ನ್ಯೂಮೋನಿಯಾ ತೊಲಗಿಸಿ ಮಕ್ಕಳ ಬಾಲ್ಯ ಉಳಿಸಿ

 ಚಿತ್ರದುರ್ಗದಲ್ಲಿ ಬುಧವಾರ ವಿಶ್ವ ನ್ಯೂಮೋನಿಯಾ ಭಿತ್ತಿ ಪತ್ರವನ್ನು ಜಿಲ್ಲಾ ಆರ್‌ಸಿಎಚ್ ಅಽಕಾರಿ ಡಾ.ಡಿ.ಎಂ.ಅಭಿನವ್ ಬಿಡುಗಡೆ ಮಾಡಿದರು. ಟಿಎಚ್‌ಒ ಡಾ.ಬಿ.ವಿ.ಗಿರೀಶ್, ಬಿ.ಮೂಗಪ್ಪ, ಬಾಗೇಶ್ ಉಗ್ರಾಣ, ನಿರ್ಮಾಲಾ, ಮಂಜುಳಾ ಇತರರು ಇದ್ದರು.
ಚಿತ್ರದುರ್ಗದಲ್ಲಿ ಬುಧವಾರ ವಿಶ್ವ ನ್ಯೂಮೋನಿಯಾ ಭಿತ್ತಿ ಪತ್ರವನ್ನು ಜಿಲ್ಲಾ ಆರ್‌ಸಿಎಚ್ ಅಽಕಾರಿ ಡಾ.ಡಿ.ಎಂ.ಅಭಿನವ್ ಬಿಡುಗಡೆ ಮಾಡಿದರು. ಟಿಎಚ್‌ಒ ಡಾ.ಬಿ.ವಿ.ಗಿರೀಶ್, ಬಿ.ಮೂಗಪ್ಪ, ಬಾಗೇಶ್ ಉಗ್ರಾಣ, ನಿರ್ಮಾಲಾ, ಮಂಜುಳಾ ಇತರರು ಇದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ಜಿಲ್ಲಾ ಆರ್‌ಸಿಎಚ್ ಅಽಕಾರಿ ಡಾ.ಡಿ.ಎಂ.ಅಭಿನವ ಮನವಿ
  • ಜಾಗೃತಿ ಭಿತ್ತಿಪತ್ರ ಬಿಡುಗಡೆ
  • ರಾಷ್ಟಿçÃಯ ಆರೋಗ್ಯ ಅಭಿಯಾನ
ಚಿತ್ರದುರ್ಗ: ನ್ಯೂಮೋನಿಯಾ ತೊಲಗಿಸಿ ಆರೋಗ್ಯವಂತ ಬಾಲ್ಯ ಒದಗಿಸುವಂತೆ ಜಿಲ್ಲಾ ಆರ್‌ಸಿಎಚ್ ಅಽಕಾರಿ ಡಾ.ಡಿ.ಎಂ.ಅಭಿನವ್ ವರು ಆರೋಗ್ಯಾಽಕಾರಿಗಳಿಗೆ ಮನವಿ ಮಾಡಿದರು.
ಡಿಎಚ್‌ಒ ಕಚೇರಿಯಲ್ಲಿ ಬುಧವಾರ ರಾಷ್ಟಿçÃಯ ಆರೋಗ್ಯ ಅಭಿಯಾನದಡಿ ಆರೋಗ್ಯ ಕಾರ್ಯಕ್ರಮಗಳ ಪ್ರಗತಿ ಪರಿಶೀಲನಾ ಸಭೆ ಯಲ್ಲಿ ವಿಶ್ವ ನ್ಯೂಮೋನಿಯಾ ದಿನದ ಭಿತ್ತಿಪತ್ರ ಬಿಡುಗಡೆ ಮಾಡಿ ಅವರು ಮಾತನಾಡಿದರು.
೫ ವರ್ಷದ ಒಳಗಿನ ಮಕ್ಕಳಲ್ಲಿ ಕಂಡುಬರುವ ಶ್ವಾಸಕೋಶದ ಸೋಂಕು, ವಾಯು ಮಾಲಿನ್ಯ ಮಕ್ಕಳ ಅನಾರೋಗ್ಯಕ್ಕೆ ಹಾಗೂ ಅವರು ನ್ಯೂಮೋನಿಯಾದಿಂದ ಬಳಲುವುದಕ್ಕೆ ಪ್ರಮುಖ ಕಾರಣ. ಜ್ವರ, ಹಸಿವು ಇಲ್ಲದಿರುವುದು, ಕೆಮ್ಮು ಮತ್ತು ಹಳದಿ ರಕ್ತದ ಕ-À ಇವು ನ್ಯೂಮೊನಿಯಾದ ಲಕ್ಷಣಗಳು. ಸರಿಯಾದ ಸ್ತನ್ಯÀಪಾನ ನೀಡದಿರುವುದು, ಅಪೌಷ್ಟಿಕತೆ, ಕೈತೊಳೆಯದಿರುವುದು, ಕಡಿಮೆ ತೂಕದಲ್ಲಿ ಜನನ ಇವು ನ್ಯೂಮೋನಿಯಾದ ಅಪಾಯಕಾರಿ ಅಂಶಗಳಾಗಿವೆ ಎಂದು ತಿಳಿಸಿದರು.
ನ್ಯೂಮೋನಿಯ ತಡೆಗೆ ಮೊದಲ ಆರು ತಿಂಗಳು ಮಗುವಿಗೆ ತಾಯಿ ಹಾಲು ಮಾತ್ರ ಉಣಿಸಬೇಕು. ಪೌಷ್ಟಿಕಾಂಶ ಒದಗಿಸಬೇಕು , ಸಕಾಲಕ್ಕೆ ಚುಚ್ಚುಮದ್ದು ಹಾಕಿಸಬೇಕು, ಮನೆಯೊಳಗೆ ಮಾಲಿನ್ಯ ನಿಯಂತ್ರಿಸಬೇಕು. ರೋಗ ಲಕ್ಷಣ ಕಂಡು ಬಂದಲ್ಲಿ ೨೪ ಗಂಟೆ ಒಳಗೆ ಚಿಕಿತ್ಸೆ ಪಡೆದರೆ ರೋಗ ಹರಡದಂತೆ ತಡೆಯಬಹುದು ಎಂದರು.
ಆರೋಗ್ಯ ಇಲಾಖೆ ಅಽಕಾರಿ, ಸಿಬ್ಬಂದಿ ಜನರಲ್ಲಿ ಜಾಗÊತಿ ಮೂಡಿಸಿ ಸಕಾಲಕ್ಕೆ ಉಚಿತವಾಗಿ ಲಸಿಕೆ ನೀಡಿ ಐದು ವರ್ಷದ ಒಳಗಿನ ಮಕ್ಕಳ ಮರಣ ಪ್ರಮಾಣ ತಗ್ಗಿಸಲು ಶ್ರಮಿಸುವಂತೆ ಕೋರಿದರು.
ತಾಲೂಕು ಆರೋಗ್ಯ ಅಽಕಾರಿ ಡಾ.ಬಿ.ವಿ.ಗಿರೀಶ್ ಮಾತನಾಡಿ, ೨೦೨೬ರ -ೆಬ್ರವರಿ ೨೮ರವರೆಗೆ ಆಶಾ ಕರ‍್ಯಕರ್ತೆಯರು ಸೇರಿ ಮುಂಚೂಣಿ ಆರೋಗ್ಯ ಕರ‍್ಯಕರ್ತರು ಐದು ವರ್ಷದ ಒಳಗಿನ ಮಕ್ಕಳ ಮನೆಗಳಿಗೆ ಭೇಟಿ ನೀಡಬೇಕು.
ಆರಂಭಿಕ ಹಂತದಲ್ಲಿ ನ್ಯೂಮೋನಿಯಾ ಪ್ರಕರಣಗಳನ್ನು ಗುರುತಿಸಿ ಚಿಕಿತ್ಸೆ, ನಿರ್ವಹಣÉ, ಹೆಚ್ಚಿನ ಚಿಕಿತ್ಸೆಗೆ ರೆ-Àರ್ ಮಾಡಬೇಕೆಂದರು.

ತಾಲೂಕು ಆರೋಗ್ಯ ಶಿಕ್ಷಣಾಽಕಾರಿ ಬಿ.ಮೂಗಪ್ಪ ಮಾತನಾಡಿದರು. ಜಿಲ್ಲಾ ಆರೋಗ್ಯ ಮೇಲ್ವಿಚಾರಣಾಽಕಾರಿ ಸುರೇಶ್‌ಬಾಬು, ಜಿಲ್ಲಾ ಸರ್ಕಾರಿ ನೌಕರರ ಸಂಘದ ನಿರ್ದೇಶಕÀ ಬಾಗೇಶ್ ಉಗ್ರಾಣ, ಸಿಡಿಪಿಒ ನಿರ್ಮಲಾ, ಸಹಾಯಕ ಶಿಶು ಅಭಿವÊದ್ಧಿ ಯೋಜನಾಽಕಾರಿ ಮಂಜುಳಾ ಇತರರು ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net