

ಪ್ರಮುಖ ಮುಖ್ಯಾಂಶಗಳು
ಚಿತ್ರದುರ್ಗ ನಗರದಿಂದ ಹೊರಕ್ಕೆ ಹೋಗುವಂಥ ಬಸ್‌ಗಳು ಬಿಡಿ ರಸ್ತೆ, ಹೊಳಲ್ಕೆರೆ ರಸ್ತೆ ಮೂಲಕ ಹೋಗುವಂತಿಲ್ಲವೆAಬ ನಿರ್ಬಂಧ ಸಡಿಸಲಾಗಿದೆ. ಹೊಳಲ್ಕೆರೆ ರಸ್ತೆ ಹೊರತು ಪಡಿಸಿ, ಬಿಡಿ ರಸ್ತೆಯಲ್ಲಿ ಎಂದಿನAತೆ ಸಂಚಾರ ಆರಂಭವಾಗಿದೆ.
ಜಿಲ್ಲಾಡಳಿತದ ನಿರ್ಧಾರದಿಂದ ಗ್ರಾಮೀಣರು, ಬಡ ಪ್ರಯಾಣಿಕರು, ವಿದ್ಯಾರ್ಥಿಗಳು, ರೈತರಿಗೆ ಬಹಳ ತೊಂದರೆಯಾಗಿದೆ. ನಗರದೊಳಗೆ ಸಂಚಾರ ದಟ್ಟಣೆ ನಿಯಂತ್ರಿಸಲು ಚಿತ್ರದುರ್ಗದ ಗಾಂಽ ವೃತ್ತದನಿಂದ ಐಬಿವರೆಗೆ ಪಾರ್ಕಿಂಗ್ ವ್ಯವಸ್ಥೆ ಸರಿಪಡಿಸಲಿ.
ನಗರದೊಳಗೆ ಬಸ್‌ಗಳ ಸಂಚಾರ ನಿರ್ಬಂಧಕ್ಕೆ ತಾವು ಆದೇಶಿಸಿರಲಿಲ್ಲ. ಪೊಲೀಸರು ಈಗ ಮತ್ತೆ ಸಂಚಾರಕ್ಕೆ ಅವಕಾಶ ಮಾಡಿ ಕೊಟ್ಟಿ ದ್ದಾರೆ.