ಇ-ಸ್ವತ್ತು ಅರ್ಜಿ ವಿಲೇಗೆ ವೇಳಾಪಟ್ಟಿ

ನಗರಸಭೆಯಲ್ಲಿ ಪ್ರತ್ಯೇಕ ಸಹಾಯ ಕೇಂದ್ರ
ಸಾರ್ವಜನಿಕ ಕುಂದುಕೊರತೆ ಸಭೆಯನ್ನು ಡಿಸಿ ಎಸ್. ರಮ್ಯಾ ಉದ್ಘಾಟಿಸಿದರು. ಆಯುಕ್ತೆ ಎಸ್. ಲಕ್ಷಿ÷್ಮÃ ಇದ್ದರು.
ಸಾರ್ವಜನಿಕ ಕುಂದುಕೊರತೆ ಸಭೆಯನ್ನು ಡಿಸಿ ಎಸ್. ರಮ್ಯಾ ಉದ್ಘಾಟಿಸಿದರು. ಆಯುಕ್ತೆ ಎಸ್. ಲಕ್ಷಿ÷್ಮÃ ಇದ್ದರು.
Published on: 

ಚಿತ್ರದುರ್ಗ: ನಗರ ವ್ಯಾಪ್ತಿಯಲ್ಲಿ ಇ-ಖಾತಾ ಹಾಗೂ ಇ-ಸ್ವತ್ತು ಅರ್ಜಿಗಳ ಶೀಘ್ರ ವಿಲೇವಾರಿಗೆ ವಾರ್ಡ್ವಾರು ವೇಳಾಪಟ್ಟಿ ನಿಗದಿಪಡಿಸಲಾಗುವುದು ಎಂದು ಜಿಲ್ಲಾಽಕಾರಿ ಎಸ್. ರಮ್ಯಾ ಹೇಳಿದರು.

ನಗರದ ಏಕನಾಥೇಶ್ವರಿ ಪಾದಗುಡಿ ಆವರಣದಲ್ಲಿ ನಗರಸಭೆ ಆಡಳಿತ ಶನಿವಾರ ಆಯೋಜಿಸಿದ್ದ ೧, ೨, ೩ ಹಾಗೂ ೪ನೇ ವಾರ್ಡ್ಗಳ ನಾಗರಿಕರ ಕುಂದುಕೊರತೆ ಸಭೆ ಉದ್ಘಾಟಿಸಿ ಮಾತನಾಡಿದ ಅವರು, ಮುಂದಿನ ವಾರದಿಂದ ಜಾರಿಯಾಗಲಿರುವ ಇ-ಸ್ವತ್ತು ಅಭಿಯಾನವನ್ನು ಸಾರ್ವಜನಿಕರಿಗೆ ತೊಂದರೆಯಾಗದAತೆ ಯಶಸ್ವಿಯಾಗಿ ಅನುಷ್ಠಾನಗೊಳಿಸಲಾಗುವುದು ಎಂದು ನೀಡಿದರು.

ಸಾರ್ವಜನಿಕರ ನೆರವಿಗಾಗಿ ನಗರಸಭೆ ಕಚೇರಿಯಲ್ಲಿ ಪ್ರತ್ಯೇಕ ಸಹಾಯ ಕೇಂದ್ರ ಆರಂಭಿಸಲಾಗುವುದು . ಸಿಬ್ಬಂದಿ ಕೊರತೆ ಕಾರಣಕ್ಕೆ ಎಲ್ಲ ವಾರ್ಡ್ಗಳ ನಾಗರಿಕರ ಅರ್ಜಿ ಒಟ್ಟಿಗೆ ಸ್ವೀಕರಿಸಿದರೆ, ವಿಲೇವಾರಿ ವಿಳಂಬವಾಗುತ್ತದೆ. ಇದನ್ನು ತಪ್ಪಿಸಲು ಇಂತಿಷ್ಟು ವಾರ್ಡ್ಗೆ ನಿಗದಿತ ದಿನಾಂಕ ಗೊತ್ತುಪಡಿಸಿ ವೇಳಾಪಟ್ಟಿ ಪ್ರಕಟಿಸಲಾಗುವುದು. ಅರ್ಜಿ ಸಲ್ಲಿಸಲು ಬೇಕಾದ ಅಗತ್ಯ ದಾಖಲೆಗಳ ಪಟ್ಟಿಯನ್ನೂ ಪ್ರದರ್ಶಿಸಲಾಗುವುದು. ಸಾರ್ವಜನಿಕರು ಸಹಾಯ ಕೇಂದ್ರದ ಮೂಲಕ ತಮ್ಮ ದಾಖಲೆ ಪರಿಶೀಲಿಸಿಕೊಂಡು ಅರ್ಜಿ ಸಲ್ಲಿಸಬಹುದು ಎಂದರು. ನಗರಸಭೆ ಪರಿಸರ ಅಭಿಯಂತರ ಎ.ಜಾ-Àರ್ ಮತ್ತಿತರರು ಇದ್ದರು

ಸ್ವಚ್ಛತೆಗೆ ಸಹಕರಿಸಿ

ನಗರದ ಸ್ವಚ್ಛತೆಗೆ, ನಗರಸಭೆಯೊಂದಿಗೆ ಸಾರ್ವಜನಿಕರೂ ಕೈಜೋಡಿಸುವ ಮೂಲಕ ನಾಗರಿಕ ಪ್ರಜ್ಞೆ ಮೆರೆಯಬೇಕು. ನಗರದ ಹಲವೆಡೆ ಕಸ ಸಂಗ್ರಹಣೆಗೆ ನಗರಸಭೆಯಿಂದ ವಿಶೇಷವಾಗಿ ಮೆಟಲ್ ಬಾಟಲ್ ಮಾದರಿ ತೊಟ್ಟಿ ಅಳವಡಿಸಲಾಗಿದೆ. ಆದರೆ, ಜನರು ನೀರಿನ ಬಾಟಲಿ, ಚಾಕೊಲೇಟ್, ಚಿಪ್ಸ್ ಕವರ್‌ಗಳನ್ನು ರಸ್ತೆ ಬದಿಗೆ ಎಸೆಯುತ್ತಿದ್ದು, ಅವು ಚರಂಡಿ ಸೇರಿ ನೀರು ಸರಾಗವಾಗಿ ಹರಿಯಲು ಅಡ್ಡಿಯಾಗುತ್ತಿದೆ. ಇದರಿಂದ ಪೌರ ಕಾರ್ಮಿಕರಿಗೂ ತೊಂದರೆಯಾಗುತ್ತದೆ. ಈ ಬಗ್ಗೆ ಸಾರ್ವಜನಿಕರು ಎಚ್ಚರ ವಹಿಸಬೇಕೆಂದು ಜಿಲ್ಲಾಽಕಾರಿ ಹೇಳಿದರು.

ನಗರದಲ್ಲಿ ಕುಡಿಯುವ ನೀರಿನ ಪೈಪ್‌ಲೈನ್ ಸೋರಿಕೆ ಸಹಿತ ಹಲವು ಸಮಸ್ಯೆಗಳ ಕುರಿತು ಆಯುಕ್ತರು ಖುದ್ದು ಪರಿಶೀಲಿಸಿದ್ದು, ಶೀಘ್ರದಲ್ಲೇ ದುರಸ್ತಿ ಕಾರ್ಯ ನಡೆಯಲಿದೆ. ಕುಡಿಯುವ ನೀರು ಮತ್ತು ನೈರ್ಮಲ್ಯಕ್ಕೆ ಮೊದಲ ಆದ್ಯತೆ ನೀಡುವಂತೆ ಅಽಕಾರಿಗಳಿಗೆ ಸೂಚಿಸಿದ್ದೇನೆ. ನಗರದ ಭೌಗೋಳಿಕ ಏರಿಳಿತಗಳಿಂದಾಗಿ ಒಳಚರಂಡಿ ಬ್ಲಾಕೇಜ್ ಸಮಸ್ಯೆ ಹೆಚ್ಚಾಗಿದೆ. ಮಳೆಗಾಲಕ್ಕೂ ಮುನ್ನವೇ ಯುಜಿಡಿ ನಿರ್ವಹಣೆ ಕಾಮಗಾರಿ ಚುರುಕುಗೊಳಿಸಿ ಸಮಸ್ಯೆ ಬಗೆಹರಿಸಲು ಅಽಕಾರಿಗಳಿಗೆ ನಿರ್ದೇಶಿಸಲಾಗಿದೆ ಎಂದರು.

ವಾರ್ಡ್ಗಳಲ್ಲಿ ಸ್ವಚ್ಛತಾ ಸಿಬ್ಬಂದಿ ಕೊರತೆ ಕುರಿತ ಸಾರ್ವಜನಿಕರ ದೂರಿಗೆ ಪ್ರತಿಕ್ರಿಯಿಸಿ, ಖಾಲಿ ಇರುವ ಕಾಯಂ ಪೌರಕಾರ್ಮಿಕರ ಹುದ್ದೆಗಳಿಗೆ ತಾತ್ಕಾಲಿಕವಾಗಿ ಹೊರಗುತ್ತಿಗೆ ಆಧಾರದ ಮೇಲೆ ನೇಮಿಸಿ ಸ್ವಚ್ಛತೆಗೆ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದರು.

------

ಮಧ್ಯವರ್ತಿಗಳ ಆಶ್ರಯಿಸಬೇಡಿ

ಸಾರ್ವಜನಿಕರು ಇ-ಸ್ವತ್ತು ಸೇರಿ ವಿವಿಧ ದಾಖಲೆಗಳಿಗೆ ಮಧ್ಯವರ್ತಿಗಳನ್ನು ಆಶ್ರಯಿಸುವ ಅಗತ್ಯವಿಲ್ಲ. ಅಗತ್ಯ ದಾಖಲೆಗಳೊಂದಿಗೆ ನೇರ ಅರ್ಜಿ ಸಲ್ಲಿಸಿದರೆ ೫ ದಿನಗಳಲ್ಲಿ ಮನೆ ಬಾಗಿಲಿಗೆ ಇ ಸ್ವತ್ತು ತಲುಪಿಸುವ ವ್ಯವಸ್ಥೆ ಮಾಡಲಾಗುವುದು ಎಂದು ಪೌರಾಯುಕ್ತೆ ಎಸ್.ಲಕ್ಷಿ÷್ಮÃ ತಿಳಿಸಿದರು. ನಿತ್ಯ ನಗರಸಭೆಗೆ ನಾಗರಿಕರ ಅಲೆದಾಟ ತಪ್ಪಿಸಲು ವಾರ್ಡ್ ಮಟ್ಟದಲ್ಲೇ ಸಭೆ ನಡೆಸಿ ಸಮಸ್ಯೆ ಆಲಿಸಲಾಗುತ್ತಿದೆ. ಇಲ್ಲಿ ದಾಖಲಾಗುವ ದೂರುಗಳನ್ನು ಮುಂದಿನ ಶುಕ್ರವಾರದೊಳಗೆ ಬಗೆಹರಿಸಲು ಪ್ರಾಮಾಣಿಕ ಪ್ರಯತ್ನ ಮಾಡಲಾಗುವುದು. ಇ-ಖಾತಾ ಆಂದೋಲನದಡಿ ಸಾರ್ವಜನಿಕರಿಗೆ ಸುಲಭವಾಗಿ ಇ-ಸ್ವತ್ತು ಸಿಗುವಂತಾಗಲು ಪ್ರತ್ಯೇಕ ಹೆಲ್ಪ್ಡೆಸ್ಕ್ನಲ್ಲಿ ಮುಂದಿನ ಗುರುವಾರದಿಂದ ವಾರ್ಡ್ವಾರು ಅರ್ಜಿ ಸ್ವೀಕರಿಸಲಾಗುವುದು ಎಂದರು.

-----

ಕಡತಗಳಿಗೆ ಧೂಳು?

ನಗರಸಭೆಯಲ್ಲಿ ಸಾರ್ವಜನಿಕರ ಕೆಲಸಗಳು ತ್ವರಿತವಾಗಿ ಆಗುತ್ತಿಲ್ಲ. ಕಚೇರಿ ಟೇಬಲ್‌ಗಳಲ್ಲಿ ಕಡತಗಳು ತಿಂಗಳಾನುಗಟ್ಟಲೆ ಧೂಳು ಹಿಡಿಯುತ್ತಿವೆ. ಅಽಕಾರಿಗಳು ಮತ್ತು ಸಿಬ್ಬಂದಿ ಸಾರ್ವಜನಿಕರಿಗೆ ಸರಿಯಾಗಿ ಸ್ಪಂದಿಸಿ ಆಡಳಿತ ಚುರುಕುಗೊಳಿಸಬೇಕು ಎಂದು ನಗರಸಭೆ ಮಾಜಿ ಅಧ್ಯಕ್ಷ ಎಚ್.ಟಿ. ಕೃಷ್ಣಮೂರ್ತಿ ಒತ್ತಾಯಿಸಿದರು.

ನಗರಕ್ಕೆ ಸೂಳೆಕೆರೆಯಿಂದ ಪೂರೈಕೆಯಾಗುತ್ತಿರುವ ನೀರಿನ ಪ್ರಮಾಣ ದಿನೇದಿನೆ ಕಡಿಮೆಯಾಗುತ್ತಿದೆ. ಮುಂದಿನ ದಿನಗಳಲ್ಲಿ ನಗರದಲ್ಲಿ ತೀವ್ರ ಕುಡಿಯುವ ನೀರಿನ ಸಮಸ್ಯೆ ಎದುರಾಗುವ ಆತಂಕವಿದೆ. ಇದಕ್ಕೆ ಶಾಶ್ವತ ಪರಿಹಾರ ಕಂಡುಕೊಳ್ಳಲು ಮಾರಿಕಣಿವೆ ಜಲಾಶಯದಿಂದ ೨ನೇ ಹಂತದ ಕುಡಿಯುವ ನೀರಿನ ಯೋಜನೆ ಜಾರಿಗೊಳಿಸುವುದು ಅತ್ಯಗತ್ಯ ಎಂದು ಸಲಹೆ ನೀಡಿದರು.

೨-೩ ವರ್ಷಗಳಿಂದ ೮೪ ಪೌರಕಾರ್ಮಿಕರ ನೇಮಕಾತಿ ಕಡತ ದಾವಣಗೆರೆ ಮತ್ತು ಚಿತ್ರದುರ್ಗ ಕಚೇರಿಗಳ ನಡುವೆ ಅಲೆದಾಡುತ್ತಿದೆ. ಜಿಲ್ಲಾಽಕಾರಿಗಳು ತಕ್ಷಣವೇ ಈ ಕಡತಕ್ಕೆ ಅನುಮೋದನೆ ನೀಡಬೇಕು ಎಂದರು.