ಸೆಮಿಕಂಡಕ್ಟರ್ ಕ್ಷೇತ್ರಗಳಿಗೆ ಹೂಡಿಕೆಯಾಗಲಿದೆ ಭರಪೂರ ಬಂಡವಾಳ

 ಚಿತ್ರದುರ್ಗದ ಎಸ್‌ಜೆಎಂ ತಾಂತ್ರಿಕ ಮಹಾವಿದ್ಯಾಲಯದಲ್ಲಿ ಬುಧವಾರ ಆಯೋಜಿಸಿದ್ದ ಸೆಮಿಕಂಡಕ್ಟರ್ ಕ್ಷೇತ್ರದಲ್ಲಿ ಎಡ್‌ಟೆಕ್ ಪ್ಲಾಟ್ -Áರಂ ಮೂಲಕ ಚಿಪ್ ವಿನ್ಯಾಸ ಮತ್ತು ಅಭಿವೃದ್ಧಿ ವಿಷಯದ ಕುರಿತ ಆನ್‌ಲೈನ್ ತರಬೇತಿ ಶಿಬಿರದಲ್ಲಿ ಪ್ರಾಚಾರ್ಯ ಡಾ.ಪಿ.ಬಿ. ಭರತ್, ಎಸ್. ವಿಶ್ವನಾಥ ನಾಯಕ್, ಕಾಲೇಜಿನ ವಿವಿಧ ವಿಭಾಗಗಳ ಮುಖ್ಯಸ್ಥರು, ಕಾರ್ಯಕ್ರಮ ಸಂಚಾಲಕರು ಹಾಗೂ ವಿದ್ಯಾರ್ಥಿಗಳು ಇದ್ದರು.
ಚಿತ್ರದುರ್ಗದ ಎಸ್‌ಜೆಎಂ ತಾಂತ್ರಿಕ ಮಹಾವಿದ್ಯಾಲಯದಲ್ಲಿ ಬುಧವಾರ ಆಯೋಜಿಸಿದ್ದ ಸೆಮಿಕಂಡಕ್ಟರ್ ಕ್ಷೇತ್ರದಲ್ಲಿ ಎಡ್‌ಟೆಕ್ ಪ್ಲಾಟ್ -Áರಂ ಮೂಲಕ ಚಿಪ್ ವಿನ್ಯಾಸ ಮತ್ತು ಅಭಿವೃದ್ಧಿ ವಿಷಯದ ಕುರಿತ ಆನ್‌ಲೈನ್ ತರಬೇತಿ ಶಿಬಿರದಲ್ಲಿ ಪ್ರಾಚಾರ್ಯ ಡಾ.ಪಿ.ಬಿ. ಭರತ್, ಎಸ್. ವಿಶ್ವನಾಥ ನಾಯಕ್, ಕಾಲೇಜಿನ ವಿವಿಧ ವಿಭಾಗಗಳ ಮುಖ್ಯಸ್ಥರು, ಕಾರ್ಯಕ್ರಮ ಸಂಚಾಲಕರು ಹಾಗೂ ವಿದ್ಯಾರ್ಥಿಗಳು ಇದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ಪ್ರಾಚಾರ್ಯ ಡಾ.ಪಿ.ಬಿ. ಭರತ್ ಅನಿಸಿಕೆ|
  • ಎಸ್‌ಜೆಎಂಐಟಿಯಲ್ಲಿ ಚಿಪ್ ವಿನ್ಯಾಸ, ಅಭಿವೃದ್ಧಿ ಕುರಿತು ೯೦ ಗಂಟೆಗಳ ಆನ್‌ಲೈನ್ ತರಬೇತಿ
  • ಸಾಕಷ್ಟು ಬಂಡವಾಳ ಹೂಡಿಕೆ

ಚಿತ್ರದುರ್ಗ:

ಮುಂಬರುವ ದಿನಗಳಲ್ಲಿ ಇಂಡಿಯಾ ಸೆಮಿಕಂಡಕ್ಟರ್ ಮಿಷನ್-೨.೦ ಅನುಷ್ಠಾನಗೊಳ್ಳಲಿದೆ. ಇದರಿಂದ ಸೆಮಿ ಕಂಡಕ್ಟರ್ ಕ್ಷೇತ್ರದಲ್ಲಿ ಸಾಕಷ್ಟು ಬಂಡವಾಳ ಹೂಡಿಕೆಯಾಗಲಿದೆ ಎಂದು ಎಸ್‌ಜೆಎಂಐಟಿ ಪ್ರಾಚಾರ್ಯ ಡಾ.ಪಿ.ಬಿ. ಭರತ್ ಹೇಳಿದರು.

ಕೇಂದ್ರದ ರಾಷ್ಟಿçÃಯ ಎಲೆಕ್ಟಾçನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಸಂಸ್ಥೆ ಸಹಯೋಗದಲ್ಲಿ ಬುಧವಾರ ನಗರದ ಎಸ್‌ಜೆಎಂ ತಾಂತ್ರಿಕ ಮಹಾವಿದ್ಯಾಲಯದಲ್ಲಿ ಆಯೋಜಿಸಿದ್ದ ಸೆಮಿಕಂಡಕ್ಟರ್ ಕ್ಷೇತ್ರದಲ್ಲಿ ಎಡ್‌ಟೆಕ್ ಪ್ಲಾಟ್ -Áರಂ ಮೂಲಕ ಚಿಪ್ ವಿನ್ಯಾಸ ಮತ್ತು ಅಭಿವೃದ್ಧಿ ಕುರಿತು ೯೦ ಗಂಟೆಗಳ ಆನ್‌ಲೈನ್ ತರಬೇತಿ ಶಿಬಿರ ಉದ್ಘಾಟಿಸಿ ಅವರು ಮಾತನಾಡಿದರು.
ಈ ಕ್ಷೇತ್ರದಲ್ಲಿ ಸಾಕಷ್ಟು ಬಂಡವಾಳ ಹೂಡಿಕೆಯಿಂದ ಎಲೆಕ್ಟಾçನಿಕ್ಸ್ ಪದವೀಧರರಿಗೆ ಹೆಚ್ಚಿನ ಅವಕಾಶಗಳು ದೊರೆಯಲಿವೆ. ವಿದ್ಯಾರ್ಥಿಗಳು ಲಭ್ಯ ಅವಕಾಶಗಳನ್ನು ಪಡೆದುಕೊಳ್ಳಲು ಅವಶ್ಯವಿರುವÀ ತಂತ್ರಜ್ಞಾನ, ಕೌಶಲಗಳನ್ನು ಕಲಿತು ಸಿದ್ದರಾಗಬೇಕು. ಈ ನಿಟ್ಟಿನಲ್ಲಿ ಕಾಲೇಜಿನಿಂದ ಉಪನ್ಯಾಸ, ತರಬೇತಿ, ಕಾರ್ಯಾಗಾರಗಳನ್ನು ಆಯೋಜಿಸಲಾಗುತ್ತಿದ್ದು, ವಿದ್ಯಾರ್ಥಿಗಳು ಸಕ್ರಿಯವಾಗಿ ಭಾಗವಹಿಸಬೇಕು ಎಂದರು.
ಸAಪನ್ಮೂಲ ವ್ಯಕ್ತಿ, ರಾಷ್ಟಿçÃಯ ಎಲೆಕ್ಟಾçನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಸಂಸ್ಥೆಯ ಅಕಾಡೆಮಿಕ್ ಎಸ್. ವಿಶ್ವನಾಥ ನಾಯಕ್ ಮಾತನಾಡಿ, ಶಿಬಿರದ ಮುಖ್ಯ ಉದ್ದೇಶ ವಿದ್ಯಾರ್ಥಿಗಳಿಗೆ ಸೆಮಿಕಂಡಕ್ಟರ್ ತಂತ್ರಜ್ಞಾನ ಮತ್ತು ಚಿಪ್ ವಿನ್ಯಾಸ ಕ್ಷೇತ್ರದಲ್ಲಿ ಕೈಗಾರಿಕಾ ಅವಶ್ಯಕತೆಗೆ ಅನುಗುಣವಾದ ಜ್ಞಾನ ಹಾಗೂ ಪ್ರಾಯೋಗಿಕ ಅನುಭವವನ್ನು ನೀಡುವುದಾಗಿದೆ.

ಕಾಲೇಜಿನ ವಿವಿಧ ವಿಭಾಗಗಳ ಮುಖ್ಯಸ್ಥರಾದ ಡಾ.ಕೆ.ಬಿ. ಸಿದ್ದೇಶ್, ಡಾ.ಬಿ.ಜಿ. ಕುಮಾರ ಸ್ವಾಮಿ,ಡಾ.ಕೆ.ಆರ್. ಕÊಷ್ಣಾರೆಡ್ಡಿ, ಡೀನ್ ಅಕಾಡೆಮಿಕ್ ಡಾ.ಎಸ್. ಚೇತನ್, ಕಾರ್ಯಕ್ರಮ ಸಂಚಾಲಕರಾದ ಪ್ರೊ.ಟಿ. ಸುಧಾ, ಪ್ರೊ.ಜಿ.ಆರ್. ನಂದಿನಿ, ಪ್ರೊ.ಬಿ ಅನುಷಾ ಇದ್ದರು.

ಪಿ.ಕೆ. ಪ್ರಣತಿ ಪ್ರಾರ್ಥಿಸಿದರು. ಬಿ.ಬಿ. ಹಾಜಿರ ಸ್ವಾಗತಿಸಿ, ಕೆ.ಪಿ. ಸ್ಪಂದನಾ ವಂದಿಸಿದರು. ಶುಭಾ, ಚಿನ್ಮಯಿ ನಿರೂಪಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net