ಚಿತ್ರದುರ್ಗದಲ್ಲಿ ಶುಕ್ರವಾರ ಆಯೋಜಿಸಿದ್ದ ಶಿವಸಿಂಪಿ ಸಮುದಾಯದ ಸಮಾಲೋಚನಾ ಸಭೆಯನ್ನುದ್ದೇಶಿಸಿ ಶ್ರೀ ಮಹಾಂತ ದೇವರು ಮಾತನಾಡಿದರು. ಶ್ರೀ ಬಸವ ಸ್ವಾಮೀಜಿ, ಜಯದೇವ ಮೂರ್ತಿ, ಕೆಇಬಿ ಷಣ್ಮುಖಪ್ಪ, ಮುರುಘೇಶ್, ಕವಿತಾ ಸುರೇಶ್,ಗೀತಾರುದ್ರೇಶ್ ಇತರರು ಇದ್ದರು.
ಚಿತ್ರದುರ್ಗ : ಶಿವಸಿಂಪಿ ಸಮುದಾಯ ನಿರ್ಲಕ್ಷ್ಯಕ್ಕೆ ಒಳಗಾಗಿದ್ದು, ಸಮುದಾಯದಲ್ಲಿ ಜಾಗೃತಿ ಮೂಡಿಸಿ ಸಂಘಟಿಸಬೇಕಾಗಿದೆ ಎಂದು ರಾಜ್ಯ ಹಿಂದುಳಿದ ಮಠಾಽÃಶರ ಒಕ್ಕೂಟದ ಉಪಾಧ್ಯಕ್ಷರು, ಬನಹಟ್ಟಿ ಮಹಾಂತ ಮಂದಾರ ಮಠದ ಶ್ರೀ ಮಹಾಂತ ದೇವರು ಹೇಳಿದರು.
ನಗರದ ಬಸವ ಮಂಟಪದಲ್ಲಿ ಶುಕ್ರವಾರ ಶಿವಶಿಂಪಿ ಸಮುದಾಯದ ಸಮಾಲೋಚನಾ ಸಭೆಯಲ್ಲಿ ಮಾತನಾಡಿ, ಮಠ ಕಟ್ಟು ವುದು, ವಿದ್ಯಾಪೀಠಗಳ ನಿರ್ಮಾಣಕ್ಕಿಂತ ನಮಗೆ ಈಗ ಮುಖ್ಯವಾಗಿ ಸಮುದಾಯ ಸಂಘಟಿಸುವ ಅನಿವಾರ್ಯತೆ ಇದೆ. ಈ ಕೆಲಸ ಬೀದರ್‌ನಿಂದ ಬೆಂಗಳೂರುವರೆಗೂ ಆಗಬೇಕಿದೆ. ಇದಕ್ಕಾಗಿ ತಾವು ರಾಜ್ಯಾದಾದ್ಯಂತ ಪ್ರವಾಸ ನಡೆಸುತ್ತಿದ್ದೇವೆ.
ಸಮುದಾಯ ಸಂಘಟಿತವಾದರೆ ಸರ್ಕಾರದ ಮಟ್ಟದಲ್ಲಿ ಏನಾದರೂ ಪಡೆಯಲು ಸಾಧ್ಯವಾಗುತ್ತದೆ ಎಂದು ಅಭಿಪ್ರಾಯಟ್ಟರು.
ಮುಂದಿನ ದಿನಗಳಲ್ಲಿ ಜಿಲ್ಲಾಮಟ್ಟದಲ್ಲಿ ನಂತರ ರಾಜ್ಯ ಮಟ್ಟದಲ್ಲಿ ಸಮಾವೇಶ ನಡೆಸುವ ಮೂಲಕ ಸರ್ಕಾರಕ್ಕೆ ನಮ್ಮ ಶಕ್ತಿ ಪ್ರದರ್ಶಿಸಬೇಕಿದೆ. ಇದಕ್ಕೆ ಎಲ್ಲರ ಸಹಾಯ, ಸಹಕಾರ ಬೇಕಾಗಿದೆ. ಕುಲಗುರು ಶಿವದಾಸಿಮಯ್ಯ ಅವರ ಜೀವನ ಚರಿತ್ರೆ, ವಚನಗಳ ಸಂಗ್ರಹ ಕಾರ್ಯ ಸಂಶೋಧಕರಿAದ ನಡೆಸಲಾಗುತ್ತಿದೆ ಎಂದು ತಿಳಿಸಿದರು.
ಯಾದಗಿರಿ ಅತೀತ ಮಠದ ಶ್ರೀ ಬಸವ ಸ್ವಾಮೀಜಿ, ಶಿವಶಿಂಪಿ ಸಮಾಜದ ಜಿಲ್ಲಾಧ್ಯಕ್ಷ ಜಯದೇವಮೂರ್ತಿ, ಮುಖಂಡರಾದ ಕೆಇಬಿ ಷಣ್ಮುಖಪ್ಪ, ಮುರುಘೇಶ್, ಕವಿತಾ ಸುರೇಶ್, ಗೀತಾ ರುದ್ರೇಶ್, ಮಾಲಾ ಬಸವರಾಜು, ಕುಸುಮಾ ರಾಜಣ್ಣ, ನಂದ ಬಕ್ಕೇಶ್, ಕವಿತಾ ಪಂಪಾಪತಿ, ಇಂದಿರಾ ಜಯದೇವಮೂರ್ತಿ ಇತರರು ಇದ್ದರು.