ಎಲ್‌ಪಿಆರ್ ವಿಲೇವಾರಿಗೆ ವಿಶೇಷ ಅಭಿಯಾನ

ಜಿಲ್ಲೆಯಲ್ಲಿ ೪೦ ವರ್ಷಗಳಿಂದ ೨೬೮ ಕೇಸ್‌ಗಳು ಪೆಂಡಿAಗ್
ಚಿತ್ರದುರ್ಗ ಜಿಲ್ಲಾ ಪೊಲೀಸ್ ಕಚೇರಿ.
ಚಿತ್ರದುರ್ಗ ಜಿಲ್ಲಾ ಪೊಲೀಸ್ ಕಚೇರಿ.
Published on: 

ಡಿಪಿಎನ್ ಶ್ರೇಷ್ಠಿ, ಚಿತ್ರದುರ್ಗ

ಅಪರಾಧ ಪ್ರಕರಣಗಳಲ್ಲಿ ಭಾಗಿಯಾಗಿ ಕೋರ್ಟ್ ವಿಚಾರಣೆಗೆ ಹಾಜರಾಗದೇ ತಲೆ ಮರೆಸಿಕೊಂಡಿರುವ ಆರೋಪಿಗಳ ಪತ್ತೆಗೆ ಜಿಲ್ಲಾ ಪೊಲೀಸ್ ಇಲಾಖೆ ವಿಶೇಷ ಅಭಿಯಾನ ಹಮ್ಮಿಕೊಂಡಿದೆ.

ಜಿಲ್ಲೆಯ ವಿವಿಧ ಠಾಣೆಗಳ ವ್ಯಾಪ್ತಿಯಲ್ಲಿ ೨೦೨೫ ಡಿಸೆಂಬರ್ ಅಂತ್ಯಕ್ಕೆ, ಆರೋಪಿ ಅಥವಾ ಆರೋಪಿತರು ತಲೆ ಮರೆಸಿಕೊಂಡಿರುವ ಲಾಂಗ್ ಪೆಂಡಿAಗ್(ಎಲ್‌ಪಿಆರ್)ಗಳ ೨೭೨ ಕೇಸ್‌ಗಳು ಹಾಗೂ ಈ ವರ್ಷದಲ್ಲಿ ಸೇರ್ಪಡೆಯಾಗಿರುವ ೨ ಪ್ರಕರಣಗಳ ಸಹಿತ ಜಿಲ್ಲೆಯಲ್ಲಿ ೨೭೪ ಪ್ರಕರಣಗಳಿವೆ. ಇವುಗಳಲ್ಲಿ ಪ್ರಸಕ್ತ ವರ್ಷ ಆರು ಮಾತ್ರ ವಿಲೇ ಮಾಡಲಾಗಿದೆ.

ಅಂದಾಜು ೪೦ ವರ್ಷಗಳಿಂದ ಜಿಲ್ಲೆಯಲ್ಲಿ ಆದ ಹಲವು ಸೆನ್ಸೇಷನಲ್ ಪ್ರಕರಣಗಳು ಸೇರಿ ನಾನಾ ಅಪರಾಧ ಪ್ರಕರಣಗಳಲ್ಲಿ ಬಂಧನಕ್ಕೆ ಒಳಗಾಗಿ ಜಾಮೀನು ಮೇಲೆ ಬಿಡುಗಡೆಯಾಗಿದ್ದ ಆರೋಪಿತರು ನಂತರದ ದಿನಗಳಲ್ಲಿ ಕೋರ್ಟಿಗೆ ಹಾಜರಾಗದೆ. ತಲೆ ಮರೆಸಿಕೊಂಡು ಪೊಲೀಸರಿಗೆ ಚಳ್ಳೆ ಹಣ್ಣು ತಿನ್ನಿಸುತ್ತಾ ಬಂದಿದ್ದಾರೆ. ಆರೋಪಿತರ ಹಾಗೂ ಜಾಮೀನುದಾರರ ಹೆಸರು, ವಿಳಾಸ ಮತ್ತಿತರ ವಿವರದಲ್ಲಿ ನಮೂದಾಗಿರುವ ತಪ್ಪು ಮಾಹಿತಿಯಿಂದಾಗಿ ಪೊಲೀಸರಿಗೆ ಆರೋಪಿತರ ಪತ್ತೆ ಕಠಿಣವಾಗುತ್ತಿದೆ.

ಹೇಗಾದರೂ ಸರಿ ಇಂಥವರನ್ನು ಬಂಽಸಿ ವಿಚಾರಣೆಗೆ ಹಾಜರುಪಡಿಸಲು ಪೊಲೀಸರು ಮುಂದಾಗಿದ್ದಾರೆ. ಈ ನಿಟ್ಟಿನಲ್ಲಿ ಮೊಳಕಾಲ್ಮೂರು ಠಾಣೆ ವ್ಯಾಪ್ತಿಯ ದರೋಡೆ ಪ್ರಕರಣವೊಂದರಲ್ಲಿ ೨೨ ವರ್ಷಗಳಿಂದ ಬೇಕಾಗಿದ್ದ ಆರೋಪಿಯನ್ನು ಬಂಽಸಲಾಗಿದೆ.

೨೦೧೦ರ ನಂತರದಿAದ ಅಪರಾಧ ಪ್ರಕರಣಗಳಲ್ಲಿ ಸಿದ್ಧಪಡಿಸುವ ದಾಖಲೆಗಳಲ್ಲಿ ಆರೋಪಿ ಹೆಸರು, ವಿಳಾಸ, ಆಧಾರ್ ಕಾರ್ಡ್, ಮೊಬೈಲ್‌ನಂ ಸಹಿತ ಮಾಹಿತಿ ದಾಖಲಿಸಲಾಗುತ್ತಿದೆ. ಇದೇ ಮಾದರಿ ಜಾಮೀನುದಾರರ ಮಾಹಿತಿ ಪಡೆಯುತ್ತಿರುವುದರಿಂದ ಎಲ್‌ಪಿಆರ್ ಸಂಖ್ಯೆ ಕಡಿಮೆಯಾಗುತ್ತಿದೆ.

ಜಿಲ್ಲೆಯ ನಾನಾ ಠಾಣೆಗಳಲ್ಲಿರುವ ಬಾಕಿ ಇರುವ ಎಲ್‌ಪಿಆರ್‌ಗಳು

ಚಿತ್ರದುರ್ಗ ನಗರ ಠಾಣೆ ೨೪, ಕೋಟೆ ಠಾಣೆ -೨೭, ಬಡಾವಣೆ ಠಾಣೆ-೧, ಚಿತ್ರದುರ್ಗ ಗ್ರಾಮಾಂತರ ಠಾಣೆ-೧೧, ಭರಮಸಾಗರ-೧೪, ಹೊಳಲ್ಕೆರೆ ಠಾಣೆ-೫, ಚಿಕ್ಕಜಾಜೂರು-೫, ಹಿರಿಯೂರು ನಗರ ಠಾಣೆ-೫೬, ಹಿರಿಯೂರು ಗ್ರಾಮಾಂತರ ಠಾಣೆ-೧೮, ಐಮಂಗಲ-೫, ಅಬ್ಬಿನಹೊಳೆ-೩, ಹೊಸದುರ್ಗ-೩೭, ಶ್ರೀರಾಂಪುರ-೮, ಚಳ್ಳಕೆರೆ-೨೮, ಪಿ.ಆರ್.ಪುರ-೮, ತಳಕು-೧, ನಾಯಕನಹಟ್ಟಿ-೨, ಮೊಳಕಾ ಲ್ಮೂರು-೧೧, ರಾಂಪುರ-೪.

ಎAಸಿಯು ನೆರವು

ಆಧಾರ್‌ಕಾರ್ಡ್, ಮೊಬೈಲ್‌ನಂ ಇತ್ಯಾದಿ ಮಾಹಿತಿಗಳಿಂದಾಗಿ ಒಂದೆಡೆ ಎಲ್‌ಪಿಆರ್ ಕಡಿಮೆ ಆಗುತ್ತಿದ್ದರೆ, ಇದಕ್ಕೆ ಪೂರಕವಾಗಿ ರಾ ಜ್ಯದ ಎಲ್ಲ ಜಿಲ್ಲೆಗಳು, ಪೊಲೀಸ್ ಕಮಿಷನ್‌ರೇಟ್ ವ್ಯಾಪ್ತಿಯ ನಗರಗಳು ಹಾಗೂ ಕರ್ನಾಟಕ ರೈಲ್ವೇಸ್‌ನಲ್ಲಿ ಆರಂಭಿಸಿರುವ ಮೆಸರ್ ಮೆಂಟ್ ಕಲೆಕ್ಷನ್ ಯುನಿಟ್(ಎಂಸಿಯು)ಗಳು ಎಲ್‌ಪಿಆರ್ ಸಂಖ್ಯೆ ತಗ್ಗಿಸಲು ನೆರವಾಗಿವೆ.

೩ ವರ್ಷಗಳಿಗಿಂತ ಅಽಕ ಶಿಕ್ಷೆಗೆ ಗುರಿಯಾಗುವಂಥ ಅಪರಾಧ ಕೃತ್ಯಗಳ ಆರೋಪಿಗಳ ವಿವರವನ್ನು ಎಂಸಿಯುನಲ್ಲಿ ಸಂಗ್ರಹಿಸಲಾಗುತ್ತಿದೆ. ಆರೋಪಿ ಎತ್ತರ, ತೂಕ, ಭಾವಚಿತ್ರ, ಹಸ್ತರೇಖೆ, ಹೆಜ್ಜೆ ಗುರುತು, ಕಣ್ಣಿನ ರೇಖೆ ಮತ್ತು ಡಿಎನ್‌ಎ ಪರೀಕ್ಷೆಗೆ ಪೂರಕವಾಗಿ ರಕ್ತ ಮ ತ್ತು ಜೊಲ್ಲು ಸಂಗ್ರಹ, ಸಹಿ ಮತ್ತು ಬರವಣಿಗೆಯೊಂದಿಗೆ ಬಂಽತ ಆರೋಪಿ ಸಂಪೂರ್ಣ ಜಾತಕ ಸಿದ್ಧಪಡಿಸಲಾಗುತ್ತಿದೆ. ಇದು ತನಿಖೆ ವೇಳೆ ಪೊಲೀಸರಿಗೆ ನೆರವಾಗಲಿದೆ. ಸಿಸಿ ಟಿವಿ ಕ್ಯಾಮರಾಗಳಲ್ಲಿ ದೃಶ್ಯ ಆಧರಿಸಿ ತನಿಖೆಗೆ ಸುಲಭವಾಗುವಂತೆ ವಿವಿಧ ಆಂಗ್ಯಲ್‌ಗಳಲ್ಲಿ ಆ ರೋಪಿ ಪೋಟೊಗ್ರಫಿ ಮಾಡಲಾಗುತ್ತದೆ.

೧೭ ಕಳ್ಳತನ ಪ್ರಕರಣಗಳ ಪತ್ತೆ

ರಾಷ್ಟಿçÃಯ ಸ್ವಯಂಚಾಲಿತ ಬೆರಳಚ್ಚು ಗುರುತಿಸುವಿಕೆ ವ್ಯವಸ್ಥೆಯಿಂದಲೂ ಆರೋಪಿತರ ಪತ್ತೆಗೆ ಅನುಕೂಲವಾಗುತ್ತಿದೆ. ಬೆರಳಚ್ಚು ಮಾದರಿ ಸಂಗ್ರಹದಿAದಾಗಿ ವಿವಿಧ ೧೭ ಕಳ್ಳತನ ಪ್ರಕರಣಗಳನ್ನು ಭೇದಿಸಲಾಗಿದೆ. ಒಂದು ಅಪರಿಚಿತ ಶವದ ವಿವರ ಪತ್ತೆಯಾಗಿದೆ. ಪ್ರಾ ಯೋಗಿಕವಾಗಿ ಚಿತ್ರದುರ್ಗ ನಗರ ಠಾಣೆಯಲ್ಲಿ ಸ್ಥಾಪಿಸಿರುವ ಎಂಸಿಯುನಲ್ಲಿ ಆರಂಭದಿAದ ಈವರೆಗೆ ೧೮೮ ಆರೋಪಿತರ ವಿವರ ಸಂಗ್ರ ಹಿಸಲಾಗಿದ್ದು, ಯಾವುದೇ ಕಳ್ಳತನ, ಅಪರಾಧ ಕೃತ್ಯಗಳಾಗದಂಥ ಸಂದರ್ಭದಲ್ಲಿ ಸಾರ್ವಜನಿಕರು ಕೃತ್ಯ ನಡೆದ ಸ್ಥಳದಿಂದ ದೂರ ಉಳಿ ದರೆ ಶೀಘ್ರಗತಿಯ ತನಿಖೆ ಸಾಧ್ಯವಾಗಲಿದೆ ಎನ್ನುತ್ತಾರೆ ಪೊಲೀಸರು.

ಜಿಲ್ಲೆಯ ವಿವಿಧ ಠಾಣೆಗಳ ವ್ಯಾಪ್ತಿಯಲ್ಲಿ ಅಂದಾಜು ೪೦ ವರ್ಷಗಳಿಂದ ಬಾಕಿ ಇರುವ ಎಲ್‌ಪಿಆರ್ ಪ್ರಕರಣಗಳ ವಿಲೇವಾರಿಗೆ ವಿಶೇಷ ಅಭಿಯಾನ ನಡೆಸಲಾಗುವುದು. ೨೦೧೦ರಿಂದೀಚೆಗೆ ಈ ಸಂಖ್ಯೆಯಲ್ಲಿ ಗಣನೀಯವಾಗಿ ಕಡಿಮೆ ಆಗುತ್ತಿದೆ.
ಕುಶಲ್ ಚೌಕ್ಸೆ, ಎಸ್‌ಪಿ, ಚಿತ್ರದುರ್ಗ.