ಚಿತ್ರದುರ್ಗ: ಸತತ ಬರ ಅನುಭವಿಸುತ್ತಿರುವ ಬಯಲುಸೀಮೆ ನಾಡಿನಲ್ಲಿ ನೀರಿನ ಸುಖವನ್ನು ಪ್ರತಿಯೊಬ್ಬ ನಾಗರಿಕರೂ ಅನು ಭವಿಸಬೇಕು. ರೈತರ ತೋಟಗಳಲ್ಲಿ ಉತ್ಪನ್ನ ಹೆಚ್ಚಾಗಬೇಕು.
ಅದಕ್ಕಾಗಿ ಸಮಗ್ರ ನೀರಾವರಿ ಯೋಜನೆ ಅನುಷ್ಠಾನ ವಾಗ ಬೇಕಿದ್ದು, ಹೋರಾಟಗಾರರು ಜೈಲಿಗೆ ಬೇಕಾದರೂ ಹೋಗಲು ಸಿದ್ಧರಿದ್ದೇವೆ ಎಂಬ ಮಾತು ಶುಕ್ರವಾರ ರೈತ ಸಮುದಾಯದಿಂದ ಮಾರ್ದನಿಸಿತು.
ಭದ್ರಾ ಮೇಲ್ದಂಡೆ ಯೋಜನೆಯ ಎಲ್ಲ ಕಾಮಗಾರಿ ಪೂರ್ಣಗೊಳಿಸುವುದು, ಜಿಲ್ಲೆಯ ರೈತರ ತೋಟಗಳಿಗೆ ಹನಿ ನೀರಾವರಿ ಯೋ ಜನೆ ಅಳವಡಿಕೆ ಅನುಷ್ಠಾನಕ್ಕೆ ಆಗ್ರಹಿಸಿ ರಾಜ್ಯ ರೈತಸಂಘ ಹಾಗೂ ಹಸಿರುಸೇನೆ ಕರೆ ನೀಡಿದ್ದ ಪ್ರತಿಭಟನೆಗೆ ಹೊಳಲ್ಕೆರೆ, ಹಿರಿ ಯೂರು, ಚಳ್ಳಕೆರೆ ಭಾಗದಿಂದ ಸಾವಿರಾರು ರೈತರು ತಂಡೋಪತAಡವಾಗಿ ಜಮಾಯಿಸಿದರು. ವೀರವನಿತೆ ಒನಕೆ ಓಬವ್ವ ವೃತ್ತದ ಬಳಿ ಪ್ರತಿಭಟಿಸಿ, ಕೇಂದ್ರ ಮತ್ತು ರಾಜ್ಯ ಸರ್ಕಾರದ ವಿರುದ್ಧ ಆಕ್ರೋಶ ಹೊರಹಾಕಿದರು.
ನಗರದಲ್ಲಿ ಬೃಹತ್ ಮೆರವಣಿಗೆ ನಡೆಸಿದರು. ಕೇಂದ್ರ ಸರ್ಕಾರ ಘೋಷಿಸಿರುವ ೫,೩೦೦ ಕೋಟಿ ರೂ. ಅನುದಾನ ತುರ್ತಾಗಿ ಬಿ ಡುಗಡೆಗೊಳಿಸಬೇಕು. ಬಜೆಟ್‌ನಲ್ಲಿ ರಾಜ್ಯ ಸರ್ಕಾರ ೫ ಸಾವಿರ ಕೋಟಿ ರೂ. ಮೀಸಲಿಡುವುದು ಸೇರಿ ವಿವಿಧ ಬೇಡಿಕೆ ಈಡೇರಿ ಸುವಂತೆ ನೀರಾವರಿ ಸಚಿವರು, ವಿಶ್ವೇಶ್ವರಯ್ಯ ಜಲ ನಿಗಮದ ವ್ಯವಸ್ಥಾಪಕ ನಿರ್ದೇಶಕರಿಗೆ ಒತ್ತಾಯಿಸಿ ಜಿಲ್ಲಾಡಳಿತದ ಮೂಲಕ ಮನವಿ ರವಾನಿಸಿದರು.
ಕೇಂದ್ರದ ವಿರುದ್ಧ ಆಕ್ರೋಶ
ಮುಖಂಡ ಈಚಘಟ್ಟ ಸಿದ್ದವೀರಪ್ಪ ಮಾತನಾಡಿ, ಪ್ರಧಾನಿ ನರೇಂದ್ರ ಮೋದಿ ಅವರು ಚಿತ್ರದುರ್ಗಕ್ಕೆ ಬಂದು ಘೋಷಿಸಿದ್ದ ಅನುದಾ ನದಲ್ಲಿ ನಯಾ ಪೈಸೆ ಈವರೆಗೂ ಬಿಡುಗಡೆ ಮಾಡಿಲ್ಲ. ಲೋಕಸಭಾ ಚುನಾವಣೆಗೂ ಮುನ್ನ ಸಂಸದರು ೩ ತಿಂಗಳೊಳಗೆ ಅನು ದಾನ ತರುವ ಭರವಸೆ ನೀಡಿದ್ದರು. ಅದು ಈಡೇರಿಲ್ಲ. ೧೮ ವರ್ಷವಾದರೂ ಭದ್ರಾ ಮೇಲ್ದಂಡೆ ಕಾಮಗಾರಿ ಪೂರ್ಣಗೊಂಡಿಲ್ಲ ಎಂದು ಕಿಡಿಕಾರಿದರು.
ಮುತ್ತಿನಕೊಪ್ಪದಿಂದ ಚಿತ್ರದುರ್ಗದವರೆಗೆ ಭದ್ರಾ ಮೇಲ್ದಂಡೆಯ ಎಲ್ಲ ಕಾಮಗಾರಿಗಳನ್ನು ಶೀಘ್ರದಲ್ಲಿ ಮುಕ್ತಾಯಗೊಳಿಸಿ, ಜಿಲ್ಲೆಯ ಎಲ್ಲ ಕೆರೆಗಳನ್ನು ದುರಸ್ತಿಗೊಳಿಸಿ ನೀರು ತುಂಬಿಸಬೇಕು. ವಾಣಿ ವಿಲಾಸ ಜಲಾಶಯಕ್ಕೆ ೫ ಟಿಎಂಸಿ ನೀರು ಮೀಸಲಿಡಬೇಕು ಎಂದು ಆಗ್ರಹಿಸಿದರು.
ಸಂಘದ ಜಿಲ್ಲಾಧ್ಯಕ್ಷ ಕೆ.ಟಿ. ತಿಪ್ಪೇಸ್ವಾಮಿ ಮಾತನಾಡಿ, ಸಿಎಂ ಮುಂದೆ ಅನುದಾನ ಕೇಳುವ ತಾಕತ್ತು ಜಿಲ್ಲೆಯ ಶಾಸಕರಿಗೆ ಇದ್ದಂತಿಲ್ಲ. ಹಿಂದಿನ ವರ್ಷ ೧೪೫೦ ಕೋಟಿ ರೂ. ನೀಡಲಾಗಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವರು ಹೇಳಿದ್ದಾರೆ. ಆದರೆ, ಗುತ್ತಿ ಗೆದಾರರಿಗೆ ೧೮೫೦ ಕೋಟಿ ರೂ. ಬಾಕಿ ಇದೆ. ರೈತರ ಹಿತ ಕಾಯಲು ಸಾಧ್ಯವಾಗದಿದ್ದರೆ ಬಿಜೆಪಿ-ಕಾಂಗ್ರೆಸ್ ಶಾಸಕರು ರಾಜೀನಾಮೆ ನೀಡುವಂತೆ ಒತ್ತಾಯಿಸಿದರು.
ಬೇಡರೆಡ್ಡಿಹಳ್ಳಿ ಬಸವರೆಡ್ಡಿ ಮಾತನಾಡಿ, ಯೋಜನೆಯಿಂದ ರೈತರ ಜಮೀನಿಗೆ ಒಂದು ಹನಿ ನೀರು ಬಂದಿಲ್ಲ. ರಾಜ್ಯ ಸರ್ಕಾರ ಬಿಹಾರದ ಚುನಾವಣೆಗೆ ೫ ಸಾವಿರ ಕೋಟಿ ರೂ. ಕಳುಹಿಸಿದೆ ಎಂದು ಬಿಜೆಪಿಗರು ಕಾಂಗ್ರೆಸ್ಸಿಗರ ವಿರುದ್ಧ ಆರೋಪಿಸುತ್ತಾರೆ. ಸಚಿವ ಆರ್.ಬಿ.ತಿಮ್ಮಾಪುರ ಇಲಾಖೆಯಲ್ಲಿ ೬೦೦೦ ಕೋಟಿ ರೂ. ಅವ್ಯವಹಾರ ಆಗಿದೆ ಎಂದು ದೂರುತ್ತಾರೆ. ಆದರೆ, ನೀರಾ ವರಿ ಕುರಿತು ತುಟಿ ಬಿಚ್ಚುತ್ತಿಲ್ಲ ಎಂದು ವಾಗ್ದಾಳಿ ನಡೆಸಿದರು.
ಬೇರೆ ದೇಶಗಳಲ್ಲಿ ಅವಘಡ ಸಂಭವಿಸಿದರೆ ಸಾವಿರಾರು ಕೋಟಿ ನೆರವು ನೀಡುವ ಪಿಎಂಗೆ ಭದ್ರಾ ಮೇಲ್ದಂಡೆಗಾಗಿ ೫೩೦೦ ಕೋಟಿ ರೂ. ಬಿಡುಗಡೆಗೊಳಿಸುವುದು ದೊಡ್ಡ ವಿಚಾರವಲ್ಲ. ಇದನ್ನು ಬಿಜೆಪಿ ನಾಯಕರು ಮನವರಿಕೆ ಮಾಡಿಕೊಡಬೇಕು ಎಂದು ಆಗ್ರಹಿಸಿದರು.
* ಹೊಳಲ್ಕೆರೆ ತಾಲೂಕಿನ ಪ್ರತಿ ರೈತರ ಜಮೀನಿನಲ್ಲೂ ಹನಿ ನೀರಾವರಿ ಕಾಮಗಾರಿ ಕೈಗೆತ್ತಿಕೊಳ್ಳಬೇಕು.
* ಹೊಸದುರ್ಗ ತಾಲೂಕಿನಲ್ಲಿ ಭದ್ರಾ ಮೇಲ್ದಂಡೆ ವ್ಯಾಪ್ತಿಯಲ್ಲಿ ಬಿಟ್ಟು ಹೋದ ಕೆರೆಗಳನ್ನು ಸೇರಿಸಿಕೊಳ್ಳಬೇಕು.
* ಮೊಳಕಾಲ್ಮೂರು ಮತ್ತು ಚಳ್ಳಕೆರೆ ತಾಲೂಕಿನ ಎಲ್ಲ ಕೆರೆಗಳಿಗೂ ಭದ್ರಾ ಮೇಲ್ದಂಡೆ ಯೋಜನೆಯಡಿ ನೀರು ಹರಿಸಬೇಕು.
* ಕಲ್ಲಳ್ಳಿ ಭಾಗದ ಗಾಯತ್ರಿ ಜಲಾಶಯ ಸೇರಿ ೧೬ ಕೆರೆಗಳಿಗೆ ನೀರು ತುಂಬಿಸುವ ಕಾಮಗಾರಿ ತುರ್ತಾಗಿ ಆರಂಭಿಸಬೇಕು.
* ಧರ್ಮಪುರ, ಐಮಂಗಲ ಹಾಗೂ ಕಸಬಾ ಹೋಬಳಿಯ ಭದ್ರಾ ಮೇಲ್ದಂಡೆ ಯೋಜನೆಯಿಂದ ಕೆರೆಗಳಿಗೆ ನೀರು ತುಂಬಿಸುವ ಕಾಮಗಾರಿಯನ್ನು ತುರ್ತಾಗಿ ಪ್ರಾರಂಭಿಸಬೇಕು.
ಮಾಡು ಇಲ್ಲವೇ ಮಡಿ ಹೋರಾಟ
ಕೇಂದ್ರ ಮತ್ತು ರಾಜ್ಯ ಸರ್ಕಾರ ಸ್ಪಂದಿಸದಿದ್ದರೆ, ಜೈಲ್ ಭರೋ ಚಳವಳಿ ಮೂಲಕ ವಿಧಾನಸಭೆ ಮುತ್ತಿಗೆ ಹಾಗೂ ಜಂತರ್ ಮಂತರ್ ಬಳಿ ಮಾಡು ಇಲ್ಲವೇ ಮಡಿ ಹೋರಾಟಕ್ಕೂ ಸಿದ್ಧ ಎಂಬ ನಿರ್ಧಾರ ಕೈಗೊಳ್ಳಲಾಯಿತು. ಮಾ. ೬ರೊಳಗೆ ಸಭೆ ಕರೆದು ಕಾಮಗಾರಿ ಪೂರ್ಣಗೊಳಿಸಲು ದಿನಾಂಕ ನಿಗದಿಗೊಳಿಸುವಂತೆ ಒತ್ತಾಯಿಸಿದರು.
ಇದೇನು ಗೂಂಡಾ ರಾಜ್ಯವಾ?:
ಭ್ರಷ್ಟ ವ್ಯವಸ್ಥೆ ರಕ್ಷಣೆಗೆ ರೈತರ ಹೋರಾಟಕ್ಕೆ ಅಡ್ಡಿಪಡಿಸುವ, ಹತ್ತಿಕ್ಕುವ ಕೆಲಸ ಪೊಲೀಸರು ಮಾಡಬೇಡಿ. ಉತ್ತರ ಕರ್ನಾಟಕದ ಚಳವಳಿ ನೆನಪಿಸಿಕೊಳ್ಳಿ. ೫೦-೧೦೦ ಬ್ಯಾರಿಕೇಡ್ ದಾಟಿ ಒಳ ನುಗ್ಗುವ ಶಕ್ತಿ ರೈತರಿಗಿದೆ. ಇದೇನು ಗುಂಡಾ ರಾಜ್ಯವಾ ಎಂದು ಸಿದ್ದವೀರಪ್ಪ ಪ್ರಶ್ನಿಸಿದರು. ಪೊಲೀಸರು ನಮ್ಮ ಅಣ್ಣ-ತಮ್ಮಂದಿರು. ನೀರಿಲ್ಲದ ಕಾರಣ ಕೃಷಿ ಬಿಟ್ಟು ಅನಿವಾರ್ಯವಾಗಿ ಈ ವೃತ್ತಿಯಲ್ಲಿದ್ದಾರೆ. ಡಾ. ಸ್ವಾಮಿನಾಥನ್ ವರದಿ, ಕೃಷಿ ಬೆಲೆ ಆಯೋಗದ ಅನ್ವಯ ಕೃಷಿ ನೀತಿ ಜಾರಿಯಾದರೆ ಪೊಲೀಸರು ಖಾಕಿ ತೊರೆದು ಒಕ್ಕಲುತನದತ್ತ ಮುಖ ಮಾಡಲಿದ್ದಾರೆ ಎಂದರು.
ಸಚಿವರು ಬರುವಂತೆ ಪಟ್ಟು
ನೀರಾವರಿ ಸಚಿವರು ಖುದ್ದಾಗಿ ಮನವಿ ಸ್ವೀಕರಿಸುವಂತೆ ಮುಂಚಿತವಾಗಿಯೇ ಜಿಲ್ಲಾಡಳಿತಕ್ಕೆ ಮನವಿ ಮಾಡಲಾಗಿತ್ತು. ಆದರೆ, ಬಂದಿಲ್ಲ. ರೈತ ವಿರೋಽ ನಿಲುವು ತೋರಿದರೆ, ಮುಂಬರುವ ದಿನಗಳಲ್ಲಿ ಸಚಿವರು, ಶಾಸಕರ ಮನೆಗಳಿಗೂ ಮುತ್ತಿಗೆ ಹಾಕಲಾಗುವುದು ಎಂದು ಎಚ್ಚರಿಕೆ ನೀಡಿದರು. ಉಸ್ತುವಾರಿ ಸಚಿವರು ಬರುವುದು ತಡವಾಗಿದ್ದಕ್ಕೆ ಆಕ್ರೋಶಗೊಂಡ ರೈತರು ಕೊನೆಗೆ ಜಿಲ್ಲಾಽಕಾರಿಗೆ ಮನವಿ ಸಲ್ಲಿಸಿದರು.
೧೦ ಸಾವಿರ ಕೋಟಿ ಅನುದಾನ ಬೇಕಿದೆ
ಭದ್ರಾ ಮೇಲ್ದಂಡೆ ದಶಮಾನಗಳ ಹೋರಾಟವಾಗಿದೆ. ೨೦೦೮ರಲ್ಲಿ ಬಿ.ಎಸ್. ಯಡಿಯೂರಪ್ಪ ಅವರು ಸಿಎಂ ಆಗಿದ್ದಾಗ ೫೦೦ ಕೋಟಿ ರೂ. ಬಿಡುಗಡೆಗೊಳಿಸಿ ಭೂಮಿ ಪೂಜೆ ನೆರವೇರಿಸಲಾಯಿತು. ೨೦೧೩ರ ನಂತರ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಂದಾಗಿ ಯೋಜನೆ ವೇಗ ಪಡೆದಿದ್ದು, ೧೨ ಸಾವಿರ ಕೋಟಿ ಖರ್ಚು ಮಾಡಲಾಗಿದೆ. ಇನ್ನೂ ೧೦ ಸಾವಿರ ಕೋಟಿ ರೂ. ಅನುದಾನದ ಅಗತ್ಯವಿದೆ, ಎಂದು ಜಿಲ್ಲಾ ಉಸ್ತುವಾರಿ ಸಚಿವ ಡಿ. ಸುಧಾಕರ್ ಹೇಳಿದರು.
ಘೋಷಿಸಿದ ಅನುದಾನ ಬಿಡುಗಡೆಗೆ ಪಕ್ಷಾತೀತವಾಗಿ ಕೇಂದ್ರದ ಮೇಲೆ ಮನವಿ ಮಾಡಿದ್ದು, ಜಿಲ್ಲೆಗೆ ನ್ಯಾಯ ಒದಗಿಸಿ. ಸಂಸದರು ಈ ಕುರಿತು ಗಮನಹರಿಸಲಿ. ನಮ್ಮ ಅವಽಯಲ್ಲೇ ಪೂರ್ಣಗೊಳಿಸಲು ಶ್ರಮಿಸುತ್ತೇವೆ ಎಂದು ಭರವಸೆ ನೀಡಿದರು. ಚಳ್ಳಕೆರೆ ಶಾಸಕ ಟಿ. ರಘುಮೂರ್ತಿ, ಡಿಸಿ ಟಿ. ವೆಂಕಟೇಶ್, ಎಸ್ಪಿ ರಂಜಿತ್‌ಕುಮಾರ್ ಬಂಡಾರು, ಎಎಸ್‌ಪಿ ಶಿವಕುಮಾರ್ ಇದ್ದರು.