ರೈತರಿಗೆ ೫೨೮ ಕೋಟಿ ರೂ.ಅಲ್ಪಾವಽ ಕೃಷಿ ಸಾಲ ವಿತರಣೆ

ಸಹಕಾರ ಸಪ್ತಾಹಕ್ಕೆ ಸಚಿವ ಟಿ.ರಘುಮೂರ್ತಿ ಚಾಲನೆ
ಚಿತ್ರದುರ್ಗದಲ್ಲಿ ಶನಿವಾರ ಸಹಕಾರ ಸಪ್ತಾಹ ಆಚರಣೆಗೆ ಸಚಿವ ಟಿ.ರಘುಮೂರ್ತಿ ಅವರು ಚಾಲನೆ ನೀಡಿದರು. ಇಲ್ಯಾಸ್ ಉಲ್ಲಾ ಷರೀಫ್, ಮಾಧುರಿಗಿರೀಶ್,ಜೆ.ಆರ್.ರವಿಕುಮಾರ್ ಮತ್ತಿತರರು ಇದ್ದರು.

---
ಚಿತ್ರದುರ್ಗದಲ್ಲಿ ಶನಿವಾರ ಸಹಕಾರ ಸಪ್ತಾಹ ಆಚರಣೆಗೆ ಸಚಿವ ಟಿ.ರಘುಮೂರ್ತಿ ಅವರು ಚಾಲನೆ ನೀಡಿದರು. ಇಲ್ಯಾಸ್ ಉಲ್ಲಾ ಷರೀಫ್, ಮಾಧುರಿಗಿರೀಶ್,ಜೆ.ಆರ್.ರವಿಕುಮಾರ್ ಮತ್ತಿತರರು ಇದ್ದರು. ---
Published on: 

ಚಿತ್ರದುರ್ಗ: ಚಿತ್ರದುರ್ಗ ಡಿಸಿಸಿ ಬ್ಯಾಂಕ್ ವ್ಯಾಪ್ತಿಯಲ್ಲಿ, ಜಿಲ್ಲೆಯ ೧೬೦ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳ ಮೂಲಕ ೫೯ ಸಾವಿರ ರೈತರಿಗೆ ಪ್ರಸಕ್ತ ಸಾಲಿನಲ್ಲಿ ೫ ಲಕ್ಷ ರೂ.ವರೆಗೆ ಶೂನ್ಯ ಬಡ್ಡಿ ದರದಲ್ಲಿ ೫೨೮ ಕೋಟಿ ರೂ.ಅಲ್ಪಾವಽ ಕೃಷಿ ಸಾಲ ವಿತರಿಸಲಾಗಿದೆ ಎಂದು ಡಿಸಿಸಿ ಬ್ಯಾಂ ಕ್ ಅಧ್ಯಕ್ಷರೂ ಆಗಿರುವ ಪರಿಶಿಷ್ಟ ವರ್ಗಗಳ ಕಲ್ಯಾಣ,ಜಿಲ್ಲಾ ಉಸ್ತುವಾರಿ ಸಚಿವ ಟಿ.ರಘುಮೂರ್ತಿ ಹೇಳಿದರು.

ಸಹಕಾರ ಇಲಾಖೆ, ರಾಜ್ಯಸಹಕಾರ ಮಹಾಮಂಡಳ, ಜಿಲ್ಲಾ ಸಹಕಾರ ಯೂನಿಯನ್, ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್, ಜಿಲ್ಲಾ ಸೌ ಹಾರ್ದ ಸಹಕಾರಿ ಒಕ್ಕೂಟ ಹಾಗೂ ಚಿತ್ರದುರ್ಗ ತಾಲೂಕಿನ ಎಲ್ಲ ಸಹಕಾರ ಸಂಘಗಳು ಮತ್ತು ಬ್ಯಾಂಕ್‌ಗಳ ಸಹಯೋಗದಲ್ಲಿ ಶನಿವಾರ ನಗರದ ಜೆಎಂ ಕಂ-Àರ್ಟ್ಸ್ ಸಭಾಂಗಣದಲ್ಲಿ ಆಯೋಜಿಸಿದ್ದ ೭೩ನೇ ಅಖಿಲ ಭಾರತ ಸಹಕಾರ ಸಪ್ತಾಹ ಆಚರಣೆಗೆ ಚಾಲನೆ ನೀಡಿ ಅವರು ಮಾತನಾಡಿದರು.

ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ೧೫೨೫೩ ಸದಸ್ಯರಿಗೆ ೧೧೬ ಕೋಟಿ ರೂ., ೧೫ ಲಕ್ಷ ರೂ.ವರೆಗೆ ಶೇ.೩ರ ಬಡ್ಡಿ ದರದಲ್ಲಿ ೨೧ ೦೦ ರೈತರಿಗೆ ೨೦೭ ಕೋಟಿ ರೂ.ಟ್ರಾ÷್ಯಕ್ಟರ್ ಹಾಗೂ ಭೂ ಅಭಿವೃದ್ಧಿ ಸಾಲ ವಿತರಿಸಲಾಗಿದೆ. ಯಶಸ್ವಿನಿ ವಿಮಾ ಯೋಜನೆಯಡಿ ಪ್ರಸಕ್ತ ಸಾ ಲಿನ ೧.೩೦ ಲಕ್ಷ ಸಹಕಾರ ಸಂಘಗಳ ಸದಸ್ಯರ ನೋಂದಣಿ ಗುರಿ ಮೀರಿ ೧.೫೮ ಲಕ್ಷ ಸದಸ್ಯರು ಯೋಜನೆಯಡಿ ನೋಂದಾಯಿಸಲಾಗಿದೆ. ಜಿಲ್ಲೆಯ ಅಂದಾಜು ೨.೫೦ ಲಕ್ಷ ರೈತರು -Àಸಲ್‌ಭಿಮಾ ಯೋಜನೆಯಡಿ ನೋಂದಾಯಿಸುವ ನಿಟ್ಟಿನಲ್ಲಿ ಡಿಸಿಸಿ ಬ್ಯಾಂಕ್ ಸಹಿತ ಸಹಕಾರ ಸಂಘಗಳು ಶ್ರಮಿಸಿವೆ ಎಂದರು.

ಜಿಲ್ಲೆಯಲ್ಲಿ ೨೨೭ ಕೋಟಿ ರೂ.ಬೆಳೆ ನಷ್ಟವಾಗಿದ್ದು, ಈಗಾಗಲೇ ಕೇಂದ್ರಕ್ಕೆ ಪರಿಹಾರಕ್ಕಾಗಿ ಮನವಿ ಮಾಡಲಾಗಿದೆ. ರಾಜ್ಯಸರಕಾರವೂ ಪರಿಹಾರ ಘೋಷಿಸಿದೆ. ರಾಜ್ಯಸರಕಾರದ ತೀರ್ಮಾನದಂತೆ ಹಾಲಿನ ದರ ಹೆಚ್ಚಿಸಲಾಗಿದ್ದು, ಇದರಲ್ಲಿ ೭ ರೂ.ಗಳನ್ನು ನೇರವಾಗಿ ರೈತರಿಗೆ ನೀಡಲಾಗುತ್ತಿದೆ.

ರೈತರಿಗೆ ಅನುಕೂಲಕ್ಕಾಗಿ ನೇಗಿಲು ಯೋಗಿ ಯೋಜನೆ ಜಾರಿಗೊಳಿಸಲಾಗಿದ್ದು, ಕಡಿಮೆ ಭೂಮಿ ಇರುವ ರೈತರಿಗೆ ೪೫೦೦ ರೂ. ಸಹಾ ಯ ಧನ ನೀಡಲಾಗುತ್ತದೆ. ಗ್ರಾಮೀಣ ಯುವಕರನ್ನು ಪ್ರೋತ್ಸಾಹಿಸಲು ಪ್ರತಿ ಗ್ರಾಪಂ ಮಟ್ಟದಲ್ಲಿ ಯುವ ಸಂಘಗಳಿಗೆ ತಲಾ ೧೦ ಲಕ್ಷ ರೂ.ಅನುದಾನ ನೀಡಲಾಗುತ್ತಿದೆ ಎಂದರು.

೧೨೨ ವರ್ಷಗಳ ಇತಿಹಾಸವಿದೆ

ಡಿಸಿಸಿ ಬ್ಯಾಂಕ್ ಎಂಡಿ ಇಲ್ಯಾಸ್‌ಉಲ್ಲಾ ಷರೀಫ್ ಅವರು ಮಾತನಾಡಿ, ಗ್ರಾಮೀಣರು, ರೈತರ ಶ್ರೇಯೋಭಿವೃದ್ಧಿಗೆ ನಿರಂತರ ಶ್ರಮಿಸುತ್ತಿರುವ ಸಹಕಾರ ಕ್ಷೇತ್ರಕ್ಕೆ ೧೨೨ ವರ್ಷಗಳ ಇತಿಹಾಸವಿದೆ. ಸಹಕಾರಿ ಕ್ಷೇತ್ರದ ಮೂಲಕ ಜನರ ಏಳಿಗೆಗೆ ಅನೇಕ ಸಹಕಾರಿ ಧುರೀಣರು ಸಾರ್ಥಕ ಸೇವೆಯನ್ನು ಸಲ್ಲಿಸಿಕೊಂಡು ಬರುತ್ತಿದ್ದಾರೆ. ಸಹಕಾರಿ ಕ್ಷೇತ್ರ ಹಸಿರು ಕ್ರಾಂತಿ, ಶ್ವೇತ(ಹಾಲು)ಕ್ರಾಂತಿಗೆ ಪೂರಕವಾಗಿ ಕೆಲಸ ಮಾಡುತ್ತಿದೆ.

ಸಹಕಾರ ಸಂಘಗಳ ಸುಸ್ಥಿರ ಅಭಿವೃದ್ಧಿ, ಆರ್ಥಿಕತೆ ಸೇರಿದಂತೆ ದೇಶದ ಸರ್ವಾಂಗೀಣ ಏಳಿಗೆಗೆ ಸಾಧ್ಯವಾಗಲಿದೆ. ಬೈಲಾ ಅನುಗುಣ ವಾಗಿ ಕರ‍್ಯನಿರ್ವಹಿಸಿದರೆ ಸಹಕಾರ ಸಂಘಗಳ ಸಮಗ್ರ ಅಭಿವೃದ್ಧಿಯೊಂದಿಗೆ ಮುಂದಿನ ಪೀಳಿಗೆಗೆ ಸದೃಢ ಸಹಕಾರಿ ಕ್ಷೇತ್ರವನ್ನು ಬೆಳೆಸಿ ಪರಿಚಯಿಸಲು ಸಾಧ್ಯವಾಗಲಿದೆ ಎಂದರು.

ಸಹಕಾರಿಗಳಿಗೆ ಸನ್ಮಾನ

ವೀರಶೈವ ಅರ್ಬನ್ ಕೋ ಆಪರೇಟಿವ್ ಬ್ಯಾಂಕ್ ಅಧ್ಯಕ್ಷ ಪಟೇಲ್ ಶಿವಕುಮಾರ್, ಎಸ್‌ಜೆಎಂ ಕೋ ಆಪರೇಟಿವ್ ಸೊಸೈಟಿ ನಿ ರ್ದೇಶಕ ಪಿ.ವೀರೇಂದ್ರಕುಮಾರ್ ಅವರಿಗೆ ಉತ್ತಮ ಸಹಕಾರಿ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಚಿತ್ರದುರ್ಗ ತಾಲೂಕಿನ ಆರು ಉತ್ತ ಮ ಸಹಕಾರ ಸಂಘಗಳ ಅಧ್ಯಕ್ಷರು, ಕರ‍್ಯದರ್ಶಿಗಳನ್ನು ಸನ್ಮಾನಿಸಲಾಯಿತು.

ರಾಜ್ಯಸಹಕಾರ ಮಾರಾಟ ಮಹಾಮಂಡಳ ನಿರ್ದೇಶಕ ಮಾಧುರಿಗಿರೀಶ್, ಡಿಸಿಸಿ ಬ್ಯಾಂಕ್ ನಿರ್ದೇಶಕ ಎಚ್.ಎಂ.ದ್ಯಾಮಣ್ಣ, ಶಿವ ಮೊಗ್ಗ ಹಾಲು ಒಕ್ಕೂಟದ ನಿರ್ದೇಶಕ ಜಿ.ಪಿ.ರೇವಣಸಿದ್ದಪ್ಪ ಮತ್ತಿತರರು ಮಾತನಾಡಿದರು. ಸುಸ್ಥಿರ ಅಭಿವೃದ್ಧಿ ಮತ್ತು ಬೆಳವಣಿಗೆಯಲ್ಲಿ ಸಹಕಾರ ಸಂಸ್ಥೆಗಳ ಪಾತ್ರದ ಕುರಿತು ನಿವೃತ್ತ ಪ್ರಾಚಾರ್ಯ ಡಾ.ಸಿ.ಚನ್ನಕೇಶವ ಉಪನ್ಯಾಸ ನೀಡಿದರು. ಜಿಲ್ಲಾ ಸಹಕಾರ ಯೂನಿಯನ್ ಉಪಾಧ್ಯಕ್ಷ ಜೆ.ಆರ್.ರವಿಕುಮಾರ್ ಅಧ್ಯಕ್ಷತೆ ವಹಿಸಿದ್ದರು.

ಜಿಲ್ಲಾ ಸಹಕಾರ ಯೂನಿಯನ್ ನಿರ್ದೇಶಕರಾದ ಜಿ.ಈ.ಅಜ್ಜಪ್ಪ, ಆರ್.ಮಲ್ಲೇಶಪ್ಪ, ಜೆ.ಶಿವಪ್ರಕಾಶ್,ಜಿ.ವಿ.ಗಂಗಾಧರಪ್ಪ, ಡಿಸಿಸಿ ಬ್ಯಾಂಕ್ ನಿರ್ದೇಶಕ ರಘುರಾಮರೆಡ್ಡಿ, ಮೇಲ್ವಿಚಾರಕರಾದ ಕೆ.ದೀಪಕ್, ಆರ್.ಮುಖೇಶ್, ಎನ್.ರಂಗಸ್ವಾಮಿ, ಜಿಲ್ಲಾ ಸೌಹಾರ್ದ ಸಹ ಕಾರಿಗಳ ಒಕ್ಕೂಟದ ಅಧ್ಯಕ್ಷ ಡಿ.ಆರ್.ತಿಪ್ಪೇಸ್ವಾಮಿ, ಶಿವಮೊಗ್ಗ ಹಾಲು ಒಕ್ಕೂಟ ನಿರ್ದೇಶಕ ಜಿ.ಬಿ.ಶೇಖರಪ್ಪ, ವಿಸ್ತರಣÁಽಕಾರಿಗಳಾದ ರಂಜಿತಾ, ರಶ್ಮಿ, ಪಿಕಾರ್ಡ್ ಬ್ಯಾಂಕ್ ಅಧ್ಯಕ್ಷ ಕೊಂಚೆ ಸತೀಶ್‌ಕೂನಬೇವು, ಸಹಕಾರ ಸಂಘಗಳ ಉಪನಿಬಂಧಕ ದಿಲೀಪ್‌ಕುಮಾರ್, ಸಹ ಕಾರ ಸಂಘಗಳ ಲೆಕ್ಕಪರಿಶೋಧನಾ ಇಲಾಖೆ ಉಪ ನಿರ್ದೇಶಕ ಪಿ.ಅಂಜನಮೂರ್ತಿ, ಸಹಕಾರ ಸಂಘಗಳ ಸಹಾಯಕ ನಿಬಂಧಕ ಎಚ್. ರ ಮೇಶ್, ಸಹಕಾರ ಅಭಿವÊದ್ಧಿ ಅಽಕಾರಿ ಮಹಮದ್ ಯೂನಸ್‌ಪರ್ವೀಜ್ ಮತ್ತಿತರರು ಇದ್ದರು. ಸಹಕಾರ ಸಂಸ್ಥೆಗಳ ಬೆಳವಣಿಗೆಯಲ್ಲಿ ಉತ್ತಮ ಪರಿಸರ, ತಂತ್ರಜ್ಞಾನ, ಕೌಶಲಾಧಾರಿತ ವೃತ್ತಿಪರ ಸೇವೆ ಎಂಬ ಘೋಷವಾಕ್ಯದೊಂದಿಗೆ ಸಹಕಾರ ಸಪ್ತಾಹವನ್ನು ಆಚರಿಸಲಾಗುತ್ತಿದೆ.