ರದುರ್ಗ ಜಿಲ್ಲೆ ಒಂದು ಭದ್ರ ಬುನಾದಿಯಂತಿದೆ. ಇದಕ್ಕೆ ಮಲ್ಲಾಡಿಹಳ್ಳಿಯ ಶ್ರೀ ರಾಘವೇಂದ್ರ ಸ್ವಾಮೀಜಿ ಬಹಳ ಕೊಡುಗೆ ನೀಡಿದ್ದಾರೆ. ಅದರ ಮುಂದುವರಿದ ಭಾಗವಾಗಿ ಚಿನ್ಮಯಾ ನಂದರು ಕೆಲಸ ಮಾಡುತ್ತಿದ್ದಾರೆ ಎಂದರು.
ವಿದ್ಯಾವಿಕಾಸ ಯೋಗ ಶಾಖೆ ತರಬೇತಿದಾರ ವೆಂಕಟೇಶ್ ಇದ್ದರು. ಎಂ.ಜೆ. ಕೋಕಿಲಾ ಪ್ರಾರ್ಥಿಸಿದರು. ಯೋಗ ಸಂಘಟಕ ಪರುಶರಾಮ್ ಸ್ವಾಗತಿಸಿ, ಶಿಕ್ಷಕಿ ವಿಮಲಾಕ್ಷಿ ವಂದಿಸಿದರು.
ಮುರುಘಾಮಠ:
ರಥಸಪ್ತಮಿ ಪ್ರಯುಕ್ತ ಮಠದ ಆವರಣದಲ್ಲಿ ಭಾನುವಾರ ಆಯುಷ್ ಯೋಗ ಶಿಕ್ಷಣ ಕೇಂದ್ರದಿAದ ಸೂರ್ಯ ನಮಸ್ಕಾರ ಕಾರ್ಯಕ್ರಮ ಆಯೋಜಿಸಲಾಗಿತ್ತು. ಮುರುಘಾಮಠದ ಸಾಧಕ ಶ್ರೀ ಮುರುಘೇಂದ್ರ ಸ್ವಾಮೀಜಿ ಮಾತನಾಡಿ, ಯೋಗ, ಧ್ಯಾನ ಆರೋಗ್ಯಕ್ಕೆ ಸಹಕಾರಿಯಾಗಿದೆ ಎಂದರು.
ಆಯುಷ್ ಯೋಗ ಕ್ಷೇಮ ಕೇಂದ್ರದ ಜಿಲ್ಲಾಧ್ಯಕ್ಷ ಬಿ.ಆರ್. ಪ್ರಸನ್ನಕುಮಾರ್ ಮಾತನಾಡಿದರು. ಎಂ.ಆರ್. ಮಂಜುನಾಥ್ ಸ್ವಾಗತಿಸಿ, ಎಲ್.ಎಸ್. ಬಸವರಾಜ್ ವಂದಿಸಿದರು. ಜಿ. ಶಿವಕುಮಾರ್, ಶಿವಯೋಗಿ ಜಿ. ವೀರಣ್ಣ, ಲೋಕೇಶ್, ರಾಮಾಂಜನೇಯ ಇತರರು ಇದ್ದರು.
ಶ್ರೀ ಪ್ರಸನ್ನ ವೆಂಕಟೇಶ್ವರ ಸ್ವಾಮಿ ದೇವಾಲಯ:
ಭಾರತೀಯ ಯೋಗ ಶಿಕ್ಷಣ ಸಂಸ್ಥೆಯಿAದ ಚಿತ್ರದುರ್ಗದ ಶ್ರೀಪ್ರಸನ್ನ ವೆಂಕಟೇಶ್ವರಸ್ವಾಮಿ ದೇವಸ್ಥಾನ ಆವರಣದಲ್ಲಿ ರಥ ಸಪ್ತಮಿ ಅಂಗವಾಗಿ ಭಾನುವಾರ ಸೂರ್ಯದೇವರ ಆರಾಧನೆ ಕಾರ್ಯಕ್ರಮ ಆಯೋಜಿಸಲಾಗಿತ್ತು. ಯೋಗ ಪ್ರಚಾರಕ ರವಿ ಕೆ. ಅಂಬೇಕರ್ ಮಾತನಾಡಿದರು. ಈ ವೇಳೆ ೧೦೮ ಸೂರ್ಯ ನಮಸ್ಕಾರ ಪ್ರದರ್ಶನ ನೀಡಿದ ಯೋಗ ಸಾಧಕರಿಗೆ ಸಂಸ್ಥೆ ವತಿಯಿಂದ ಅಭಿನಂದನಾಪತ್ರ ಪ್ರದಾನ ಮಾಡಲಾಯಿತು.