ಸಾಮಾಜಿಕ ಭದ್ರತಾ ಯೋಜನೆಗಳ ನೋಂದಣಿಗೆ ವಿಶೇಷ ಅಭಿಯಾನ

ಚಿತ್ರದುರ್ಗದಲ್ಲಿ ಮಂಗಳವಾರ ಜಿಲ್ಲಾ ಸಲಹಾ ಸಮಿತಿ ಹಾಗೂ ಪರಿಶೀಲನಾ ಸಮಿತಿ ಸಭೆಯಲ್ಲಿ ಡಾ.ಎಸ್.ಆಕಾಶ್, ರಾಘವೇಂದ್ರ, ಅರುಣ್‌ಕುಮಾರ್, ವಿನ್ನತ್, ಸುನೀತಾ, ಜಯಲಕ್ಷಿ÷್ಮÃ, ಜಗನಾಥ್ ಇತರರು ಇದ್ದರು.
ಚಿತ್ರದುರ್ಗದಲ್ಲಿ ಮಂಗಳವಾರ ಜಿಲ್ಲಾ ಸಲಹಾ ಸಮಿತಿ ಹಾಗೂ ಪರಿಶೀಲನಾ ಸಮಿತಿ ಸಭೆಯಲ್ಲಿ ಡಾ.ಎಸ್.ಆಕಾಶ್, ರಾಘವೇಂದ್ರ, ಅರುಣ್‌ಕುಮಾರ್, ವಿನ್ನತ್, ಸುನೀತಾ, ಜಯಲಕ್ಷಿ÷್ಮÃ, ಜಗನಾಥ್ ಇತರರು ಇದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ಜಿಲ್ಲಾ ಸಲಹಾ ಸಮಿತಿಯಲ್ಲಿ ಜಿಪಂ ಸಿಇಒ ನಿರ್ದೇಶನ
  • ನಿರ್ಲಕ್ಷ್ಯಿಸುವ ಬ್ಯಾಂಕ್ ಅಽಕಾರಿಗಳ ವಿರುದ್ಧ ಕಠಿಣ ಕ್ರಮ
  • ಜಿಲ್ಲಾ ಸಲಹಾ ಸಮಿತಿ
ಚಿತ್ರದುರ್ಗ: ಬ್ಯಾಂಕ್‌ಗಳಲ್ಲಿ ೧೦೦ ದಿನಗಳ ವಿಶೇಷ ಅಭಿಯಾನ ನಡೆಸುವ ಮೂಲಕ ಸಾಮಾಜಿಕ ಭದ್ರತಾ ಯೋಜನೆಗಳಾದ ಪ್ರಧಾನಮಂತ್ರಿ ಜೀವನ್ ಜ್ಯೋತಿ ಬೀಮಾ ಯೋಜನೆ(ಪಿಎಂಜೆಜೆಬಿವೈ), ಪ್ರಧಾನಮಂತ್ರಿ ಸುರಕ್ಷಾ ಭಿಮಾ ಯೋಜನೆ (ಪಿಎಂಎಸ್‌ಬಿವೈ), ಮತ್ತು ಅಟಲ್ ಪೆನ್ಷನ್ ಯೋಜನೆ(ಎಪಿವೈ) ನೋಂದಣಿಗೆ ಶ್ರಮಿಸುವಂತೆ ಜಿಪಂ ಸಿಇಒ ಡಾ.ಎಸ್. ಆಕಾಶ್ ಬ್ಯಾಂಕ್ ಅಽಕಾರಿಗಳಿಗೆ ಸೂಚಿಸಿದರು.
ಜಿಲ್ಲಾ ಮಾರ್ಗದರ್ಶಿ ಬ್ಯಾಂಕ್ ನೇತೃತ್ವದಲ್ಲಿ ಜಿಪಂನಲ್ಲಿ ಮಂಗಳವಾರ ಆಯೋಜಿಸಿದ್ದ ಜಿಲ್ಲಾ ಸಲಹಾ ಸಮಿತಿ ಹಾಗೂ ಪರಿಶೀಲ ನಾ ಸಮಿತಿ ಸಭೆಯಲ್ಲಿ ಮಾತನಾಡಿ, ರಾಜ್ಯದ ಇತರೆ ಜಿಲ್ಲೆಗಳಿಗೆ ಹೋಲಿಸಿದರೆ ಚಿತ್ರದುರ್ಗ ಜಿಲ್ಲೆಯಲ್ಲಿ ನೋಂದಣಿ ಪ್ರಮಾಣ ಅ ತ್ಯಂತ ಕಡಿಮೆಯಿದೆ. ಜಿಲ್ಲೆಯ ಬ್ಯಾಂಕ್‌ಗಳ ನಿರ್ಲಕ್ಷ್ಯ ಹಾಗೂ ವಿಳಂಬ ಇದಕ್ಕೆ ಕಾರಣ ಎಂದರು.
ಪಿಎAಜೆಜೆಬಿವೈಯಡಿ ೧೮ ರಿಂದ ೫೦ ವಯಸ್ಸಿನವರೆಗಿನ ನಾಗರಿಕರು ೪೩೬ ರೂ., ಪಿಎಂಎಸ್‌ಬಿವೈ ಅಡಿ ೧೮-೭೦ ವಯ ಸ್ಸಿನವರೆಗಿನ ನಾಗರಿಕರು ೨೦ ರೂ. ವಾರ್ಷಿಕ ಪ್ರೀಮಿಯಂ ಪಾವತಿಸಿದರೆ ಯಾವುದೇ ರೀತಿಯ ಮರಣ ಸಂಭವಿಸಿದರೂ ಅವರ ವಾರಸುದಾರಿಗೆ ಪ್ರತಿ ಯೋಜನೆಯಡಿ ೨ ಲಕ್ಷ ರೂ. ವಿಮೆ ಸೌಲಭ್ಯ ದೊರೆಯಲಿದೆ.
ಈ ಬಗ್ಗೆ ಗ್ರಾಹಕರ ಮನವೊಲಿಸಿ ನೋಂದಣಿ ಮಾಡಿಸಬೇಕು. ವಿವಿಧ ಬ್ಯಾಂಕ್‌ಗಳಲ್ಲಿ ಖಾತೆಗಳು ಹಾಗೂ ನೋಂದಣಿ ಸಂಖ್ಯೆ ಯಲ್ಲಿ ಅಜಗಜಾಂತರ ವ್ಯತ್ಯಾಸವಿದೆ. ಪ್ರತಿ ಶಾಖೆಯಲ್ಲಿ ವಿವಿಧ ಯೋಜನೆಗಳಿಗೆ ದಿನಕ್ಕೆ ೧೦ ನೋಂದಣಿಯೊAದಿಗೆ ೧೦ ಸಾವಿರ ನೋಂದಣಿ ಗುರಿ ಸಾಽಸಬೇಕು ಎಂದು ತಿಳಿಸಿದರು.
ನೋಂದಣಿಯಲ್ಲಿ ಉತ್ತಮ ಸಾಧನೆ ಮಾಡಿದ ಬ್ಯಾಂಕ್ ಅಽಕಾರಿಗಳಿಗೆ ಅಭಿನಂದಿಸಿದರು. ಜೂನ್ ಮೊದಲ ವಾರದ ಪ್ರಗತಿ ಪರಿ ಶೀಲನಾ ಸಭೆಯೊಳಗೆ ಗುರಿ ತಲುಪದಿದ್ದರೆ, ಬ್ಯಾಂಕ್ ಅಽಕಾರಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು. ನಡಾವಳಿಯಲ್ಲಿ ದಾಖಲಿಸಿ ಆರ್‌ಬಿಐಗೆ ವರದಿ ಸಲ್ಲಿಸುವುದಾಗಿ ಎಚ್ಚರಿಸಿದರು.
ಜಿಲ್ಲಾ ಮಾರ್ಗದರ್ಶಿ ಬ್ಯಾಂಕ್ ವ್ಯವಸ್ಥಾಪಕ ಎಂ.ರಾಘವೇಂದ್ರ, ಆರ್‌ಬಿಐ ಪ್ರಾದೇಶಿಕ ವ್ಯವಸ್ಥಾಪಕ ಅರುಣ್‌ಕುಮಾರ್, ನಬಾರ್ಡ್ ಜಿಲ್ಲಾ ವ್ಯವಸ್ಥಾಪಕ ವಿನ್ನತ್, ಕೆನರಾ ಬ್ಯಾಂಕ್ ವಿಭಾಗೀಯ ವ್ಯವಸ್ಥಾಪಕಿ ಸುನೀತಾ, ಜಿಪಂ ಯೋಜನಾ ನಿರ್ದೇಶಕಿ ಜಯಲಕ್ಷಿ÷್ಮÃ, ಕರ್ನಾಟಕ ಬ್ಯಾಂಕ್ ಪ್ರಾದೇಶಿಕ ವ್ಯವಸ್ಥಾಪಕ ಜಗನಾಥ್ ಮತ್ತಿತರರು ಇದ್ದರು.
ಬ್ಯಾಂಕ್ ಶಾಖೆಗಳ ಸ್ಥಳಾಂತರ ಬೇಡ
ಜಿಲ್ಲೆಯ ವಿವಿಧ ತಾಲೂಕುಗಳಲ್ಲಿರುವ ಕೆನರಾ ಬ್ಯಾಂಕ್‌ನ ಆರು ಶಾಖೆಗಳನ್ನು ಮೂಲ ಸೌಕರ್ಯಗಳ ಕೊರತೆ ನೆಪದಲ್ಲಿ ಸ್ಥಳಾಂತರಿಸದAತೆ ಸಿಇಒ ಸೂಚಿಸಿದರು.
ಶಾಖೆಗಳ ಸ್ಥಳಾಂತರ ಪ್ರಸ್ತಾವನೆಯನ್ನು ತಿರಸ್ಕರಿಸಿದ ಅವರು, ಗ್ರಾಮೀಣ ಜನರಿಗೆ ತೊಂದರೆಯಾಗದAತೆ ಅದೇ ಸ್ಥಳಗಳಲ್ಲಿ ಮುಂದುವರಿಸಬೇಕು. ಗ್ರಾಪಂ ಮತ್ತು ತಾಪಂ ಅಽಕಾರಿಗಳು ಮಾ. ೩೧ರೊಳಗೆ ಅಗತ್ಯ ದುರಸ್ತಿ ಹಾಗೂ ನವೀಕರಣ ಕಾಮಗಾರಿ ಪೂರ್ಣಗೊಳಿಸುತ್ತಾರೆ ಎಂದು ಸಿಇಒ ಹೇಳಿದರು.
ನಿಷ್ಕಿçಯ ಠೇವಣಿ
ಜಿಲ್ಲೆಯ ವಿವಿಧ ಬ್ಯಾಂಕ್‌ಗಳಲ್ಲಿರುವ ಸ್ಥಗಿತ ಠೇವಣಿಗಳ ಮೊತ್ತವನ್ನು ವಾರಸುದಾರರಿಗೆ ತಲುಪಿಸುವ ಅಭಿಯಾನ ಚುರುಕುಗೊಳಿಸುವಂತೆ ಸಿಇಒ ಸೂಚಿಸಿದರು.
ಜಿಲ್ಲೆಯಲ್ಲಿ ೩,೦೮,೮೯೮ ನಿಷ್ಕಿಯ ಖಾತೆಗಳಲ್ಲಿ ೬೭ ಕೋಟಿ ರೂ. ಇದೆ. ಕಳೆದ ಅಕ್ಟೋಬರ್ ೧ರಿಂದ ಡಿಸೆಂಬರ್ ೩೧ರವರೆಗೆ ನಡೆದ ಅಭಿಯಾನದಡಿ ೧೨೨ ಪ್ರಕರಣಗಳಲ್ಲಿ ೫.೫೨ ಕೋಟಿ ರೂ .ಹಿಂದಿರುಗಿಸಲಾಗಿದೆ. ಈ ಪ್ರಕ್ರಿಯೆ ನಿರಂತರ ನಡೆಯಬೇಕು. ಗ್ರಾಹಕರ ಅನುಕೂಲಕ್ಕಾಗಿ ಕನ್ನಡವನ್ನು ಕಡ್ಡಾಯ ಬಳಸಬೇಕು. ವಿವಿಧ ಇಲಾಖೆ, ನಿಗಮ ಮಂಡಳಿಗಳಿAದ ಸಾಲ ಸೌಲಭ್ಯಕ್ಕೆ ಸಲ್ಲಿಕೆಯಾದ ಅರ್ಜಿಗಳನ್ನು ೩೦ ದಿನಗಳ ಒಳಗಾಗಿ ವಿಲೇವಾರಿ ಮಾಡಬೇಕೆಂದು ಆಕಾಶ್ ತಿಳಿಸಿದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net