ಬೆಳೆ ಸಮೀಕ್ಷೆ ನಿರ್ಲಕ್ಷಿಸಿದರೆ ಕಠಿಣ ಕ್ರಮ

ಚಿತ್ರದುರ್ಗದಲ್ಲಿ ಮಂಗಳವಾರ ಜರುಗಿದ ಬೆಳೆ ವಿಮೆ ಸಮೀಕ್ಷೆ ಕುರಿತ ಸಭೆಯಲ್ಲಿ ಎಡಿಸಿ ಬಿ.ಟಿ. ಕುಮಾರಸ್ವಾಮಿ, ಎಂ.ಬಾಬು, ರವಿಕುಮಾರ್, ಎಂ.ಪಿ. ಪ್ರವೀಣï,ಅಶ್ವತ್ಥಾಮ ಇತರರು ಇದ್ದರು.
ಚಿತ್ರದುರ್ಗದಲ್ಲಿ ಮಂಗಳವಾರ ಜರುಗಿದ ಬೆಳೆ ವಿಮೆ ಸಮೀಕ್ಷೆ ಕುರಿತ ಸಭೆಯಲ್ಲಿ ಎಡಿಸಿ ಬಿ.ಟಿ. ಕುಮಾರಸ್ವಾಮಿ, ಎಂ.ಬಾಬು, ರವಿಕುಮಾರ್, ಎಂ.ಪಿ. ಪ್ರವೀಣï,ಅಶ್ವತ್ಥಾಮ ಇತರರು ಇದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ಅಽಕಾರಿಗಳಿಗೆ ಎಡಿಸಿ ಕಟ್ಟೆಚ್ಚರ
  • ಎಣ್ಣೆಕಾಳು ಬೆಳೆಗಳಿಗೆ ಪ್ರೋತ್ಸಾಹ ನೀಡಲು ಸೂಚನೆ
  • ನಿರ್ಲಕ್ಷಿಸಿದರೆ ಕಠಿಣ ಕ್ರಮ

ಚಿತ್ರದುರ್ಗ:

ಯಾವುದೇ ಲೋಪಗಳಿಗೆ ಅವಕಾಶವಿಲ್ಲದಂತೆ ವೈಜ್ಞಾನಿಕ, ಪಾರದರ್ಶಕ ಬೆಳೆ ಕಟಾವು ಪ್ರಯೋಗಗಳನ್ನು ನಡೆ ಸುವಂತೆ ಎಡಿಸಿ ಬಿ.ಟಿ. ಕುಮಾರಸ್ವಾಮಿ ಅಽಕಾರಿಗಳಿಗೆ ತಾಕೀತು ಮಾಡಿದರು.

ಡಿಸಿ ಕಚೇರಿಯಲ್ಲಿ ಮಂಗಳವಾರ ೨೦೨೬-೨೭ನೇ ಸಾಲಿನ ಬೆಳೆ ಸಮೀಕ್ಷೆ, ಕರ್ನಾಟಕ ರೈತ ಸುರಕ್ಷಾ ಪ್ರಧಾನ ಮಂತ್ರಿ -Àಸಲ್ ಬಿಮಾ ಯೋಜನೆ ಇತ್ಯಾದಿ ಕÊಷಿ ಇಲಾಖೆ ಕಾರ್ಯಕ್ರಮಗಳ ಅನುಷ್ಠಾನ ಕುರಿತ ಸಭೆಯಲ್ಲಿ ಮಾತನಾಡಿ, ಬೆಳೆ ಸಮೀಕ್ಷೆ ನಿರ್ಲಕ್ಷಿಸುವ ಅಽಕಾರಿಗಳ ವಿರುದ್ಧ ಮುಲಾಜು ತೋರದೆ ಕಠಿಣ ಕ್ರಮ ಕೈಗೊಳ್ಳುವುದಾಗಿ ಎಚ್ಚರಿಸಿದರು.
ಸಮೀಕ್ಷೆಯಲ್ಲಿ ಪಾರದರ್ಶಕತೆ, ನಿಖರತೆ ಅತ್ಯಂತ ಮುಖ್ಯ. ಸಂಬAಽಸಿದ ಅಽಕಾರಿಗಳು ಸಮನ್ವಯದಿಂದ ಕೆಲಸ ಮಾಡಬೇಕು. ಕೃಷಿ ಹಾಗೂ ತೋಟಗಾರಿಕೆ ಇಲಾಖೆ ಅಽಕಾರಿಗಳು ಸಮೀಕ್ಷೆ ತಾಕುಗಳಿಗೆ ಭೇಟಿ ನೀಡಿ ಭೌತಿಕವಾಗಿ ಪರಿಶೀಲಿಸಬೇಕು. ತಾಲೂ ಕು ಹಂತದಲ್ಲಿ ಕÊಷಿ, ತೋಟಗಾರಿಕೆ ಅಽಕಾರಿಗಳು ಬೆಳೆ ಸರ್ವೇ ನೋಡಲ್ ಅಽಕಾರಿಗಳಾಗಿ ಕಾರ್ಯನಿರ್ವಹಿಸಬೇಕು.
ತಹಸೀಲ್ದಾರ್‌ಗಳು ಬೆಳೆ ಸಮೀಕ್ಷೆ ಸಭೆಗಳನ್ನು ನಡೆಸಿ ಅಽಕಾರಿಗಳಿಗೆ ಅಗತ್ಯ ನಿರ್ದೇಶನ ನೀಡಬೇಕು. ಪ್ರತಿ ೧೫ ದಿನಗಳಿ ಗೊಮ್ಮೆ ವಿಡಿಯೋ ಕಾನರೆನ್ಸ್ ಮೂಲಕ ಸಮೀಕ್ಷೆ ಪ್ರಗತಿ ಪರಿಶೀಲಿಸಲಾಗುವುದು ಎಂದು ಕುಮಾರಸ್ವಾಮಿ ಹೇಳಿದರು.
ಜಂಟಿ ಕÊಷಿ ನಿರ್ದೇಶಕ ಮಂಜುನಾಥ್ ಮಾತನಾಡಿ, ಬೆಳೆ ಸಮೀಕ್ಷೆಯಲ್ಲಿ ಕಳೆದ ವರ್ಷದಿಂದ ಕೃತಕ ಬುದ್ಧಿಮತ್ತೆ ಆಧಾರಿತ ವೆರಿಫಿಕೇಶನ್ ತಂತ್ರಜ್ಞಾನ ಪರಿಚಯಿಸಲಾಗಿದೆ. ರೈತರು ನೋಂದಾಯಿತ ಭೂಮಿಯಲ್ಲಿ ಸರಿಯಾದ ಬೆಳೆ ಮಾಹಿತಿ ನೀಡುವುದು ಹಾಗೂ ಜಮೀನಿಗೆ ಭೇಟಿ ನೀಡಿ ನಿಖರ -ೆÇÃಟೋ ತೆಗೆಯುವುದನ್ನು ಕಡ್ಡಾಯಗೊಳಿಸಲಾಗಿದೆ ಎಂದರು.

ಪರಿಹಾರ ಸೌಲಭ್ಯ

ಬೆಳೆವಿಮೆ ನೋಂದಣಿಗೆ ತಕ್ಕಂತೆ ರೈತರಿಗೆ ನ್ಯಾಯಯುತ ಪರಿಹಾರ ಸೌಲಭ್ಯ ದೊರೆಯುವಂತೆ ಅಽಕಾರಿಗಳು ಜವಾಬ್ದಾರಿ ಯಿಂದ ಕಾರ್ಯನಿರ್ವಹಿಸಬೇಕು. ಬಿತ್ತನೆ ವಿ-Àಲವಾದಲ್ಲಿ ರೈತರಿಗೆ ನಿಯಮಾವಳಿಯಂತೆ ಶೇ.೨೫ ಪರಿಹಾರ ಮೊತ್ತ ದೊರೆಯ ಬೇಕು.
ಬಿತ್ತನೆ ವಿ-Àಲವಾಗಿ ಬೇರೆ ಬೆಳೆಗೆ ಮುಂದಾಗುವ ರೈತರಿಗೆ, ಬೆಳೆವಿಮೆ ನೊಂದಣಿಯಲ್ಲಿ ಕಡ್ಡಾಯವಾಗಿ ಬೆಳೆ ಹೆಸರು ಬದಲಾ ಯಿಸುವಂತೆ ಜಾಗÊತಿ ಮೂಡಿಸಬೇಕು. ಬೆಳೆ ಸಮೀಕ್ಷೆ, ವಿಮೆ ನೋಂದಣಿ ಮಧ್ಯೆ ವ್ಯತ್ಯಾಸವಿದ್ದರೆ ತಾಲೂಕು ಮಟ್ಟದ ಸಮಿತಿ ಪರಿಶೀಲಿಸಿ ರೈತರ ಹಿತ ಕಾಯಬೇಕೆಂದು ಎಡಿಸಿ ಸೂಚಿಸಿದರು.
ಬೆಳೆ ಕಟಾವು ಪ್ರಯೋಗಕ್ಕೆ ನೀರಾವರಿ ಅಥವಾ ಸಮೃದ್ಧ ಬೆಳೆಯಿರುವ ಪ್ಲಾಟ್‌ಗಳನ್ನು ಆಯ್ಕೆ ಮಾಡದೆ, ಪ್ರಾಮಾಣಿಕ ಹಾಗೂ ಪಾರದರ್ಶಕ ರೀತಿಯಲ್ಲಿ ಸಮೀಕ್ಷೆ ನಡೆಸಬೇಕು. ಅಽಕಾರಿಗಳು, ವಿಮಾ ಕಂಪನಿಯ ಪ್ರತಿನಿಽಗಳು ಖುದ್ದು ಕನಿಷ್ಠ ಶೇ.೧೦ ಕ್ಷೇತ್ರಗಳ ತಪಾಸಣೆ ನಡೆಸಬೇಕು ಎಂದು ಕುಮಾರಸ್ವಾಮಿ ಹೇಳಿದರು.

೧.೪೦ ಲಕ್ಷಕ್ಕೂ ಹೆಚ್ಚು ನೋಂದಣಿ ನಿರೀಕ್ಷೆ

ಜಿಲ್ಲೆಯಲ್ಲಿ ಬೆಳೆವಿಮೆ ನೋಂದಣಿ ಚುರುಕಿನಿಂದ ಸಾಗಿದೆ. ಚಳ್ಳಕೆರೆ ತಾಲೂಕಲ್ಲಿ ಈವರೆಗೆ ೧.೨೯ ಲಕ್ಷಕ್ಕೂ ಹೆಚ್ಚು ಅರ್ಜಿಗಳು ನೋಂದ ಣಿಯಾಗಿವೆ. ಕೃಷಿ ಪೋರ್ಟಲ್‌ನಲ್ಲಿ ೧.೦೨ ಲಕ್ಷಕ್ಕೂ ಹೆಚ್ಚು ರೈತರ ವಿವರ ದಾಖಲಾಗಿದೆ. ಕಳೆದ ವರ್ಷ ೧.೧೫ ಲಕ್ಷ ರೈತರು ನೋಂದಾಯಿಸಿದ್ದರು. ಜು.೩೧ ಕೊನೆಯ ದಿನಾಂಕದ ವೇಳೆಗೆ ನೋಂದಣಿ ಸಂಖ್ಯೆ ೧.೪೦ ಲಕ್ಷ ದಾಟುವ ನಿರೀಕ್ಷೆಯಿದೆ ಎಂದು ಜಂಟಿ ಕÊಷಿ ನಿರ್ದೇಶಕ ಮಂಜುನಾಥ್ ಮಾಹಿತಿ ನೀಡಿದರು.
ವಿಮಾ ಕಂಪನಿ ಅಽಕಾರಿಗೆ ನೋಟಿಸ್
ಸಭೆಗೆ ಗೈರಾದ ಬೆಳೆವಿಮೆ ಕಂಪನಿ ಅಽಕಾರಿಗೆ ನೋಟಿಸ್ ನೀಡುವಂತೆ ಎಡಿಸಿ ಸೂಚಿಸಿದರು. ರೈತರ ಹಿತಕ್ಕೆ ಧಕ್ಕೆಯುಂಟಾದರೆ ವಿಮಾ ಸಂಸ್ಥೆ ವಿರುದ್ಧ ಸರ್ಕಾರಕ್ಕೆ ವರದಿ ಸಲ್ಲಿಸಿ ಕಟ್ಟುನಿಟ್ಟಿನ ಕ್ರಮಕ್ಕೆ ಶಿಫಾರಸು ಮಾಡಲಾಗುವುದು ಎಂದು ಕುಮಾರಸ್ವಾಮಿ ಹೇಳಿದರು.
ಕಳೆದ ಬಾರಿ ಸ್ಥಳೀಯ ಪ್ರಕೃತಿ ವಿಕೋಪ ಹಾಗೂ ಬೆಳೆ ಹಾನಿಗೆ ಸಂಬAಽಸಿದAತೆ ಕೆಲವೆಡೆ ದುರುಪಯೋಗವಾಗಿರುವ ಬಗ್ಗೆ ಪೊಲೀಸ್ ಪ್ರಕರಣ ದಾಖಲಾಗಿದೆ ಎಂದು ಮಂಜುನಾಥ್ ತಿಳಿಸಿದರು.

ಎಣÉ್ಣಕಾಳು ಬೆಳೆಗಳ ವಿಸ್ತೀರ್ಣ ಹೆಚ್ಚಳಕ್ಕೆ ಯೋಜನೆ

ರಾಷ್ಟಿçÃಯ ಖಾದ್ಯ ತೈಲ ಅಭಿಯಾನ ಕುರಿತು ಮಾಹಿತಿ ನೀಡಿದ ಮಂಜುನಾಥ್, ದೇಶದಲ್ಲಿ ಎಣÉ್ಣಕಾಳುಗಳ ಕೊರತೆ ನೀಗಿಸಲು ಅಂತಹ ಬೆಳೆಗಳ ವಿಸ್ತೀರ್ಣ, ಉತ್ಪಾದನೆ ಹೆಚ್ಚಿಸಲು ಯೋಜಿಸಲಾಗಿದೆ. ಉತ್ಪಾದಕತೆ ಕಡಿಮೆ ಇರುವ ಶೇಂಗಾ ತಳಿ ಬದಲಿಗೆ ಧಾರವಾಡ ಕÊಷಿ ವಿವಿಯ ಹೆಚ್ಚಿನ ಇಳುವರಿ ನೀಡುವ ಹೊಸ ತಳಿಗಳನ್ನು ಪರಿಚಯಿಸಲಾಗುತ್ತಿದೆ.
ಶೇಂಗಾ, ಸೂರ್ಯಕಾಂತಿ, ಕುಸುಮೆ ಹಾಗೂ ಅರಳೆ ಬೆಳೆಗಳಿಗೆ ಪ್ರೋತ್ಸಾಹ ನೀಡಲಾಗುತ್ತಿದೆ. ಶೇ.೯೦ ರಿಯಾಯಿತಿ ದರದಲ್ಲಿ ಉತ್ತಮ ತಳಿಯ ಎಣ್ಣೆ ಕಾಳು ಬಿತ್ತನೆ ಬೀಜಗಳನ್ನು ಪೂರೈಸಲಾಗುತ್ತಿದೆ. ಚಿತ್ರದುರ್ಗ, ಹಿರಿಯೂರು ಭಾಗದಲ್ಲಿ ಶೇಂಗಾ ಮತ್ತು ಸೂರ್ಯಕಾಂತಿ ಬೆಳೆಗಳಿಗೆ ಉತ್ತಮ ವಾತಾವರಣವಿದೆ ಎಂದರು.
೨೦೨೬-೨೭ನೇ ಸಾಲಿನ ಹತ್ತಿ ಉತ್ಪಾದಕತೆ ಅಭಿಯಾನ, ಪ್ರಧಾನ ಮಂತ್ರಿ ರಾಷ್ಟಿçÃಯ ಕೃಷಿ ವಿಕಾಸ ಯೋಜನೆ ಪರ್‌ಡ್ರಾಪ್ ಮೋರ್ ಕ್ರಾಪ್ ಸೂಕ್ಷ÷್ಮ ನೀರಾವರಿ, ದ್ವಿದಳ ಧಾನ್ಯಗಳಲ್ಲಿ ಆತ್ಮ ನಿರ್ಭರತಾ ಅಭಿಯಾನ ಕುರಿತು ಚರ್ಚಿಸಲಾಯಿತು.
ಇದೇ ವೇಳೆ ಎಡಿಸಿ ಅಧ್ಯಕ್ಷತೆಯಲ್ಲಿ ೨೦೨೬-೨೭ನೇ ಸಾಲಿನ ಮೊದಲನೇ ಕೃಷಿ ಅಂಕಿಅAಶಗಳ ತ್ರೆÊಮಾಸಿಕ ಸಮನ್ವಯ ಹಾಗೂ ಜನನಮರಣ ಜಿಲ್ಲಾಮಟ್ಟದ ನಾಗರಿಕ ನೋಂದಣಿ ಪದ್ಧತಿ ಸಮನ್ವಯ ಸಮಿತಿಗಳ ಸಭೆ ನಡೆಯಿತು.
ಜಿಪಂ ಡಿಎಸ್ ಎಂ. ಬಾಬು, ಜಿಲ್ಲಾ ಸಂಖ್ಯಾ ಸಂಗ್ರಹಣಾಽಕಾರಿ ರವಿಕುಮಾರ್, ತೋಟಗಾರಿಕೆ ಇಲಾಖೆ ಜಂಟಿ ನಿರ್ದೇಶಕಿ ಸವಿತಾ, ಲೀಡ್ ಬ್ಯಾಂಕ್ ಜಿಲ್ಲಾ ವ್ಯವಸ್ಥಾಪಕ ಎಂ.ಪಿ. ಪ್ರವೀಣ್, ಸಹಾಯಕ ಸಾಂಖ್ಯಿಕ ಅಽಕಾರಿ ಅಶ್ವತ್ಥಾಮ ಮತ್ತಿತರರು ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net