ಎಸ್ಸೆಸ್ಸೆಲ್ಸಿ -Àಲಿತಾಂಶ ಕುಸಿದರೆ ವರ್ಗಾವಣೆ ಖಚಿತ

ಚಿತ್ರದುರ್ಗದ ಬಾಲಕಿಯರ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಪ್ರೌಢಶಾಲಾ ವಿಭಾಗದ ವಿದ್ಯಾರ್ಥಿನಿಯರಿಗೆ ಎಸ್‌ಬಿಐ ಬ್ಯಾಂಕ್ ಸಿಎಸ್‌ಆರ್ ನಿಽಯಡಿ ೧೦೦ ಬೈಸಿಕಲ್‌ಗಳನ್ನು ಡಿ. ಸುಧಾಕರ್ ಶನಿವಾರ ವಿತರಿಸಿದರು. ಶಿವಣ್ಣ, ಎಂ.ಕೆ.ತಾಜ್‌ಪೀರ್, ಅಲೋಕ್ ಚಂದ್ರ ಇತರರಿದ್ದರು.
ಚಿತ್ರದುರ್ಗದ ಬಾಲಕಿಯರ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಪ್ರೌಢಶಾಲಾ ವಿಭಾಗದ ವಿದ್ಯಾರ್ಥಿನಿಯರಿಗೆ ಎಸ್‌ಬಿಐ ಬ್ಯಾಂಕ್ ಸಿಎಸ್‌ಆರ್ ನಿಽಯಡಿ ೧೦೦ ಬೈಸಿಕಲ್‌ಗಳನ್ನು ಡಿ. ಸುಧಾಕರ್ ಶನಿವಾರ ವಿತರಿಸಿದರು. ಶಿವಣ್ಣ, ಎಂ.ಕೆ.ತಾಜ್‌ಪೀರ್, ಅಲೋಕ್ ಚಂದ್ರ ಇತರರಿದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ಸಚಿವ ಡಿ. ಸುಧಾಕರ್ ಎಚ್ಚರಿಕೆ
  • ಶಾಲೆ ಬಿಡುವ ಪ್ರಕರಣಗಳ ತಡೆಗೆ ಬೈಸಿಕಲ್ ಸಹಕಾರಿ
  • ಡ್ರಾಪ್‌ಔಟ್ ಪ್ರಮಾಣ
ಚಿತ್ರದುರ್ಗ: ಎಸ್ಸೆಸ್ಸೆಲ್ಸಿ -Àಲಿತಾಂಶ ಕುಸಿತಕ್ಕೆ ಕಾರಣರಾದ ಮುಖ್ಯ ಶಿಕ್ಷಕರು, ಶಿಕ್ಷಕರನ್ನು ಕಲಬುರಗಿ, ಬೆಳಗಾವಿಗೆ ವರ್ಗಾಯಿಸುವುದಾಗಿ ಜಿಲ್ಲಾ ಉಸ್ತುವಾರಿ ಸಚಿವ ಡಿ. ಸುಧಾಕರ್ ಎಚ್ಚರಿಸಿದರು.
ಬಾಲಕಿಯರ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಪ್ರೌಢಶಾಲಾ ವಿಭಾಗದ ೮ನೇ ತರಗತಿ ವಿದ್ಯಾರ್ಥಿನಿಯರಿಗೆ ಭಾರತೀಯ ಸ್ಟೇಟ್ ಬ್ಯಾಂಕ್ (ಎಸ್‌ಬಿಐ) ವತಿಯಿಂದ ಸಿಎಸ್‌ಆರ್ ಚಟುವಟಿಕೆಯಡಿ ಶನಿವಾರ ಹಮ್ಮಿಕೊಂಡಿದ್ದ ಬೈಸಿಕಲ್ ವಿತರಿಸುವ ಕಾರ್ಯಕ್ರಮದಲ್ಲಿ ಮಾತನಾಡಿದರು.
ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ರಾಜ್ಯದ ಸರಾಸರಿ -Àಲಿತಾಂಶ ಶೇ. ೬೮ ರಷ್ಟಿದ್ದು, ಈ ಶಾಲೆಯ -Àಲಿತಾಂಶ ಶೇ. ೪೮ರಷ್ಟಿದೆ. ಜಿ¯್ಲÁ ಕೇಂದ್ರದಲ್ಲಿರುವ ಶಾಲೆಗೆ ಶೋಭೆ ತರುವುದಿಲ್ಲ ಎಂದು ಅಸಮಾಧಾನ ಹೊರಹಾಕಿದರು.
-Àಲಿತಾಂಶ ಹೆಚ್ಚಳಕ್ಕೆ ಬಿಇಒ, ಮುಖ್ಯ ಶಿಕ್ಷಕರು, ಶಿಕ್ಷಕರು ಯಾವ ಕ್ರಮ ಕೈಗೊಂಡಿz್ದÁರೆ ಎಂಬುದನ್ನು ಮುಂದಿನ ವಾರ ನಾನೇ ಖುz್ದÁಗಿ ಶಾಲೆಗೆ ಭೇಟಿ ನೀಡಿ ಪರಿಶೀಲಿಸುತ್ತೇನೆ ಎಂದರು.
ವಿದ್ಯಾರ್ಥಿನಿಯರು ಶಾಲೆಯಿಂದ ಹೊರಗುಳಿಯುವುದನ್ನು ತಪ್ಪಿಸಲು ಬೈಸಿಕಲï ವಿತರಣೆ ಅತ್ಯಂತ ಪರಿಣಾಮಕಾರಿ ಮಾರ್ಗ. ಹಳ್ಳಿಗಳಲ್ಲಿ ಇಂದಿಗೂ ಹೆಣ್ಣುಮಕ್ಕಳು ೫ರಿಂದ ೮ ಕಿ.ಮೀ ನಡೆದು ಶಾಲೆಗೆ ಹೋಗುವುದನ್ನು ಗಮನಿಸಿದ್ದೇನೆ. ಈ ಕಷ್ಟ ತಪ್ಪಿಸಲು ಸರ್ಕಾರ ಬದ್ಧವಾಗಿದೆ ಎಂದರು.
ಈಚೆಗೆ ಸಿಎಂ ನಡೆಸಿದ ಯೋಜನಾ ಇಲಾಖೆಯ ಸಭೆಯಲ್ಲಿ ಶಿಕ್ಷಣ ತಜ್ಞರು ಸಲ್ಲಿಸಿದ ವರದಿಯ ಪ್ರಕಾರ, ಸೈಕಲï ಸೌಲಭ್ಯ ಒದಗಿ ಸುವುದರಿಂದ ಮಕ್ಕಳ ಶಾಲಾ ಡ್ರಾಪ್‌ಔಟ್ ಪ್ರಮಾಣ ಗಣನೀಯವಾಗಿ ತಗ್ಗಿಸಬಹುದು ಎಂಬ ಅಂಶ ಬೆಳಕಿಗೆ ಬಂದಿದೆ ಎಂದರು.
ಎಸ್‌ಬಿಐ ದೊಡ್ಡ ಸಂಸ್ಥೆಯಾಗಿದ್ದು, ಕೇವಲ ೧೦೦ ಸೈಕಲï‌ಗಳ ವಿತರಣೆಗೆ ಸೀಮಿತವಾಗಬಾರದು. ಸರ್.ಎಂ. ವಿಶ್ವೇಶ್ವರಯ್ಯ ಅ ವರು ಕಟ್ಟಿ ಬೆಳೆಸಿದ ಸಂಸ್ಥೆ ಇದು. ಚಿತ್ರದುರ್ಗದಂತಹ ಬರಪೀಡಿತ ಜಿ¯್ಲೆಯ ಬಡ ಮಕ್ಕಳ ಶಿಕ್ಷಣಕ್ಕೆ ಬ್ಯಾಂಕ್‌ಗಳು ಉದಾರ ವಾಗಿ ನೆರವಾಗಬೇಕು.
ಈ ಸೌಲಭ್ಯ ಜಿ¯್ಲÉಯ ಎಲ್ಲ ತಾಲೂಕುಗಳಿಗೂ ವಿಸ್ತರಿಸಬೇಕು ಎಂದು ಸಲಹೆ ನೀಡಿದರು. ಇದೇ ವೇಳೆ ಎಸ್‌ಬಿಐನ ಸಿಎಸ್‌ಆರ್ ನಿಽಯಡಿ ೧೦೦, ಪಾಲಕರು ಹಾಗೂ ಶಿಕ್ಷಕರಿಂದ ೧೫ ಸೇರಿ ಒಟ್ಟು ೧೧೫ ವಿದ್ಯಾರ್ಥಿನಿಯರಿಗೆ ಬೈಸಿಕಲ್ ವಿತರಿಸಲಾಯಿತು.
ಎಡಿಸಿ ಬಿ.ಟಿ.ಕುಮಾರಸ್ವಾಮಿ, ಗ್ಯಾರಂಟಿ ಯೋಜನೆ ಅನುಷ್ಠಾನ ಪ್ರಾಽಕಾರದ ಜಿ¯್ಲÁಧ್ಯಕ್ಷ ಆರ್.ಶಿವಣ್ಣ, ಕೂಡಾ ಅಧ್ಯಕ್ಷ ಎಂ.ಕೆ. ತಾಜ್‌ಪೀರ್, ಬ್ಯಾಂಕ್ ಅಽಕಾರಿ ಅಲೋಕ್‌ಚಂದ್ರ, ಡಿಡಿಪಿಐ ಎಂ.ಆರ್.ಮAಜುನಾಥ್, ಬಿಇಒ ಗಿರಿಜಾ, ಕ್ಷೇತ್ರ ಸಮನ್ವ ಯಾಽಕಾರಿ ಸಂಪತ್‌ಕುಮಾರ್, ಎಸ್‌ಡಿಎಂಸಿ ಅಧ್ಯಕ್ಷ ಏಳುಕೋಟಿ, ಸಾಯಿ ನಯನ್‌ಕುಮಾರ್, ಕಾಲೇಜಿನ ಪ್ರಾಚಾರ್ಯ ಸಣ್ಣಪಾಲಯ್ಯ, ಉಪ ಪ್ರಾಚಾರ್ಯ ಕರಿಯಪ್ಪ ಇತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net