ಸಂಕಷ್ಟಗಳ ನಿವಾರಣೆಗೆ ಶಿಫಾರಸು

ಮುತ್ತಿಗಾರಹಳ್ಳಿ ಶ್ರೀಶೈಲ ಮಲ್ಲಿಕಾರ್ಜುನ ದೇವರ ಎತ್ತುಗಳ ಸನ್ನಿಧಿಗೆ ಭೇಟಿ
Visit
ಮುತ್ತಿಗಾರಹಳ್ಳಿ ದೇವರ ಎತ್ತುಗಳ ಸನ್ನಿಧಿಗೆ ರಾಜ್ಯಪಾಲೆ ಡಾ. ಸುಧಾ ಯಾದವ್ ಬುಡಕಟ್ಟು ಸಂಸ್ಕೃತಿ, ಪರಂಪರೆ ಕುರಿತು ಸ್ಥಳೀಯರೊಂದಿಗೆ ಸಂವಾದ ನಡೆಸಿದರು. ಎನ್.ವೈ. ಗೋಪಾಲಕೃಷ್ಣ, ಡಾ. ಯೋಗೇಶ್‌ಬಾಬು, ಎಸ್.ರವ್ಯಾ, ಡಾ. ಆಕಾಶ್ ಇತರರಿದ್ದರು.Visit
Published on: 

ಮೊಳಕಾಲ್ಮೂರು: ಪ. ಪಂಗಡದ ಜನರು ವಾಸಿಸುವ ಹಳ್ಳಿಗಳ ಸಂಕಷ್ಟಗಳು ನನ್ನ ಗಮನಕ್ಕೆ ಬಂದಿವೆ. ಸೂಕ್ತ ಪರಿಹಾರ ಕಲ್ಪಿಸಲು ಸರ್ಕಾರಕ್ಕೆ ಶಿಫಾರಸು ಮಾಡುವುದಾಗಿ ರಾಜ್ಯಪಾಲೆ ಡಾ. ಸುಧಾ ಯಾದವ್ ತಿಳಿಸಿದರು.

ತಾಲೂಕಿನ ಮುತ್ತಿಗಾರಹಳ್ಳಿಯ ಶ್ರೀಶೈಲ ಮಲ್ಲಿಕಾರ್ಜುನ ದೇವರ ಎತ್ತುಗಳ ಸನ್ನಿಧಿಗೆ ಭಾನುವಾರ ಭೇಟಿ ನೀಡಿದ ವೇಳೆ ಆಯೋಜಿಸಿದ್ದ ಧರ್ತಿ ಆಭಾ ಭಗವಾನ್ ಬಿರ್ಸಾ ಮುಂಡಾ ಅವರ 151ನೇ ಜಯಂತಿ ಕಾರ್ಯಕ್ರಮದಲ್ಲಿ ಸ್ಥಳೀಯರ ಜತೆ ಸಂವಾದ ನಡೆಸಿದರು.

ಬುಡಕಟ್ಟು ಜನರ ಜೀವಶೈಲಿ ಹಾಗೂ ಅವರ ಸನಾತನ ಸಂಸ್ಕೃತಿ, ಪರಂಪರೆ, ಇಲ್ಲಿನ ಜನರ ಶಿಕ್ಷಣ, ಆರೋಗ್ಯ ಹಾಗೂ ಸಾವಾಜಿಕ ವ್ಯವಸ್ಥೆ, ಮೂಲ ಸೌಕರ್ಯಗಳ ಕುರಿತಂತೆ ಸಮಗ್ರ ವಾಹಿತಿ ಪಡೆದುಕೊಂಡರು. ಈ ಭಾಗದಲ್ಲಿ ಸರ್ಕಾರಿ ಶಾಲೆ, ಅಂಗನವಾಡಿ ಕೇಂದ್ರಗಳು ಎಷ್ಟಿವೆ? ಅವುಗಳಿಗೆ ಎಲ್ಲ ರೀತಿಯ ಮೂಲ ಸೌಕರ್ಯಗಳಿವೆಯೇ? ಎಂದು ಪ್ರಶ್ನಿಸಿದ ಅವರು, ಶಿಕ್ಷಣ ವ್ಯವಸ್ಥೆಗೆ ಪೂರಕವಾಗಿ ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ಅಧಿಕಾರಿಗಳಿಗೆ ತಾಕೀತು ವಾಡಿದರು. ಶಾಸಕ ಎನ್.ವೈ. ಗೋಪಾಲಕೃಷ್ಣ, ದ್ರಾಕ್ಷಾರಸ ಮಂಡಳಿ ಅಧ್ಯಕ್ಷ ಡಾ. ಯೋಗೇಶ್‌ಬಾಬು, ಜಿಲ್ಲಾಧಿಕಾರಿ ಎಸ್. ರವ್ಯಾ, ಸಿಇಒ ಡಾ. ಆಕಾಶ್, ತಹಸೀಲ್ದಾರ್ ಟಿ. ಜಗದೀಶ್, ಜಿಲ್ಲಾ ಹಾಗೂ ತಾಲೂಕು ಮಟ್ಟದ ಅಧಿಕಾರಿಗಳು ಇದ್ದರು.

ಸುಧಾರಣೆಗೆ ಮನವಿ

ಗ್ರಾಮೀಣ ಮಕ್ಕಳ ಶೈಕ್ಷಣಿಕ ಸಬಲೀಕರಣಕ್ಕೆ ಶಾಲೆ, ಅಂಗನಾಡಿ ಕಟ್ಟಡಗಳಿಗೆ ಕಾಯಕಲ್ಪ ನೀಡಬೇಕು. ಶುದ್ಧ ಕುಡಿಯುವ ನೀರು, ಸಾರಿಗೆ ವ್ಯವಸ್ಥೆಯಲ್ಲಿ ಸುಧಾರಣೆ ಆಗಬೇಕಿದೆ ಎಂದು ಗ್ರಾಮಸ್ಥರು ರಾಜ್ಯಪಾಲರಲ್ಲಿ ಮನವಿ ವಾಡಿದರು. ಮುತ್ತಿಗಾರ ವ್ಯಾಸ ಸಂಸ್ಥಾನದ 16 ಎಕರೆ ಗೋವಾಳವನ್ನು ದೇವರ ಎತ್ತುಗಳಿಗೆ ಮೀಸಲಿಡಬೇಕು. ಗೋವುಗಳ ಜತೆಗೆ ಕುರಿ, ಮೇಕೆಗಳಿಗೂ ಮೇವು ನೀರು ಒದಗಿಸಬೇಕು ಎಂದು ಮನವಿ ವಾಡಿದರು. ನಂತರ ದೇವರ ಎತ್ತುಗಳ ಆರೈಕೆ, ಕಿಲಾರಿಗಳ ಜೀವನ ಶೈಲಿಯನ್ನು ರಾಜ್ಯಪಾಲರು ಅವಲೋಕಿಸಿದರು.

Also Read
ಕೃಷಿಕರ ಪ್ರಗತಿಗೆ ರಾಜ್ಯಪಾಲೆ ಶಹಬ್ಬಾಸ್
Visit