ರಾಯಣ್ಣ ಸ್ಮರಣಾರ್ಥ ರಾಜ್ಯ ಮಟ್ಟದ ಗಾಯನ ಸ್ಪರ್ಧೆ

 ಚಿತ್ರದುರ್ಗದಲ್ಲಿ ಸಂಗೊಳ್ಳಿ ರಾಯಣ್ಣ ಸ್ಮರಣಾರ್ಥ ಹಮ್ಮಿಕೊಂಡಿರುವ ರಾಜ್ಯ ಮಟ್ಟದ ಗಾನ ಸಂಗಮ ಕಾರ್ಯಕ್ರಮದ ಭಿತ್ತಿಪತ್ರವನ್ನು ಸೋಮವಾರ ಬಿಡುಗಡೆ ಮಾಡಲಾಯಿತು. ಕವಿತಾ, ಟಿ. ಆನಂದ್, ಎಂ.ಟಿ. ಪ್ರವೀಣ್‌ಕುಮಾರ್, ರಾಘವೇಂದ್ರ, ದೇವರತ್ನ ಮಂಜುನಾಥ್, ಪ್ರಭು ಇತರರು ಇದ್ದರು.
ಚಿತ್ರದುರ್ಗದಲ್ಲಿ ಸಂಗೊಳ್ಳಿ ರಾಯಣ್ಣ ಸ್ಮರಣಾರ್ಥ ಹಮ್ಮಿಕೊಂಡಿರುವ ರಾಜ್ಯ ಮಟ್ಟದ ಗಾನ ಸಂಗಮ ಕಾರ್ಯಕ್ರಮದ ಭಿತ್ತಿಪತ್ರವನ್ನು ಸೋಮವಾರ ಬಿಡುಗಡೆ ಮಾಡಲಾಯಿತು. ಕವಿತಾ, ಟಿ. ಆನಂದ್, ಎಂ.ಟಿ. ಪ್ರವೀಣ್‌ಕುಮಾರ್, ರಾಘವೇಂದ್ರ, ದೇವರತ್ನ ಮಂಜುನಾಥ್, ಪ್ರಭು ಇತರರು ಇದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ದುರ್ಗದಲ್ಲಿ ಕಾರ್ಯಕ್ರಮದ ಫೋಸ್ಟರ್ ಬಿಡುಗಡೆ
  • ಜ. ೨೪ರಿಂದ ಎರಡು ದಿನಗಳ ಕಾಲ ಆಯೋಜನೆ
  • ವೀರ ಸಂಗೊಳ್ಳಿ ರಾಯಣ್ಣ
ಚಿತ್ರದುರ್ಗ: ಬ್ರಿಟಿಷರ ವಿರುದ್ಧ ಹೋರಾಟಿದ್ದ ದೇಶಭಕ್ತ ವೀರ ಸಂಗೊಳ್ಳಿ ರಾಯಣ್ಣನ ಸ್ಮರಣಾರ್ಥ ಜ. ೨೪ ರಿಂದ ೨ ದಿನಗಳ ಕಾ ಲ ರಾಜ್ಯಮಟ್ಟದ ಗಾಯನ ಸ್ಪರ್ಧೆ ಹಮ್ಮಿಕೊಳ್ಳಲಾಗಿದೆ ಎಂದು ಚಿತ್ರದುರ್ಗ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಸೇನೆ ಹಾಗೂ ಪ್ರಜಾ ಕಲ್ಯಾಣ ಸಮಿತಿ ಮಹಿಳಾ ಘಟಕದ ಅಧ್ಯಕ್ಷೆ ಕವಿತಾ ಹೇಳಿದರು.
ನಗರದ ಶ್ರೀ ಮಹರ್ಷಿ ವಾಲ್ಮೀಕಿ ಭವನದಲ್ಲಿ ಹಮ್ಮಿಕೊಂಡಿರುವ ರಾಜ್ಯ ಮಟ್ಟದ ಗಾನಸಂಗಮ ಗಾಯನಸ್ಪರ್ಧೆಯ ಪೋಸ್ಟರ್‌ ಗಳನ್ನು ಸೋಮವಾರ ಪ್ರವಾಸಿ ಮಂದಿರದಲ್ಲಿ ಬಿಡುಗಡೆಗೊಳಿಸಿ ಮಾತನಾಡಿದರು.
ನಾಡು-ನುಡಿಗಾಗಿ ಪ್ರಾಣ ತ್ಯಾಗ ಮಾಡಿದ ರಾಯಣ್ಣ ಶ್ರೇಷ್ಠ ದೇಶಭಕ್ತ. ಇವರಿಗೆ ರಾಷ್ಟçಮಟ್ಟದಲ್ಲಿ ಗೌರವ ಸಲ್ಲಬೇಕಿದೆ. ಇದಕ್ಕಾಗಿ ಸ್ವಾತಂತ್ರ‍್ಯೋತ್ಸವ ಹಾಗೂ ಗಣರಾಜ್ಯೋತ್ಸವಗಳಲ್ಲಿ ರಾಯಣ್ಣನ ಭಾವಚಿತ್ರವಿರಿಸಿ ಗೌರವಿಸಲು ಆದೇಶಿಸುವಂತೆ ಸರ್ಕಾರವನ್ನು ಒತ್ತಾಯಿಸಿದರು.
ರಾಜ್ಯ ರಾಯಣ್ಣ ಸೇನೆ ಅಧ್ಯಕ್ಷ ಟಿ. ಆನಂದ್ ಮಾತನಾಡಿ, ಜ.೨೫ ರಂದು ಸಂಜೆ ೬ಕ್ಕೆ ರಾಯಣ್ಣನ ಕುರಿತ ದೇಶಭಕ್ತಿ ಗೀತೆಯ ಧ್ವನಿಸುರಳಿ ಬಿಡುಗಡೆ ಮಾಡಲಾಗುವುದು. ಮಾಜಿ ಸಂಸದ ಶಶಿಕುಮಾರ್ ಪುತ್ರ ಆದಿತ್ಯ ಶಶಿಕುಮಾರ್ ಸೇರಿ ನಾನಾ ಗಣ್ಯರು ಭಾಗವಹಿಸಲಿದ್ದಾರೆ ಎಂದು ತಿಳಿಸಿದರು.
ಸಮಿತಿ ಅಧ್ಯಕ್ಷ ಟಿ.ಎಸ್. ಹರೀಶ್ ಮಾತನಾಡಿ, ಸ್ಪರ್ಧೆ ವಿಜೇತರಿಗೆ ಪ್ರಥಮ, ದ್ವಿತೀಯ ಹಾಗೂ ತÊತೀಯ ಬಹುಮಾನವಾಗಿ ೨೫ ಸಾವಿರ ರೂ., ೧೦ ಸಾವಿರ ರೂ. ಹಾಗೂ ೫ ಸಾವಿರ ರೂ. ನಗದು, ಪಾರಿತೋಷಕ ಮತ್ತು ಪ್ರತಿಯೊಬ್ಬರಿಗೂ ಅಭಿನಂದನಾ ಪತ್ರ ವಿತರಿಸಲಾಗುವುದು ಎಂದರು.
ಮೈಲಾರಲಿAಗೇಶ್ವರ ವಿದ್ಯಾಸಂಸ್ಥೆಯ ಎಂ.ಟಿ. ಪ್ರವೀಣ್‌ಕುಮಾರ್ ಅಧ್ಯಕ್ಷತೆ ವಹಿಸಿದ್ದರು. ಸಾಹಿತಿ ರಾಘವೇಂದ್ರ, ನಿರ್ದೇಶಕ ದೇವರತ್ನ ಮಂಜುನಾಥ್, ಗ್ರಾಪಂ ಸದಸ್ಯ ಪ್ರಭು, ಸಂಘಟಕರಾದ ರಂಗನಾಥ್, ರಮೇಶ್, ಲಕ್ಷ÷್ಮಣ್ ಇತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net