

ಪ್ರಮುಖ ಮುಖ್ಯಾಂಶಗಳು
ವಿಜಯವಾಣಿ ಮಾಧ್ಯಮ ಕ್ಷೇತ್ರದಲ್ಲಿ ತನ್ನದೇ ಛಾಪು ಮೂಡಿಸಿದೆ. ಕಳೆದ 13 ವರ್ಷಗಳಿಂದ ವಿಜಯವಾಣಿಯ ಓದುಗನಾಗಿದ್ದೇನೆ. ಮುದ್ರಣದ ಗುಣಮಟ್ಟ, ನಿಖರ ಮಾಹಿತಿ, ಪುಟ ವಿನ್ಯಾಸ, ಸುದ್ದಿಯ ಖಚಿತತೆ, ಮತ್ತಿತರ ಉತ್ತಮ ಅಂಶಗಳಿಂದಾಗಿ ವಿಜಯವಾಣಿ ಕನ್ನಡದ ನಂ. 1 ಪತ್ರಿಕೆಯಾಗಿ ಓದುಗರ ಮನಸ್ಸಿನಲ್ಲಿ ಸ್ಥಾನ ಪಡೆದಿದೆ. ಶಾಲೆ ಮಕ್ಕಳು ಮುದ್ರಣಾಲಯ ಭೇಟಿಗೆ ಅವಕಾಶ ನೀಡಿದ ಹಾಗೂ ಸಹಕರಿಸಿದ ವಿಜಯವಾಣಿಗೆ ಧನ್ಯವಾದಗಳು.
ದಿನಪತ್ರಿಕೆ ಹೇಗೆ ಮುದ್ರಣವಾಗುತ್ತದೆ, ಮುದ್ರಣಕ್ಕೆ ಮುನ್ನ ನಡೆಯುವ ಪ್ರಕ್ರಿಯೆಗಳು ಏನು ಎನ್ನುವ ಕುರಿತು ಕುತೂಹಲವಿತ್ತು. ಮಕ್ಕಳಿಗೂ ದಿನಪತ್ರಿಕೆ ತಯಾರಾಗುವ ಪ್ರಕ್ರಿಯೆ ತಿಳಿಯುವ ಹಂಬಲವಿತ್ತು. ವಿಜಯವಾಣಿ ಆಡಳಿತ ವರ್ಗ ಇದಕ್ಕೆ ಅವಕಾಶ ನೀಡಿದ್ದರಿಂದ ಮಕ್ಕಳಿಗೆ ಮಾಧ್ಯಮ ಕ್ಷೇತ್ರದ ಬಗ್ಗೆ ತಿಳಿದುಕೊಳ್ಳಲು ಸಾಧ್ಯವಾಯಿತು.
ಮುದ್ರಣಾಲಯ ಭೇಟಿಯಿಂದಾಗಿ ಪತ್ರಿಕೆ ಸಿದ್ಧವಾಗುವ ಮಾಹಿತಿ ತಿಳಿಯಿತು. ವಿಜಯವಾಣಿ ಜತೆಗೆ ವಿದ್ಯಾರ್ಥಿ ಮಿತ್ರ ಮಕ್ಕಳ ಶೈಕ್ಷಣಿಕ ಪ್ರಗತಿಗೆ ಪೂರಕ ಅಂಶಗಳನ್ನು ಒಳಗೊಂಡಿವೆ. ದಿನಪತ್ರಿಕೆಗಳನ್ನು ಓದುವುದರಿಂದ ಬುದ್ಧಿ ವಿಕಾಸದ ಜತೆಗೆ ಭಾಷೆ ಮೇಲೆ ಹಿಡಿತ ಸಾಧಿಸಬಹುದಾಗಿದೆ. ದಿನಪತ್ರಿಕೆ ನಡೆಸುವ ಸಂಸ್ಥೆಯ ಶ್ರಮ ಶ್ಲಾಘನೀಯ.
ದಿನಪತ್ರಿಕೆ ಮುದ್ರಣ ವಾಗುವ ಪ್ರತಿ ಹಂತವನ್ನು ಮಕ್ಕಳು ಖುಷಿಯಿಂದ ವೀಕ್ಷಿಸಿದರು. ಮುದ್ರಣಾಲಯದಲ್ಲಿದ್ದ ಬೃಹತ್ ಕಾಗದ ರಾಶಿ, ಬಣ್ಣ, ತಂತ್ರಜ್ಞಾನ ಬೆರಗು ಮೂಡಿಸಿತು. ಪತ್ರಿಕೆಯ ಮುದ್ರಣ ಕಾರ್ಯ ತಿಳಿಯುವ ಅವಕಾಶ ಸಿಕ್ಕಿದ್ದು ಖುಷಿ ತಂದಿದೆ.
ಮುಂಜಾನೆ ಮನೆಗೆ ಬರುವ ಪತ್ರಿಕೆ ಸಿದ್ಧವಾಗುವ ಹಿಂದಿನ ಶ್ರಮ, ಸಮಯ ಪ್ರಜ್ಞೆ, ಅತ್ಯಾದುನಿಕ ತಂತ್ರಜ್ಞಾನ, ಕೌಶಲ ತಿಳಿಯಲು ಪ್ರೆಸ್ ಭೇಟಿಯವಿಂದ ಸಾಧ್ಯವಾಯಿತು. ಇದರಿಂದ ಪತ್ರಿಕೆ ಮೇಲಿದ್ದ ಗೌರವ ಮತ್ತಷ್ಟು ಹೆಚ್ಚಾಗಿದೆ.
ವಿಜಯವಾಣಿ ಮುದ್ರಣಾಲಯಕ್ಕೆ ಭೇಟಿ ನೀಡಿದ್ದು ಹೊಸ ವಿಚಾರಗಳನ್ನು ತಿಳಿಯಲು ಸಾಧ್ಯವಾಯಿತು. ಇಲ್ಲಿನ ಸಿಬ್ಬಂದಿ ಪತ್ರಿಕೆಯ ಮುದ್ರಣದ ಹಿಂದಿನ ಎಲ್ಲಾ ಸಂಗತಿಗಳನ್ನು ವಿವರವಾಗಿ ನಮಗೆ ಅರ್ಥವಾಗುವಂತೆ ಸರಳವಾಗಿ ತಿಳಿಸಿದರು. ಮಾಧ್ಯಮ ಲೋಕದ ಶ್ರಮವನ್ನು ಪರಿಚಯಿಸಿದ ಅವರಿಗೆ ಧನ್ಯವಾದಗಳು.