ಐಷಾರಾಮಿ ಜೀವನ ತ್ಯಜಿಸಿದ ಸಂತ ನಿಜಗುಣ ಶಿವಯೋಗಿಗಳು

 ಚಿತ್ರದುರ್ಗದಲ್ಲಿ ಬುಧವಾರ ಆಯೋಜಿಸಿದ್ದ ಅನುಭಾವ ಶ್ರಾವಣ, ಶರಣರ ಚಿಂತನ ಮಾಲಿಕೆ ಕಾರ್ಯಕ್ರಮದಲ್ಲಿ ಡಾ. ಬಸವಕುಮಾರ ಸ್ವಾಮೀಜಿ, ಶ್ರೀ -Àಕೀರ ದಿಂಗಾಲೇಶ್ವರ ಸ್ವಾಮೀಜಿ, ಶ್ರೀ ಬಸವಮೂರ್ತಿ ಮಾದಾರ ಚನ್ನಯ್ಯ ಸ್ವಾಮೀಜಿ, ಶ್ರೀ ಶಾಂತವೀರ ಗುರು ಮುರುಘರಾಜೇಂದ್ರ ಸ್ವಾಮೀಜಿ, ಬಸವ ಮುರುಘೇಂದ್ರ ಸ್ವಾಮೀಜಿ ಇತರರು ಇದ್ದರು.
ಚಿತ್ರದುರ್ಗದಲ್ಲಿ ಬುಧವಾರ ಆಯೋಜಿಸಿದ್ದ ಅನುಭಾವ ಶ್ರಾವಣ, ಶರಣರ ಚಿಂತನ ಮಾಲಿಕೆ ಕಾರ್ಯಕ್ರಮದಲ್ಲಿ ಡಾ. ಬಸವಕುಮಾರ ಸ್ವಾಮೀಜಿ, ಶ್ರೀ -Àಕೀರ ದಿಂಗಾಲೇಶ್ವರ ಸ್ವಾಮೀಜಿ, ಶ್ರೀ ಬಸವಮೂರ್ತಿ ಮಾದಾರ ಚನ್ನಯ್ಯ ಸ್ವಾಮೀಜಿ, ಶ್ರೀ ಶಾಂತವೀರ ಗುರು ಮುರುಘರಾಜೇಂದ್ರ ಸ್ವಾಮೀಜಿ, ಬಸವ ಮುರುಘೇಂದ್ರ ಸ್ವಾಮೀಜಿ ಇತರರು ಇದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ಶ್ರೀ -Àಕೀರ ದಿಂಗಾಲೇಶ್ವರ ಸ್ವಾಮೀಜಿ
  • ಅನುಭಾವ ಶ್ರಾವಣ, ಶರಣ ಚಿಂತನ ಮಾಲಿಕೆ
  • ಐ ಷಾರಾಮಿ

ಚಿತ್ರದುರ್ಗ:

ಅವತ್ತಿನ ಕಾಲಕ್ಕೆ ೭೨ ಕೋಟಿ ರೂ. ಸಂಪತ್ತು ಹೊಂದಿದ್ದ, ಚಾಮರಾಜನಗರ ಸಮೀಪದ ಒಂದು ರಾಜ್ಯದ ರಾಜರಾ ಗಿದ್ದ ನಿಜಗುಣ ಶಿವಯೋಗಿಗಳು ಜಂಗಮ ಭಕ್ತರಾಗಿದ್ದರು ಎಂದು ಶಿರಹಟ್ಟಿ -Àಕೀರೇಶ್ವರ ಮಠದ ಶ್ರೀ -Àಕೀರ ದಿಂಗಾಲೇಶ್ವರ ಸ್ವಾಮೀಜಿ ಹೇಳಿದರು.

ಮುರುಘಾಮಠದಲ್ಲಿ ಬುಧವಾರ ಆಯೋಜಿಸಿದ್ದ ಅನುಭಾವ ಶ್ರಾವಣ, ಶರಣ ಚಿಂತನ ಮಾಲಿಕೆಯಲ್ಲಿ ಮಾತನಾಡಿ, ಅರಮನೆ, ಐ ಷಾರಾಮಿ ಜೀವನ ತ್ಯಜಿಸಿ ಸಾಮಾನ್ಯರಂತೆ ಬದುಕಿದವರು. ೪೦ ಸಾವಿರ ಗ್ರಂಥಗಳನ್ನು ಅಧ್ಯಯನ ಮಾಡಿದ್ದರು. ಅಮೂಲ್ಯ ಗ್ರಂಥಗಳನ್ನು ರಚಿಸಿದ್ದಾರೆ ಎಂದು ಶ್ರೀಗಳು ಹೇಳಿದರು.
ವಿಷಯಾವಲೋಕನ ಮಾಡಿದ ಕನ್ನಡ ಭಾಷಾ ಶಿಕ್ಷಕಿ ಡಾ.ಆರ್.ಮಮತಾ, ಶಿವಯೋಗಿಗಳು ಕನ್ನಡದ ಆಧ್ಯಾತ್ಮಿಕ ಹಾಗೂ ತತ್ವ ಪದ ಸಾಹಿತ್ಯ ಪರಂಪರೆಯ ಪ್ರಮುಖ ಚಿಂತಕರಾಗಿದ್ದಾರೆ ಎಂದರು.
ಶಿಕ್ಷಕ ಕಸವನಹಳ್ಳಿ ಶಿವಣ್ಣ ಮಾತನಾಡಿ, ಜೀವಕಾರುಣ್ಯವಿರುವ ಬುದ್ಧ, ಬಸವ ಹಾಗೂ ಡಾ.ಬಿ.ಆರ್.ಅಂಬೇಡ್ಕರ್ ಅವರ ತತ್ವಾ ದರ್ಶಗಳ ಮಾರ್ಗದಲ್ಲಿ ನಾವಿಂದು ಸಾಗಬೇಕಿದೆ ಎಂದರು.
ಶ್ರೀ ಮಠದ ಆಡಳಿತ ಮಂಡಳಿ ಸದಸ್ಯ ಡಾ. ಬಸವಕುಮಾರ ಸ್ವಾಮೀಜಿ, ಶ್ರೀ ಶಿವಶರಣರ ಮಾದಾರ ಚನ್ನಯ್ಯ ಗುರುಪೀಠದ ಶ್ರೀ ಬಸವಮೂರ್ತಿ ಮಾದಾರ ಚನ್ನಯ್ಯ ಸ್ವಾಮೀಜಿ, ಗುರುಮಠಕಲ್‌ನ ಶ್ರೀ ಶಾಂತವೀರ ಗುರು ಮುರುಘರಾಜೇಂದ್ರ ಸ್ವಾಮೀಜಿ, ಬಸವ ಮುರುಘೇಂದ್ರ ಸ್ವಾಮೀಜಿ ಮತ್ತಿತರರು ಇದ್ದರು.
ಉಮೇಶ್ ಪತ್ತಾರ್ ನಿಜಗುಣ ಶಿವಯೋಗಿಗಳ ತತ್ವಗೀತೆಗಳನ್ನು ಹಾಡಿದರು. ಪಿ.ಸಿ. ಬಿಂದು ಸ್ವಾಗತಿಸಿ, ಪಿಎಂಜಿ ರಾಜೇಶ್ ವಂದಿಸಿದರು. ಎನ್. ಸೌಮ್ಯ ನಿರೂಪಿಸಿದರು.

ವಚನಾಭಿಷೇಕ

ಡಾ.ಬಸವಕುಮಾರ ಸ್ವಾಮೀಜಿ, ಬಸವ ಮುರುಘೇಂದ್ರ ಸ್ವಾಮೀಜಿ, ಕೊಲ್ಲಾಪುರದ ಶ್ರೀ ಶಿವಾನಂದ ಸ್ವಾಮೀಜಿ, ಶ್ರೀ ಶಾಂತವೀರ ಗುರು ಮುರುಘರಾಜೇಂದ್ರ ಸ್ವಾಮೀಜಿ, ಶ್ರೀ ಬಸವಚೇತನ ಸ್ವಾಮೀಜಿ ಮತ್ತಿತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net