ಭಜನೆ ಮಾಡಲು ಮೀಟಿಂಗ್ ಮಾಡುತ್ತೇವೆಯೇ?

ಚಿತ್ರದುರ್ಗದಲ್ಲಿ ಮಂಗಳವಾರ ಜಿಲ್ಲಾ ಮಟ್ಟದ ರಸ್ತೆ ಸುರಕ್ಷಾ ಸಮಿತಿ ಸಭೆಯಲ್ಲಿ ಡಿಸಿ ಟಿ.ವೆಂಕಟೇಶ್, ಎಸ್‌ಪಿ ರಂಜಿತ್‌ಕುಮಾರ್ ಬಂಡಾರು, ಡಿವೈಎಸ್‌ಪಿಗಳಾದ ಪಿ.ಕೆ. ದಿನಕರ್, ಶಿವಕುಮಾರ್, ಸತ್ಯನಾರಾಯಣರಾವ್ ಇತರ ಅಽಕಾರಿಗಳಿದ್ದರು.
ಚಿತ್ರದುರ್ಗದಲ್ಲಿ ಮಂಗಳವಾರ ಜಿಲ್ಲಾ ಮಟ್ಟದ ರಸ್ತೆ ಸುರಕ್ಷಾ ಸಮಿತಿ ಸಭೆಯಲ್ಲಿ ಡಿಸಿ ಟಿ.ವೆಂಕಟೇಶ್, ಎಸ್‌ಪಿ ರಂಜಿತ್‌ಕುಮಾರ್ ಬಂಡಾರು, ಡಿವೈಎಸ್‌ಪಿಗಳಾದ ಪಿ.ಕೆ. ದಿನಕರ್, ಶಿವಕುಮಾರ್, ಸತ್ಯನಾರಾಯಣರಾವ್ ಇತರ ಅಽಕಾರಿಗಳಿದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ರಸ್ತೆ ಸುರಕ್ಷಾತ ಸಭೆಯಲ್ಲಿ ಅಽಕಾರಿಗಳಿಗೆ ಡಿಸಿ ತರಾಟೆ
  • ತಪ್ಪಿತಸ್ಥ ಆಫೀರ‍್ಸ್ ವಿರುದ್ಧ ಎಫ್‌ಐಆರ್
  • ಗೂಂಡAಗಡಿಗಳ ತೆರವಿಗೆ ಕಟ್ಟುನಿಟ್ಟಿನ ನಿರ್ದೇಶನ
ಚಿತ್ರದುರ್ಗ: ಜಿಲ್ಲೆಯ ರಾಷ್ಟಿçÃಯ, ರಾಜ್ಯ ಹೆದ್ದಾರಿಗಳು, ನಗರ, ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯ ಅನಽಕೃತ ಗೂಡಂಗಡಿಗಳ ವಿ ದ್ಯುತ್ ಸಂಪರ್ಕ ಕಡಿತಗೊಳಿಸುವಂತೆ ಡಿಸಿ ಟಿ. ವೆಂಕಟೇಶ್ ಬೆಸ್ಕಾಂ ಅಽಕಾರಿಗಳಿಗೆ ಸೂಚಿಸಿದರು.
ಜಿಲ್ಲಾಽಕಾರಿ ಕಚೇರಿಯಲ್ಲಿ ಮಂಗಳವಾರ ಕರೆದಿದ್ದ ಜಿಲ್ಲಾ ಮಟ್ಟದ ರಸ್ತೆ ಸುರಕ್ಷತಾ ಸಮಿತಿ ಸಭೆಯಲ್ಲಿ ಮಾತನಾಡಿ, ಹೆದ್ದಾರಿ ಬದಿ ಗಳಲ್ಲಿ, ಟೋಲ್‌ಪ್ಲಾಜಾ, ಬೈಪಾಸ್ ರಸ್ತೆಗಳು ಸೇರುವ ಸ್ಥಳ ಹಾಗೂ ನಗರ ಮತ್ತು ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯ ರಸ್ತೆಗಳ ಅಕ್ಕ ಪಕ್ಕ ಅನಽಕÊತ ಗೂಡಂಗಡಿಗಳಿAದ ವಾಹನಗಳ ಸಂಚಾರಕ್ಕೆ ತೀವ್ರ ಅಡಚಣೆಯುಂಟಾಗುತ್ತಿದೆ. ಅಪಘಾತಗಳು ಸಂಭವಿಸುತ್ತಿ ವೆ ಎಂದು ತೀವ್ರ ಅಸಮಾಧಾನ ವ್ಯಕ್ತಪಡಿಸಿದರು.
ಹಿರಿಯೂರು ನಗರದ ಬೈಪಾಸ್ ರಸ್ತೆ ಅಕ್ಕಪಕ್ಕ ಹೆಚ್ಚಿನ ಗೂಡಂಗಡಿಗಳಿವೆ. ಅಲ್ಲಿ ಸಾಲು ಸಾಲಾಗಿ ವಾಹನಗಳನ್ನು ನಿಲ್ಲಿಸುತ್ತಿರು ವುದರಿಂದ ಸಂಚಾರ ವ್ಯವಸ್ಥೆಗೆ ತೊಂದರೆಯಾಗಿದೆ. ಟೋಲ್‌ಗಳಲ್ಲಿ ಅನಽಕೃತ ಗೂಡಂಗಡಿಗಳ ಸ್ಥಳದ ಮಾಲೀಕತ್ವ ಕÊಷಿ ಯೇ ತರ ಭೂಮಿಯೇ ಎಂಬುದನ್ನು ಪರಿಶೀಲಿಸಬೇಕು. ಇವುಗಳಿಗೆ ವಿದ್ಯುತ್ ಸಂಪರ್ಕ ನೀಡಿದ್ದರೆ ಬೆಸ್ಕಾಂ ಅಽಕಾರಿಗಳ ವಿರುದ್ಧ ಎ-ï‌ಐ ಆರ್ ದಾಖಲಿಸಬೇಕು ಎಂದರು.
ಡಿಸಿ, ಎಸ್‌ಪಿ ತೀವ್ರ ಬೇಸರ
ಜಿಲ್ಲೆಯ ಪ್ರಮುಖ ಹೆದ್ದಾರಿಗಳಲ್ಲಿ ಬ್ಲಾಕ್‌ಸ್ಪಾಟ್ ಗುರುತಿಸಿ, ವೈಜ್ಞಾನಿಕವಾಗಿ ಸಮಸ್ಯೆ ನಿವಾರಿಸುವಂತೆ ರಾ.ಹೆ. ಪ್ರಾಽಕಾರ, ಲೋಕೋಪಯೋಗಿ ಹಾಗೂ ಸಂಬAಽಸಿದ ಇಲಾಖೆಗಳಿಗೆ ಹಿಂದಿನ ಹಲವು ಸಭೆಗಳಲ್ಲಿ ಸೂಚಿಸಿದ್ದರೂ ಯಾವುದೇ
ಕ್ರಮಗಳಾಗಿಲ್ಲ.
ಅಪಘಾತಗಳ ಸಂಖ್ಯೆಯಲ್ಲಿ ರಾಜ್ಯದಲ್ಲೇ ಚಿತ್ರದುರ್ಗ ಜಿಲ್ಲೆ ೪ನೇ ಸ್ಥಾನದಲ್ಲಿದೆ. ಇದನ್ನು ಸಿಎಂ ಸಿದ್ದರಾಮಯ್ಯ ಗಂಭೀರವಾಗಿ ಪರಿಗಣಿಸಿ, ಅಪಘಾತಗಳ ನಿಯಂತ್ರಣಕ್ಕೆ ಕಟ್ಟುನಿಟ್ಟಿನ ಸೂಚನೆ ನೀಡಿದ್ದಾರೆ. ಸಭೆಗಳಲ್ಲಿ ಹಲವು ಬಾರಿ ನಿರ್ದೇಶಿಸಿದ್ದರೂ ಅಽ ಕಾರಿಗಳು ಪಾಲಿಸಿಲ್ಲ. ಇಂಥ ಸಭೆಗಳಿಗೆ ನಾವು ಏನು ಭಜನೆ ಮಾಡಲು ಸೇರುತ್ತೇವೆಯೇ ಎಂದು ಅಽಕಾರಿಗಳನ್ನು ಡಿಸಿ ತರಾಟೆ ಗೆ ತೆಗೆದುಕೊಂಡರು.
ಅಪಘಾತಗಳ ವಿಚಾರದಲ್ಲಿ ನಿರ್ಲಕ್ಷ÷್ಯ ತೋರುವಂಥ ರಾ.ಹೆ. ಪ್ರಾಽಕಾರ, ಲೋಕೋಪಯೋಗಿ ಇಲಾಖೆ, ಬೆಸ್ಕಾಂ, ಪಂ.ರಾಜ್ ಇಂಜಿನಿಯರಿAಗ್ ಮತ್ತಿತರ ಇಲಾಖೆ ಅಽಕಾರಿಗಳನ್ನು ಕೂಡ ಪ್ರತಿವಾದಿಗಳನ್ನಾಗಿ ಮಾಡಿ ಎ-ï‌ಐಆರ್ ದಾಖಲಿಸುವಂತೆ ಪೋಲೀ ಸರಿಗೆ ಸೂಚಿಸಿದರು.
ಜಿಲ್ಲೆಯಲ್ಲಿ ೨೫ ಸಾವಿರಕೂ ಹೆಚ್ಚು ಟ್ರ‍್ಯಾಕ್ಟರ್ ಟ್ರ‍್ಯಾಲಿಗಳ ಪೈಕಿ ೪೫೦ ಟ್ರ‍್ಯಾಕ್ಟರ್‌ಗಳಿಗೆ ರಿ-ೆ್ಲಕ್ಟರ್ ಸ್ಟಿಕರ್ ಅಳವಡಿಸಲಾಗಿದೆ ಎಂಬ ಸಾರಿಗೆ ಇಲಾಖೆ ಅಽಕಾರಿ ಮಾಹಿತಿಗೆ ಎಸ್‌ಪಿ ರಂಜಿತ್‌ಕುಮಾರ್ ಬಂಡಾರು ಗರಂ ಆದರು. ವಿಶೇಷ ಅಭಿಯಾನದೊಂ ದಿಗೆ ರಿ-É್ಲಕ್ಟರ್‌ಸ್ಟಿಕರ್ ಅಳವಡಿಕೆಗೆ ಸೂಚಿಸಿದ್ದರೂ ಕ್ರಮ ವಹಿಸಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು. ಜಿಲ್ಲೆಯಲ್ಲಿರುವ ಅಪಘಾತ ವಲಯಗಳ ಜಂಟಿ ಸಮೀಕ್ಷೆ ನಡೆಸಿ ವರದಿ ಸಲ್ಲಿಸುವಂತೆ ಽಕಾರಿಗಳಿಗೆ ಡಿಸಿ ಸೂಚಿಸಿದರು.
ಚಿತ್ರದುರ್ಗದ ಟ್ರಾಫಿಕ್ ಸಮಸ್ಯೆಗೆ ಕ್ರಮ ವಹಿಸಿ
ಚಿತ್ರದುರ್ಗ ನಗರದ ವಿವಿಧ ಪ್ರದೇಶಗಳಲ್ಲಿ ಅಪಘಾತ ಸಂಭವಿಸಬಹುದಾದ ತೆರೆದ ಚರಂಡಿಗಳು, ರಾಜಕಾಲುವೆ, ಡ್ರ‍್ತ್ಯೆÊನೇಜ್‌ ಗಳು, ರಸ್ತೆಯಲ್ಲೇ ಬೋರ್‌ವೆಲ್ ಮುಂತಾದ ವಿವರಗಳನ್ನು ಸಂಚಾರ ಪೊಲೀಸ್ ಠಾಣೆ ಇನ್ಸ್ಪೆಕ್ಟರ್ ವಿಶ್ವನಾಥ್ ಅವರು ಸಭೆಗೆ ಮಾಹಿತಿ ನೀಡಿದರು. ಸೂಕ್ತ ಕ್ರಮಕ್ಕೆ ಡಿಸಿ ಅಽಕಾರಿಗಳಿಗೆ ತಾಕೀತು ಮಾಡಿದರು.
ನಗರದ ಪ್ರಮುಖ ರಸ್ತೆಯಲ್ಲಿ ಬಸ್ ಸಂಚಾರ ನಿರ್ಬಂಽಸಿರುವುದರಿAದ ವಯೋವೃದ್ಧರಿಗೆ, ವಿದ್ಯಾರ್ಥಿಗಳಿಗೆ ತೊಂದರೆಯಾಗುತ್ತಿ ದೆ ಎಂದು ರೈತ ಸಂಘಟನೆಗಳು ತಿಳಿಸಿವೆ. ಹೀಗಾಗಿ ಚಳ್ಳಕೆರೆ ಗೇಟ್‌ನಿಂದ ಹೊಳಲ್ಕೆರೆ ರಸ್ತೆ ಕನಕ ವÊತ್ತದವರೆಗೂ ೨ ನಗರ ಸಾರಿಗೆ ಬಸ್‌ಗಳ ಕಾರ್ಯಾಚರಣÉ ನಡೆಸಿ.
ಒಂದು ತಿಂಗಳು ಅದರ ಸಾಧಕ ಬಾಧಕ ಚರ್ಚಿಸಿ, ಬಸ್ ಕಾರ್ಯಾಚರಣÉ ಮುಂ ದುವರಿಸುವAತೆ ರಸ್ತೆ ಸಾರಿಗೆ ಅಽಕಾರಿಗಳಿಗೆ ಡಿಸಿ ಸೂಚಿಸಿದರು. ನಿರ್ಬಂಽಸಿರುವ ೨೦ ವರ್ಷ ಮೇಲ್ಪಟ್ಟ ಅದಿರು ಲಾರಿಗಳನ್ನು ಸೀಜ್ ಮಾಡಬೇಕು, ರಸ್ತೆ ಮಧ್ಯೆ ವಾಹನಗಳ ತಪಾಸಣೆ ಬೇಡ ಎಂದು ಡಿಸಿ ಹೇಳಿದರು.
ಲೋಕೋಪಯೋಗಿ ಇಲಾಖೆ ಇಇ ನಾಗರಾಜ್, ಡಿವೈಎಸ್‌ಪಿಗಳಾದ ಪಿ.ಕೆ. ದಿನಕರ್, ಶಿವಕುಮಾರ್, ಸತ್ಯನಾರಾಯಣರಾವ್, ನಗರಸಭೆ ಪೌರಾಯುಕ್ತೆ ಎಸ್.ಲಕ್ಷಿ÷್ಮÃ ಇತರರು ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net