ಚಿತ್ರದುರ್ಗದಲ್ಲಿ ಕೆಎಂಇಆರ್‌ಸಿ ಯೋಜನೆ ಕಾಮಗಾರಿಗಳ ಅನುಷ್ಠಾನದ ಪ್ರಗತಿ ಪರಿಶೀಲನೆ ಸಭೆಯಲ್ಲಿ ನಿಗಮದ ವ್ಯವಸ್ಥಾಪಕ ನಿರ್ದೇಶಕ ಸಂಜಯ್ ಎಸ್. ಬಿಜ್ಜೂರ್, ಡಿಸಿ ಟಿ. ವೆಂಕಟೇಶ್, ಜಿಪಂ ಸಿಇಒ ಡಾ.ಎಸ್. ಆಕಾಶ್ ಇತರ ಅಽಕಾರಿಗಳು ಇದ್ದರು.
ಚಿತ್ರದುರ್ಗ: ಜಿಲ್ಲೆಯ ಗಣಿಬಾಽತ ತಾಲೂಕುಗಳ ವ್ಯಾಪ್ತಿಯ ಸರ್ಕಾರಿ ಪ್ರಾಥಮಿಕ ಮತ್ತು ಪ್ರೌಢಶಾಲೆಗಳ ವಿದ್ಯಾರ್ಥಿಗಳಿಗೆ ಪೂರಕ ಪೌಷ್ಠಿಕ ಆಹಾರ ವಿತರಣೆ ಯೋಜನೆ ಸಮರ್ಪಕ ಅನುಷ್ಠಾನಕ್ಕೆ ಅಗತ್ಯ ಕ್ರಮ ವಹಿಸಬೇಕು ಎಂದು ಕರ್ನಾಟಕ ಗಣಿ ಪರಿಸರ ಪುನಶ್ಚೇತನ ನಿಗಮದ ವ್ಯವಸ್ಥಾಪಕ ನಿರ್ದೇಶಕ ಡಾ. ಸಂಜಯ್ ಎಸ್. ಬಿಜ್ಜೂರ್ ಹೇಳಿದರು.
ಕೆಎಂಇಆರ್‌ಸಿ ನಿಗಮದ ಸಿಇಪಿಎಂಐಝೆಡ್ ಯೋಜನೆ ಕುರಿತಂತೆ ಡಿಸಿ ಕಚೇರಿಯಲ್ಲಿ ಸೋಮವಾರ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಾತನಾಡಿದರು.
ಕಳೆದ ಒಂದು ತಿಂಗಳಿAದ ಪೂರಕ ಪೌಷ್ಟಿಕ ಆಹಾರ ವಿತರಣೆ ಪ್ರಾರಂಭವಾಗಿದೆ. ಸೂಕ್ತ ಮೇಲ್ವಿಚಾರಣೆ ಮೂಲಕ ಲೋಪದೋಷಗಳಿಲ್ಲದಂತೆ ಯೋಜನೆ ಅನುಷ್ಠಾನಗೊಳಿಸಬೇಕು ಎಂದು ಶಿಕ್ಷಣ ಹಾಗೂ ಪಿಎಂ ಪೋಷಣೆ ಇಲಾಖೆ ಅಽಕಾರಿಗಳಿಗೆ ತಾಕೀತು ಮಾಡಿದರು.
ಗಣಿಬಾಽತ ಪ್ರದೇಶಗಳ ವ್ಯಾಪ್ತಿ ಪ್ರದೇಶದ ಜನರ ಜೀವನೋಪಾಯಕ್ಕಾಗಿ ಸುಧಾರಣೆ ಕಾರ್ಯಕ್ರಮಗಳ ಪ್ರಸ್ತಾವನೆ ಸಲ್ಲಿಸಬೇಕು. ಈ ನಿಟ್ಟಿನಲ್ಲಿ ಜಿ ಲ್ಲೆಯಲ್ಲಿ ೩೭ ಪ್ರಸ್ತಾವನೆಗಳು ಬಾಕಿ ಇವೆ. ಕೆಲವು ಯೋಜನೆಗಳು ಇತ್ತೀಚೆಗೆ ಮಂಜೂರಾಗಿವೆ. ಶೀಘ್ರ ಪ್ರಸ್ತಾವನೆ ಸಲ್ಲಿಸಿ, ಅನುಮೋದನೆ ನಂತರ ವಿಸುöತ ಯೋಜನಾ ವರದಿ ತಯಾರಿಸಬೇಕು ಎಂದರು.
ಜಿಲ್ಲೆಯ ವಿದ್ಯಾರ್ಥಿ ನಿಲಯಗಳ ದುರಸ್ತಿಗೆ ಕಳೆದ ತಿಂಗಳು ಅನುಮೋದನೆ ನೀಡಲಾಗಿದೆ. ಸಮಾಜ ಕಲ್ಯಾಣ, ಹಿಂದುಳಿದ ವರ್ಗಗಳ ಕಲ್ಯಾಣ, ಅಲ್ಪಸಂಖ್ಯಾತರ ಕಲ್ಯಾಣ ಹಾಗೂ ಪರಿಶಿಷ್ಟ ಪಂಗಡಗಳ ಕಲ್ಯಾಣ ಇಲಾಖೆಗಳ ಅಽಕಾರಿಗಳು ವಿದ್ಯಾರ್ಥಿ ನಿಲಯಗಳನ್ನು ವಿದ್ಯಾರ್ಥಿಗಳಿಗೆ ಅಗತ್ಯಕ್ಕೆ ತಕ್ಕಂತೆ ಕಾಳಜಿವಹಿಸಿ ಡಿಪಿಆರ್ ಸಿದ್ಧಪಡಿಸಬೇಕು. ಕಾಲೇಜು ಶಿಕ್ಷಣ ಇಲಾಖೆ ಯೋಜನೆ ಮಂಜೂರಾಗಿ ೧೦ ತಿಂಗಳಾದರೂ ಡಿಪಿಆರ್ ಸಲ್ಲಿಸಿಲ್ಲ.
ಆರೋಗ್ಯ ಉಪಕೇಂದ್ರಕ್ಕೆ ೨ ವರ್ಷ?
ಜಿಲ್ಲೆ ಗಣಿಬಾಽತ ವಿವಿಧ ತಾಲೂಕುಗಳ ವ್ಯಾಪ್ತಿಯಲ್ಲಿ ಆರೋಗ್ಯ ಉಪಕೇಂದ್ರ ನಿರ್ಮಾಣಕ್ಕೆ ಅನುದಾನ ಮಂಜೂರು ಮಾಡಿದ್ದು, ೨ ವರ್ಷಗಳಾದರೂ ನಿರ್ಮಾಣವಾಗಿಲ್ಲ. ಶೀಘ್ರ ಉಪಕೇಂದ್ರಗಳನ್ನು ನಿರ್ಮಾಣವಾಗಬೇಕು. ವಿಳಂಬವಾದರೆ ಅನುದಾನ ಹಿಂಪಡೆದು, ಅ ಗತ್ಯವಿರುವೆಡೆ ಒದಗಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಸಿದರು.
ಹೊಳಲ್ಕೆರೆ ತಾಲೂಕಿನಲ್ಲಿ ೫ ಆರೋಗ್ಯ ಉಪಕೇಂದ್ರ, ೧ಕ್ವಾರ್ಟಸ್, ಚಿತ್ರದುರ್ಗ ೧೦-೧೬, ಹೊಸದುರ್ಗ ೯ -೨೩ ಕ್ವಾರ್ಟಸ್ ಹಾಗೂ ಮೊಳಕಾಲ್ಮೂರು ತಾಲೂಕಿನಲ್ಲಿ ೧ ಆರೋಗ್ಯ ಉಪಕೇಂದ್ರ ನಿರ್ಮಾಣ ಮಾಡಲಾಗುತ್ತಿದ್ದು, ಶೀಘ್ರ ಪೂರ್ಣಗೊಳಿಸಲಾಗುವುದು ಎಂದು ಡಿಎಚ್‌ಒ ಡಾ.ಜಿ.ಪಿ. ರೇಣುಪ್ರಸಾದ್ ಪ್ರತಿಕ್ರಿಯಿಸಿದರು.
ಶಾಲಾ ಕಟ್ಟಡಗಳ ನಿರ್ಮಾಣ ಶೀಘ್ರ ಪೂರ್ಣಗೊಳಿಸಬೇಕು. ಡಿಪಿಆರ್‌ನಂತೆಯೇ ಲೋಕೋಪಯೋಗಿ ಇಲಾಖೆ ಕಾಮಗಾರಿ ಕೈ ಗೊಳ್ಳಬೇಕು. ತುರ್ತು ಕಾಮಗಾರಿ ಅಗತ್ಯವಿದ್ದರೆ ಡಿಡಿಪಿಐ ಹಾಗೂ ಲೋಕೋಪಯೋಗಿ ಇಲಾಖೆಯ ಅನುಮೋದನೆ ಪಡೆದು ಕೈಗೊಳ್ಳಬೇಕೆಂಬ ಷರತ್ತನ್ನು ಗುತ್ತಿಗೆದಾರರಿಗೆ ವಿಽಸಬೇಕೆಂದು ಸಂಜಯ ಬಿಜ್ಜೂರ್ ಹೇಳಿದರು.
ವಸತಿ ಯೋಜನೆ: ಕೆಎಂಇಆರ್‌ಸಿ ಯೋಜನೆಯಡಿ ವಸತಿ ರಹಿತ -Àಲಾನುಭವಿಗಳಿಗೆ ಮನೆ ಮಂಜೂರಾತಿಗಾಗಿ ಗ್ರಾಮ ಸಭೆ ಅನುಮೋದನೆ ಪಡೆದು ಜಿಲ್ಲಾ ಮಟ್ಟದ ಸಮಿತಿಗೆ ವರದಿ ಸಲ್ಲಿಸಬೇಕು. ಕಳೆದ ೨೦೧೮ರ ವಸತಿ ರಹಿತರ ಸಮೀಕ್ಷಾ ವರದಿ ಆಧಾರದೊಂದಿಗೆ -Àಲಾನುಭವಿಗಳ ನ್ನು ಆಯ್ಕೆ ಮಾಡಬೇಕು.
ಮೊದಲ ಹಂತದಲ್ಲಿ ೫ ಕಿ.ಮೀ.ವ್ಯಾಪ್ತಿಯೊಳಗಿನ ಎಲ್ಲ ಗ್ರಾಮಗಳಲ್ಲಿ ಗ್ರಾಮ ಸಭೆ ನಡೆಸಿ ವರದಿ ಸಲ್ಲಿಸಬೇಕು. ಈ ಯೋಜನೆಯಡಿ ಗುರಿ ನಿಗದಿಪಡಿಸಿಲ್ಲ, ಹೀಗಾಗಿ ಅರ್ಹ ಎಲ್ಲ -Àಲಾನುಭವಗಳಿಗೂ ವಸತಿ ಮಂಜೂರಾತಿ ದೊರೆಯಲಿದೆ. ಮಾರ್ಗಸೂಚಿಗಳನ್ನು ಕೆಎಂಆರ್‌ಸಿ ವೆಬ್‌ಸೈಟ್‌ನಲ್ಲಿ ಗ್ರಾಪಂ ಪಿಡಿಒಗಳು ಪರಿಶೀಲಿಸಿ ಕ್ರಮ ಕೈಗೊಳ್ಳಬೇಕೆಂದು ವ್ಯವಸ್ಥಾಪಕ ನಿರ್ದೇಶಕರು ನಿರ್ದೇಶಿಸಿದರು.
ಡಿಸಿ ಟಿ. ವೆಂಕಟೇಶ್, ಜಿಪಂ ಸಿಇಒ ಡಾ.ಎಸ್. ಆಕಾಶ್, ಸಿಪಿಒ ಸಿ.ಎಸ್. ಗಾಯತ್ರಿ, ಡಿಸಿಎಫ್ ಗೋಪ್ಯನಾಯ್ಕ್, ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಉಪನಿರ್ದೇಶಕ ಡಾ. ಮಹೇಶ್ ಮತ್ತಿತರ ಅಽಕಾರಿಗಳು ಇದ್ದರು.