

ಪ್ರಮುಖ ಮುಖ್ಯಾಂಶಗಳು
ಗ್ರಾಮದ ಕೆ.ಜೆ. ರಾಜು ಮಾತನಾಡಿ, "ಕುಡಿಯುವ ನೀರಿನ ಸಮಸ್ಯೆಗೆ ಸ್ಥಳೀಯ ಪಂಚಾಯಿತಿ ಅಧಿಕಾರಿಗಳಿಂದ ಸ್ಪಂದನೆ ಇಲ್ಲ. ಹತ್ತಾರು ಸಲ ಫೋನ್ ಮಾಡಿದರೂ ರಿಸೀವ್ ಮಾಡುತ್ತಿಲ್ಲ. ಹಳ್ಳಿಗಳ ಸಮಸ್ಯೆ ನಿವಾರಿಸಲು ಪಿಡಿಒ (PDO) ಸಂಪೂರ್ಣ ನಿರ್ಲಕ್ಷ್ಯ ವಹಿಸಿದ್ದಾರೆ.
ಗ್ರಾಮದ ಬೋರ್‌ವೆಲ್ ರಿಪೇರಿಗೆ ದುಡ್ಡಿಲ್ಲ ಎನ್ನುತ್ತಾರೆ. ಗ್ರಾಮ ಹೊರವಲಯದ ಬೋರ್‌ವೆಲ್‌ನಿಂದ ಪೈಪ್‌ಲೈನ್ ಮಾಡಿದರೆ ಸಮಸ್ಯೆ ಬಗೆಹರಿಯುತ್ತದೆ. ಆದರೆ, ಸಂಬಂಧಪಟ್ಟ ಅಧಿಕಾರಿಗಳು ಗ್ರಾಮಕ್ಕೆ ಭೇಟಿ ನೀಡಿ ಪರಿಶೀಲಿಸುವ ಕೆಲಸ ಮಾಡುತ್ತಿಲ್ಲ," ಎಂದು ದೂರಿದರು.
"ಕೂಲಿ ಕೆಲಸಕ್ಕೆ ಹೋಗಿ ಮನೆಗೆ ಬಂದರೆ ಕುಡಿಯುವ ನೀರಿಗೂ ಪರದಾಡುವ ಸ್ಥಿತಿ ಇದೆ. ಊರ ಹೊರಗಿನ ಕಪಿಲೆ, ತೋಟ, ಜಮೀನುಗಳಿಗೆ ಹೋಗಿ ನೀರು ತರಬೇಕು. ಗ್ರಾಮದ ಜನಪ್ರತಿನಿಧಿಗಳು 'ನಮ್ಮದು ಈಗ ಅಧಿಕಾರ ಇಲ್ಲ, ಅಧಿಕಾರಿಗಳಿಗೆ ಹೇಳಿಕೊಳ್ಳಿ' ಎನ್ನುತ್ತಾರೆ.
ಅಧಿಕಾರಿಗಳು ನೀರಿನ ಸಮಸ್ಯೆ ಬಗೆಹರಿಸುವ ಭರವಸೆ ಹೇಳುವ ತನಕ ಜಾಗಬಿಟ್ಟು ಕದಲುವುದಿಲ್ಲ," ಎಂದು ಮಹಿಳೆಯರು ಆಕ್ರೋಶ ವ್ಯಕ್ತಪಡಿಸಿದರು.
ಪ್ರತಿಭಟನಾ ಸ್ಥಳಕ್ಕೆ ಭೇಟಿ ನೀಡಿದ ಪಂಚಾಯಿತಿ ಆಡಳಿತಾಧಿಕಾರಿ ಹಾಗೂ ಬಿಇಒ ಕೆ.ಎಸ್. ಸುರೇಶ್ ಮಾತನಾಡಿ, "ತುರ್ತಾಗಿ ಗ್ರಾಮದ ಬೋರ್‌ವೆಲ್ ರಿಪೇರಿ ಮಾಡಿಸಲು ಈಗಾಗಲೇ ಸೂಚಿಸಲಾಗಿದೆ.
ಇನ್ನೆರಡು ದಿನದಲ್ಲಿ ಊರಿನಿಂದ ನೂರು ಮೀಟರ್ ದೂರ ಇರುವ ಬೋರ್‌ವೆಲ್‌ನಿಂದ ಪೈಪ್‌ಲೈನ್ ಕಾಮಗಾರಿ ಮಾಡಿಸಿ, ನೀರಿನ ಸಮಸ್ಯೆ ಆಗದಂತೆ ಬಗೆಹರಿಸಲಾಗುವುದು," ಎಂದು ಭರವಸೆ ನೀಡಿದ ಬಳಿಕ ಗ್ರಾಮಸ್ಥರು ಪ್ರತಿಭಟನೆ ಕೈಬಿಟ್ಟರು.
ಪ್ರತಿಭಟನೆಯಲ್ಲಿ ಸುಮಿತ್ರಮ್ಮ, ಶಾರದಮ್ಮ, ಮಂಜುಳಾ, ಶಿವಮ್ಮ, ಸಂಜೀವಮ್ಮ, ಶಿವಣ್ಣ, ಕರಿಯಣ್ಣ, ಕೃಷ್ಣಪ್ಪ ಇತರರಿದ್ದರು.