ಚಿತ್ರದುರ್ಗ: ಕರ್ತವ್ಯ ಆ್ಯಪ್ನಲ್ಲಿ ಲಾಗ್ಇನ್, ಲಾಗ್ಔಟ್ ಸಮರ್ಪಕವಾಗಿ ದಾಖಲಿಸಲಾಗದ ವೈದ್ಯರು, ಸಿಬ್ಬಂದಿ ವಿರುದ್ಧ ಕ್ರಮ ಕೈಗೊಳ್ಳುವಂತೆ ಆರೋಗ್ಯ, ಅಲ್ಪಸಂಖ್ಯಾತರ ಕಲ್ಯಾಣ, ಹಜ್ಮತ್ತು ವಕ್ ಸಚಿವ ಯು.ಟಿ. ಖಾದರ್ ಅಽಕಾರಿಗಳಿಗೆ ನಿರ್ದೇಶಿಸಿದರು.
ಡಿಸಿ ಕಚೇರಿಯಲ್ಲಿ ಪ್ರಗತಿ ಪರಿಶೀಲಿಸಿ ಮಾತನಾಡಿ, ಕರ್ತವ್ಯದ ವೇಳೆ ಹಾಜರಿರದ ವೈದ್ಯರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು. ಜಿಲ್ಲಾಸ್ಪತ್ರೆಯಲ್ಲಿ ಸಮಯಕ್ಕೆ ಸರಿಯಾಗಿ ಹಾಜರಿರದ ವೈದ್ಯರ ಮೇಲೆ ನಿಗಾ ವಹಿಸದಿದ್ದರೆ ನಿಮ್ಮ ವಿರುದ್ಧವೇ ಶಿಸ್ತು ಕ್ರಮ ಅನಿವರ್ಯ ಎಂದು ಡಿಎಸ್ ಡಾ.ಎಸ್.ಪಿ. ರವೀಂದ್ರ ಅವರಿಗೆ ಎಚ್ಚರಿಸಿದರು.
ಸರ್ಕಾರಿ ವೈದ್ಯಕೀಯ ಕಾಲೇಜು, ಆಸ್ಪತ್ರೆಗಳಿರುವ ನಗರಗಳಿಂದ ಅನ್ಯ ನಗರಗಳಿಗೆ ವಿನಾ ಕಾರಣ ರೆಫರಲ್ ಮಾಡುವುದನ್ನು ನಿಯಂತ್ರಿಸಲು ವೈದ್ಯಕೀಯ ಶಿಕ್ಷಣ ಸಚಿವರೊಂದಿಗೆ ಚರ್ಚಿಸಿ ಪ್ರಮಾಣಿತ ಕಾರ್ಯಾಚರಣೆ ವಿಧಾನ(ಎಸ್ಒಪಿ)ಸಿದ್ಧಪಡಿಸಲಾಗುವುದು. ನಿಮಗೆ ಸುಲಭವಾಗಲಿ ಎಂಬ ಕಾರಣಕ್ಕೆ ಎಲ್ಲ ರೋಗಿಗಳ ರೆಫರಲ್ ಸರಿ ಅಲ್ಲ ಎಂದರು.
ಟಿಎಚ್ಒಗಳು ಪ್ರಾಥಮಿಕ ಆರೋಗ್ಯ ಕೇಂದ್ರಗಳಿಗೆ ತಿಂಗಳಿಗೆ ಕನಿಷ್ಠ ೩ ಬಾರಿ ಭೇಟಿ ನೀಡಿ ಪರಿಶೀಲಿಸಬೇಕು. ನೀವು ಅಲ್ಲಿಗೆ ತೆರಳಿ ಭೇಟಿ ಪುಸ್ತಕದಲ್ಲಿ ಸಹಿ ಮಾಡಿದರೆ ಆರೋಗ್ಯ ಕೇಂದ್ರಗಳ ಸ್ಥಿತಿ ಸುಧಾರಿಸದು. ಅಲ್ಲಿನ ಕೊರತೆ, ಸಮಸ್ಯೆಗಳು ಹಾಗೂ ಕೈಗೊಳ್ಳಬೇಕಾದ ಸುಧಾರಣೆ ಕುರಿತು ವಿಸ್ಕೃತ ವರದಿ ನೀಡಬೇಕೆಂದು ತಾಕೀತು ಮಾಡಿದರು.
ತಿಂಗಳಲ್ಲಿ ಕನಿಷ್ಠ ಒಂದು ಬಾರಿಯಾದರೂ ಸ್ಥಳೀಯ ಶಾಸಕರು, ಸಂಘಸAಸ್ಥೆಗಳು ಹಾಗೂ ಆಸ್ಪತ್ರೆಯ ಸಿಬ್ಬಂದಿ ಒಳಗೊಂಡAತೆ ಸಭೆ ನಡೆಸಬೇಕು. ಆಸ್ಪತ್ರೆಯ ನವೀಕರಣ, ಶೌಚಗೃಹಗಳ ಸ್ವಚ್ಛತೆ, ಸುಣ್ಣ ಬಣ್ಣ ಬಳಿಯುವ ಕೆಲಸಗಳಿಗೆ ಅನುದಾನಕ್ಕೆ ಕಾಯದೆ ಶಾಸಕರು, ಸಂಸ್ಥೆಗಳ ನೆರವು ಪಡೆವುದು ನಿಮ್ಮ ಜವಾಬ್ದಾರಿ ಎಂದು ಟಿಎಚ್ಒಗಳಿಗೆ ತಿಳಿಸಿದರು.
ಆಸ್ಪತ್ರೆ ಮತ್ತು ಸಾರ್ವಜನಿಕರ ನಡುವೆ ನೀವು ಸೇತುವೆಯಾಗಿರಬೇಕು. ಆಗ ವೈದ್ಯರು, ಸಿಬ್ಬಂದಿಯಲ್ಲಿ ಜನರಿಗೆ ಆತ್ಮವಿಶ್ವಾಸ, ಸರ್ಕಾರಿ ಆಸ್ಪತ್ರೆಗಳ ಮೇಲೆ ಜನರಿಗೆ ನಂಬಿಕೆ ಹೆಚ್ಚಾಗುತ್ತದೆ ಎಂದರು.
ಪಿಎಚ್ಸಿಗಳಲ್ಲಿ ವೈದ್ಯರು, ನರ್ಸ್ಗಳು, -Áರ್ಮಸಿಸ್ಟ್ ಸೇರಿದಂತೆ ಆರೋಗ್ಯ ಸಿಬ್ಬಂದಿ, ಅಗತ್ಯ ಔಷಧಗಳ ಲಭ್ಯತೆ ಮಾಹಿತಿ ಪಡೆದ ಸಚಿವರು, ರೇಬೀಸ್ ಹಾಗೂ ಹಾವಿನ ಕಡಿತಕ್ಕೆ ನೀಡುವ ಆಂಟಿವೆನಮ್ ನಂತಹ ತುರ್ತು ಜೀವ ರಕ್ಷಕ ಔಷಧಗಳು ಪ್ರತಿ ಆಸ್ಪತ್ರೆಯಲ್ಲಿ ಕಡ್ಡಾಯವಾಗಿ ದಾಸ್ತಾನಿರಬೇಕೆಂದು ಸೂಚಿಸಿದರು.
ಶಾಸಕ ಕೆ.ಸಿ. ವೀರೇಂದ್ರ ಪಪ್ಪಿ, ಕುಡಾ ಅಧ್ಯಕ್ಷ ಎಂ.ಕೆ. ತಾಜ್ಪೀರ್, ಜಿಲ್ಲಾ ಗ್ಯಾರಂಟಿ ಯೋಜನೆ ಅನುಷ್ಠಾನ ಪ್ರಾಽಕಾರದ ಅಧ್ಯಕ್ಷ ಆರ್. ಶಿವಣ್ಣ, ಉಪಾಧ್ಯಕ್ಷ ಡಿ.ಎನ್. ಮೈಲಾರಪ್ಪ, ಡಿಸಿ ಎಸ್. ರಮ್ಯಾ, ಎಸಿ ಡಾ.ಕೆ.ಜಿ. ಕಾಂತರಾಜ್, ಆರೋಗ್ಯ ಇಲಾಖೆ ಜಿಲ್ಲಾ ನೋಡಲ್ ಅಽಕಾರಿ ಡಾ. ರಂಗನಾಥ್, ಡಿಎಚ್ಒ ಡಾ.ಎಂ.ಸಿ. ಸುನೀಲ್ ಕುಮಾರ್, ಡಿಎಸ್ ಡಾ.ಎಸ್.ಪಿ. ರವೀಂದ್ರ, ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ ಜಿಲ್ಲಾ ಅಽಕಾರಿ ಜಿ.ರೇಖಾ, ಮತ್ತಿತರರು ಇದ್ದರು.
ತಾಯಿ, ಮಗುವಿನ ರಕ್ಷಣೆಗೆ ಆದ್ಯತೆ
ಗರ್ಭಿಣಿಯರು ಹಾಗೂ ನವಜಾತ ಶಿಶುಗಳ ಸುರಕ್ಷತೆಗೆ ಹೆಚ್ಚಿನ ಆದ್ಯತೆ ನೀಡಬೇಕು. ಹೈರಿಸ್ಕ್ ಗರ್ಭಿಣಿಯರ ಪ್ರಕರಣಗಳಿದ್ದರೆ ತಕ್ಷಣವೇ ತಾಲೂಕು/ಜಿಲ್ಲಾಸ್ಪತ್ರೆಗೆ ದಾಖಲಿಸಿ ಸೂಕ್ತ ಚಿಕಿತ್ಸೆ ನೀಡಬೇಕು ಎಂದು ಸಚಿವರು ಕಟ್ಟುನಿಟ್ಟಿನ ಸೂಚನೆ ನೀಡಿದರು. ಜಿಲ್ಲೆಯಲ್ಲಿ ಪ್ರಸಕ್ತ ಸಾಲಿನಲ್ಲಿ ೪ ತಾಯಂದಿರ ಮರಣ ಸಂಭವಿಸಿದೆ. ಇವರು ಅಽಕ ರಕ್ತದೊತ್ತಡ ಹಾಗೂ ಶ್ವಾಸಕೋಶದ ಸೋಂಕಿನಿAದ ಮÊತಪಟ್ಟಿದ್ದಾರೆ. ಕಳೆದ ವರ್ಷಕ್ಕೆ ಹೋಲಿಸಿದರೆ ಜಿಲ್ಲೆಯಲ್ಲಿ ತಾಯಿ ಮರಣ ಪ್ರಮಾಣ ಶೇ.೫೦ ಕಡಿಮೆಯಾಗಿದೆ ಎಂದು ಜಿಲ್ಲಾ ಆರ್ಸಿಎಚ್ ಅಽಕಾರಿ ಡಾ. ಡಿ.ಎಂ. ಅಭಿನವ್ ಮಾಹಿತಿ ನೀಡಿದರು. ಆಧುನಿಕ ಸೌಲಭ್ಯಗಳಿದ್ದರೂ ತಾಯಿ ಮರಣ ಸಂಭವಿಸುತ್ತಿರುವುದು ಕಳವಳಕಾರಿ. ಸಣ್ಣ ಅಪಾಯದ ಲಕ್ಷಣಗಳಿದ್ದರೂ ತಕ್ಷಣ ಜಿಲ್ಲಾಸ್ಪತ್ರೆಗೆ ಕಳಿಸಬೇಕು. ಹೆರಿಗೆಗೆ ೩ ದಿನ ಮೊದಲೇ ಗರ್ಭಿಣಿಯರನ್ನು ಆಸ್ಪತ್ರೆಗೆ ದಾಖಲಿಸಿಕೊಳ್ಳಿ ಎಂದು ಸಚಿವರು ಸೂಚಿಸಿದರು.
ಗುಣಮಟ್ಟದ ಶಿಕ್ಷಣ
ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ ವ್ಯಾಪ್ತಿಯ ವಸತಿ ಶಾಲೆ, ಕಾಲೇಜುಗಳಲ್ಲಿ ಗುಣಮಟ್ಟದ ಶಿಕ್ಷಣದೊಂದಿಗೆ ಕ್ರೀಡೆ ಹಾಗೂ ಪಠ್ಯೇತರ ಚಟುವಟಿಕೆಗೆ ಒತ್ತು ನೀಡಬೇಕೆಂದು ಅಽಕಾರಿಗಳು ಮತ್ತು ಪ್ರಾಚಾರ್ಯರಿಗೆ ಸಚಿವರು ಸೂಚಿಸಿದರು. ಜಿಲ್ಲೆಯ ಎಪಿಜೆ ಅಬ್ದುಲ್ಕಲಾಂ, ಮುರಾರ್ಜಿ ದೇಸಾಯಿ ಹಾಗೂ ಮೌಲಾನಾ ಆಜಾದ್ ವಸತಿ ಶಾಲೆಗಳ ಎಸ್ಎಸ್ಎಲ್ಸಿ -Àಲಿತಾಂಶ ಶೇ.೯೦ಕ್ಕಿಂತ ಹೆಚ್ಚಿರುವುದಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದರು. ವಕ್ ಇಲಾಖೆಗೆ ಪ್ರಗತಿ ಪರಿಶೀಲಿಸಿ, ಮಸೀದಿ ಹಾಗೂ ದರ್ಗಾಗಳ ಆಸ್ತಿಗಳ ನೋಂದಣಿ, ಅನುದಾನ ಬಳಕೆ ಮತ್ತು ಖಾತಾ ಪ್ರಕ್ರಿಯೆಗಳ ಕುರಿತು ಮಾಹಿತಿ ಪಡೆದರು.