ನಾಯಕನಹಟ್ಟಿ ಜಾತ್ರೆ ಸಿದ್ಧತೆ, ಪ್ರಗತಿ ಪರಿಶೀಲನೆ ಸಭೆ ಚಿತ್ರದುರ್ಗದ ಡಿಸಿ ಕಚೇರಿಯಲ್ಲಿ ಗುರುವಾರ ಎಡಿಸಿ ಬಿ.ಟಿ.ಕುಮಾರಸ್ವಾಮಿ ಅಧ್ಯಕ್ಷತೆಯಲ್ಲಿ ಜರುಗಿತು. ಶಿವಕುಮಾರ್, ಕಾಂತರಾಜ್, ಗಂಗಾಧರ್, ವೆಂಕಟೇಶ್, ಭರತ್ ಎಂ. ಕಾಳಿಸಿಂಗೆ, ರೇಷ್ಮಾ ಹಾನಗಲ್ ಇತರರು ಇದ್ದರು.
Published on:
Copied
Follow Us
ಪ್ರಮುಖ ಮುಖ್ಯಾಂಶಗಳು
ಭಕ್ತರಿಗೆ ತೊಂದರೆ ಆಗದಂತೆ ಸಿದ್ಧತೆಗೆ ಎಡಿಸಿ ತಾಕೀತು
ಖಾಸಗಿ ಫ್ಲೆಕ್ಸ್, ಬ್ಯಾನರ್‌ಗಳಿಗೆ ಇಲ್ಲ ಅವಕಾಶ
ಮದ್ಯ ಮಾರಾಟ ವ್ಯಾಪ್ತಿ ವಿಸ್ತರಿಸಲು ಪ್ರಸ್ತಾವನೆ
ಚಿತ್ರದುರ್ಗ: ಚಳ್ಳಕೆರೆ ತಾಲೂಕು ನಾಯಕನಹಟ್ಟಿ ಶ್ರೀ ಗುರುತಿಪ್ಪೇರುದ್ರಸ್ವಾಮಿ ಜಾತ್ರೆಯಲ್ಲಿ ಭಕ್ತರಿಗೆ ಯಾವುದೇ ತೊಂದರೆಯಾ ಗದAತೆ ಅಗತ್ಯ ಸಿದ್ಧತೆಗಳನ್ನು ಕೈಗೊಳ್ಳಬೇಕು ಎಂದು ಎಡಿಸಿ ಬಿ.ಟಿ. ಕುಮಾರಸ್ವಾಮಿ ಅಽಕಾರಿಗಳಿಗೆ ನಿರ್ದೇಶಿಸಿದರು.
ಡಿಸಿ ಕಚೇರಿಯಲ್ಲಿ ಗುರುವಾರ ತಿಪ್ಪೇರುದ್ರಸ್ವಾಮಿ ಜಾತ್ರಾ ಮಹೋತ್ಸವ ಸಿದ್ಧತೆ, ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಾತನಾಡಿ, ನಾಯಕನಹಟ್ಟಿ ಶ್ರೀ ಗುರುತಿಪ್ಪೇರುದ್ರಸ್ವಾಮಿ ಕ್ಷೇತ್ರದಲ್ಲಿ -ೆ. ೨೭ರಿಂದ ಮಾ. ೯ ರವರೆಗೆ ಜಾತ್ರೆ ನಡೆಯಲಿದೆ. ೬ ರಂದು ರಥೋತ್ಸವವಿದೆ. ಚಿತ್ರದುರ್ಗ ಜಿಲ್ಲೆ, ಹೊರ ಜಿಲ್ಲೆಗಳು ಹಾಗೂ ಹೊರ ರಾಜ್ಯಗಳಿಂದಲೂ ಲಕ್ಷಾಂತರ ಭಕ್ತರು ಆಗಮಿಸಲಿದ್ದಾರೆ.
ಕುಡಿವ ನೀರು ಪೂರೈಕೆಯಲ್ಲಿ ವ್ಯತ್ಯಯವಾಗಬಾರದು. ನೀರಿನ ಟ್ಯಾಂಕ್‌ಗಳನ್ನು ಸ್ವಚ್ಛಗೊಳಿಸಬೇಕು. ಮುಂಜಾಗ್ರತಾ ಕ್ರಮವಾಗಿ ನೀರು ಪೂರೈಕೆ ಮೂಲ, ವಿತರಣಾ ಕೇಂದ್ರಗಳಲ್ಲಿ ನೀರಿನ ಗುಣಮಟ್ಟ ಪರಿಶೀಲಿಸಿ ವರದಿ ಪಡೆದುಕೊಳ್ಳಬೇಕು. ಕುಡಿವ ನೀರು ಸ್ವಚ್ಛತೆ ಕುರಿತಂತೆ ಅಽಕಾರಿಗಳು ಸ್ಥಳ ಪರಿಶೀಲಿಸಬೇಕು. ಜಾನುವಾರುಗಳಿಗೂ ಕುಡಿವ ನೀರಿಗೆ ತೊಂದರೆಯಾಗಬಾರದು. ನೀರಿನ ತೊಟ್ಟಿಗಳ ದುರಸ್ತಿಗೆ ಗ್ರಾಪಂ ಅಽಕಾರಿಗಳು ತಕ್ಷಣ ಕ್ರಮವಹಿಸಬೇಕು ಎಂದರು.
ಬಿಸಿಲಿನ ತಾಪ ಹೆಚ್ಚಾಗುತ್ತಿರುವುದರಿಂದ ಆರೋಗ್ಯ, ನೈರ್ಮಲ್ಯಕ್ಕೆ ಹೆಚ್ಚಿನ ಒತ್ತು ನೀಡಬೇಕು. ಮುನ್ನೆಚ್ಚರಿಕೆಯಾಗಿ ಒಆರ್‌ಎಸ್ ಪ್ಯಾಕೆಟ್, ಅಗತ್ಯ ಔಷಧಗಳಿರಬೇಕು. ಬಿಸಿಲಿನಿಂದಾಗುವ ಆರೋಗ್ಯ ಸಮಸ್ಯೆ ಕುರಿತು ಜಾಗೃತಿ -Àಲಕಗಳನ್ನು ಹಾಕಬೇಕು ಎಂದು ಆರೋಗ್ಯ ಇಲಾಖೆ ಅಽಕಾರಿಗಳಿಗೆ ಸೂಚಿಸಿದರು.
ಜಾತ್ರೆ ಪ್ರಯುಕ್ತ ತೆರೆಯುವ ೪ ಪ್ರಥಮ ಚಿಕಿತ್ಸಾ ಕೇಂದ್ರಗಳೊAದಿಗೆ ೪ ಆಂಬ್ಯುಲೆನ್ಸ್ಗಳನ್ನು ದಿನದ ೨೪ ಗಂಟೆ ಕಾರ್ಯಾಚರಣೆ ಯಲ್ಲಿರುತ್ತವೆ. ಸಮೀಪದ ಸಿಎಚ್‌ಸಿಯಲ್ಲಿ ೬೦ ಹಾಸಿಗೆಗಳನ್ನು ಕಾಯ್ದಿರಿಸಲಾಗಿದೆ. ತಜ್ಞ ವೈದ್ಯರ ತಂಡ ಸ್ಥಳದಲ್ಲಿ ಲಭ್ಯವಿರಲಿದ್ದು, ೨೦೦ ಸಿಬ್ಬಂದಿ ನಿಯೋಜನೆಗೆ ಕ್ರಮ ಕೈಗೊಳ್ಳಲಾಗಿದೆ ಎಂದು ಚಳ್ಳಕೆರೆ ಟಿಎಚ್‌ಒ ಡಾ.ಎನ್. ಕಾಶಿ ಮಾಹಿತಿ ನೀಡಿದರು.
ಜಾತ್ರೆಗಾಗಿ ಎಲ್ಲ ಪಾರ್ಕಿಂಗ್ ಸ್ಥಳಗಳಲ್ಲಿ ಬೆಳಕಿನ ವ್ಯವಸ್ಥೆ, ಈಗಿರುವ ೨೪ ಸಿಸಿ ಟಿವಿ ಕ್ಯಾಮರಾಗಳೊಂದಿಗೆ ಹೆಚ್ಚುವರಿಯಾಗಿ ೫೦ನ್ನು ಹೊಸದಾಗಿ ಅಳವಡಿಸಬೇಕಿದೆ. ತುರ್ತು ರಕ್ಷಣೆಗೆ ಎನ್‌ಡಿಆರ್‌ಎ-ï ತಂಡ ನಿಯೋಜನೆ, ಜನದಟ್ಟಣೆ ನಿಯಂತ್ರಣಕ್ಕೆ ಮತ್ತು ಅಗತ್ಯ ಮಾಹಿತಿಗೆ ಜಾತ್ರೆಯಲ್ಲಿ ವಿವಿಧೆಡೆ ಧ್ವನಿವರ್ಧಕ ಅಳವಡಿಸಬೇಕು. ಅನೌನ್ಸ್ಮೆಂಟ್‌ಗೆ ಅಡಚಣೆ ಆಗದಂತೆ ಜನರೇಟರ್ ಬ್ಯಾಕಪ್ ವ್ಯವಸ್ಥೆ ಕಲ್ಪಿಸಬೇಕು ಎಂದು ಪೋಲೀಸ್ ಅಽಕಾರಿಗಳು ಸಲಹೆ ನೀಡಿದರು.
ರಥಬೀದಿಯಲ್ಲಿರುವ ಹಳೆಯ ಮತ್ತು ಶಿಥಿಳಗೊಂಡ ಕಟ್ಟಡಗಳನ್ನು ಗುರುತಿಸಿ, ಅವುಗಳ ಮೇಲೆ ಜನರು ಹತ್ತದಂತೆ ಎಚ್ಚರಿಕೆ ವಹಿಸಲು ಮಾಲೀಕರಿಗೆ ನೋಟಿಸ್ ನೀಡುವಂತೆ ಎಡಿಸಿ ಸೂಚಿಸಿದರು.
ಹೆಚ್ಚುವರಿ ಪೊಲೀಸ್ ವರಿಷ್ಠಾಽಕಾರಿ ಶಿವಕುಮಾರ್ ಮಾತನಾಡಿ, ಕಳೆದ ವರ್ಷ ೫ ಕಿ.ಮೀ. ವ್ಯಾಪ್ತಿಯಲ್ಲಿದ್ದ ಮದ್ಯ ಮಾರಾಟ ನಿಷೇಧವನ್ನು ೧೦ ಕಿ.ಮೀ.ಗೆ ವಿಸ್ತರಿಸಲು ಹಾಗೂ ೨ ದಿನಗಳ ಕಾಲ ಮದ್ಯ ಮಾರಾಟ ನಿಷೇಽಸುವಂತೆ ಜಿಲ್ಲಾಽಕಾರಿಗೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಪ್ರಸಾದದ ಗುಣಮಟ್ಟ ಪರೀಕ್ಷಿಸಲು ಆಹಾರ ಸುರಕ್ಷತಾ ಅಽಕಾರಿಗಳಿಗೆ ಸೂಚಿಸಲಾಗಿದೆ.
ರಸ್ತೆ ದುರಸ್ತಿ, ಕುಡಿಯುವ ನೀರು, ನಿರಂತರ ವಿದ್ಯುತ್ ಸರಬರಾಜು ಮತ್ತು ಹೆಚ್ಚುವರಿ ಕೆಎಸ್‌ಆರ್‌ಟಿಸಿ ಬಸ್‌ಗಳ ವ್ಯವಸ್ಥೆಗೆ ಸಂಬAಽಸಿದ ಅಽಕಾರಿಗಳಿಗೆ ಪತ್ರ ಬರೆಯಲಾಗಿದೆ. ಜಾತ್ರೆಗೆ ನಿಯೋಜಿಸುವ ೨೫೦೦ಕ್ಕೂ ಹೆಚ್ಚು ಪೊಲೀಸರಿಗೆ ವಸತಿ ಕಲ್ಪಿಸಬೇಕಿದೆ. ತುರ್ತು ಪರಿಸ್ಥಿತಿ ಎದುರಿಸಲು ಎಮರ್ಜೆನ್ಸಿ ರೆಸ್ಪಾನ್ಸ್ ಟೀಮ್ ಸಿದ್ಧವಿರಲಿದೆ. ಜಾನುವಾರುಗಳಿಗೆ ತುರ್ತು ವೈದ್ಯಕೀಯ ಸೇವೆ, ಅಗ್ನಿಶಾಮಕ ದಳ ನಿ ಯೋಜನೆ, ರಥದ ಸುರಕ್ಷತೆಗೆ ಅಗತ್ಯ ಸಿದ್ಧತೆ ಆಗಬೇಕು. ಯಾವುದೇ ಅನಿಷ್ಟ ಪದ್ಧತಿಗಳ ಆಚರಣÉ ಜರುಗದಂತೆ ಕ್ರಮ ವಹಿಸಬೇಕೆಂದು ಎಎಸ್‌ಪಿ ಹೇಳಿದರು.
ರಸ್ತೆಗಳ ಗುಂಡಿ ಮುಚ್ಚಲು, ಚರಂಡಿಗಳ ಸ್ವಚ್ಛತೆಗೆ ಕ್ರಮವಹಿಸಬೇಕು. ರಸ್ತೆ ಒತ್ತುವರಿ ತೆರವುಗೊಳಿಸಿ ಸುಗಮ ಸಂಚಾರಕ್ಕೆ ಅನುವು ಮಾಡಿಕೊಡಬೇಕು. ಪ್ರಾಣಿ ಬಲಿ ಸಂಪೂರ್ಣ ನಿಷೇಽಸಿದ್ದು, ಚೆಕ್‌ಪೋಸ್ಟ್ ತೆರೆದು ಕಟ್ಟುನಿಟ್ಟಾಗಿ ನಿಷೇಧ ಜಾರಿಗೆ ತರಲಾಗುವುದು. ಜಾತ್ರೆ ಸುತ್ತಮುತ್ತ ನಿಗದಿತ ವ್ಯಾಪ್ತಿಯಲ್ಲಿ ಮದ್ಯ ಮಾರಾಟ ಮತ್ತು ಸೇವನೆ ಮೇಲೆ ಕಟ್ಟು ನಿಟ್ಟಿನ ನಿಗಾ ವಹಿಸುವಂತೆ ಪೊಲೀಸರಿಗೆ ಎಡಿಸಿ ತಿಳಿ ಸಿದರು.
ಜಾತ್ರೆಯಲ್ಲಿ ರಾಜಕೀಯ ಮತ್ತು ವೈಯಕ್ತಿಕ ಪ್ರಚಾರದ ಫ್ಲೆಕ್ಸ್/ಬ್ಯಾನರ್‌ಗಳಿಗೆ ಅವಕಾಶವಿಲ್ಲ. ಸಾರ್ವಜನಿಕ ಮಾಹಿತಿ -Àಲಕಗಳು ಮತ್ತು ದೇವಸ್ಥಾನದ ಅಽಕೃತ ಸ್ವಾಗತ -Àಲಕಗಳಿಗೆ ಅನುಮತಿ ಇದೆ. ಅನಽಕೃತ ಫ್ಲೆಕ್ಸ್, ಬ್ಯಾನರ್‌ಗಳ ತೆರವಿಗೆ ಕ್ರಮವಹಿಸುವಂತೆ ಕುಮಾರಸ್ವಾಮಿ ಅಽಕಾರಿಗಳಿಗೆ ತಾಕೀತು ಮಾಡಿದರು.
ಎಸಿ ಕಾಂತರಾಜ್, ಶ್ರೀ ಗುರು ತಿಪ್ಪೇರುದ್ರಸ್ವಾಮಿ ದೇವಾಲಯದ ಕಾರ್ಯ ನಿರ್ವಾಹಣಾಽಕಾರಿ ಗಂಗಾಧರ್, ಕೆಎಸ್‌ಆರ್‌ಟಿಸಿ ಡಿಸಿ ವೆಂಕಟೇಶ್, ಆರ್‌ಟಿಒ ಭರತ್ ಎಂ. ಕಾಳಿಸಿಂಗೆ, ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕಿ ರೇಷ್ಮಾ ಹಾನಗಲ್ ಇನ್ನಿತರ ಅಽಕಾರಿಗಳು ಇದ್ದರು.