ಚಿತ್ರದುರ್ಗ;ಮುಖ್ಯಮಂತ್ರಿಯಾಗಿ ಸಿದ್ದರಾಮಯ್ಯ ಅವರನ್ನು ಮುಂದುವರಿಸಬೇಕೆAದು ಜಿಲ್ಲಾ ಅಹಿಂದ ಚಳವಳಿ ಮುಖ್ಯಸಂಚಾಲಕ ಕೆ.ಸುರೇಶ್‌ಬಾಬು ಅವರು ಕಾಂಗ್ರೆಸ್ ಹೈಕಮಾಂಡ್‌ನ್ನು ಒತ್ತಾಯಿಸಿದರು.
ನಗರದಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಸಿದ್ದರಾಮಯ್ಯ ಅವರನ್ನು ಅಽಕಾರದಿಂದ ಇಳಿಸಬಾರದು. ಸಾಮಾಜಿಕ ಹಾಗೂ ಶೈಕ್ಷಣಿಕ ಸಮೀಕ್ಷೆ ಅನುಷ್ಠಾನಕ್ಕಾಗಿ ಅವರು ಅಽಕಾರದಲ್ಲಿ ಮುಂದುವರಿಯಬೇಕಿದೆ. ಅಗತ್ಯವೆನಿಸಿದರೆ ಹೊಸದಿಲ್ಲಿಗೆ ನಿ ಯೋಗ ಹೋಗಿ ಹೈಕಮಾಂಡ್‌ಗೆ ಮನವಿ ಮಾಡಲಾಗುವುದು ಎಂದರು.
ಅಲೆಮಾರಿ/ಅರೆ ಅಲೆಮಾರಿ ಸಮುದಾಯದ ಸಂಘಟನೆಯ ಜಿಲ್ಲಾಧ್ಯಕ್ಷ ಎಸ್.ಲಕ್ಷಿ÷್ಮÃಕಾಂತ್ ಮಾತನಾಡಿ, ಸಿದ್ದರಾಮಯ್ಯ ಅ ವರು ಯಾವುದೇ ಒಂದು ಕಪ್ಪು ಚುಕ್ಕೆ ಇಲ್ಲದೆ ಅಽಕಾರ ನಡೆಸುತ್ತಿದ್ದಾರೆ. ರಾಜ್ಯದಲ್ಲಿ ೨೫ ಜನರು ಮುಖ್ಯಮಂತ್ರಿಗಳಾಗಿದ್ದಾರೆ. ಇವರಲ್ಲಿ ಐವ ರು ಹಿಂದುಳಿದ ವರ್ಗಕ್ಕೆ ಸೇರಿದ್ದಾರೆ. ಆದರೆ ದಲಿತ ಸಮುದಾಯದ ಒಬ್ಬರು ಈವರೆಗೂ ಸಿಎಂ ಆಗಿಲ್ಲ.
ಡಾ.ಬಿ.ಆರ್.ಅಂಬೇಡ್ಕರ್, ಬುದ್ಧ, ಬಸವ, ಕುವೆಂಪು, ಲೋಹಿಯಾ ಅವರ ವಿಚಾರಧಾರೆಗಳನ್ನಾಧರಿಸಿ ಸಿದ್ದರಾಮಯ್ಯ ಕೆಲಸ ಮಾಡುತ್ತಿದ್ದಾರೆ ಎಂದರು.
ಮುಖಂಡ ಷಫೀವುಲ್ಲಾ ಮಾತನಾಡಿ, ಡಾ.ಬಿ.ಆರ್.ಅಂಬೇಡ್ಕರ್ ಅವರ ಸಂವಿಧಾನದ ಆಶಯಗಳಿಗೆ ಪೂರಕವಾಗಿ ಸಿದ್ದರಾಮ ಯ್ಯ ಆಡಳಿತ ನಡೆಸುತ್ತಿದ್ದಾರೆ ಎಂದರು. ಕೆ.ತಿಪ್ಪೇಸ್ವಾಮಿ, ಆರ್.ನಾಗರಾಜ್, ಕೆ.ಮಧುಸೂಧನ್, ಪರ್ವಿನ್, ಕೇಶವಮೂರ್ತಿ, ಕಾರ್ತಿಕ್, ಶಂಕರ್ ಸುದ್ದಿಗೋಷ್ಠಿಯಲ್ಲಿ ಇದ್ದರು.