ವಿಎಚ್‌ಪಿ, ಬಜರಂಗದಳ ಕಾರ್ಯಕರ್ತರ ದತ್ತ ಮಾಲಧಾರಣೆಯೊಂದಿಗೆ ಹೊಳಲ್ಕೆರೆಯಲ್ಲಿ ದತ್ತ ಜಯಂತಿ ಆಚರಣೆಗೆ ಚಾಲನೆ ದೊರೆಯಿತು. ಧೃವವಕುಮಾರ್, ಜಯರಾಜ್, ಅಣ್ಣಪ್ಪ, ಲೋಹಿತ್, ಸುರೇಶ್ ಅಗ್ರಹಾರ ಇತರರಿದ್ದರು.
ಚಿತ್ರದುರ್ಗ: ದತ್ತ ಜಯಂತಿ ಉತ್ಸವ ಅಂಗವಾಗಿ ವಿಶ್ವ ಹಿಂದು ಪರಿಷತ್, ಬಜರಂಗದಳ ಕಾರ್ಯಕರ್ತರ ದತ್ತ ಮಾಲಾಧಾರಣೆ ಯೊಂದಿಗೆ ಸೋಮವಾರ ಹೊಳಲ್ಕೆರೆಯಲ್ಲಿ ದತ್ತ ಜಯಂತಿ ಉತ್ಸವಕ್ಕೆ ವಿದ್ಯುಕ್ತ ಚಾಲನೆ ದೊರಕಿತು.
ಬಜರಂಗದಳದ ಜಿಲ್ಲಾ ಸಂಯೋಜಕ ದಿನೇಶ್ ಮಾತನಾಡಿ, ಕರ್ನಾಟಕದ ಅಯೋಧ್ಯೆ ಎಂದೇ ಬಿಂಬಿತವಾಗಿರುವ ಚಿಕ್ಕಮಗಳೂರಿನ ದತ್ತಪೀಠದಲ್ಲಿ ಶತಮಾನಗಳಿಂದ ಪೂಜೆ ನಡೆಯುತ್ತಿರಲಿಲ್ಲ. ವಿಶ್ವ ಹಿಂದು ಪರಿಷತ್, ಬಜರಂಗದಳದ ನಿರಂತರ ಹೋರಾಟದಿಂದಾಗಿ ಈಚೆಗೆ ಹಿಂದು ಅರ್ಚಕರ ನೇಮಕವಾಗಿದೆ.
ದತ್ತ ಪೀಠದ ಗುಹೆಯಲ್ಲಿ ದತ್ತ ಪಾದುಕೆಗೆ ತ್ರಿಕಾಲ ಪೂಜೆ ಮತ್ತು ಪ್ರತಿ ಹುಣ್ಣಿಮೆಯಂದು ದತ್ತ ಹೋಮ ನಡೆಯುತ್ತಿದೆ. ಪಾದುಕೆ ಪೂಜೆಯಿಂದ ಇಡೀ ದತ್ತಪೀಠದ ಪರಿಸರದಲ್ಲಿ ವಿಶೇಷವಾದ ಶಕ್ತಿ ಆಹ್ವಾನವಾಗಿದೆ ಎಂದು ಅಭಿಪ್ರಾಯಪಟ್ಟರು.
ಡಿಸೆಂಬರ್ ೩ ರಂದು ಸಂಜೆ ೫ ಗಂಟೆಗೆ ಹೊಳಲ್ಕೆರೆಯಲ್ಲಿ ದತ್ತ ಮಾಲಾಧಾರಿಗಳಿಂದ ಸಂಕೀರ್ತನಾ ಯಾತ್ರೆ ಹಾಗೂ ಡಿಸೆಂಬರ್ ೪ ರಂದು ಬೆಳಗ್ಗೆ ದತ್ತ ಪೀಠದಲ್ಲಿ ದತ್ತ ಪಾದುಕೆ ದರ್ಶನ ಮಾಡಲಾಗುವುದು ಎಂದರು.
ಪರಿಷತ್ ತಾಲೂಕು ಅಧ್ಯಕ್ಷ ಧೃವವಕುಮಾರ್, ಸಂಯೋಜಕ ಜಯರಾಜ್, ಸೇವಾ ಪ್ರಮುಖ ಅಣ್ಣಪ್ಪ, ಲೋಹಿತ್, ಸುರೇಶ್ ಅಗ್ರಹಾರ ಇತರರು ಇದ್ದರು.