ಕರ್ನಾಟಕದ ಬುಡಕಟ್ಟು ಸಮುದಾಯಗಳಿಗೆ ಸರ್ಕಾರದ ಯೋಜನೆಗಳ ಪ್ರಯೋಜನಗಳು ಯಾವುದೇ ವಿಳಂಬ ವಿ ಲ್ಲದೆ ತಲುಪಿಸಲು ತ್ವರಿತವಾಗಿ ಅಗತ್ಯ ಕ್ರಮಗಳನ್ನು ಕೈಗೊಳ್ಳುವಂತೆ ಸಂಸದ ಗೋವಿಂದ ಎಂ.ಕಾರಜೋಳ ಅವರು ಕೇಂದ್ರ ಬುಡಕಟ್ಟು ವ್ಯವಹಾರಗಳ ಸಚಿವಾಲಯವನ್ನು ಒತ್ತಾಯಿಸಿದ್ದಾರೆ.
ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಕಲ್ಯಾಣ ಕುರಿತ ಸಂಸದೀಯ ಸಮಿತಿ ಸಭೆಯಲ್ಲಿ ಶುಕ್ರವಾರ ಕರ್ನಾಟಕದ ಬುಡ ಕ ಟ್ಟು ಸಮುದಾಯಗಳ ಕಲ್ಯಾಣಕ್ಕೆ ಸಂಬAಽಸಿದ ವಿವಿಧ ಪ್ರಮುಖ ಸಮಸ್ಯೆಗಳ ಕುರಿತು ಸಂಸದರು ಪ್ರಸ್ತಾಪಿಸಿದ್ದಾರೆ.
ವನಧನ ವಿಕಾಸ್ ಕೇಂದ್ರಗಳು (ವಿಡಿವಿಕೆ), ಪಿಎಂ-ಜನಮನ ಯೋಜನೆ, ಬಾಕಿ ಅನುದಾನ ಬಿಡುಗಡೆ ಹಾಗೂ ಅರಣ್ಯ ಹಕ್ಕು ಕಾಯ್ದೆಯಡಿ ಸಲ್ಲಿಕೆ ಆಗಿರುವ ಅರ್ಜಿಗಳ ಕುರಿತಂತೆ ಮಾತನಾಡಿದರು.
ಕರ್ನಾಟಕದಲ್ಲಿ ಮಂಜೂರಾಗಿರುವ ೧೪೦ ವಿಡಿವಿಕೆಗಳ ಪೈಕಿ ೬೯ ಕರ‍್ಯನಿರ್ವಹಿಸುತ್ತಿದ್ದು, ಬಾಕಿ ೭೧ ಕೇಂದ್ರಗಳ ಆರಂಭಕ್ಕೆ ಏನು ಕ್ರಮ ವಹಿಸುತ್ತೀರಿ? ಈ ನಿಟ್ಟಿನಲ್ಲಿ ರಾಜ್ಯಕ್ಕೆ ಮಂಜೂರಾಗಿದ್ದ ೨೦.೮೭ ಕೋಟಿ ರೂ. ಅನುದಾನದಲ್ಲಿ ಇನ್ನು ೯.೦೧ ಕೋಟಿ ರೂ.ಅನುದಾನ ಬಿಡುಗಡೆ ಬಾಕಿ ಇದೆ.
ಪಿಎಂ-ಜನಮನ ಯೋಜನೆಯಡಿಯಲ್ಲೂ ಕರ್ನಾಟಕಕ್ಕೆ ಮಂಜೂರಾಗಿದ್ದ ೩೩ ವಿಡಿವಿಕೆಗಳ ಪೈಕಿ ೨೧ ಕೇಂದ್ರಗಳು ಕರ‍್ಯ ನಿರ್ವಹಿಸುತ್ತಿವೆ. ಇನ್ನೂ ೧೨ ಕೇಂದ್ರಗಳ ಕರ‍್ಯಾರಂಭಕ್ಕೆ ಕ್ರಮ ವಹಿಸಬೇಕು ಹಾಗೂ ವಿಡಿವಿಕೆಗಳ ಜಿಲ್ಲಾವಾರು ಕರ‍್ಯಕ್ಷಮತಾ ವರದಿ ನೀಡುವಂತೆ ಆಗ್ರಹಿಸಿದರು.
೨.೯೫ ಲಕ್ಷಕ್ಕೂ ಹೆಚ್ಚು ಅರ್ಜಿಗಳು
ಅರಣ್ಯಹಕ್ಕು ಕಾಯ್ದೆಯಡಿ ಕರ್ನಾಟಕದಿಂದ ಸ್ವೀಕೃತವಾದ ೨,೯೫,೧೭೬ ಅರ್ಜಿಗಳಗಳಲ್ಲಿ ೨,೬೨,೬೨೬ ತಿರಸ್ಕೃತಗೊಂಡಿವೆ. ೧೬,೭೦೦ ಅರ್ಜಿಗಳನ್ನು ಅನುಮೋದಿಸಿ ಹಕ್ಕುಪತ್ರ ವಿತರಿಸಲಾಗಿದೆ. ಇನ್ನೂ ೧೫,೮೫೦ ಅರ್ಜಿಗಳು ಬಾಕಿ ಉಳಿದಿವೆ ಎಂದು ಸಂಸದರು ಕಳವಳ ವ್ಯಕ್ತ ಪಡಿಸಿದರು. ಈ ಕುರಿತಂತೆ ಸೂಕ್ತ ಮಾಹಿತಿಗೆ ಮನವಿ ಮಾಡಿದರು. ಈ ಸಂದರ್ಭದಲ್ಲಿ ಸಚಿವಾಲಯದ ಅಽಕಾರಿಗಳು ಅಗತ್ಯ ಕ್ರಮ ವಹಿಸುವ ಭರವಸೆ ನೀಡಿದ್ದಾರೆ.