ಉದ್ಘಾಟನೆಗೆ ಸಜ್ಜಾದ ನವೀಕೃತ ತರಾಸು ರಂಗಮAದಿರ

 ಚಿತ್ರದುರ್ಗದ ನವೀಕೃತ ತರಾಸು ರಂಗ ಮಂದಿರ.
ಚಿತ್ರದುರ್ಗದ ನವೀಕೃತ ತರಾಸು ರಂಗ ಮಂದಿರ.
Published on

ಪ್ರಮುಖ ಮುಖ್ಯಾಂಶಗಳು

  • ೧೫ರAದು ಸಚಿವ ಟಿ.ರಘುಮೂರ್ತಿ ಅವರಿಂದ ಚಾಲನೆ
  • ಅಂದು ಸಂಜೆಯೇ ಸ್ವಾತಂತ್ರ‍್ಯೋತ್ಸವದ ಸಾಂಸ್ಕೃತಿಕ ಕಾರ್ಯಕ್ರಮ
  • ಅಂದಾಜು ೨.೭೦ ಕೋಟಿ ರೂ.ವೆಚ್ಚ.

ವಿಜಯವಾಣಿ ವಿಶೇಷ, ಚಿತ್ರದುರ್ಗ

ಅಂದಾಜು ೨.೭೦ ಕೋಟಿ ರೂ.ವೆಚ್ಚದಲ್ಲಿ ನವೀಕರಿಸಿರುವ ನಗರದ ತರಾಸು ರಂಗಮAದಿರÀ ಉದ್ಘಾಟನೆಗೆ ಸಜ್ಜಾಗಿದೆ.

ಇದರ ನವೀಕರಣ ಕಾಮಗಾರಿ ಸಲುವಾಗಿ ೨೦೨೫ ಏಪ್ರಿಲ್ ೧೫ರ ನಂತರದಲ್ಲಿ ಯಾವುದೇ ಕಾರ್ಯಕ್ರಮಗಳನ್ನು ನಡೆಸಲು ಅವಕಾಶ ಕೊಟ್ಟಿರಲಿಲ್ಲ. ಈಗ ಅತ್ಯಾಧುನಿಕ ಧ್ವನಿ, ಬೆಳಕು, ಹವಾನಿಯಂತ್ರಿತ ವ್ಯವಸ್ಥೆಯೊಂದಿಗೆ ನವೀಕರಣಗೊಂಡಿರುವ ರಂಗಮAದಿರ ಆ.೧೫ರಂದು ಉದ್ಘಾಟನೆ ಆಗಲಿದೆ.

ಛಾವಣಿಯನ್ನು ಸಂಪೂರ್ಣ ದುರಸ್ತಿಗೊಳಿಸಲಾಗಿದೆ. ತೇವಾಂಶ ನಿರೋಧಕ ಬಣ್ಣ ಬಳಿಯಲಾಗಿದೆ. ಹಾಳಾಗಿದ್ದ ಹಳೆಯ ವೈರಿಂಗ್ ವ್ಯವಸ್ಥೆಯನ್ನು ಪೂರ್ಣ ಪ್ರಮಾಣದಲ್ಲಿ ತೆಗೆದು ಹಾಕಿ ಹೊಸದಾಗಿ ಅಳವಡಿಸಲಾಗಿದೆ. ಅತ್ಯಾಧನಿಕ ದೀಪದ ವ್ಯವಸ್ಥೆ, ಸ್ಟೇಜ್ ಲೈಟಿಂಗ್‌ನೊAದಿಗೆ ರಂಗ ಮಂದಿರದ ಒಳ ಮತ್ತು ಹೊರ ಆವರಣ ಆಕರ್ಷಣೀಯವಾಗಿದೆ.
ಪ್ರೇಕ್ಷರ ಗ್ಯಾಲರಿ ಹಾಗೂ ಸ್ಟೇಜ್ ಹವಾ ನಿಯಂತ್ರಿತವಾಗಿದೆ. ವೇದಿಕೆಯಲ್ಲಿರುವ ಪುರುಷರ ಹಾಗೂ ಮಹಿಳೆಯರ ಪ್ರತ್ಯೇಕ ಗ್ರೀನ್ ರೂಂಗಳನ್ನು ಹೊಸದಾಗಿ ಸಿದ್ಧಪಡಿಸಲಾಗಿದೆ. ಲಾಕರ್ ಸಹಿತ ವಾರ್ಡ್ರೋಬ್ ವ್ಯವಸ್ಥೆ ಕಲ್ಪಿಸಲಾಗಿದೆ. ವೇದಿಕೆ ಮತ್ತು ಗ್ರೀನ್ ರೂಂಗಳಿಗೆ ವುಡನ್ ಪ್ಲೋರಿಂಗ್ ಹಾಕಲಾಗಿದೆ.
ವೇದಿಕೆ ಮೇಲೆ ಗಣ್ಯರು ಕುಳಿತುಕೊಳ್ಳಲು ಮರದ ೧೨ ಕುರ್ಚಿಗಳು, ಮೂರು ಟಿಪಾಯಿ, ಹೊಸ ಫೋಡಿಯಂ ಸಿದ್ಧವಾಗಿದೆ. ಸ್ಟೇಜ್‌ ನಲ್ಲಿ ೧೦/೨೦ ಅಡಿ ಅಳತೆಯ ಎಲ್‌ಇಡಿ ಸ್ಕಿçÃನ್ ಪರ್ಮನೆಂಟ್ ಆಗಿ ಅಳವಡಿಸಲಾಗಿದೆ. ಪ್ರೇಕ್ಷಕರ ಗ್ಯಾಲರಿ ನೆಲ ಹಾಸು ಕೂಡ ನವೀಕರಣಗೊಂಡಿದೆ. ೫೦ ವಿಐಪಿ ಕುರ್ಚಿಗಳೊಂದಿಗೆ ಒಟ್ಟಾರೆ ೫೫೦ ಆಸನಗಳನ್ನು ಅಳವಡಿಸಲಾಗಿದೆ.
ಈ ಗ್ಯಾಲರಿಯನ್ನು ಹವಾನಿಯಂತ್ರಿತಗೊಳಿಸಿದ್ದರೂ ಒಂದು ಇಂಡಸ್ಟಿçಯಲ್ ಫ್ಯಾನ್ ಅಳವಡಿಸಲಾಗಿದೆ. ಭಾಷಣ, ಸಂಗೀತ, ನಾಟಕಗಳಂಥ ಸಂದರ್ಭದಲ್ಲಿ ಯಾವುದೇ ಅಡಚಣೆ ಆಗದಂತೆ ಅಕಾಸ್ಟಿಕ್‌ವಾಲ್, ಸೀಲಿಂಗ್ ಸಜ್ಜಾಗಿದೆ. ವೇದಿಕೆಯ ಕರ್ಟನ್ ವ್ಯವಸ್ಥೆ ಕೂಡ ಸಂಪೂರ್ಣ ಹೊಸದಾಗಿದೆ. ಬಾಗಿಲುಗಳನ್ನು ಸರಿಪಡಿಸಲಾಗಿದೆ.
ಧ್ವನಿ ಮತ್ತು ಬೆಳಕನ್ನು ನಿಯಂತ್ರಿಸುವ ಕಂಟ್ರೋಲ್ ರೂಂ. ಸುಜ್ಜಿತಗೊಳಿಸಲಾಗಿದೆ. ಇನ್ನು ರಂಗಮAದಿರ ಹೊರ ಆವರಣ, ಶೌಚಗೃಹಗಳನ್ನು ಹೊಸ ಫಿಟ್ಟಿಂಗ್ಸ್ಗಳೊAದಿಗೆ ನವೀಕರಿಸಲಾಗಿದೆ. ಸಿಸಿ ರೋಡ್ ನಿರ್ಮಿಸಲಾಗಿದೆ. ಪಾರ್ಕಿಂಗ್ ಪ್ರದೇಶದಲ್ಲಿ ಪೇವರ್‌ಬ್ಲಾಕ್ ಅಳವಡಿಸಲಾಗಿದೆ. ರಂಗಮAದಿರ ನಾಮ ಫಲಕವೂ ಹೊಸದಾಗಿದೆ. ಇಲ್ಲಿ ಡಿಜಿಟಲ್ ಬೋರ್ಡ್ ಹಾಕಲಾಗುತ್ತಿದೆ.
"

ನವೀಕೃತ ತರಾಸು ರಂಗಮAದಿರವನ್ನು ಆ.೧೫ರಂದು ಸಚಿವ ಟಿ.ರಘುಮೂರ್ತಿ ಉದ್ಘಾಟಿಸಲಿದ್ದಾರೆ. ಸಂಸದ ಗೋವಿಂದ ಎಂ.ಕಾರಜೋಳ, ಶಾಸಕರು, ನಾನಾ ಗಣ್ಯರು ಪಾಲ್ಗೊಳ್ಳಲಿದ್ದಾರೆ. ಅಂದು ಸಂಜೆ ಸ್ವಾತಂತ್ರ‍್ಯೋತ್ಸವದ ಸಾಂಸ್ಕೃತಿಕ ಕಾರ್ಯಕ್ರಮಗಳು ರಂಗಮAದಿರದಲ್ಲಿ ಜರುಗಲಿವೆ.

— ಬಿ.ಟಿ. ಕುಮಾರಸ್ವಾಮಿ, ಎಡಿಸಿ, ಚಿತ್ರದುರ್ಗ

"

ಇಲಾಖೆ ನಿಯಮಾನುಸಾರ ರಂಗಮAದಿರದ ಬಾಡಿಗೆಯನ್ನು ಹೊಸದಾಗಿ ನಿರ್ಧರಿಸಬೇಕಾಗಿದೆ. ಜಿಲ್ಲಾಽಕಾರಿ ಅಧ್ಯಕ್ಷತೆಯ ಜಿಪಂ ಸಿಇಒ ಸಹಿತ ಹಿರಿಯ ಅಽಕಾರಿಗಳನ್ನು ಒಳಗೊಂಡಿರುವ ರಂಗಮAದಿರ ನಿರ್ವಹಣಾ ಸಮಿತಿ ಶೀಘ್ರ ಸಭೆ ಸೇರಿ ಹೊಸದಾಗಿ ಬಾಡಿಗೆ ಮೊತ್ತ ನಿಗದಿಪಡಿಸಲಿದೆ.

— ಡಾ.ಬಿ.ಎಂ. ಗುರುನಾಥ್, ಸಹಾಯಕ ನಿರ್ದೇಶಕ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಚಿತ್ರದುರ್ಗ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net