ಚಿತ್ರದುರ್ಗದಲ್ಲಿ ಶುಕ್ರವಾರ ಡಿಸಿ ಟಿ.ವೆಂಕಟೇಶ್ ಅಧ್ಯಕ್ಷತೆಯಲ್ಲಿ ರೈತರ ಕುಂದು ಕೊರತೆ ನಿವಾರಣೆ ಸಭೆ ನಡೆಯಿತು. ಎಡಿಸಿ ಬಿ.ಟಿ.ಕುಮಾರಸ್ವಾಮಿ, ಬಿ.ಮಂಜುನಾಥ್, ಜಿ.ಸವಿತಾ, ಹಂಪಯ್ಯನಮಾಳಿಗೆ ಧನಂಜಯ, ಹೊರಕೇರಪ್ಪ, ಬಸವರೆಡ್ಡಿ, ಕೆ.ಪಿ.ಭೂತಯ್ಯ, ರೆಡ್ಡಿಹಳ್ಳಿ ವೀರಣ್ಣ, ತಿಪ್ಪೇಸ್ವಾಮಿ ಇತರರು ಇದ್ದರು. ---
ರೈತರ ಸಂಕಷ್ಟಕ್ಕೆ ಸ್ಪಂದಿಸಲು ಡಿಸಿ ವೆಂಕಟೇಶ್ ಖಡಕ್ ಎಚ್ಚರಿಕೆ
ಪರಿಹಾರ ಪಟ್ಟಿ ಪ್ರಕಟಿಸಲು ಆದೇಶ
ರೈತರ ಕುಂದುಕೊರತೆ ನಿವಾರಣಾ ಸಭೆ
ಚಿತ್ರದುರ್ಗ:ರೈತರ ಸಮಸ್ಯೆಗಳಿಗೆ ಸ್ಪಂದಿಸುವಲ್ಲಿ ವಿಳಂಬ ಧೋರಣೆ ಅನುಸರಿಸಬಾರದು. ಬೆಳೆ ಕಟಾವು ಪ್ರಯೋಗವನ್ನು ಸಮರ್ಪಕವಾಗಿ ನಡೆಸದ ಅಽಕಾರಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಜಿ¯್ಲÁಽಕಾರಿ ಟಿ. ವೆಂಕಟೇಶ್ ಅಽಕಾರಿಗಳಿಗೆ ಖಡಕ್ ಎಚ್ಚರಿಕೆ ನೀಡಿದರು.
ನಗರದ ಜಿ¯್ಲÁಽಕಾರಿ ಕಚೇರಿಯಲ್ಲಿ ಶುಕ್ರವಾರ ನಡೆದ ರೈತರ ಕುಂದುಕೊರತೆ ನಿವಾರಣಾ ಸಭೆಯ ಅಧ್ಯಕ್ಷತೆ ವಹಿಸಿ ಮಾತ ನಾಡಿದರು. ಕೃಷಿ ಮತ್ತು ತೋಟಗಾರಿಕೆ ಇಲಾಖೆ ಅಽಕಾರಿಗಳು ಕೇವಲ ಕಚೇರಿಗೆ ಸೀಮಿತವಾಗದೆ, ರೈತರಿಗೆ ಸರ್ಕಾರದ ಯೋಜನೆಗಳ ಬಗ್ಗೆ ಸಮರ್ಪಕ ಮಾಹಿತಿ ನೀಡಬೇಕು. ಬೆಳೆ ಜಂಟಿ ಸಮೀಕ್ಷೆ, ಬೆಳೆ ಕಟಾವು ಪ್ರಯೋಗ ಮತ್ತು ಮಧ್ಯಂತರ ಬೆಳೆ ಪರಿಹಾರದಂತಹ ವಿಷಯಗಳ ಕುರಿತು ರೈತರೊಂದಿಗೆ ಚರ್ಚಿಸಿ, ಸಮಸ್ಯೆಗಳನ್ನು ಇಲಾಖಾ ಹಂತದ¯್ಲೆÃ ಬಗೆಹರಿಸಬೇಕು ಎಂದು ತಾಕೀತು ಮಾಡಿದರು.
ಜಿ¯್ಲÉಯಲ್ಲಿ ಬೆಳೆ ನಷ್ಟ ಅನುಭವಿಸಿದ ಒಬ್ಬನೇ ಒಬ್ಬ ಅರ್ಹ ರೈತನಿಗೂ ಅನ್ಯಾಯವಾಗಲು ಬಿಡುವುದಿಲ್ಲ. ಬೆಳೆ ವಿಮೆ ಮತ್ತು ಪರಿಹಾರದ ಹಣ ಪಾವತಿಗೆ ಅಗತ್ಯ ಕ್ರಮ ಕೈಗೊಳ್ಳಲಾಗುವುದು ಎಂದು ಡಿಸಿ ಭರವಸೆ ನೀಡಿದರು.
೧೦೯ ಲಕ್ಷ ರೂ. ಪರಿಹಾರ ಬಿಡುಗಡೆ
ಪ್ರಸಕ್ತ ಸಾಲಿನ ಮುಂಗಾರು ಹಂಗಾಮಿನಲ್ಲಿ ಅತಿಯಾದ ಮಳೆಯಿಂದ ಬೆಳೆ ನಷ್ಟ ಅನುಭವಿಸಿದ ಜಿ¯್ಲÉಯ ೭೬೯ ರೈತರಿಗೆ ಈಗಾಗಲೇ ೧೦೯.೯೩ ಲಕ್ಷ ರೂಪಾಯಿ ಪರಿಹಾರವನ್ನು ನೇರವಾಗಿ ಖಾತೆಗೆ ಜಮೆ ಮಾಡಲಾಗಿದೆ. ತಾಂತ್ರಿಕ ಕಾರಣಗಳಿಂದ ಬಾಕಿ ಉಳಿದಿರುವ ರೈತರಿಗೂ ಶೀಘ್ರವೇ ಹಣ ಪಾವತಿಸಲಾಗುವುದು ಎಂದರು.
ಪರಿಹಾರ ಮಂಜೂರಾತಿಯಲ್ಲಿ ಪಾರದರ್ಶಕತೆ ಕಾಯ್ದುಕೊಳ್ಳಲು, ಕಚೇರಿಯ ಸೂಚನಾ -Àಲಕದಲ್ಲಿ ಬೆಳೆ ಪರಿಹಾರಕ್ಕೆ ಅರ್ಹ ಮತ್ತು ಅನರ್ಹರಾದ ರೈತರ ಪಟ್ಟಿಯನ್ನು ಕಡ್ಡಾಯವಾಗಿ ಪ್ರಕಟಿಸಬೇಕು. ಪರಿಹಾರ ಬಾರದ ರೈತರಿಗೆ ಕಾರಣ ಸಹಿತ ಹಿಂಬರಹ ನೀಡಿ ಮಾಹಿತಿ ಒದಗಿಸಬೇಕು ಎಂದು ಡಿಸಿ ಅಽಕಾರಿಗಳಿಗೆ ಸೂಚಿಸಿದರು.
೪೬ ಕೋಟಿ ಹಗರಣದ ತನಿಖೆ ಚುರುಕು
೨೦೨೩-೨೪ನೇ ಸಾಲಿನಲ್ಲಿ ನಡೆದ ಬಹುಕೋಟಿ ಬೆಳೆ ಪರಿಹಾರ ಹಗರಣದ ಬಗ್ಗೆ ಜಿ¯್ಲÁಽಕಾರಿಗಳು ಮಾಹಿತಿ ನೀಡಿದರು. ಜಿ¯್ಲÉಯಲ್ಲಿ ನಡೆದ ೪೬ ಕೋಟಿ ರೂ.ಗಳ ಪರಿಹಾರ ಹಗರಣಕ್ಕೆ ಸಂಬAಽಸಿದAತೆ ಸರ್ಕಾರಕ್ಕೆ ವರದಿ ಸಲ್ಲಿಸಲಾಗಿದೆ. ಬೆಂಗಳೂರು ಪ್ರಾದೇಶಿಕ ಆಯುಕ್ತರು ತನಿಖಾಽಕಾರಿಯಾಗಿದ್ದು, ತಪ್ಪಿತಸ್ಥ ಅಽಕಾರಿಗಳ ವಿರುದ್ಧ ಎ-ïಐಆರ್ ದಾಖಲಿಸಿ ತನಿಖೆ ನಡೆಸಲಾಗುತ್ತಿದೆ ಎಂದು ಸ್ಪಷ್ಟಪಡಿಸಿದರು.
೧೩೯ ಕಂದಾಯ ಗ್ರಾಮಗಳ ಘೋಷಣೆ
ಜಿ¯್ಲÉಯಲ್ಲಿ ೧೩೯ ಹೊಸ ಕಂದಾಯ ಗ್ರಾಮಗಳ ಘೋಷಣೆಗೆ ಸರ್ಕಾರ ಹಸಿರು ನಿಶಾನೆ ತೋರಿದೆ. ಘೋಷಣೆಯ ನಂತರ ಅಲ್ಲಿನ ನಿವಾಸಿಗಳಿಗೆ ಮನೆಗಳ ಹಕ್ಕುಪತ್ರ ಹಾಗೂ ಇ-ಸ್ವತ್ತು ವಿತರಿಸಲು ಜಿ¯್ಲÁಡಳಿತ ಸಕಲ ಸಿದ್ಧತೆ ಮಾಡಿಕೊಂಡಿದೆ ಎಂದು ಡಿಸಿ ತಿಳಿಸಿದರು.
ಈರುಳ್ಳಿ ಬೆಳೆಗಾರರ ಸಂಕಷ್ಟ
ರೈತ ಮುಖಂಡ ಹಂಪಯ್ಯನ ಮಾಳಿಗೆ ಧನಂಜಯ ಮಾತನಾಡಿ, ಚಿತ್ರದುರ್ಗ ತಾಲೂಕಿನ ದ್ಯಾಮವ್ವನಹಳ್ಳಿ ಗ್ರಾ.ಪಂ. ವ್ಯಾಪ್ತಿಯಲ್ಲಿ ಆಗ¸್ಟï ಮಳೆಗೆ ಈರುಳ್ಳಿ ಬೆಳೆ ನಾಶವಾಗಿದೆ. ಕೆಲವರಿಗೆ ಮಾತ್ರ ಪರಿಹಾರ ಸಿಕ್ಕಿದ್ದು, ಅರ್ಹರಿಗೆ ಅನ್ಯಾಯವಾಗಿದೆ, ಎಂದು ದೂರಿದರು.
ಇದಕ್ಕೆ ಉತ್ತರಿಸಿದ ತೋಟಗಾರಿಕೆ ಇಲಾಖೆ ಹಿರಿಯ ಸಹಾಯಕ ನಿರ್ದೇಶಕ ದೇವರಾಜï, ದ್ಯಾಮವ್ವನಹಳ್ಳಿಯಲ್ಲಿ ೩೨ ರೈತರಿಗೆ ಹಾಗೂ ತಾಲೂಕಿನಲ್ಲಿ ಅರ್ಜಿ ಸಲ್ಲಿಸಿದ ೧,೧೩೦ ರೈತರ ಪೈಕಿ ೪೫೦ ಜನರಿಗೆ ಈಗಾಗಲೇ ಪರಿಹಾರ ಪಾವತಿಸಲಾಗಿದೆ ಎಂದು ಮಾಹಿತಿ ನೀಡಿದರು.
ಬೆಳೆ ವಿಮೆ ಕಂತು ಕಟ್ಟಿಸಿಕೊಳ್ಳುವ ವಿಮಾ ಕಂಪನಿಗಳು ಮತ್ತು ಅವುಗಳ ಪ್ರತಿನಿಽಗಳು, ರೈತರು ಸಂಕಷ್ಟದಲ್ಲಿz್ದÁಗ -ÉÇÃನ್ ಸಂಪರ್ಕಕ್ಕೂ ಸಿಗುತ್ತಿಲ್ಲ ಎಂದು ರೈತ ಮುಖಂಡರಾದ ಹೊರಕೇರಪ್ಪ, ಬಸವರೆಡ್ಡಿ, ಕೆ.ಪಿ. ಭೂತಯ್ಯ ಮತ್ತು ರೆಡ್ಡಿಹಳ್ಳಿ ವೀರಣ್ಣ ಆಕ್ರೋಶ ವ್ಯಕ್ತಪಡಿಸಿದರು.
ಅಽಕಾರಿಗಳು ಕ್ಷೇತ್ರಮಟ್ಟದಲ್ಲಿ ಸರಿಯಾಗಿ ಕೆಲಸ ಮಾಡಿದರೆ ಅರ್ಧ ಸಮಸ್ಯೆಗಳು ಬಗೆಹರಿಯುತ್ತವೆ ಎಂದು ರೈತ ಮುಖಂಡ ತಿಪ್ಪೇಸ್ವಾಮಿ ಸಲಹೆ ನೀಡಿದರು. ಅಪರ ಜಿ¯್ಲÁಽಕಾರಿ ಬಿ.ಟಿ. ಕುಮಾರಸ್ವಾಮಿ, ಜಂಟಿ ಕೃಷಿ ನಿರ್ದೇಶಕ ಬಿ. ಮಂಜುನಾಥ್, ತೋಟಗಾರಿಕೆ ಇಲಾಖೆ ಜಂಟಿ ನಿರ್ದೇಶಕಿ ಜಿ. ಸವಿತಾ ಇತರರು ಇದ್ದರು.
೧೫ರಂದು ಹೊಳಲ್ಕೆರೆಯಲ್ಲಿ ತರಬೇತಿ
ಚಿತ್ರದುರ್ಗ: ಹಿರಿಯೂರು ತಾಲೂಕಿನ ಬಬ್ಬೂರು -Áರಂ ಜಿಲ್ಲಾ ಕÊಷಿ ತರಬೇತಿ ಕೇಂದ್ರ ಹಾಗೂ ಹೊಳಲ್ಕೆರೆ ಕÊಷಿ ಇಲಾಖೆಯಿಂದ ಡಿ. ೧೫ರಂದು ಬೆಳಗ್ಗೆ ೧೦ಕ್ಕೆ ಹೊಳಲ್ಕೆರೆ ಮೈರಾಡ ಸಂಸ್ಥೆಯಲ್ಲಿ ಜಿಲ್ಲೆಯ ಕÊಷಿಕರಿಗೆ ಕÊಷಿಯಲ್ಲಿ ಜೈವಿಕ ಗೊಬ್ಬರ ಮತ್ತು ಜೈವಿಕ ಪೀಡನಾಶಕಗಳ ಬಳಕೆ ಹಾಗೂ ಅಡಕೆ ಸಿಪ್ಪೆಯಿಂದ ಕಾಂಪೋಸ್ಟ್ ತಯಾರಿಕೆ ಕುರಿತು ಒಂದು ದಿನದ ಹೊರಾಂಗಣ ತರಬೇತಿ ಏರ್ಪಡಿಸಲಾಗಿದೆ. ತುಮಕೂರು ಮಲ್ಟಿಪ್ಲೆಕ್ಸ್ ಬಯೋಟೆಕ್‌ನ ತಾಂತ್ರಿಕ ಅಽಕಾರಿ ಕುಮಾರ್ ಸಂಪನ್ಮೂಲ ವ್ಯಕ್ತಿಯಾಗಿ ಪಾಲ್ಗೊಳ್ಳಲಿದ್ದಾರೆ. ಆಸಕ್ತ ೫೦ ರೈತರಿಗೆ ಅವಕಾಶವಿದೆ ಎಂದು ಪ್ರಕಟಣೆ ತಿಳಿಸಿದೆ.